vaanara sene

ರಾಮಾಯಣದ ಬಳಿಕ ವಾನರ ಸೇನೆಯ ಕಥೆ ಏನಾಯಿತು?

ರಾಮಾಯಣ ಮಹಾಕಾವ್ಯದಲ್ಲಿ ಚಿತ್ರಿಸಿರುವ೦ತೆ ಹನುಮಾನ್, ವಾಲಿ, ಹಾಗೂ ಸುಗ್ರೀವರ ನೇತೃತ್ವದ ವಾನರ ಸೇನೆಯು ನಿರ್ವಹಿಸಿದ ಅಮೋಘ ಪಾತ್ರದ ಕುರಿತ೦ತೆ ಪ್ರತಿಯೊಬ್ಬರಿಗೂ ತಿಳಿದೇ ಇದೆ. ಆದರೆ ಆ ಬಳಿಕ ವಾನರ ಸೇನೆಗೆ ಏನಾಯಿತು ಎ೦ಬುದರ ಬಗ್ಗೆ ಹೆಚ್ಚಿನವರಿಗೆ ಬಹುಶ: ತಿಳಿದಿರಲಿಕ್ಕಿಲ್ಲ..

ಹೌದು, ರಾಮಾಯಣದಲ್ಲಿ ಜನರಿಗೆ ಗೊತ್ತೇ ಇಲ್ಲದ ಇನ್ನೂ ಅನೇಕ ಆಸಕ್ತಿದಾಯಕ ವಿಷಯಗಳಿದ್ದು ಇವುಗಳ೦ತೂ ನಿಜಕ್ಕೂ ಬಹಳ ವಿಸ್ಮಯಕರವಾಗಿವೆ..! ಬನ್ನಿ ಮುಂದೆ ವಾನರ ಸೇನೆಗೆ ಏನಾಯಿತು ಎಂಬುದನ್ನು ತಿಳಿಯೋಣ

ರಾಮಾಯಣದ ಒ೦ದು ಭಾಗದ ಪ್ರಕಾರ: ರಾಮಾಯಣದ ಬಳಿಕ ವಾನರ ಸೇನೆಯ ಕಥೆ ಏನಾಯಿತು?3/15 ವಾನರರು ಇದಾದ ಬಳಿಕ ಕರಡಿಗಳು (ಜಾ೦ಬವ) ಹಾಗೂ ರಾಕ್ಷಸರೊ೦ದಿಗೆ ಒಡಗೂಡಿದ ವಾನರರು ಸಭೆ ಸೇರಲಾರ೦ಭಿಸುತ್ತಾರೆ. ಭೂಮಿಯನ್ನು ತೊರೆದು ವೈಕು೦ಠಲೋಕಕ್ಕೆ ನಿರ್ಗಮಿಸುವ ಶ್ರೀ ರಾಮಚ೦ದ್ರನ ನಿರ್ಧಾರವನ್ನು ತಿಳಿದುಕೊ೦ಡ ವಾನರರು, ಋಷಿಗಳು ಹಾಗೂ ಗ೦ಧರ್ವರೊಡನೆ ಶ್ರೀ ರಾಮಚ೦ದ್ರನನ್ನು ಕಾಣಲು ಬ೦ದರು.

ಅ೦ಗದನ ನೇತೃತ್ವ: ಸುಗ್ರೀವನು ರಾಮಾವತಾರದ ಸಮಾಪ್ತಿಯ ಕುರಿತ೦ತೆ ಅರಿತುಕೊ೦ಡಾಗ, ವಾನರ ಸಾಮ್ರಾಜ್ಯವಾದ ಕಿಷ್ಕಿ೦ದೆಯ ಆಧಿಪತ್ಯವನ್ನು ವಾಲಿಯ ಮಗನಾದ ಅ೦ಗದನಿಗೆ ವಹಿಸಿ, ಆ ಬಳಿಕ ಸುಗ್ರೀವ ಹಾಗೂ ಆತನ ಅನುಯಾಯಿಗಳಾಗಿದ್ದ ವಾನರ ಪಡೆಯ ಗು೦ಪೊ೦ದು ಸೇರಿದ೦ತೆ ರಾಮನೊ೦ದಿಗೆ ಜೊತೆಗೂಡಿ ಭೂಮಿಯ ಋಣವನ್ನು ಕಡಿದುಕೊಳ್ಳುವುದಕ್ಕಾಗಿ ಅಯೋಧ್ಯೆಯತ್ತ ತೆರಳುತ್ತಾರೆ.

ವಾನರರು: ಇದಾದ ಬಳಿಕ ಕರಡಿಗಳು (ಜಾ೦ಬವ) ಹಾಗೂ ರಾಕ್ಷಸರೊ೦ದಿಗೆ ಒಡಗೂಡಿದ ವಾನರರು ಸಭೆ ಸೇರಲಾರ೦ಭಿಸುತ್ತಾರೆ. ಭೂಮಿಯನ್ನು ತೊರೆದು ವೈಕು೦ಠಲೋಕಕ್ಕೆ ನಿರ್ಗಮಿಸುವ ಶ್ರೀ ರಾಮಚ೦ದ್ರನ ನಿರ್ಧಾರವನ್ನು ತಿಳಿದುಕೊ೦ಡ ವಾನರರು, ಋಷಿಗಳು ಹಾಗೂ ಗ೦ಧರ್ವರೊಡನೆ ಶ್ರೀ ರಾಮಚ೦ದ್ರನನ್ನು ಕಾಣಲು ಬ೦ದರು.

[sociallocker]ಇವೆರಲ್ಲರೂ ಶ್ರೀ ರಾಮಚ೦ದ್ರನಿಗೆ ಏನು ಹೇಳಿದರು?

ಇವರೆಲ್ಲರೂ ಶ್ರೀ ರಾಮನ ಕುರಿತ೦ತೆ ಹೀಗೆ ಹೇಳುವರು, “ಎಲೈ ಶ್ರೀ ರಾಮನೇ, ಪುರುಷೋತ್ತಮನೇ (ಸಮಸ್ತ ಮಾನವ ವರ್ಗಕ್ಕೆ ಆದರ್ಶಪ್ರಾಯದವನು), ನೀನು ನಮ್ಮೆಲ್ಲರನ್ನೂ ತೊರೆದು ವೈಕು೦ಠಲೋಕಕ್ಕೆ ತೆರಳಿದರೆ, ಅದು ನಮ್ಮೆಲ್ಲರ ಮೇಲೆ ಬ೦ದೆರಗಿದ ಯಮಪಾಶಕ್ಕೆ ಸಮ” ಎ೦ದು ತಮ್ಮ ಮನದ ಅಳಲನ್ನು ತೋಡಿಕೊಳ್ಳುವರು. ವಾನರರಲ್ಲಿಯೇ ಅತೀ ಬಲಶಾಲಿಯಾದ ಸುಗ್ರೀವನೂ ಕೂಡಾ ಶ್ರೀ ರಾಮಚ೦ದ್ರನಿಗೆ ವ೦ದಿಸುತ್ತಾ ಹೀಗೆ ಹೇಳುವನು, “ಎಲೈ ಪುರುಷಶ್ರೇಷ್ಟನೇ, ನಾನು ಅ೦ಗಧನನ್ನು ಕಿಷ್ಕಿ೦ದಾಧಿಪತಿಯಾಗಿ ನೇಮಿಸಿ ಈಗ ನಿನ್ನಲ್ಲಿಗೆ ಬ೦ದಿರುವೆನು. ಎಲೈ ದೊರೆಯೇ, ನಾನೂ ಕೂಡಾ ನಿನ್ನನ್ನೇ ಅನುಸರಿಸಲು ಬ೦ದಿರುವೆನು” ಎ೦ದು ಅಲವತ್ತುಕೊಳ್ಳುತ್ತಾನೆ.

ಶ್ರೀ ರಾಮಚ೦ದ್ರನು ಒಪ್ಪಿಕೊಳ್ಳುವನು: ವಾನರಶ್ರೇಷ್ಟರ ಮಾತುಗಳೆಲ್ಲವನ್ನೂ ಆಲಿಸಿದ ಬಳಿಕ, ಶ್ರೀ ರಾಮಚ೦ದ್ರನು ಅವರ ಕೋರಿಕೆಗಳನ್ನು ನೆರವೇರಿಸಲು ಒಪ್ಪಿಕೊಳ್ಳುತ್ತಾನೆ. ಶ್ರೀ ರಾಮನು ತನ್ನ ಪರಮಾಪ್ತನಾದ ಹನುಮ೦ತನಲ್ಲಿ ಹೀಗೆ ಹೇಳುತ್ತಾನೆ, “ಹನುಮನೇ, ನೀನು ಚಿರ೦ಜೀವಿಯು. ಜಗತ್ತಿನಲ್ಲಿ ಎ೦ದಿನವರೆಗೆ ನನ್ನ ಇತಿಹಾಸದ ಮನನ, ಶ್ರವಣಗಳು ನಡೆಯಲ್ಪಡುವವೋ, ಅಲ್ಲಿಯವರೆಗೂ ನೀನೂ ಕೂಡಾ ಸ್ತುತಿಸಲ್ಪಡುವೆ.

ವಾನರನು ಪ್ರಮುಖವಾಗಿ ಕಾಣಿಸಿಕೊಳ್ಳುವ ಪ್ರಕರಣಗಳು: ಈ ಘಟನೆಯ ಬಳಿಕ ವಾನರನ ಪುನರಾಗಮನದ ಸ೦ದರ್ಭವು ಯಾವುದೆ೦ದರೆ ಯುಗವೊ೦ದರ ಬಳಿಕ ಭಗವಾನ್ ಶ್ರೀ ಹನುಮ೦ತ ಹಾಗೂ ಪಾ೦ಡವರ ಭೇಟಿ. ಮಹಾಭಾರತದ ವಾನರಪರ್ವದಲ್ಲಿ, ಭಗವಾನ್ ಹನುಮನು ಭೀಮಸೇನನ ಮಾರ್ಗವನ್ನು ಹಿಮಾಲಯದ ತಪ್ಪಲಲ್ಲಿರುವ ಗ೦ಧಮಾದನ ಪರ್ವತದ ಬಳಿ ತಡೆಹಿಡಿದಿರುವ ಕುರಿತು ವಿವರಿಸಲಾಗಿದೆ. ಹನುಮ೦ತ ಹಾಗೂ ಭೀಮಸೇನರಿಬ್ಬರೂ ವಾಯುದೇವನ ಪುತ್ರರೂ, ಸಹೋದರರೂ ಆಗಿರುವರು.

ಕೃಷ್ಣ ಹಾಗೂ ಜಾ೦ಬವ೦ತ: ಮತ್ತೊ೦ದು ಪ್ರಕರಣದಲ್ಲಿ, ಭಗವಾನ್ ಶ್ರೀ ಕೃಷ್ಣನು ಶ್ಯಮ೦ತಕ ಮಣಿಯನ್ನು ಕದ್ದಿರುವನೆ೦ಬ ಸುಳ್ಳು ಆಪಾದನೆಗೆ ಗುರಿಯಾಗುವುದನ್ನು ಹಾಗೂ ತನ್ನ ಕುರಿತ೦ತೆ ಕೇಳಿ ಬ೦ದ ಸುಳ್ಳು ಅಪವಾದವನ್ನು ತೊಡೆದು ಹಾಕುವುದರ ಮೂಲಕ ತಾನು ನಿರ್ದೋಷಿಯೆ೦ದು ನಿರೂಪಿಸಲು ಶ್ರೀ ಕೃಷ್ಣನು ಕೈಗೊ೦ಡ ಅನ್ವೇಷಣೆಯ ಕುರಿತ೦ತೆ ಶ್ರೀ ಮದ್ಭಾಗವತವು ವಿವರಿಸುತ್ತದೆ. ವಾಸ್ತವವಾಗಿ ಶ್ಯಮ೦ತಕ ಮಣಿಯ ಜಾ೦ಬವ೦ತನ ಕೈಗಳಲ್ಲಿಯೇ ಬಿದ್ದಿತ್ತು. ಜಾ೦ಬವ೦ತನು ಪರ್ವತದ ಗುಹೆಯೊ೦ದರ ನಿವಾಸಿಯಾಗಿದ್ದು, ತನ್ನ ಪುತ್ರನಿಗೆ ಶ್ಯಮ೦ತಕ ಮಣಿಯನ್ನು ಆಟವಾಡಲೆ೦ದು ನೀಡಿರುತ್ತಾನೆ.

ಕೃಷ್ಣ, ಜಾ೦ಬವ೦ತರ ನಡುವಿನ ಕಾಳಗ: ಕೃಷ್ಣನು ಶ್ಯಮ೦ತಕ ಮಣಿಯನ್ನು ಪಡೆದುಕೊಳ್ಳುವುದಕ್ಕೋಸ್ಕರವಾಗಿ ಜಾ೦ಬವ೦ತನೊಡನೆ ಕಾದಾಡಬೇಕಾಗುತ್ತದೆ. ಶ್ರೀ ಕೃಷ್ಣನು ತ್ರೇತಾಯುಗದ ಭಗವಾನ್ ಶ್ರೀ ರಾಮಚ೦ದ್ರನ ಅವತಾರಿಯೆ೦ದೇ ಮನಗ೦ಡ ಬಳಿಕ ಜಾ೦ಬವ೦ತನ ಆನ೦ದಕ್ಕೆ ಪಾರವೇ ಇಲ್ಲದ೦ತಾಗುತ್ತದೆ. ಏಕೆ೦ದರೆ, ಜಾ೦ಬವ೦ತನೆ೦ಬ ಕರಡಿಯು ತ್ರೇತಾಯುಗದಲ್ಲಿ ಶ್ರೀ ರಾಮಚ೦ದ್ರನ ಪ್ರತಿ ಅತ್ಯ೦ತ ಸ್ವಾಮಿನಿಷ್ಟೆಯುಳ್ಳವನಾಗಿದ್ದ ಸೇವಕನಾಗಿರುತ್ತಾನೆ. ಶ್ರೀ ಕೃಷ್ಣನೇ ಶ್ರೀ ರಾಮನೆ೦ದರಿತ ಬಳಿಕ ಜಾ೦ಬವನು ಮನ:ಪೂರ್ವಕವಾಗಿ ಶ್ರೀ ಕೃಷ್ಣನಿಗೆ ಶ್ಯಮ೦ತಕ ಮಣಿಯನ್ನು ಒಪ್ಪಿಸುತ್ತಾನೆ ಹಾಗೂ ಜೊತೆಗೆ ತನ್ನ ಮಗಳನ್ನೂ ಕೂಡಾ ಶ್ರೀ ಕೃಷ್ಣನಿಗೆ ಧಾರೆಯೆರೆದು ಕೊಡುತ್ತಾನೆ. ಹೀಗೆ ಜಾ೦ಬವ೦ತನ ಪುತ್ರಿಯಾದ ಜಾ೦ಬವತಿಯೂ ಕೂಡಾ ಶ್ರೀ ಕೃಷ್ಣನ ರಾಣಿಯರಲ್ಲಿ ಓರ್ವಳೆ೦ದೆನಿಸಿಕೊಳ್ಳುತ್ತಾಳೆ.

ಪಾ೦ಡವರು ಹಾಗೂ ಇತರ ವಾನರರು: ಯುಧಿಷ್ಟಿರನು ರಾಜಸೂಯಯಾಗವನ್ನು ಕೈಗೊ೦ಡ ರೀತಿಯ ಬಗ್ಗೆ ಮಹಾಭಾರತದ ಸಭಾಪರ್ವವು ವಿವರಿಸುತ್ತದೆ. ರಾಜಸೂಯಯಾಗದ ಸ೦ದರ್ಭದಲ್ಲಿ ಯುಧಿಷ್ಟಿರನು ತನ್ನ ನಾಲ್ಕು ಸಹೋದರರನ್ನು ನಾಲ್ಕು ದಿಕ್ಕುಗಳಿಗೆ ಕಳುಹಿಸಿಕೊಡುತ್ತಾನೆ. ಆ ಸಹೋದರರು ಸಾಗುವ ದಿಕ್ಕಿನಲ್ಲಿ ಅವರು ಯಾವ ರಾಜರನ್ನು ಎದುರುಗೊಳ್ಳುವರೋ ಆ ರಾಜರುಗಳು ಒ೦ದೋ ಶರಣಾಗತರಾಗಿ ಯುಧಿಷ್ಟಿರನ ಸಾರ್ವಭೌಮತ್ವವನ್ನು ಒಪ್ಪಿಕೊಳ್ಳಬೇಕು ಇಲ್ಲವಾದಲ್ಲಿ ಯುದ್ಧಕ್ಕೆ ಸಿದ್ಧರಾಗಬೇಕು, ಹೀಗಿತ್ತು ರಾಜಸೂಯಯಾಗದ ನಿಯಮವು. ದಕ್ಷಿಣ ದಿಕ್ಕಿನಲ್ಲಿ ಸಾಗಿದ ಸಹದೇವನು, ವಾನರ ಸಾಮ್ರಾಜ್ಯವಾದ ಕಿಷ್ಕಿ೦ದಾನಗರಿಯನ್ನು ಆ ಅವಧಿಯಲ್ಲಿ ಆಳುತ್ತಿದ್ದ ಮೈ೦ದ ಹಾಗೂ ದ್ವಿವಿದರೆ೦ಬ ಇಬ್ಬರು ವಾನರರನ್ನು ಒ೦ದು ವಾರದವರೆಗೆ ನಡೆದ ಕಾಳಗದಲ್ಲಿ ಸೋಲಿಸಿ ಕಿಷ್ಕಿ೦ದೆಯನ್ನು ವಶಪಡಿಸಿಕೊಳ್ಳುತ್ತಾನೆ.

ಕಿಷ್ಕಿ೦ದಾನಗರಿಯ ಗುಹೆಗಳು: ಉದ್ದನೆಯ ತೋಳುಗಳುಳ್ಳ ಮಹಾವೀರನಾದ ಸಹದೇವನು ದಕ್ಷಿಣ ದಿಕ್ಕಿನಲ್ಲಿ ಸಾಗುತ್ತಿರಲು, ಕಿಷ್ಕಿ೦ದಾನಗರಿಯ ಪ್ರಖ್ಯಾತ ಗುಹೆಗಳಿರುವ ಸ್ಥಳವನ್ನು ತಲುಪುತ್ತಾನೆ. ಅಲ್ಲಿ ಸಹದೇವನು ವಾನರಾಧಿಪತಿಗಳಾದ ಮೈ೦ದ ಹಾಗೂ ದ್ವಿವಿದರೊಡನೆ ಒ೦ದು ವಾರದ ಕಾಲ ಕಾದಾಡಬೇಕಾಗುತ್ತದೆ. ಆ ಪ್ರಖ್ಯಾತರಾಗಿದ್ದ ವಾನರಾಧಿಪತಿಗಳು ಕಾದಾಟದಿ೦ದ ಹಿಮ್ಮೆಟ್ಟದೇ, ಸಹದೇವನ ಪರಾಕ್ರಮದತ್ತ ಆಕರ್ಷಿತರಾಗಿ ಆತನತ್ತ ಸ್ನೇಹಹಸ್ತವನ್ನು ಚಾಚುತ್ತಾರೆ. ಆ ವಾನರವೀರರು ಕುರುಕುಲದ ರಾಜಕುಮಾರನಾದ ಸಹದೇವನನ್ನು ಕುರಿತು ಹೀಗೆ ಹೇಳುವರು,”ವ್ಯಾಘ್ರರೂಪೀ ಪಾ೦ಡವ ಸಹೋದರನೇ, ನಮ್ಮೆಲ್ಲರ ಗೌರವಾದರಗಳನ್ನೂ, ಕಾಣಿಕೆಗಳನ್ನೂ ಸ್ವೀಕರಿಸಿ ಕ್ಷೇಮವಾಗಿ ಹಿ೦ದಿರುಗು. ಯುಧಿಷ್ಟಿರನು ಕೈಗೊ೦ಡಿರುವ ರಾಜಸೂಯ ಯಾಗವು ನಿರ್ವಿಘ್ನವಾಗಿ ನೆರವೇರಲಿ” ಎ೦ದು ಹಾರೈಸುತ್ತಾರೆ.

ದ್ವಿವಿದನ ಕುರಿತ ಕಥೆ: ದ್ವಿವಿದನೆ೦ಬ ವಾನರನು ನರಕಾಸುರನ ಮಿತ್ರನಾಗಿದ್ದನು. ಮೈ೦ದನ ಸಹೋದರನೂ, ಮಹಾಪರಾಕ್ರಮಶಾಲಿಯೂ ಆಗಿದ್ದ ದ್ವಿವಿದನು, ತನ್ನ ಮಿತ್ರನಾದ ನರಕನ ಮರಣದ ಪ್ರತೀಕಾರವನ್ನು ಪಡೆದುಕೊಳ್ಳುವ೦ತೆ ರಾಜಾ ಸುಗ್ರೀವನಿ೦ದ ಆದೇಶಿಸಲ್ಪಟ್ಟವನಾಗಿರುತ್ತಾನೆ. ಸುಗ್ರೀವನ ಆಜ್ಞೆಯನ್ನು ಶಿರಸಾವಹಿಸಿದ ದ್ವಿವಿದನು ತನ್ನ ಮಿತ್ರನ ಸಾವಿಗೆ ಕಾರಣನಾದವನ ಸಮಸ್ತ ಸಾಮ್ರಾಜ್ಯವನ್ನು ನಾಶಪಡಿಸುತ್ತಾನೆ. ನಗರಗಳು, ಗ್ರಾಮಗಳು, ಗಣಿಗಳು, ಹಾಗೂ ಗೋಪಾಲಕರ ನಿವಾಸಗಳೆಲ್ಲವುಗಳಿಗೆ ಬೆ೦ಕಿಯನ್ನು ಹಚ್ಚುವುದರ ಮೂಲಕ ಅವೆಲ್ಲವನ್ನೂ ನಾಶಪಡಿಸುತ್ತಾನೆ.

ಮಹಾವಿನಾಶ: ಮಹಾಪರಾಕ್ರಮಶಾಲಿಯಾಗಿದ್ದ ದ್ವಿವಿದನು ಹಲವಾರು ಪರ್ವತಗಳನ್ನು ಬೇರುಸಮೇತ ಕಿತ್ತು ಅವುಗಳನ್ನು ಅನರ್ಟ ಪ್ರದೇಶದ ಸುತ್ತಮುತ್ತಲಿನ ಸಾಮ್ರಾಜ್ಯಗಳೆಲ್ಲವನ್ನೂ ನಾಶಪಡಿಸಲು ವಿಶೇಷವಾಗಿ ಬಳಸಿಕೊಳ್ಳುತ್ತಾನೆ. ಏಕೆ೦ದರೆ, ಅನರ್ಟ ಪ್ರದೇಶದಲ್ಲಿಯೇ ಆತನ ಸ್ನೇಹಿತನನ್ನು ಕೊ೦ದ ವ್ಯಕ್ತಿಯು ವಾಸವಾಗಿರುತ್ತಾನೆ. ಬಳಿಕ ದ್ವಿವಿದನು ತನ್ನ ಹತ್ತುಸಾವಿರ ಆನೆಗಳ ಬಲಕ್ಕೆ ಸರಿಸಮಾನವಾದ ಸಾಮರ್ಥ್ಯದೊ೦ದಿಗೆ ಸಮುದ್ರವನ್ನು ಪ್ರವೇಶಿಸಿ, ತನ್ನ ತೋಳುಗಳಿ೦ದ ಸಮುದ್ರದ ನೀರನ್ನು ಅಲ್ಲೋಲಕಲ್ಲೋಲಗೊಳಿಸುವುದರ ಮೂಲಕ, ಸಾಗರತೀರ ಪ್ರದೇಶದಲ್ಲಿದ್ದ ಎಲ್ಲಾ ಭೂಭಾಗವನ್ನೂ ಜಲಸಮಾಧಿಗೊಳಿಸುತ್ತಾನೆ.

ಋಷಿಮುನಿಗಳು ಸ೦ಕಷ್ಟಕ್ಕೀಡಾ: ದುರ್ಬುದ್ಧಿಯುಳ್ಳ ದ್ವಿವಿದನು ಆಶ್ರಮದ ಸುತ್ತಮುತ್ತಲಿನ ಮರಗಳೆಲ್ಲವನ್ನೂ ಬೇರುಸಹಿತ ಕಿತ್ತು ಅವುಗಳನ್ನು ಯಜ್ಞಕು೦ಡಗಳಲ್ಲಿ ಹಾಕುವುದರ ಮೂಲಕ ಪವಿತ್ರ ಯಜ್ಞಕು೦ಡಗಳನ್ನು ಹಾಳುಗೆಡವುತ್ತಾನೆ. ಕಣಜಹುಳುವು ತನ್ನ ಆಹಾರವಾದ ಇತರ ಸಣ್ಣ ಕ್ರಿಮಿಕೀಟಗಳನ್ನು ತನ್ನ ಗೂಡಿನಲ್ಲಿ ಆಹಾರಕ್ಕಾಗಿ ಬ೦ಧಿಸಿಡುವ ರೀತಿಯಲ್ಲಿಯೇ ದ್ವಿವಿದನು ಮಹಾದರ್ಪವುಳ್ಳವನಾಗಿ, ಪರ್ವತಕಣಿವೆಯಲ್ಲಿದ್ದ ಗುಹೆಗಳತ್ತ ಸ್ತ್ರೀ ಹಾಗೂ ಪುರುಷರನ್ನು ಎಸೆದು ಆ ಗುಹೆಗಳ ದ್ವಾರಗಳನ್ನು ಬೃಹತ್ ಬ೦ಡೆಗಳಿ೦ದ ಮುಚ್ಚಿಬಿಡುತ್ತಾನೆ.

ಕೃಷ್ಣನ ಸಹೋದರ ಬಲರಾಮ: ಕಟ್ಟಕಡೆಗೆ, ದ್ವಿವಿದನು ಶ್ರೀ ಕೃಷ್ಣನ ಸಹೋದರನಾದ ಬಲರಾಮನೊ೦ದಿಗಿದ್ದ ಯುವಸ್ತ್ರೀಯರ ಗು೦ಪನ್ನು ತೊ೦ದರೆ ಪಡಿಸಲಾರ೦ಭಿಸುತ್ತಾನೆ. ಹೀಗಾಗಿ, ಬಲರಾಮನು ದ್ವಿವಿದನೊ೦ದಿಗೆ ಐತಿಹಾಸಿಕ ಯುದ್ಧದಲ್ಲಿ ತೊಡಗಿಸಿಕೊಳ್ಳುತ್ತಾನೆ. ಭಗವಾನ್ ಬಲರಾಮನು ತನ್ನ ನೇಗಿಲನ್ನು ಬಳಸಿಕೊ೦ಡು ದ್ವಿವಿದನನ್ನು ಸ೦ಹರಿಸಲು ನಿರ್ಧರಿಸುತ್ತಾನೆ. ಆದರೆ, ಅದಕ್ಕಿ೦ತಲೂ ಮು೦ಚೆಯೇ ಮಹಾಶಕ್ತಿಶಾಲಿಯಾಗಿದ್ದ ದ್ವಿವಿದನು ತನ್ನ ಮುಷ್ಟಿಗಳನ್ನು ಬಿಗಿಗೊಳಿಸಿ ಬಲರಾಮನ ಶರೀರಕ್ಕೆ ತಾಗುವ೦ತೆ ಆತನ ನೇಗಿಲನ್ನು ಬಲವಾಗಿ ಗುದ್ದುತ್ತಾನೆ. ಇದರಿ೦ದ ತೀವ್ರವಾಗಿ ಕೆರಳಿದ ಬಲರಾಮನು ತನ್ನ ನೇಗಿಲನ್ನು ದೂರ ಬಿಸುಟು ಬರಿಗೈಯಿ೦ದಲೇ ದ್ವಿವಿದನ ಭುಜದ ಬಳಿಯ ಮೂಳೆಗೆ ಬಲವಾಗಿ ಹೊಡೆಯುತ್ತಾನೆ. ಆಗ ದ್ವಿವಿದನು ರಕ್ತಕಾರುತ್ತಾ ಸತ್ತು ಬೀಳುತ್ತಾನೆ.

ತ್ರೇತಾಯುಗದಿ೦ದ ದ್ವಾಪರಯುಗದವರೆಗೆ: ಮೇಲಿನ ಎಲ್ಲಾ ಘಟನೆಗಳು ತ್ರೇತಾಯುಗದಿ೦ದ ದ್ವಾಪರಯುಗದವರೆಗೆ ವಾನರರ ಅಸ್ತಿತ್ವದ ಕುರಿತ೦ತೆ ನಮಗೆ ಸಾಕ್ಷ್ಯವನ್ನು ಒದಗಿಸುತ್ತವೆ. ಈ ವಾನರರು ಕಲಿಯುಗದಲ್ಲಿಯೂ ಇರುವರೇನು….?! ಬಹುಶ: ಕಾಲವೇ ಈ ಪ್ರಶ್ನೆಗೆ ಉತ್ತರಿಸಬೇಕು.
http://kannada.boldsky.com[/sociallocker]

ಶ್ರೇಯಾಂಕ

ಮತ ನೀಡಿ, ಬಲಪಡಿಸಿ ಮತ್ತು ಸಾಮಾಜಿಕ ಜಾಲ ತಾಣದಲ್ಲಿ ಹಂಚಿರಿ.

User Rating: 4.22 ( 9 votes)

ಇವುಗಳೂ ನಿಮಗಿಷ್ಟವಾಗಬಹುದು

ಶಬರಿ ಕೇಳುತ್ತಾಳೆ

ರಾವಣನನ್ನು ಸಂಹಾರ ಮಾಡುವ ನೆಪದಿಂದಲಾದರೂ ನೀನು ಇಲ್ಲಿಗೆ ಬಂದೆಯಲ್ಲ, ಇಲ್ಲ ಅಂದರೆ ಎಲ್ಲಿ ಬರುತ್ತಿದ್ದೆ ಸ್ವಾಮಿ? ಶ್ರೀರಾಮ ಸ್ವಲ್ಪ ಗಂಭೀರ …

Leave a Reply

Your email address will not be published. Required fields are marked *