soap

ಮೈಸೂರು ಸ್ಯಾಂಡಲ್ ಸೋಪ್ ಹುಟ್ಟಿದ ಕಥೆ

ಇಪ್ಪತ್ತನೇ ಶತಮಾನದಲ್ಲಿ, ಕರ್ನಾಟಕ ಏಕೀಕರಣದ ಮುನ್ನ ವಡೆಯರ್ಮನೆತನವೂ ಮೈಸೂರು ರಾಜ್ಯವನ್ನು ಆಳುತ್ತಿತ್ತು, ಜಗತ್ತಿನಲ್ಲಿ ಅತಿ ಹೆಚ್ಚು ಗಂಧದ ಮರ ಉತ್ಪಾದಕರಲ್ಲಿ ಒಂದಾಗಿತ್ತು. ಮರವನ್ನುರಫ್ತು ಮಾಡುತ್ತಿತ್ತು.

gandhaಹೀಗೆ ಉಳಿದಿದ್ದ ಗಂಧದ ಕಚ್ಚಾವಸ್ತುವನ್ನು ಸದುಪಯೋಗಪಡಿಸಿಕೊಳ್ಳಲು, 1918 ರಲ್ಲಿ ಫ್ರಾನ್ಸ್ನಿಂದ ಬಂದ ಓರ್ವ ವಿದೇಶಿ ಅತಿಥಿ ಭಾರತೀಯ ಶ್ರೀಗಂಧದ ತೈಲದಿಂದ ತಯಾರಿಸಲ್ಪಟ್ಟ ವಿದೇಶಿ ಸಾಬೂನುಗಳ ಅಪರೂಪದ ಉಡುಗೊರೆಯನ್ನು ನಾಲ್ವಡಿ ಶ್ರೀಕೃಷ್ಣರಾಜ ಒಡೆಯರ್ರವರಿಗೆನೀಡಿದ್ದನ್ನು ನೆನೆದ ಒಡೆಯರು ನಮ್ಮಲ್ಲೇ ಈ ಕಾರ್ಖಾನೆಗಳನ್ನು ಸ್ಥಾಪಿಸುವ ಉದ್ದೇಶವನ್ನು ಹೊಂದಿ ಸರ್ಕಾರಿ ಸಾಬೂನು ಕಾರ್ಖಾನೆಯನ್ನು ಬೆಂಗಳೂರಿನಲ್ಲಿ ಸ್ಥಾಪಿಸಿದರು. ಅದೇ ವರ್ಷ ಮೈಸೂರಿನಲ್ಲಿ ಗಂಧದ ಮರದಿಂದ ಎಣ್ಣೆ ತೆಗೆಯುವಂತಹ ಕಾರ್ಖಾನೆಯೂ ಸ್ಥಾಪಿಸಲ್ಪಟ್ಟಿತು.

ನಾಲ್ವಡಿ ಶ್ರೀಕೃಷ್ಣರಾಜ ಒಡೆಯರ್

ಶ್ರೀ ಎಸ್.ಜಿ. ಶಾಸ್ತ್ರಿ ಇವರು ೧೯೧೬ರಲ್ಲಿ ಅಭಿವೃದ್ಧಿಪಡಿಸಿದ ಶ್ರೀಗಂಧದ ಸುಗಂಧದ್ರವ್ಯವು ಸಾಬೂನು ತಯಾರಿಕೆಗೆ ಮೂಲದ್ರವ್ಯವಾಗಿ ಪರಿಗಣಿಸಲ್ಪಟ್ಟು ಬಳಸಲ್ಪಟ್ಟಿತು.ಶ್ರೀಗಂಧದೆಣ್ಣೆಯ ಸುಗಂಧವನ್ನು ಪ್ರಮುಖ ದ್ರವ್ಯ ವಸ್ತುವಾಗಿ ಬಳಸಿ, ಮೈಸೂರು ಸ್ಯಾಂಡಲ್ಸಾಬೂನನ್ನು ವಿಶಿಷ್ಟ ಆಕಾರ, ಕವಚದಲ್ಲಿ ತಯಾರಿಸಿ, ಪ್ರಪ್ರಥಮವಾಗಿ ೧೯೧೮ರ ನವಂಬರ್ಮಾಹೆಯಲ್ಲಿ ಮಾರುಕಟ್ಟೆಗೆ ಪರಿಚಯಸಲಾಯಿತು. ನಂತರ ೧೯೪೪ರಲ್ಲಿ ಶಿವಮೊಗ್ಗದಲ್ಲಿ ಶ್ರೀಗಂಧದೆಣ್ಣೆ ಕಾರ್ಖಾನೆಯನ್ನು ಸ್ಥಾಪಿಸಲಾಯಿತು.ಕರ್ನಾಟಕ ಏಕೀಕರಣದ ನಂತರ ಈ ಕಾರ್ಖಾನೆಗಳು ಕರ್ನಾಟಕ ಸರ್ಕಾರದ ಸುಪರ್ದಿಗೆ ಬಂದವು.

mg shatriಈ ಎಲ್ಲಾ ಕಾರ್ಖಾನೆಗಳನ್ನು ಮಿಳಿತ ಗೊಳಿಸಿ ಸರ್ಕಾರಿ ಸಾಬೂನು ಕಾರ್ಖಾನೆಯನ್ನು ೧೯೮೦ನೇ ಇಸವಿಯಲ್ಲಿ ಕರ್ನಾಟಕ ರಾಜ್ಯಸರ್ಕಾರದ ಸಾರ್ವಜನಿಕ ಸ್ವಾಮ್ಯದ ಉದ್ದಿಮೆಯಾಗಿ ಪರಿವರ್ತಿಸಿ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ ಎಂದು ಪುನರ್ನಾಮಕರಣ ಮಾಡಲಾಯಿತು. ತದ ನಂತರ ಸಾಬೂನಿನ ಹೊರತಾಗಿ, ಅಗರಬತ್ತಿ, ಮೈಪೌಡರ್, ಮಾರ್ಜಕಗಳು, ಶ್ರೀಗಂಧದೆಣ್ಣೆ, ಹಾಗೂಶ್ರೀಗಂಧದ ಕೊರಡು ಮುಂತಾದ ಉತ್ಪನ್ನಗಳ ತಯಾರಿಕೆ ಆರಂಭಿಸಿತು.

ಶ್ರೀಗಂಧದಎಣ್ಣೆ – ಆಯುರ್ವೇದದಲ್ಲಿನಉಪಯೋಗಗಳು

  • ಚಂದದತ್ವಚೆಗಾಗಿ
  • ಸುಕ್ಕುಮೊಡವೆಗಳನಿವಾರಣೆಗೆ
  • ಮರೆವುತನನಿವಾರಣೆಗೆ
  • ಚರ್ಮಸೋಂಕುನಿವಾರಣೆಗೆ
  • ರಕ್ತದೊತ್ತಡಹಾಗೂಮಾನಸಿಕಖಿನ್ನತೆದೂರವಾಗಲು
  • ತೂಕಕಡಿಮೆಮಾಡಿಕೊಳ್ಳಲು

ಕರ್ನಾಟಕಸಾಬೂನುಮತ್ತುಮಾರ್ಜಕನಿಯಮಿತ   (ಕೆಎಸ್ಡಿಎಲ್):

ಶರಭ ಪುರಾಣದ ಒಂದು ಕಾಲ್ಪನಿಕ ಸೃಷ್ಟಿ.ಸಿಂಹದ ಶರೀರ ಮತ್ತು ಆನೆಯ ತಲೆಯಿಂದ ಕೂಡಿದ್ದು, ಇದನ್ನು ಒಂದು ಅಸಾಮಾನ್ಯ ರೂಪದಲ್ಲಿ ಸೃಷ್ಟಿಪಡಿಸಲಾಗಿದೆ. ಇದು ಜ್ಞಾನ, ಧೈರ್ಯ ಮತ್ತು ಶಕ್ತಿಯ ಸಂಕೇತಗಳನ್ನು ಒಳಗೊಂಡಿದೆ.ತತ್ವಶಾಸ್ತ್ರ ಸಂಕೇತಿಸಲು ಇದನ್ನು ಸಂಸ್ಧೆಯು ತನ್ನ ಅಧಿಕೃತ ಲಾಂಛನವನ್ನಾಗಿ ಸ್ವೀಕರಿಸಿದೆ.

ಶ್ರೀಗಂಧ ಕೃಷಿ

ಸಂಸ್ಥೆಯ ಹಾಗೂ ಸರ್ಕಾರದ ನಿಯಮಾವಳಿಗಳಂತೆ “ಶ್ರೀಗಂಧ ಹೆಚ್ಚು ಬೆಳೆಯಿರಿ ಯೋಜನೆ” ಯನ್ನು ಹಮ್ಮಿಕೊಂಡು ಹೆಚ್ಚು ಹೆಚ್ಚು ಪ್ರಚುರಪಡಿಸಲಾಗುತ್ತಿದೆ. ಪ್ರಸ್ತುತ ಬೆಳೆಗಾರರಿಂದಲೇ ನೇರವಾಗಿ ಶ್ರೀಗಂಧದ ಮರವನ್ನು ಖರೀದಿಸುವ ಯೋಜನೆ ಅಳವಡಿಸಿಕೊಂಡಿದ್ದು ಇದರಿಂದ ರೈತರಿಗೆ ವಾಣಿಜ್ಯ ಆಧಾರಿತವಾಗಿ ಶ್ರೀಗಂಧ ಬೆಳೆಯಲು ಅನುವು ಮಾಡಿಕೊಡಲಾಗಿದೆ

ಶ್ರೀ ಗಂಧ ಬೆಳೆಯಲು “ಶ್ರೀಗಂಧ ಬೆಳೆಯಿರಿ ಸಿರಿವಂತರಾಗಿ”  ಎಂಬ ಮಹಾತ್ವಾಕಾಂಕ್ಷೆಯ ಕಾರ್ಯಕ್ರಮ ಹಮ್ಮಿಕೊಂಡಿರುವ ಏಕೈಕ ಸರ್ಕಾರಿಸಂಸ್ಥೆಯಾಗಿದೆ.

ಈಗಾಗಲೇ  350ಕ್ಕೂ ಹೆಚ್ಚು ಜನ ರೈತರು ಆಸಕ್ತಿ ತೋರಿಸಿದ್ದು ಸುಮಾರು  4000 ಎಕರೆ ಪ್ರದೇಶದಲ್ಲಿ ಕರ್ನಾಟಕ ರಾಜ್ಯದಲ್ಲಿ ಶ್ರೀಗಂಧದ ಬೆಳೆಯನ್ನು ಬೆಳೆಯುತ್ತಿದ್ದಾರೆ.

100  ವರ್ಷಗಳನ್ನು ಪೂರೈಸಿದ KSDL ಸಂಸ್ಥೆ ನಮ್ಮ ಕರ್ನಾಟಕದ್ದು ಎನ್ನುವ ಹೆಮ್ಮೆ ಕನ್ನಡಿಗರದ್ದು.

(http://www.aralikatte.com/2016/10/31/mysurusandalsoap/)

ಶ್ರೇಯಾಂಕ

ಮತ ನೀಡಿ, ಬಲಪಡಿಸಿ ಮತ್ತು ಸಾಮಾಜಿಕ ಜಾಲ ತಾಣದಲ್ಲಿ ಹಂಚಿರಿ.

User Rating: 5 ( 1 votes)

ಇವುಗಳೂ ನಿಮಗಿಷ್ಟವಾಗಬಹುದು

ತಾಮ್ರದ ಕೊಡ ಹಾಗೂ ಪ್ಲಾಸ್ಟಿಕ್ ಕೊಡಗಳಲ್ಲಿಯ ವ್ಯತ್ಯಾಸ

ತಾಮ್ರದ ಕೊಡ ಹಾಗೂ ಪ್ಲಾಸ್ಟಿಕ್ ಕೊಡಗಳಲ್ಲಿಯ ವ್ಯತ್ಯಾಸವೇನು…???? ತಾಮ್ರದ ಕೊಡ ಬಾವಿಯಲ್ಲಿ ಇಳಿದಾಗ ಬಾಗಿ ತನ್ನೊಳಗೆ ಪೂರ್ಣ ನೀರು ತುಂಬಿಕೊಂಡು …

Leave a Reply

Your email address will not be published. Required fields are marked *