ರಚನಾತ್ಮಕ ಜೀವನದ ಅಭಿವೃದ್ಧಿಮಾದರಿ ಹರಿಕಾರ ಬಸವಣ್ಣ

12 ನೇ ಶತಮಾನದಲ್ಲಿ ಬಸವಾದಿ ಶರಣರ ಆಂದೋಲನದ ಇತಿಹಾಸದ ಪುಟಗಳನ್ನು ತಿರುವಿಹಾಕಲು ಅಂತ್ಯದಲ್ಲಿ ನಡೆದ ರಕ್ತಕ್ರಾಂತಿಯ ಕರಾಳ ಅಧ್ಯಾಯ ಬದಿಗಿರಿಸಿದರೆ ಕಲಿಯುಗದಲ್ಲಿ ಒಂದು ಹೊಸ ಯುಗ – ಬಸವಯುಗದ ತತ್ವಾಚರಣೆ ಪರಿಣಾಮಗಳನ್ನು ನಿಚ್ಚಳವಾಗಿ ಕಾಣಬಹುದು.

ಶರಣರ ತತ್ವಾಚರಣೆಗಳು 12 ನೇ ಶತಮಾನಕ್ಕೆ ಸೀಮಿತವಾಗದೇ 900 ವರ್ಷಗಳಾದ ನಂತರವೂ ಆಚರಣೆಯಲ್ಲಿ ಇರುವುದು ವಚನಗಳಲ್ಲಿನ ಸಾರ್ಥಕ ವಿಚಾರಗಳ ಸಾಮರ್ಥ್ಯಕ್ಕೆ ಸಾಕ್ಷಿಯಾಗಿವೆ. ಯಾರನ್ನೂ ದೂರದೇ, ದೂರವಿಡದೇ ಎಲ್ಲರನ್ನೂ ಒಳಗೊಂಡು ಸಮಗ್ರವಿಕಾಸ ಸಾಧಿಸುವ ಬಸವಣ್ಣನವರ ‘ಇವನಾರವ ಇವನಾರವ, ಇವನಾರವನೆಂದೆಣಿನಸದಿರಯ್ಯ, ಇವ ನಮ್ಮವ ಇವ ನಮ್ಮವ ಇವ ನಮ್ಮವನೆಂದೆಣಿನಸಯ್ಯ,  ಕೂಡಲ ಸಂಗಮದೇವಾ ನಿಮ್ಮ ಮನೆಯ ಮಗನೆಂದೆಣಿಸಯ್ಯಾ’ ಅಣ್ಣ ಬಸವಣ್ಣನು ಇವ ನಮ್ಮವ ಎಂದು ಎಲ್ಲರನ್ನೂ ಆದರಿಸುವುದನ್ನು ಬದುಕಿನ ಭಾಗವನ್ನಾಗಿಸಿಕೊಂಡರು.

ಅಂತರಂಗ ಭಾವದಲ್ಲಿ ವ್ಯಕ್ತಿಗಳಲ್ಲಿ ಗುಣ-ದೋಷಗಳು ಇರುತ್ತವೆ. ವ್ಯಕ್ತಿಗಳಲ್ಲಿನ ದೋಷಗಳನ್ನು ತೋರಿಸುತ್ತಾಹೋದರೆ ಎಲ್ಲರೂ ದೂರವಾಗುತ್ತಾರೆ. ಹುಡುಕತ್ತಾಹೋದರೆ ಮನೆ ಹೆಂಡತಿಗೆ ಮೆಳ್ಳೆೆಗಣ್ಣು ಎಂಬಂತೆ ಎಲ್ಲರಲ್ಲಿಯೂ ದೋಷಸಿಗುತ್ತವೆ. ಆದ್ದರಿಂದ ವ್ಯಕ್ತಿಯ ಗುಣಗಳ ಕುರಿತು ಮಾತಾಡು, ದೋಷಗಳನ್ನು ಮೌನವಾಗಿ ಗುರುತಿಸು. ಆಗ ಪ್ರತಿವ್ಯಕ್ತಿ ನಮ್ಮವನಾಗುತ್ತಾನೆ.  ಇವನಾರವ ಎಂದರೆ ದೋಷಗಳು, ಇವ ನಮ್ಮವ ಎಂದರೆ ಗುಣಗಳು. ಪುಟ್ಟದೀಪ ಬೆಳಗಿಸಲು ಕತ್ತಲು ದೂರವಾದಂತೆ ಗುಣಗಳನ್ನು ಸ್ವೀಕರಿಸುತ್ತಿದ್ದಂತೆ ದೋಷಗಳು ತಾನಾಗಿ ದೂರವಾಗುತ್ತವೆ ಎಂಬರ್ಥ ವಚನದಲ್ಲಿದೆ. ವ್ಯಕ್ತಿ ಪರಿಪೂರ್ಣತ್ವದೆಡೆಗೆ ಸಾಗುತ್ತಾ ಕೂಡಲಸಂಗಮದೇವ ನಮ್ಮ ಮನೆಯ ಮಗನಾದಂತೆ ಶರಣನಾದವನು ಸರ್ವರಿಗೂ ಸ್ವೀಕಾರಾರ್ಹವಾಗುತ್ತಾನೆ. ಭಕ್ತಿಭಂಡಾರಿ ಬಸವಣ್ಣನವರ ವಚನವನ್ನು ಶಿವಶರಣರು ಅಕ್ಷರಶಃ ಜೀವನದಲ್ಲಿ ಅಳವಡಿಸಿಕೊಂಡು ಸಂತೃಪ್ತ ಗೃಹಸ್ಥಜೀವನ ಸಾಗಿಸುತ್ತಾ ಹಲವಾರು ವ್ಯಕ್ತಿಗಳಿಗೆ ಉದ್ಯೋಗ ನೀಡಿ ಅವರವರ ಕುಟುಂಬಗಳ ಉನ್ನತಿಗೆ ಸಹಕಾರಿಯಾದರು.  ಕರಣಿಕರಾದ ಬಸವಣ್ಣನವರು ಎಲ್ಲಾ ಸಮಾಜಗಳ, ಪಕ್ಷಗಳ,  ವರ್ಗಗಳ ಹೃದಯದಲ್ಲಿ ಪ್ರೀತಿ ಅರಳಿಸುವ ಕಾರಣಿಕರಾಗಿದ್ದಾರೆ. ರಚನಾತ್ಮಕ ಆರ್ಥಿಕತೆಗೆ, ಗೌರವಯುತ ಸ್ವಾಭಿಮಾನ ಸಂಪನ್ನಬದುಕಿಗೆ ನಾಂದಿಹಾಡಿದ್ದಾರೆ. ಸೃಜನಾತ್ಮಕ, ರಚನಾತ್ಮಕ ಮತ್ತು ಉತ್ತಮ ಪರಿವರ್ತನೆಯ ಮೂಲಕ ಬಸವಾದಿ ಶಿವಶರಣರು ಸರ್ವರ ಹಿತಸಾಧಿಸಿದ್ದಾರೆ.

ಧರ್ಮದ ಹೆಸರಲ್ಲಿ ಅರ್ಥರಹಿತ ಆಚರಣೆಗಳನ್ನು, ಆಚಾರಗಳ ಹೆಸರಲ್ಲಿ ಅನಾಚಾರಗಳನ್ನು, ಸತ್ಯದ  ಹೆಸರಲ್ಲಿ ಅಸತ್ಯವನ್ನು, ನೀತಿಯ ಹೆಸರಲ್ಲಿ ಅನೀತಿಯನ್ನು ಪೋಷಿಸುವ, ರೂಢಿಸುವ ಪ್ರಯತ್ನ ದುಷ್ಟಕೂಟ ಮಾಡುತ್ತಲೇ ಇದೆ. ಅಮಾಯಕರನ್ನು ಅಡ್ಡದಾರಿಗೆ ಕರೆದೊಯ್ದು ದುಶ್ಚಟಗಳ ಜಾಲದಲ್ಲಿ ಬಂಧಿಸುವ, ಸುಳ್ಳನ್ನೇ ಸತ್ಯವಾಗಿಸಿ ಧರ್ಮದ ಹೆಸರಲ್ಲಿ ಅಧರ್ಮ ಪ್ರತಿಷ್ಠಾಪಿಸಿ ಸ್ವಾರ್ಥಸಾಧಿಸುವ ಪಟ್ಟಭದ್ರಾಸಕ್ತಿಗಳು ಇದ್ದವು. ಮೂಲನಂಬಿಕೆಗಳನ್ನು ಬಿಟ್ಟು ಮೂಢನಂಬಿಕೆಗಳನ್ನು,  ಧರ್ಮದ ಹೆಸರಲ್ಲಿ ಮೇಲು-ಕೀಳು, ಸ್ಪೃಶ್ಯ- ಅಸ್ಪೃಶ್ಯ ಎಂಬ ಒಡಕನ್ನು ಸೃಷ್ಟಿಸಿ ಶೋಷಣೆಮಾಡುವ ಪದ್ಧತಿಯಿಂದಾಗಿ ಜನ ರೋಸಿಹೋಗಿದ್ದರು. ತುಳಿತಕ್ಕೆ ಒಳಗಾಗಿದ್ದರು. ಅಂತಹ ಕಾಲದಲ್ಲಿ ಬಸವಣ್ಣನ ನೇತೃತ್ವದ ಶಿವಶರಣರ ತತ್ವಾಚರಣೆಗಳಿಂದ ಆರ್ಥಿಕ, ಸಾಮಾಜಿಕ,  ಧಾರ್ಮಿಕ, ಸಾಂಸ್ಕೃತಿಕ,  ಸಾಹಿತ್ಯಿಕ ಕ್ಷೇತ್ರಗಳಲ್ಲಿ ರಚನಾತ್ಮಕ ಬದಲಾವಣೆಯ ಗಾಳಿಬೀಸಿತು. ಬುದ್ಧಿಜೀವಿಗಳ ದೃಷ್ಟಿಯಲ್ಲಿ ರಕ್ತಪಾತವಾದರೆ ಕ್ರಾಂತಿ. ವಿಕೃತ ಮನಸ್ಸಿನ (ಬುದ್ಧಿಜೀವಿಗಳು) ಕೊಂಡಿಮಂಚಣ್ಣನವರಂತಹ ಕುತಂತ್ರಿಗಳಿಂದಾಗಿ ರಕ್ತಪಾತಕ್ಕೆ ಕಾರಣವಾಯ್ತು. ಒಂದು ಸಫಲ ಆಂದೋಲನವನ್ನು ಕಲ್ಯಾಣಕ್ರಾಂತಿ ಹೆಸರಿಟ್ಟು ಅದರ ಮೌಲ್ಯವನ್ನು ಕಿರಿದಾಗಿಸಿದರು. ವಾಸ್ತವವಾಗಿ ಸಾಮಾನ್ಯರನ್ನು ಅಸಾಮಾನ್ಯರಾಗಿಸಿದ, ಭಕ್ತಿಯ ಬಲದಿಂದ ಮಾನವರನ್ನು ಶರಣರನ್ನಾಗಿಸಿದ ಕ್ರಾಂತಿ, ಸಂಕ್ರಾತಿಯಾಗಿತ್ತು.  ಹಲವು ರಕ್ತರಹಿತ ಕ್ರಾಂತಿಗಳ ಸಂಕ್ರಾಂತಿಗಳಿಂದಾಗಿ ನವಸೂರ್ಯೋದಯವಾಯಿತು. ಬಸವಣ್ಣನವರ ಭಕ್ತಿಯೆಂಬ ಪೃಥ್ವಿಯ ಮೇಲೆ, ಗುರುವೆಂಬ ಬೀಜವಂಕುರಿಸಿ ಲಿಂಗವೆಂಬ ಎಲೆಯಾಯಿತು, ಲಿಂಗವೆಂಬ ಎಲೆಯ ಮೇಲೆ, ವಿಚಾರವೆಂಬ ಹೂವಾಯಿತು. ಆಚಾರವೆಂಬ ಕಾಯಾಯಿತು, ನಿಷ್ಪತ್ತಿಯೆಂಬ ಹಣ್ಣು ತೊಟ್ಟುಬಿಟ್ಟು ಕಳಚಿ ಬೀಳುವಲ್ಲಿ, ಕೂಡಲಸಂಗಮದೇವ ತನಗೆ ಬೇಕೆಂದು ಎತ್ತಿಕೊಂಡ ಈ ವಚನ ಇದನ್ನು ಹೆಚ್ಚು ಸ್ಪಷ್ಟಪಡಿಸುತ್ತದೆ.

ಬಸವಣ್ಣನವರು ಭಕ್ತಿಯಿಂದ ಪೃಥ್ವಿಯಮೇಲಿನ ಅನಾಚಾರ ಅಳಿಸಿದರು. ಗುರು (ಜಂಗಮ)ವನ್ನು ಭಕ್ತಿಮಾರ್ಗದ ಮಾರ್ಗದರ್ಶಕರೆಂದರು. ಸತ್ಯ ಶುದ್ಧ ಕಾಯಕ (ಸ್ವಾವಲಂಬಿ ಸ್ವ-ಉದ್ಯೋಗ)ದ ಬದುಕು ದಾಸೋಹವಾಯ್ತು. ಪರಮಾತ್ಮ (ಲಿಂಗ) ಆರಾಧನೆ ವಿಚಾರ-ಆಚಾರದಲ್ಲಿ ಅಳವಡಿಸಿ ನಡೆದಂತೆ ನುಡಿದ ಸಚ್ಚಾರಿತ್ರ್ಯವಂತಬದುಕು ಭಕ್ತಿಮಾರ್ಗವಾಯಿತು. ಕೂಡಲಸಂಗಮದೇವನಿಗೆ ಪ್ರಿಯರಾದವರು ಶರಣರು ಎಂದೆನಿಸಿಕೊಂಡರು. ಇಹದಲ್ಲಿ ಭಕ್ತಿ ಪರದಲ್ಲಿ ಮೋಕ್ಷಸಾಧಿಸಿ ಮಾನವಜನ್ಮ ಸಾರ್ಥಕವಾಗಿಸಿಕೊಂಡರು. ದುಷ್ಟಶಕ್ತಿಗಳ ವಿರುದ್ಧ ಹೋರಾಟದ ಯಶದ ಭಾಗವಾಗಿ ನವೀನ ವಿಕಾಸದ ಮಾದರಿಯನ್ನು ಜನ ಸಹರ್ಷದಿಂದ ಒಪ್ಪಿ ಬದುಕಿದರು. 12 ನೇ ಶತಮಾನದಂತಹ ಅಹಿತಕರ ಘಟನೆಗಳು ಇಂದು ಘಟಿಸುತ್ತಿದ್ದರೂ ಅದನ್ನು ಅರಗಿಸಿಕೊಳ್ಳುವ ಸಾಮರ್ಥ್ಯ 20 ನೇ ಶತಮಾನದ ಭಾರತೀಯಸಮಾಜದಲ್ಲಿ ನಿರ್ಮಾಣವಾಗಿರುವುದೇ ಕಲ್ಯಾಣಕ್ರಾಂತಿ, ರಕ್ತಕ್ರಾಂತಿಯಲ್ಲ ಅದು ವೈಶಿಷ್ಟ್ಯಮಯ ಸಂಕ್ರಾಂತಿ ಎಂಬುದಕ್ಕೆ ಸಾಕ್ಷಿಯಾಗಿದೆ.

4 ದಶಕಗಳಿಂದ ಬಸವಣ್ಣನವರ ವಚನಾರ್ಥ ತಿರುಚಿ ಜನರ ಶ್ರದ್ಧೆ ಹಾಳುಮಾಡುವ ಸಂಚು ನಡೆಯುತ್ತಿದೆ. ಮಾತೆ ಮಹಾದೇವಿಯವರು ಬಸವ  ವಚನಾಂಕಿತ ಕೂಡಲಸಂಗ ಮದೇವ ಇದ್ದುದನ್ನು  ಬದಲಾಯಿಸಿ ಲಿಂಗದೇವ ಮಾಡಿದ್ದನ್ನು ಬಸವಭಕ್ತರು ಸಾರಾಸಗಟುತಿರಸ್ಕರಿಸಿದರು. ಬಸವಣ್ಣನವರ ವಚನಗಳನ್ನು ತಮ್ಮಮೂಗಿನನೇರಕ್ಕೆ ಅರ್ಥೈಸುವ  ಬುದ್ಧಿಜೀವಿವರ್ಗವನ್ನು ಸಮಾಜ ಒಪ್ಪಲಿಲ್ಲ.  ಅಂಗೈಯಲ್ಲಿ ಲಿಂಗ ಹಿಡಿದು ಲಿಂಗಪೂಜಿಸದ, ಕೊರಳಲ್ಲಿ ಲಿಂಗಧರಿಸದ  ಆರುಹಡೆದವರಿಗೆ ಮೂರು  ಹಡೆದವಳು ಬುದ್ಧಿ ಹೇಳಿದಂತೆರಂಜಾನ್ ದರ್ಗಾದವರು  ಬಸವ ತತ್ವಗಳ ಕುರಿತಾಗಿ ಭಕ್ತಿಯಿಲ್ಲದೆ ಬಿಗಿವ  ಭಾಷಣಗಳನ್ನು ಜನ ಕೇಳಿ ಆನಂದಿಸಿದರು, ಆಚರಿಸಲಿಲ್ಲ. ಅಂತಿಮವಾಗಿ ನಿರ್ಲಕ್ಷಿಸಿದ್ದಾರೆ.  ಬಸವಭಕ್ತರೆಂಬ  ಹಣೆಪಟ್ಟಿಧರಿಸಿ ಅಡ್ಡಾಡುವುದನ್ನು ಸಮಾಜ  ಒಪ್ಪಲಿಲ್ಲ. ಶರಣರ ಆಂತರಿಕ ಬಾಹ್ಯಲಕ್ಷಣಗಳಾದ ಅಷ್ಟಾವರಣ, ಪಂಚಾಚಾರ,  ಷಟಸ್ಥಲಗಳೆಂಬ  ತತ್ವಾಚರಣೆಗಳನ್ನು ಬಾಯಿಮಾತಿಗೆ  ಸೀಮಿತಗೊಳಿಸಿದ್ದು ಸರಿಯಲ್ಲಎಂದಿತು ಶರಣಸಮಾಜ.

ಬೋಳೆ ಶಂಕರನಂತೆ ಕೇಳಿದ್ದಕ್ಕೆಲ್ಲಾ ತಲೆದೂಗುವಂತೆ ಕಂಡ ಬಸವ ಅನುಯಾಯಿಗಳು  ಲಿಂಗಾಯತ ಹೆಸರಿನಲ್ಲಿ ಧರ್ಮಒಡೆವ ಸಂಚಿನ  ರಾಜಕಾರಣಿಗಳಿಗೆ ಸರಿಯಾಗಿಬುದ್ಧಿ ಕಲಿಸಿದರು.  ಉದಾಹರಣೆಗೆ ‘ಕಲ್ಲನಾಗರಕಂಡರೆ ಹಾಲನೆರೆಯೆಂಬರು,  ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯ,  ಉಂಬಜಂಗಮ  ಬಂದೆಡೆನಡೆಯೆಂಬರು,  ಉಣ್ಣದ ಲಿಂಗಕ್ಕೆ ಬೋಜನ ವಿಡಿಯೆಂಬರಯ್ಯಾ, ನಮ್ಮ ಕೂಡಲಸಂಗವನ ಶರಣರ  ಕಂಡು ಉದಾಸೀನವ ಮಾಡಿದೆಡೆ ಕಲ್ಲುತಾಗಿದ  ಮಿಟ್ಟೆಯಂತಪ್ಪರಯ್ಯಾ’ ಎಂಬ ವಚನದಲ್ಲಿ ಬಸವಣ್ಣನವರು ಮನುಷ್ಯ ಸಹಜಸ್ವಭಾವದ ಉದಾಹರಣೆ ನೀಡುತ್ತಾ ದಿಟದನಾಗರ, ಉಂಬ ಜಂಗಮರನ್ನು ಆದರಿಸಬೇಕು. ಸಜ್ಜನರನ್ನು (ಕೂಡಲಸಂಗನ ಶರಣರ) ಉದಾಸೀನಮಾಡಬಾರದು ಎಂದು  ಎಚ್ಚರಿಸಿದ್ದಾರೆ ವಿನಹಹುತ್ತಕ್ಕೆ, ಕಲ್ಲನಾಗರಕ್ಕೆ  ಹಾಲೆರೆಯಬಾರದು ಎಂದಿಲ್ಲ. ಹಾವುಗಳೆಲ್ಲವೂ  ಉಪದ್ರವಕಾರಿ ಅಲ್ಲ. ಅನೇಕಹಾವುಗಳು ರೈತಮಿತ್ರಗಳಾಗಿವೆ. ಹೊಲಗಳಲ್ಲಿನ ಇಲಿಗಳ ನಿಯಂತ್ರಣಕ್ಕಾಗಿ  ಅವುಗಳನ್ನು ರಕ್ಷಿಸಬೇಕು ಎಂಬ ಸಂದೇಶ ಇರುವ ವಚನ ತಿರುಚಿದ ಬುದ್ಧಿಜೀವಿಗಳು ನಾಗಪಂಚಮಿ ದಿನ ಹುತ್ತಕ್ಕೆ ಎರೆವುದರಿಂದ ಲೀಟರಗಟ್ಟಲೆ ಹಾಲು ಹಾಳಾಗುತ್ತದೆ ಎಂದು ಬೊಬ್ಬೆಹಾಕುತ್ತಾ ನಾಗಪಂಚಮಿ ಆಚರಣೆಗೆ ಕಲ್ಲು ಹಾಕುತ್ತಿದ್ದಾರೆ. ಹಾಕುವ ಹನಿ ಹಾಲುಭೂಮಿಯ ತನಿ  ಹೆಚ್ಚಿಸುವ ಕ್ರಿಯೆಗೆ ಕಲ್ಲು  ಹಾಕಿದರು. ಮತ್ತು  ಶತಶತಮಾನಗಳಿಂದ  ನಡೆಯುತ್ತಿರುವ ಒಂದು ಶ್ರದ್ಧಾಯುಕ್ತ ಆಚರಣೆ  ನಿಲ್ಲಿಸುವ ಷಡ್ಯಂತ್ರನಡೆಸಿದ್ದಾರೆ. ಎರಡನೆಯದಾಗಿ  ಬಸವಣ್ಣನವರು ಸೇರಿದಂತೆ ಶಿವಶರಣರು ಎಲ್ಲಿಯೂ ದೇವರಿಲ್ಲ ಎನ್ನಲಿಲ್ಲ. ಆದರೆ ಜೀವಮಾನವಿಡೀ ಒಬ್ಬ ದೇವನನ್ನು ಪೂಜಿಸು ಎಂದು ಎಚ್ಚರಿಸಲು ದೇವನೊಬ್ಬ ನಾಮಹಲವು,  ಪರಮ ಪತಿವ್ರತೆಗೆ ಗಂಡನೊಬ್ಬ ಎನ್ನುವವಚನ ಮತ್ತು ಶರಣರು ತಮ್ಮ ತಮ್ಮ  ಆರಾಧ್ಯದೈವವನ್ನು  ವಚನಾಂಕಿತವಾಗಿ ಸ್ವೀಕರಿಸಿದ್ದುಜೀವಂತಸಾಕ್ಷಿಯಾಗಿದೆ. ಭಾರತೀಯ ಮೂಲಸ್ವಭಾವಅನೇಕತೆಯಲ್ಲಿ ಏಕತೆ, ಅದುವೆ ನಮ್ಮ ವಿಶೇಷತೆ ಎನ್ನುವ ಮಾತನ್ನು ಶಿವಶರಣರು ಒಪ್ಪಿದ್ದರು. ಆದ್ದರಿಂದ  ಶಿವಯೋಗಿ ಸಿದ್ದರಾಮರ  ವಚನಾಂಕಿತಕಪಿಲಸಿದ್ಧ  ಮಲ್ಲಿಕಾರ್ಜುನ, ಶರಣೆ  ಅಕ್ಕಮಹಾ ದೇವಿ – ಚನ್ನಮಲ್ಲಿಕಾರ್ಜುನ, ದೇವರದಾಸಿಮಯ್ಯನದು – ಕಾಣಾರಾಮನಾಥಾ, ಅಲ್ಲಮಪ್ರಭು – ಗುಹೇಶ್ವರಾ, ಶರಣೆ ಸತ್ಯಕ್ಕ – ಜಂಬುಕೇಶ್ವರ ಇತ್ಯಾದಿ ತಮ್ಮಆರಾಧ್ಯ ದೇವರ ಹೆಸರುಗಳನ್ನು ವಚನಾಂಕಿತವಾಗಿಸ್ವೀಕರಿಸಿದ್ದು ಗಮನಿಸಿದರೆ ಶರಣರು  ದೇವರಿಲ್ಲ ಎಂದು ಹೇಳಿಲಿಲ್ಲ ಎಂಬುದು  ಸತ್ಯಸಿದ್ಧವಾಗುತ್ತದೆ. ಆದರೂ ಬಸವತತ್ವದ ಹೆಸರಲ್ಲಿ  ಮೂರ್ತದಿಂದ-ಅಮೂರ್ತಸಾಧಿಸುವ  ಸಂಕೇತಗಳಾದ ದೇವರ ಮೂರ್ತಿಗಳನ್ನು ಜಗಲಿ  ಮೇಲಿನ ಎಲ್ಲಾ ದೇವರ ಮೂರ್ತಿಗಳನ್ನು,  ಭಾವಚಿತ್ರಗಳನ್ನು ತೆಗೆಯಬೇಕುಎನ್ನುವ ಕಾರ್ಯಾಚರಣೆ  ನಡೆಸಿದ್ದಾರೆ. ಅದಕ್ಕಾಗಿ ದೇವರನ್ನೇ ನಂಬದ  ಮುಸ್ಲಿಂ ಧರ್ಮದ ಸಾಹಿತಿಗಳನ್ನು ಶರಣರು ಎಂದು  ಕರೆಯತೊಡಗಿದ್ದಾರೆ.  ಭಾವೈಕ್ಯತೆ ಎಂದು ಬಿಂಬಿಸುತ್ತಿದ್ದಾರೆ. ಬಸವಣ್ಣನವರ ನಾಲ್ಕಾರುವಚನ ಬಾಯಿಪಾಠಮಾಡಿದ ಮಾತ್ರಕ್ಕೆಶರಣರಾಗುವುದಿಲ್ಲ.  ಲಾಂಛನದಿಂದ ಶರಣರಾಗುವುದಿಲ್ಲ. ಅಲ್ಲಿ  ಆಚರಣೆ ಇರಬೇಕು. ಎನಗಿಂತ ಕಿರಿಯರಿಲ್ಲ ಎಂಬ ಭಾವ ಇರಬೇಕು. ಅಹಿಂಸೆ, ಅಹಂ  ಇರಬಾರದು. ಷಟಸ್ಥಲಗಳಲ್ಲಿಅಂತಿಮ ಸ್ಥಲ ಐಕ್ಯ ಸ್ಥಲ ಸಿದ್ದಿಸಿಕೊಂಡಾಗ ಮತ್ತು ಅಹಂ ಬ್ರಹ್ಮ, ಶಿವನಾಗಿ ಶಿವನಪೂಜಿಸುವ ಸ್ಥಿತಿತಲುಪಿದವರಿಗೆ ಮಾತ್ರ ಅನ್ಯದೇವರುಗಳ  ಹಂಗಿಲ್ಲ ಹಾಗೂ ಭಕ್ತಿಸ್ಥಲದ  ವಚನಗಳಲ್ಲಿ ಟೀಕೆಗಳಿಲ್ಲ.  ಆಚರಣೆಗೆ ಆದ್ಯತೆ ನೀಡಿವೆ.  ಐಕ್ಯ ಸ್ಥಲದ ವಚನಗಳಲ್ಲಿ ಎಲ್ಲಾ  ಹಂಗುತೊರೆದದ್ದಲ್ಲಿ ಕಾಣಲುಟೀಕೆಯಂತಿವೆ ಎಂಬುದನ್ನು  ಶರಣರು ಸ್ಪಷ್ಟಪಡಿಸಿದ್ದಾರೆ.

ಧರ್ಮವೆಂಬಹಣ್ಣು ತೊಟ್ಟು  ಬಿಟ್ಟು ಕಳಚಿ ಬೀಳುವಲ್ಲಿ  ತಾಯಿಭಾರತಿ ತನಗೆಬೇಕೆಂದು ಎತ್ತಿಕೊಂಡಳು. ಗುರುಸ್ವರೂಪಿ ಭಗವಾಧ್ವಜ (ಧರ್ಮ),  ಲಿಂಗಸ್ವರೂಪಿ ರಾಷ್ಟ್ರ, ಜಂಗಮ (ಪ್ರಚಾರಕರು/ಸ್ವಯಂಸೇವಕರು) ರೂಪಿ ಭೂಮಿಯ ಮೇಲೆ ಮತ್ತೊಮ್ಮೆ ನಿಜ ಧರ್ಮ ಸ್ಥಾಪಿಸಿ ಭಾರತವನ್ನು ವಿಶ್ವಗುರುಮಾಡುವತ್ತ ಸಂಘ ಕಾರ್ಯಮಾಡುತ್ತಿದೆ.  ಭಾರತೀಯ ಸಮಾಜ ಹಲವು ಏರುಪೇರುಗಳನ್ನು, ಅಸ್ಪಶ್ಯತೆಯಂತಹ ಸಮಾಜದಲ್ಲಿನ ದೋಷಗಳನ್ನುಸದ್ದಿಲ್ಲದೆ ನಿವಾರಿಸಿಕೊಳ್ಳಲು ಮತ್ತು  ನಾಗರಿಕತೆಯಲ್ಲಿ ನೈತಿಕತೆ ರೂಢಿಸಲು ಸಂಘ ಶಕ್ತವಾಗಿದೆ. ಸಾಮಾನ್ಯರು ಶರಣರಾಗುವ ತನಕ ಸಾಧನೆಗೆ ಅವರು ನಂಬಿದ, ಶ್ರದ್ಧೆಯಿಂದ ಪೂಜಿಸುವ ದೇವರ ಮೂರ್ತಿಗಳೂ ಇರಬೇಕು. ಬಸವತತ್ವಗಳು  ಸುಲಭದಲ್ಲಿ ಆಚರಿಸಬಹುದಾದ,  ಅನುಕರಣೀಯ ತತ್ವಾಚರಣೆಗಳಾಗಿವೆ. ಆಚರಣೆರಹಿತ ಬಸವತತ್ವಗಳನ್ನು  ಒಣಸಿದ್ಧಾಂತಗಳನ್ನು ಬಸವಭಕ್ತರು ಎಂದು  ಕರೆದುಕೊಳ್ಳುವವರು ಹೇಳಬಾರದು. ಕಳಬೇಡ,  ಕೊಲಬೇಡ ಎಂಬ ಸಪ್ತಸೂತ್ರಗಳನ್ನು ನಿತ್ಯದಲ್ಲಿ ಅಳವಡಿಸಿಕೊಂಡಿರುವುದರ  ಕುರಿತು ಆತ್ಮಾವಲೋಕನ ಮಾಡಿಕೊಳ್ಳಬೇಕು. ಬಸವಣ್ಣನವರ  ಕುರಿತಾದ ಭಾಷಣದ  ಮಾತುಗಳು ಯಾರ ವಿರುದ್ಧವೂ  ಇರಬಾರದು. ಯಾರ ಮನನೋಯಿಸದಂತೆ, ನುಡಿದರೆ ಮುತ್ತಿನಹಾರದಂತೆ, ವಚನದಲ್ಲಿ ನಾಮಾಮೃತ ತುಂಬಿದಂತೆ  ಇರಬೇಕು. ಆಗ ದಯವಿಲ್ಲದ್ದು ಧರ್ಮವಲ್ಲ ಎಂಬ  ಅರಿವುಗುರುವಾಗಿ, ರಚನಾತ್ಮಕ ಜೀವನದ ಅರಿವು ಆಚಾರವಾಗುತ್ತದೆ.  ಬಸವಣ್ಣನವರು ವಿಶ್ವಗುರುವಾಗುತ್ತಾರೆ.

source: whatsapp

ಇವುಗಳೂ ನಿಮಗಿಷ್ಟವಾಗಬಹುದು

ನಮ್ಮ ದೇಶದಲ್ಲಿ 400 ವರ್ಷಗಳ ಹಿಂದೆಯೇ ಬಾರ್ ಗರ್ಲ್ಸ್ ಸಂಸ್ಕೃತಿ ಇದೆಯಂತೆ…!!

ಪಬ್, ಬಾರ್ ಗಳಲ್ಲಿ ನಾಟ್ಯ ಮಾಡುವ ಬಾರ್ ಗರ್ಲ್ಸ್ ಬಗ್ಗೆ ತಿಳಿದೇ ಇರುತ್ತದೆಯಲ್ಲವೆ. ಆದರೆ ನಿಜಕ್ಕೂ ಈ ಸಂಸ್ಕೃತಿ ಆಧುನಿಕ …

Leave a Reply

Your email address will not be published. Required fields are marked *