ಮಿಂಚುಳ್ಳಿ

ಮಿಂಚುಳ್ಳಿ
ಮಿಂಚುಳ್ಳಿ

ಮಿಂಚುಳ್ಳಿಗಳು ಕೊರಾಸಿಫಾರ್ಮ್ಸ್ ವರ್ಗದಲ್ಲಿನ ಚಿಕ್ಕದಿಂದ ಮಧ್ಯಮ ಗಾತ್ರದ ಪ್ರಕಾಶಮಾನವಾದ ಬಣ್ಣವನ್ನೊಂದಿದ ಪಕ್ಷಿಗಳ ಒಂದು ಪಂಗಡ. ಅವು ಜಗದ್ವ್ಯಾಪಕ ವಿತರಣೆಯನ್ನು ಹೊಂದಿವೆ, ಇವುಗಳ ಬಹುತೇಕ ತಳಿಗಳನ್ನು ಪುರಾತನ ಪ್ರಪಂಚ ಮತ್ತು ಆಸ್ಟ್ರೇಲಿಯದಲ್ಲಿ ಕಾಣಲಾಗಿತ್ತು. ಈ ಪಂಗಡವನ್ನು ಒಂಟಿ ಸಂತತಿ, ಆಲ್ಸಿಡಿನಿಡೇ, ಅಥವಾ ಮೂರು ಸಂತತಿಗಳನ್ನು, ಆಲ್ಸಿಡಿನಿಡೇ (ನದಿಯ ಮಿಂಚುಳ್ಳಿಗಳು), ಹಾಲ್ಸಿಯೊನಿಡೇ(ಮರದ ಮಿಂಚುಳ್ಳಿಗಳು), ಮತ್ತು ಸೆರಿಲಿಡೇ (ನೀರಿನ ಮಿಂಚುಳ್ಳಿಗಳು) ಒಳಗೊಂಡ ಉಪವರ್ಗ ಆಲ್ಸೆಡಿನೀಸ್ ಎಂದು ಪರಿಗಣಿಸಲಾಗುವುದು. ಸುಮಾರು 90 ಮಿಂಚುಳ್ಳಿ ತಳಿಗಳಿವೆ. ಇವೆಲ್ಲವೂ ದೊಡ್ಡದಾದ ತಲೆಗಳನ್ನು, ಉದ್ದನೆಯ, ತೀಕ್ಷ್ಣ, ಮೊನಚಾದ ಕೊಕ್ಕುಗಳನ್ನು, ಕುಳ್ಳಗಿನ ಕಾಲುಗಳನ್ನು, ಮತ್ತು ಮಂದವಾದ ಬಾಲಗಳನ್ನು ಹೊಂದಿವೆ. ಬಹುತೇಕ ತಳಿಗಳು ಪ್ರಕಾಶಮಾನವಾದ ಪುಕ್ಕಗಳನ್ನು ಹೊಂದಿವೆ, ಲಿಂಗಗಳ ನಡುವೆ ಇವು ಸ್ವಲ್ಪ ಮಟ್ಟಿಗೆ ವಿಭಿನ್ನವಾಗಿರುತ್ತವೆ. ಬಹುತೇಕ ತಳಿಗಳು ಉಷ್ಣವಲಯದವಾಗಿರುತ್ತವೆ, ಮತ್ತು ಕೇವಲ ಅರಣ್ಯಗಳಲ್ಲಿ ಸ್ವಲ್ಪ ಹೆಚ್ಚಿನ ಸಂಖ್ಯೆಯಲ್ಲಿ ಕಾಣಬಹುದಾಗಿದೆ. ಅವು ಪ್ರಾಣಿ ಬೇಟೆಗಳನ್ನು ಹಾಗು ಮೀನನ್ನು ಸೇವಿಸುತ್ತವೆ, ಸಾಮಾನ್ಯವಾಗಿ ಇವನ್ನು ಕೂತ ರೆಂಬೆಯ ಮೇಲಿನಿಂದ ಕೆಳಕ್ಕೆ ಆಕಸ್ಮಿಕವಾಗಿ ದಾಳಿಮಾಡುವುದರ ಮೂಲಕ ಹಿಡಿದು ತಿನ್ನುತ್ತವೆ. ಅವುಗಳ ಶ್ರೇಣಿಯ ಉಳಿದ ಸದಸ್ಯರಂತೆ ಅವು ಸಹ ಬಿಲಗಳಲ್ಲಿ ಗೂಡುಗಳನ್ನು ಹೊಂದುತ್ತವೆ, ಸಾಮಾನ್ಯವಾಗಿ ನೆಲದಲ್ಲಿ ಸ್ವಾಭಾವಿಕವಾಗಿ ಅಥವಾ ಕೃತಕವಾಗಿ ಮಾಡಲ್ಪಟ್ಟ ಸುರಂಗಗಳಲ್ಲಿ. ಕೆಲವೇ ತಳಿಗಳು, ಪ್ರಮುಖವಾಗಿ ಸಂಕುಚಿತ ಭಾವನೆಯ ಮಾದರಿಗಳು, ನಿರ್ನಾಮವಾಗುವ ಹೆದರಿಕೆಗೆ ಒಳಗಾಗಿವೆ.

ಜೀವಿವರ್ಗೀಕರಣ ಶಾಸ್ತ್ರ ಮತ್ತು ವಿಕಸನ

ಮೂರು ಸಂತತಿಗಳ ಜೀವಿವರ್ಗೀಕರಣ ಶಾಸ್ತ್ರವು ಸಂಕೀರ್ಣವಾಗಿದೆ ಮತ್ತು ಹೆಚ್ಚಾಗಿ ವಿವಾದಾಸ್ಪದವಾಗಿದೆ. ಕೊರಾಸಿಪೋರ್ಮಸ್ ವರ್ಗಕ್ಕೆ ಸೇರಿಸಿದರೂ, ಇದರಿಂದ ಗೊಂದಲವು ಉಂಟಾಗುತ್ತದೆ.

ಮಿಂಚುಳ್ಳಿಗಳನ್ನು ಸಾಂಪ್ರದಾಯಿಕವಾಗಿ ಒಂದೇ ಸಂತತಿ ಎಂದು, ಮತ್ತು ಆಲ್ಸಿಡಿನಿಡೇಗಳನ್ನು ಮೂರು ಉಪ ಸಂತತಿಗಳೆಂದು ಪರಿಗಣಿಸಲಾಗಿತ್ತು, ಆದರೆ ಪಕ್ಷಿಗಳ ಜೀವಿವರ್ಗೀಕರಣ ಶಾಸ್ತ್ರದಲ್ಲಿ 1990ರ ಮೂಲಬದಲಾವಣೆಯನ್ನು ಅನುಸರಿಸುತ್ತಾ, ಮೊದಲಿನ ಮೂರು ಉಪಸಂತತಿಗಳನ್ನು ಈಗ ಒಂದೇ ಸಂತತಿಯ ಮಟ್ಟಕ್ಕೆ ಅಭಿವೃದ್ಧಿಪಡಿಸಲಾಯಿತು. ಈ ಚಲನೆಗೆ ವರ್ಣತಂತು ಮತ್ತು ಡಿಎನ್‌ಎ-ಡಿಎನ್‌ಎ ಸಂಕರವನ್ನುಂಟುಮಾಡುವಿಕೆಯ ಅಧ್ಯಯನವು ಅನುಕೂಲವಾಯಿತು, ಆದರೆ ವಾಸ್ತವವಾಗಿ ಎಲ್ಲಾ ಮೂರು ಗುಂಪುಗಳು ಇತರ ಕೊರಾಸಿಪೋರ್ಮಸ್‌ಗೆ ಅನುಗುಣವಾಗಿ ಮೊನೊಫಿಲೆಟಿಕ್ಸ್ (ಒಂದೇ ವಂಶದ) ಎಂಬ ಸವಾಲನ್ನು ಒಳಗೊಂಡಿವೆ. ಇದು ಅವನ್ನು ಆಲ್ಸೆಡಿನೀಸ್ ಎಂಬ ಉಪವರ್ಗಗಳನ್ನಾಗಿ ಪಂಗಡಿಸಲು ಕಾರಣವಾಯಿತು.

ಮರದ ಮಿಂಚುಳ್ಳಿಗಳನ್ನು ಮೊದಲು ಅವುಗಳ ಸಂತತಿಯ ಹೆಸರು ಡಸೆಲೊನೈಡೆಯಿಂದ ಗುರುತಿಸಲಾಗುತ್ತಿತ್ತು ಆದರೆ ಹಾಲ್ಸಿಯೊನಿಡೇ ಹೆಚ್ಚಿನ ಆಧ್ಯತೆಯನ್ನು ಪಡೆಯಿತು.

ಮಿಂಚುಳ್ಳಿಯ ವೈವಿಧ್ಯತೆಯ ಕೇಂದ್ರವು ಆಸ್ಟ್ರಲಾಸಿಯನ್ ಪ್ರಾಂತವಾಗಿದೆ, ಆದರೆ ಅದು ಇದರ ಸಂತತಿಯ ಮೂಲವಾಗಿಲ್ಲ, ಬದಲಾಗಿ ಅವು ಉತ್ತರದಿಕ್ಕಿನ ಗೋಳಾರ್ಧದಲ್ಲಿ ವಿಕಸಿಸಿದವು, ಮತ್ತು ಆಸ್ಟ್ರಲಾಸಿಯನ್ ಪ್ರಾಂತವನ್ನು ಅನೇಕ ಬಾರಿ ಮುತ್ತಿಗೆ ಹಾಕಿದ್ದವು. ಪಳೆಯುಳಿಕೆಯ ಮಿಂಚುಳ್ಳಿಗಳನ್ನು ಸುಮಾರು 30-40 ಮಿಲಿಯನ್ ವರ್ಷಗಳ ಹಿಂದೆ, ವಿಯೊಮಿಂಗ್‌ನಲ್ಲಿನ ಕೆಳಗಿನ ಯೊಸಿನೆ ಬಂಡೆಗಳು ಮತ್ತು ಜರ್ಮನಿಯಲ್ಲಿನ ಮಧ್ಯ ಯೊಸೆನೆ ಬಂಡೆಗಳಿಂದ ವಿವರಿಸಲಾಯಿತು. ಬಹು ಇತ್ತೀಚಿನ ಪಳಯುಳಿಕೆ ಮಿಂಚುಳ್ಳಿಗಳನ್ನು ಆಸ್ಟ್ರೇಲಿಯಾದ ಮಿಯೊಸಿನೆ ಬಂಡೆಗಳಲ್ಲಿ ವಿವರಿಸಲಾಯಿತು (5-25 ಮಿಲಿಯನ್ ವರ್ಷಗಳಷ್ಟು ಹಳೆಯವು). ಅನೇಕ ಪಳೆಯುಳಿಕೆ ಪಕ್ಷಿಗಳನ್ನು ಮಿಂಚುಳ್ಳಿಗಳೆಂದು ತಪ್ಪಾಗಿ ಹೇಳಲಾಗಿತ್ತು, ಇವುಗಳಲ್ಲಿ ಕೆಂಟ್‌ನಲ್ಲಿನ ಕೆಳಗಿನ ಯೊಸೆನೆ ಬಂಡೆಗಳಿಂದ ಪಡೆದ ಹಾಲ್ಸಿಯೋರ್ನಿಸ್ ಸಹ ಒಳಗೊಂಡಿದ್ದು, ಇದನ್ನು ಗಲ್ ಎಂದು ಸಹ ಪರಿಗಣಿಸಲಾಗಿತ್ತು, ಆದರೆ ಈಗ ಇದನ್ನು ಗತಿಸಿದ ಸಂತತಿಯ ಸದಸ್ಯ ಎಂದು ಭಾವಿಸಲಾಗಿದೆ. ಮಿಂಚುಳ್ಳಿಗಳು ಅವುಗಳಲ್ಲಿ 85000 ತಳಿಗಳನ್ನು ಹೊಂದಿವೆ.

ಮೂರು ಸಂತತಿಗಳಲ್ಲಿ ಆಲ್ಸಿಡಿನಿಡೇಗಳು ಇತರ ಎರಡು ಸಂತತಿಗಳ ತಳಹದಿಗಳಾಗಿವೆ. ಅಮೆರಿಕಾದಲ್ಲಿ ಕಾಣಲಾಗಿದ್ದ ಕೆಲವು ತಳಿಗಳು, ಎಲ್ಲವೂ ಸೆರಿಲೈಡೆ ಸಂತತಿಯವಾಗಿದ್ದು, ಪಾಶ್ಚಿಮಾತ್ಯ ಭೂಗೋಳಾರ್ಧದಲ್ಲಿನ ಅಲ್ಪ ಸಂಖ್ಯೆಯ ಪ್ರದರ್ಶನವು ಕೇವಲ ಎರಡು ಮೂಲ ಸಮೂಹದ ತಳಿಗಳಿಂದ ಉದ್ಭವಿಸಿದೆ ಎಂಬುದನ್ನು ಸೂಚಿಸುತ್ತದೆ. ಸಂತತಿಯು ಹಾಲ್ಸಿಯೊನಿಡೇಯಿಂದ ತುಲನಾತ್ಮಕವಾಗಿ ವಿಭಜನೆಯಾಗಿ, ಹಳೇ ಪ್ರಪಂಚದಲ್ಲಿ ಇತ್ತೀಚಿನ ಮಿಯೊಸಿನೆ ಅಥವಾ ಪ್ಲಿಯೊಸಿನೆಯಾಗಿ ವೈವಿದ್ಯಮಯಗೊಂಡಿದೆ.

ಹರಡಿಕೆ ಮತ್ತು ಆವಾಸಸ್ಥಾನ

Collared kingfisher male
ಫುಜಿಯಲ್ಲಿನ ಕೊರಳು ಪಟ್ಟಿಯ ಮಿಂಚುಳ್ಳಿ. ದಕ್ಷಿಣ ಪೆಸಿಫಿಕ್‌ನಲ್ಲಿ ಈ ತಳಿಗಳು ಆಫ್ರಿಕಾದಿಂದ ತೊಂಗದ ವರೆಗೂ ವ್ಯಾಪಿಸಿವೆ.

ಮಿಂಚುಳ್ಳಿಗಳು ಪ್ರಪಂಚದಾದ್ಯಂತ ಉಷ್ಣ ಕಟಿಪದೇಶಗಳಲ್ಲಿ ಮತ್ತು ಸಮಶೀತೋಷ್ಣದ ಪ್ರದೇಶಗಳಲ್ಲಿ ಗೋಚರಿಸುವುದರ ಮೂಲಕ, ಜಗದ್ವಾಪಕ ವಿತರಣೆಯನ್ನು ಹೊಂದಿವೆ. ಧ್ರುವಪ್ರದೇಶದ ಪ್ರಾಂತಗಳಲ್ಲಿ ಮತ್ತು ಪ್ರಪಂಚ’ದ ಕೆಲವು ಅತೀ ಶುಷ್ಕ ಮರುಭೂಮಿಗಳಲ್ಲಿ ಅವು ಕಾಣಿಸಿಕೊಳ್ಳುವುದಿಲ್ಲ. ಬಹು ಸಂಖ್ಯೆಯ ತಳಿಗಳು ದ್ವೀಪಗಳ ಗುಂಪುಗಳನ್ನು ತಲುಪಿವೆ, ಮುಖ್ಯವಾಗಿ ದಕ್ಷಿಣ ಮತ್ತು ಪೂರ್ವ ಪೆಸಿಫಿಕ್ ಸಾಗರದಲ್ಲಿರುವ ದ್ವೀಪಗಳು. ಹಳೆ ಪ್ರಪಂಚದ ಉಷ್ಣ ಕಟಿಪ್ರದೇಶಗಳು ಮತ್ತುಆಸ್ಟ್ರಲಾಸಿಯಗಳು ಈ ಗುಂಪಿನ ಕೇಂದ್ರ ಪ್ರಾಂತಗಳಾಗಿವೆ. ಯುರೋಪ್ ಮತ್ತು ಉತ್ತರ ಅಮೆರಿಕಾ ಮೆಕ್ಸಿಕೋದ ಉತ್ತರ ಭಾಗಗಳು ಬಹಳ ಅಲ್ಫ ಸಂಖ್ಯೆಯಲ್ಲಿ ಕೇವಲ ಒಂದೇ ಒಂದು ಸಾಮಾನ್ಯ ಮಿಂಚುಳ್ಳಿಯನ್ನು ಪ್ರತಿಬಿಂಬಿಸುತ್ತವೆ (ಕ್ರಮವಾಗಿ ಸಾಧಾರಣ ಮಿಂಚುಳ್ಳಿ ಮತ್ತು ಪಟ್ಟಿಯ ಮಿಂಚುಳ್ಳಿ), ಮತ್ತು ಅಸಾಧಾರಣ ಜೋಡಿ ಮಿಂಚುಳ್ಳಿಗಳು ಅಥವಾ ಎರಡೂ ಸ್ಥಳೀಯ ತಳಿಗಳನ್ನು ಕಾಣಬಹುದಾಗಿದೆ: ( ನೈಋತ್ಯ ಯುಎಸ್‌ಎಯಲ್ಲಿ ಒಲಯಗಳನ್ನು ಹೊಂದಿದ ಮಿಂಚುಳ್ಳಿ ಮತ್ತು ಹಸಿರು ಮಿಂಚುಳ್ಳಿ, ಆಗ್ನೇಯ ಯುರೋಪಿನಲ್ಲಿ, ನಾನಾವರ್ಣದ ಮಿಂಚುಳ್ಳಿ ಮತ್ತು ಬಿಳಿ-ಕೊರಳಿನ ಮಿಂಚುಳ್ಳಿ). ಅಮೆರಿಕಾದಲ್ಲಿ ಗೋಚರಿಸುವ ಆರು ತಳಿಗಳಲ್ಲಿ ನಾಲ್ಕು ಮಿಂಚುಳ್ಳಿಗಳು ಕ್ಲೊರೊಸೆರೈಲ್ ಪ್ರಕಾರಕ್ಕೆ ಬಹಳ ಹತ್ತಿರದ ಸಂಬಂಧವನ್ನು ಹೊಂದಿವೆ ಮತ್ತು ಎರಡಿ ದೊಡ್ಡ ಕೊಟ್ಟಿನ ಮಿಂಚುಳ್ಳಿಗಳು ಮೆಗಸಿರೈಲೆ ಪ್ರಕಾರದ ಸಂಬಂಧವನ್ನು ಹೊಂದಿವೆ. ದಕ್ಷಿಣ ಅಮೆರಿಕಾದ ಉಷ್ಣ ಕಟಿಪ್ರದೇಶಗಳು ಸಹ ಕೇವಲ ಐದಕ್ಕಿಂತ ಸ್ವಲ್ಪ ಹೆಚ್ಚಿನ ಸಂಖ್ಯೆಯ ಚಳಿಗಾಲದ ಪಟ್ಟಿಯನ್ನು ಹೊಂದಿದ್ದ ಮಿಂಚುಳ್ಳಿ ತಳಿಗಳನ್ನು ಹೊಂದಿವೆ. ಹೋಲೊಕೆಯಲ್ಲಿ, ಚಿಕ್ಕದಾದ ಆಫ್ರಿಕಾನ್ ದೇಶದ ಗ್ಯಾಂಬಿಯಾ ಇದರ 120 ಬೈ 20 ಮಿ. (192 ಬೈ 32 ಕಿಮೀ) ವಿಸ್ತೀರ್ಣದಲ್ಲಿ ಎಂಟು ಸ್ಥಳೀಯ ತಳಿಗಳನ್ನು ಹೊಂದಿದೆ.

ಪ್ರತ್ಯೇಕ ತಳಿಗಳು ದೃಢವಾದ ವ್ಯಾಪ್ತಿಗಳನ್ನು ಹೊಂದಿವೆ, ಉದಾಹರಣೆಗೆ ಸಾಧಾರಣ ಮಿಂಚುಳ್ಳಿಗಳು, ಐರ್‌ಲ್ಯಾಂಡ್‌ನಿಂದ ಪ್ರಾರಂಭಿಸಿ ಯುರೋಪಿನಾದ್ಯಂತ, ಉತ್ತರ ಆಫ್ರಿಕಾ ಮತ್ತು ಏಸಿಯಾ ಹಾಗು ಆಸ್ಟ್ರೇಲಿಯಾದಲ್ಲಿನ ಸೊಲೊಮನ್ ದ್ವೀಪಗಳವರೆಗೂ ಇವುಗಳ ವ್ಯಾಪ್ತಿಯನ್ನು ಹೊಂದಿವೆ, ಅಥವಾ ನಾನಾ ವರ್ಣದ ಮಿಂಚುಳ್ಳಿಯು, ಆಫ್ರಿಕಾ ಮಾತು ಏಸಿಯಾದ ಎಲ್ಲೆಡೆ ವಿಶಾಲ ವ್ಯಾಪ್ತಿಯ ವಿತರಣೆಯನ್ನು ಹೊಂದಿದೆ. ಇತರ ತಳಿಗಳು ಬಹು ಕಡಿಮೆಯಾದ ವ್ಯಾಪ್ತಿಯನ್ನು ಹೊಂದಿವೆ, ಮುಖ್ಯವಾಗಿ ಸಂಕುಚಿತ ಭಾವನೆಯ ತಳಿಗಳು ಒಂದೇ ಚಿಕ್ಕ ದ್ವೀಪಕ್ಕೆ ಸ್ಥಾನಿಕವಾಗುತ್ತವೆ. ಕೊಫಿಯೊ ಪ್ಯಾರಡೈಸ್ ಮಿಂಚುಳ್ಳಿಯು ನ್ಯೂ ಗಿನಿಯಾದ ಕೊಫಿಯೊನ ಚಿಕ್ಕ ದ್ವೀಪಕ್ಕೆ ಪರಿಮಿತವಾಗಿದೆ.

ಮಿಂಚುಳ್ಳಿಗಳು ವಿಶಾಲ ವ್ಯಾಪ್ತಿಯ ಆವಾಸಸ್ಥಾನಗಳಿಗೆ ವ್ಯಾಪಿಸುತ್ತವೆ. ಹೆಚ್ಚಾಗಿ ಅವನ್ನು ನದಿಗಳ ಹತ್ತಿರ ಮತ್ತು ಸರೋವರಗಳ ಹತ್ತಿರ ಕಾಣಲಾಗುತ್ತದಾಗಿದ್ದರೂ, ಪ್ರಪಂಚದ ಅರ್ಧಭಾಗದ ತಳಿಗಳು ಅರಣ್ಯಗಳು ಮತ್ತು ಅರಣ್ಯದಿಂದ ಕೂಡಿದ ಪ್ರವಾಹಗಳಲ್ಲಿ ಕಾಣುತ್ತವೆ. ಅವು ವಿಶಾಲ ವ್ಯಾಪ್ತಿಯ ಇತರ ಆವಾಸಸ್ಥಾನಗಳನ್ನು ಸಹ ಆಕ್ರಮಿಸುತ್ತವೆ. ಆಸ್ಟ್ರೇಲಿಯಾದ ಕೆಂಪು-ಹಿಂಬದಿಯ ಮಿಂಚುಳ್ಳಿಯು ಅತೀ ಶುಷ್ಕ ಮರುಭೂಮಿಗಳಲ್ಲಿ ಜೀವಿಸುತ್ತದೆ, ಅದಾಗ್ಯೂ ಸಹಾರಗಳಂತಹ ಇತರ ಮರುಭೂಮಿಗಳಲ್ಲಿ ಮಿಂಚುಳ್ಳಿಗಳನ್ನು ಕಾಣಲಾಗುವುದಿಲ್ಲ. ಇತರ ತಳಿಗಳು ಎತ್ತರದ ಪರ್ವತಗಳಲ್ಲಿ, ಅಥವಾ ಅಡವಿಪ್ರದೇಶದ ಬಯಲಿನಲ್ಲಿ ಜೀವಿಸುತ್ತವೆ, ಮತ್ತು ಬಹು ಸಂಖ್ಯೆಯ ತಳಿಗಳು ಉಷ್ಣ ಕಟಿಪ್ರದೇಶಗಳು ಕೋರಲ್ ಅಟಿಲ್ಸ್‌ನಲ್ಲಿ ಜೀವಿಸುತ್ತವೆ. ಅನೇಕ ತಳಿಗಳು ಮಾನವ ಬದಲಾಯಿತ ಆವಾಸಸ್ಥಾನಗಳಿಗೆ ಹೊಂದಿಕೊಂಡಿವೆ, ಮುಖ್ಯವಾಗಿ ಅರಣ್ಯ ಪ್ರದೇಶಗಳಿಗೆ ಹೊಂದಿಕೊಂಡ ತಳಿಗಳನ್ನು, ಸಾಗುವಳಿಮಾಡಿದ ಮತ್ತು ವ್ಯವಸಾಯದ ಪ್ರಾಂತಗಳಲ್ಲಿಯೂ ಹಾಗು ನಗರ ಮತ್ತು ಪಟ್ಟಣಗಳ ಉದ್ಯಾನವನಗಳು ಮತ್ತು ತೋಟಗಳಲ್ಲಿಯೂ ಕಾಣಬಹುದಾಗಿದೆ.

ಸ್ವರೂಪಶಾಸ್ತ್ರ

Brown headed Paradise Kingfisher
ನ್ಯೂ ಗನೀಯದ ಹೊನ್ನಾಡು ಮಿಂಚುಳ್ಳಿಗಳು ಸಾಮಾನ್ಯವಾಗಿ ಉದ್ದನೆಯ ಬಾಲವನ್ನು ಹೊಂದಿರುತ್ತವೆ

ಮಿಂಚುಳ್ಳಿಗಳ ಅತೀ ಚಿಕ್ಕದಾದ ತಳಿ ಎಂದರೆ ಆಫ್ರಿಕಾದ ಡ್ವಾರ್ಫ್ ಮಿಂಚುಳ್ಳಿ (ಇಸ್ಪಿಡಿನ ಲೆಕೋಂಟೀ ), ಇದು ಸರಾಸರಿ 0.4 ಗ್ರಾಂ. ಮತ್ತು 10 ಸೆಂ.ಮೀ (4 ಇಂಚುಗಳು) ಇರುತ್ತದೆ. ಎಲ್ಲದರಲ್ಲೂ ಅತೀ ದೊಡ್ಡದಾದ ತಳಿ ಗೇಂಟ್ ಮಿಂಚುಳ್ಳಿ (ಮೆಗಸೆರಿಲೆ ಮ್ಯಾಕ್ಸಿಮಾ ), ಇದು ಸರಾಸರಿ 355 ಗ್ರಾಂ. (13.5 oz) ಮತ್ತು 45 ಸೆಂ.ಮೀ (18 ಇಂಚುಗಳು) ಇರುತ್ತದೆ. ಅದಾಗ್ಯೂ, ಚಿರಪರಿಚಿತ ಆಸ್ಟ್ರೇಲಿಯಾದ ಮಿಂಚುಳ್ಳಿಯನ್ನು ಲಾಗಿಂಗ್ ಕೂಕಬುರ್ರ (ಡಸೆಲೊ ನೊವೆಗ್ವಿನೀ ) ಎಂದು ಸೂಚಿಸಲಾಗುತ್ತದೆ, ಹೆಚ್ಚಾಗಿ ಇವುಗಳ ಪ್ರತಿಯೊಂದು ದೊಡ್ಡ ಗಾತ್ರದು 450 ಗ್ರಾಂ. (1 ಎಲ್‌ಬಿ) ಮೀರುವುದರಿಂದ, ಬಹುಶಃ ಇದು ಹಾವಿಯಸ್ಟ್ ತಳಿ ಆಗಿರಬಹುದು.

ಬಹುತೇಕ ಮಿಂಚುಳ್ಳಿಗಳ ಪುಕ್ಕಗಳು ಹೊಳಿಯುತ್ತಿದ್ದು, ನೀಲಿ ಮತ್ತು ಹಸಿರು ಇವುಗಳ ಸಾಮಾನ್ಯ ಬಣ್ಣಗಳಾಗಿರುತ್ತವೆ. ಬಣ್ಣಗಳ ಹೊಳಿಯುವಿಕೆಯು ವರ್ಣವೈವಿದ್ಯತೆಯ ಪರಿಣಾಮವೂ ಅಲ್ಲ (ಅಮೆರಿಕಾದ ಮಿಂಚುಳ್ಳಿಗಳನ್ನು ಹೊರತುಪಡಿಸಿ) ಅಥವಾ ವರ್ಣದ್ರವ್ಯಗಳೂ ಅಲ್ಲ, ಆದರೆ ಇದು ಗರಿಗಳ ವಿನ್ಯಾಸದಿಂದ ಉಂಟಾಗುತ್ತದೆ, ಇದು ನೀಲಿ ಬೆಳಕನ್ನು ಚದುರುವಂತೆ ಮಾಡುತ್ತದೆ (ಟಿಂಡಲ್ ಪರಿಣಾಮ. ಬಹುತೇಕ ತಳಿಗಳಲ್ಲಿ ಲಿಂಗ ಭೇದಗಳಿಲ್ಲ, ಭಿನ್ನತೆಗಳಿದ್ದಾಗ ಅವು ತೀರಾ ಚಿಕ್ಕದಾಗಿದ್ದವು (10% ಗಿಂತಲೂ ಕಡಿಮೆ).

ಮಿಂಚುಳ್ಳಿಗಳು ಉದ್ದನೆಯ, ಚೂರಿಯಂತಹ ಕೊಕ್ಕನ್ನು ಹೊಂದಿವೆ. ಮೀನನ್ನು ಬೇಟೆಯಾಡುವ ತಳಿಗಳಲ್ಲಿ ಕೊಕ್ಕು ಸಾಮಾನ್ಯವಾಗಿ ಉದ್ದವಾಗಿರಿತ್ತದೆ ಮತ್ತು ಅಡಕವಾಗಿರುತ್ತದೆ, ಮತ್ತು ನೆಲದ ಮೆಲಿನ ಬೇಟೆಗಳನ್ನು ಬೇಟೆಯಾಡುವ ತಳಿಗಳಲ್ಲಿ ಇದು ಚಿಕ್ಕದಾಗಿರುತ್ತದೆ ಮತ್ತು ಹೆಚ್ಚು ಅಗಲವಾಗಿರುತ್ತದೆ. ದೊಡ್ಡದಾದ ಮತ್ತು ಅತ್ಯಂತ ವಿಶಿಷ್ಟ ಕೊಕ್ಕನ್ನು ಷೊವೆಲ್-ಬಿಲ್ಡ್ ಕೂಕಬುರ್ರ ಹೊಂದಿದೆ, ಇದು ತನ್ನ ಕೊಕ್ಕಿನಿಂದ ಅರಣ್ಯದ ನೆಲವನ್ನು ಬೇಟೆಗಾಗಿ ಅಗೆಯುತ್ತದೆ. ಅವು ಸಾಮಾನ್ಯವಾಗಿ ಕುಳ್ಳಗಿನ ಕಾಲುಗಳನ್ನು ಹೊಂದುತ್ತವೆ, ಅದಾಗ್ಯೂ ನೆಲದಮೇಲೆ ಆಹಾರ ಪಡೆಯುವ ತಳಿಗಳು ಉದ್ದನೆಯ ಪಾದವನ್ನು ಹೊಂದಿವೆ. ಬಹುತೇಕ ತಳಿಗಳು ನಾಲ್ಕು ಅಂಗುಷ್ಠಗಳನ್ನು ಹೊಂದಿದ್ದು, ಅವುಗಳಲ್ಲಿ ಮೂರು ಮುಂದುಗಡೆ ಚೂಪಾಗಿರುವಂತಹವಾಗಿರುತ್ತವೆ.

ಬಹುತೇಕ ತಳಿಗಳ ಕಣ್ಪೊರೆಗಳು ಅತೀ ಕಂದು ಬಣ್ಣದಲ್ಲಿರುತ್ತವೆ. ಮಿಂಚುಳ್ಳಿಗಳು ಅತ್ಯುತ್ತಮ ದೃಷ್ಟಿಯನ್ನು ಹೊಂದಿವೆ; ಅವು ಬೈನಾಕುಲರ್ ದೃಷ್ಟಿಯ ಸಾಮರ್ಥ್ಯವನ್ನು ಹೊಂದಿವೆ, ಮುಖ್ಯವಾಗಿ ಅವು ಉತ್ತಮ ಬಣ್ಣದ ದೃಷ್ಟಿಯನ್ನು ಹೊಂದಿವೆ ಎಂದು ಭಾವಿಸಲಾಗಿದೆ. ಅವು ಕಣ್ಣಿನ ಕುಳಿಗಳಲ್ಲಿ ನಿರ್ಭಂದಿಸಿದ ಕಣ್ಣಿನ ಚಲನೆಯನ್ನು ಹೊಂದಿವೆ, ಆದ್ದರಿಂದ ಅವು ಬೇಟೆಯ ಜಾಡು ಪತ್ತೆಹಚ್ಚಲು ತಮ್ಮ್ ಅತಲೆಯ ಚಲನೆಯನ್ನು ಉಪಯೋಗಿಸುತ್ತವೆ. ಇದರ ಜೊತೆಗೆ ಅವು ನೀರಿನಲ್ಲಿ ಬೇಟೆಯಾಡುವಾಗ ನೀರಿನ ವಕ್ರೀಭವನವನ್ನು ಸಮತೂಗಿಸುವ ಮತ್ತು ಪ್ರತಿಬಿಂಬಿಸುವ ಸಾಮರ್ಥ್ಯವನ್ನು ಹೊಂದಿವೆ ಮತ್ತು ಅವು ನೀರಿನ ಒಳಗಿನ ಆಳವನ್ನು ನಿಖರವಾಗಿ ತೀರ್ಮಾನಿಸುವ ಸಾನರ್ಥ್ಯವನ್ನೂ ಹೊಂದಿವೆ. ಅವು ಮಿಟಕಿಸುವ ಪೊರೆಗಳನ್ನು ಹೊಂದಿದ್ದು, ತಮ್ಮ ರಕ್ಷಣೆಗಾಗಿ ನೀರಿಗೆ ಡಿಕ್ಕಿ ಹೊಡೆದಾಗ ಈ ಪೊರೆಗಳು ಕಣ್ಣುಗಳನ್ನು ಮುಚ್ಚುತ್ತವೆ; ಪೈಡ್ ಮಿಂಚುಳ್ಳಿಗಳು ಎಲುಬಿನ ಫಲಕಗಳನ್ನು ಹೊಂದಿದ್ದು, ಪಕ್ಷಿಗಳು ನೀರಿಗೆ ಡಿಕ್ಕಿ ಹೊದೆದಾಗ ಇವು ಕಣ್ಣಿಗೆ ಅಡ್ಡಲಾಗಿ ಸರಿಯುತ್ತವೆ.

ವರ್ತನೆ

ಆಹಾರಕ್ರಮ ಮತ್ತು ಸೇವನೆ

Todiramphus chloris flying lizard in beak
ಮಿಂಚುಳ್ಳಿಗಳು ಹೆಚ್ಚಾಗಿ ಮೀನಿನ ಸಂಗಡ ಇರುತ್ತವೆ ಆದರೂ, ಬಹುತೇಕ ತಳಿಗಳು, ಇತರ ಬೇಟೆಗಳನ್ನು ಸಹ ಸೇವಿಸುತ್ತವೆ. ಇಲ್ಲಿ ಸೈಪನ್‌ನಲ್ಲಿ ಕೊರಳು ಪಟ್ಟಿಯ ಮಿಂಚುಳ್ಳಿ ಹಲ್ಲಿಯನ್ನು ಬೇಟಿಯಾಡಿದ್ದನ್ನು ಕಾಣಲಾಗಿದೆ.

ಮಿಂಚುಳ್ಳಿಗಳು ವಿವಿಧ ರೀತಿಯ ಪದಾರ್ಥಗಳನ್ನು ಸೇವಿಸುತ್ತವೆ. ಅವು ಮೀನನ್ನು ಬೇಟೆಯಾಡಿ ಸೇವಿಸುವುದರಲ್ಲಿ ಬಹಳ ಪ್ರಸಿದ್ಧವಾಗಿವೆ, ಮತ್ತು ಕೆಲವು ತಳಿಗಳು ಮೀನನ್ನು ಹಿಡಿಯುವಲ್ಲಿ ಪರಿಣಿತವಾಗಿವೆ, ಆದರೆ ಇತರ ತಳಿಗಳು ವಲ್ಕವಂತ ಜಲಚರಗಳನ್ನು, ಕಪ್ಪೆಗಳನ್ನು ಮತ್ತು ಇತರ ಉಭಯಚರಿಗಳನ್ನು, ಅನ್ನೆಲಿಡ್ ಕ್ರಿಮಿಗಳನ್ನು, ಮೊಲ್ಯುಸ್ಕ್‌ಗಳನ್ನು, ಕೀಟಗಳನ್ನು, ಜೇಡರ ಹುಳುಗಳನ್ನು, ಜರಿಗಳನ್ನು, ಸರೀಸೃಪಗಳನ್ನು (ಹಾವುಗಳನ್ನೊಳಗೊಂಡು) ಮತ್ತು ಪಕ್ಷಿಗಳನ್ನೂ ಮತ್ತು ಸಸ್ತನಿವರ್ಗದ ಪ್ರಾಣಿಗಳನ್ನೂ ಸೇವಿಸುತ್ತವೆ. ವಿಶಿಷ್ಟ ತಳಿಗಳು ಕೆಲವೇ ಬೇಟೆಗಳ ಪರಿಣತಿಯನ್ನು ಹೊಂದಿರಬಹುದು ಅಥವಾ ವಿವಿಧ ತರಹದ ಬೇಟೆಗಳಲ್ಲೂ ತೊಡಗಿರಬಹುದು, ಮತ್ತು ದೊಡ್ಡ ಸಂಖ್ಯೆಯಲ್ಲಿ ವಿಶ್ವವ್ಯಾಪಿಯಾಗಿ ಹರಡಿದ ವಿವಿಧ ತಳಿಗಳು ವಿಭಿನ್ನ ಆಹಾರ ಪದ್ದತಿಗಳನ್ನು ಹೊಂದಿರಬಹುದಾಗಿವೆ. ಅರಣ್ಯ ಮತ್ತು ವನ್ಯ ಮಿಂಚುಳ್ಳಿಗಳು ಪ್ರಮುಖವಾಗಿ ಕೀಟಗಳನ್ನು ಸೇವಿಸುತ್ತವೆ, ಮುಖ್ಯವಾಗಿ ಮಿಡತೆ ಹುಳಗಳನ್ನು, ಅಂತೆಯೇ ನೀರಿನ ಮಿಂಚುಳ್ಳಿಗಳು ಮೀನನ್ನು ಹಿಡಿದು ಸೇವಿಸುವಲ್ಲಿ ಹೆಚ್ಚು ಪರಿಣಿತರಾಗಿರುತ್ತವೆ. ಕೆಂಪು-ಹಿಂಬದಿಯ ಮಿಂಚುಳ್ಳಿಗಳು ತಮ್ಮ ಚಿಕ್ಕ ಮರಿಗಳಿಗೆ ಆಹಾರ ಒದಗಿಸಲು ಫೈರಿ ಮಾರ್ಟಿನ್‌ಗಳ ಮಣ್ಣಿನ ಗೂಡುಗಳನ್ನು ಅಗೆಯುವುದನ್ನು ಕಾಣಬಹುದು. ಮಿಂಚುಳ್ಳಿಗಳು ಸಾಮಾನ್ಯವಾಗಿ ಎತ್ತರದ ಕೂರುರೆಂಬೆಗಳಿಂದ ಬೇಟೆಯನ್ನು ಹುಟುಕುತ್ತವೆ, ಮತ್ತು ಬೇಟೆಯು ಕಂಡಕೂಡಲೇ ಮೆಲಿನಿಂದ ಕೆಳಕ್ಕೆ ಹಠಾತ್ತನೆ ದಾಳಿಮಾಡಿ ಪಕ್ಕನೆ ಕಸಿದುಕೊಂಡು ತನ್ನ ಕೂರುರೆಂಬೆಗೆ ವಾಪಾಸಾಗುತ್ತದೆ. ಎಲ್ಲಾ ಮೂರು ಸಂತತಿಯ ಮಿಂಚುಳ್ಳಿಗಳು ಕೂರುರೆಂಬೆಯಲ್ಲಿನ ದೊಡ್ಡ ಬೇಟೆಯನ್ನು ಸೋಲಿಸಿ, ಅದನ್ನು ಸಾಯಿಸುತ್ತವೆ ಮತ್ತು ನೆಲೆತಪ್ಪಿಸುತ್ತವೆ ಅಥವಾ ರಕ್ಷಣಾತ್ಮಕ ಬೆನ್ನುಮೂಳೆಗಳನ್ನು ಮತ್ತು ಎಲುಬುಗಳನ್ನು ಮುರಿದು ಹಾಕುತ್ತವೆ. ಬೇಟೆಯನ್ನು ಸೋಲಿಸಿದನಂತರ ತನ್ನ ಕೈಚಳಕದಿಂದ ಬೇಕಾದರೀತಿಯಲ್ಲಿ ಪರಿವರ್ತಿಸಿ ನಂತರ ಸೇವಿಸುತ್ತದೆ.

ತಳಿ ಬೆಳೆಸುವಿಕೆ

Syma torotoro
ಬಹುತೇಕ ಅರಣ್ಯವಾಸಿ ಮಿಂಚುಳ್ಳಿಗಳಂತೆ ಹಳದಿ-ಪಟ್ಟಿಯ ಮಿಂಚುಳ್ಳಿ ಹೆಚ್ಚಾಗಿ ಮರದಸಂಬಂಧ ಗೆದ್ದಲು ಗೂಡುಗಳಲ್ಲಿ ಗೂಡುಕಟ್ಟುತ್ತವೆ.

ಮಿಂಚುಳ್ಳಿಗಳು ಪ್ರಾದೇಶಿಕ ಪಕ್ಷಿಗಳಾಗಿದ್ದು, ಈ ಪ್ರಾದೇಶಿಕ ಗುಣಗಳು ಕೆಲವು ತಳಿಗಳಿಗೆ ಹುರುಪಿನಿಂದ ಕೂಡಿದ ರಕ್ಷಕ ಕವಚಗಳಾಗಿವೆ. ಅವು ಸಾಮಾನ್ಯವಾಗಿ ಮೊನೊಗಮಸ್ (ವಿರುದ್ದ ಲಿಂಗದ ಏಕ ಪಕ್ಷಿಯೊಂದಿಗೆ ಸೇರುವಂತಹವು) ಆಗಿರುತ್ತವೆ, ಅದಾಗ್ಯೂ ಕೆಲವು ತಳಿಗಳಲ್ಲಿ ಸಹಕಾರದ ತಳಿ ಬೆಳೆಸುವಿಕೆಯನ್ನು ಸಹ ಕಾಣಬಹುದಾಗಿದೆ. ಕೆಲವು ತಳಿಗಳಲ್ಲಿ ಸಹಕಾರದ ತಳಿ ಬೆಳೆಸುವಿಕೆಯು ಸರ್ವೇಸಾಮಾನ್ಯ, ಉದಾಹರಣೆಗೆ ಲಾಫಿಂಗ್ (ನಗುವ) ಕೂಕಬುರ್ರ, ಇವುಗಳ ಸಂತತಿಯ ಬೆಳವಣಿಗೆಯನ್ನು ಮಾಡಲು ಪ್ರಭಲ ತಳಿ ಬೆಳೆಸುವ ಜೋಡಿಗೆ ನೆರವಿಗರು ಸಹಾಯ ಮಾಡುವರು.

ಎಲ್ಲಾ ಕೊರಾಸಿಫಾರ್ಮ್‌ಗಳಂತೆ ಮಿಂಚುಳ್ಳಿಗಳು ಪೊಳ್ಳಾದ ಗೂಡುಗಳನ್ನು ಹೊಂದಿರುವಂತಹವು, ಆದ್ದರಿಂದ ಬಹುತೇಕ ತಳಿಗಳು ನೆಲವನ್ನು ಅಗೆದು ಮಾಡಿದ ಬಿಲಗಳಲ್ಲಿ ಗೂಡುಗಳನ್ನು ಹೊಂದುತ್ತವೆ. ಈ ಬಿಲಗಳು ಸಾಮಾನ್ಯವಾಗಿ ನದಿಗಳ, ಸರೋವರಗಳ ದಡಗಳಲ್ಲಿ, ಅಥವಾ ಮಾನವ ನಿರ್ಮಿತ ಹೊಂಡಗಳ ಒಡ್ಡುಗಳಲ್ಲಿ ಮತ್ತು ನದೀತೀರಗಳಲ್ಲಿ ಇರುತ್ತವೆ. ಕೆಲವು ತಳಿಗಳು ಮರಗಳಲ್ಲಿನ ಪೊಟರೆಗಳಲ್ಲಿ, ನೆಲಕ್ಕೆ ಅಂಟಿಕೊಂಡು ಮೆಲಕ್ಕೆ ಕಾಣಿಸಿಕೊಳ್ಳುವ ಮರದ ಬೇರುಗಳಲ್ಲಿ, ಅಥವಾ ಗೆದ್ದಲುಗಳ (ಟರ್ಮಿಟೇರಿಯಮ್) ಮರದ ಗೂಡುಗಳಲ್ಲಿ ನಿವಾಸಿಸುತ್ತವೆ. ಈ ರೀತಿಯ ಗೆದ್ದಲುಗಳ ಗೂಡುಗಳಲ್ಲಿ ವಾಸಿಸುವುದು ಅರಣ್ಯ ತಳಿಗಳಲ್ಲಿ ಸರ್ವೆ ಸಾಮಾನ್ಯ. ಗೂಡುಗಳು ತೋಡಿನ ಕೊನೆಯಲ್ಲಿ ಚಿಕ್ಕ ಕೊಠಡಿಯ ರಚನೆಯನ್ನು ಹೊಂದುತ್ತವೆ. ಗೂಡನ್ನು ತೋಡುವ ಕೆಲಸಗಳನ್ನು ವಿಭಾಗಿಸಿ ಹಂಚಲಾಗುತ್ತದೆ; ಆರಂಭದ ಅಗೆತದ ಸಮಯದಲ್ಲಿ ಪಕ್ಷಿಯು ಆಯ್ದ ಸ್ಥಳಕ್ಕೆ ಗಣನೀಯವಾದ ದೈಹಿಕ ಶಕ್ತಿಯೊಂದಿಗೆ ಹಾರುತ್ತದೆ, ಈ ರೀತಿ ಮಾಡುವಾಗ ಪಕ್ಷಿಗಳು ಮಾರಕವಾಗಿ ಗಾಯಗೊಳಗಾಗಬಹುದು. ತೋಡಿನ ಉದ್ದವು ತಳಿಗಳು ಮತ್ತು ಪ್ರಾಂತಕ್ಕೆ ಅನುಗುಣವಾಗಿ ವಿಭಿನ್ನವಾಗಿರುತ್ತದೆ, ಗೆದ್ದಲುಗೂಡುಗಳಲ್ಲಿನ ಹಕ್ಕಿಗೂಡುಗಳು ನೆಲದಲ್ಲಿ ಅಗೆದು ಮಾಡಿದ ಗೂಡುಗಳಿಗಿಂತಲೂ ಅವಶ್ಯಕವಾಗಿ ಅತೀ ಚಿಕ್ಕದಾಗಿರುತ್ತವೆ, ಮತ್ತು ಕಠಿಣ ತಳಹದಿಯ ಗೂಡುಗಳು ಮೃದುವಾದ ನೆಲ ಅಥವಾ ಮಣ್ಣಿನಲ್ಲಿನ ಗೂಡುಗಳಿಗಿಂತಲೂ ಚಿಕ್ಕದಾಗಿರುತ್ತವೆ. ದಾಖಲಾದ ಅತೀ ದೊಡ್ಡ ತೋಡಿನ ಗೂಡುಗಳೆಂದರೆ, ಗೇಂಟ್ ಮಿಂಚುಳ್ಳಿಗಳಿಂದ ಮಾಡಲ್ಪಟ್ಟ ಗೂಡುಗಳು, ಇವು 8.5 ಮೀ ಉದ್ದವಾಗಿರುತ್ತವೆ ಎಂದು ತಿಳಿಯಲಾಗಿದೆ.

ಮಿಂಚುಳ್ಳಿಗಳ ಮೊಟ್ಟೆಗಳು ಏಕಪ್ರಕಾರವಾಗಿ ಬಿಳಿಯಾಗಿದ್ದು ಹೊಳೆಯುತ್ತಿರುತ್ತವೆ. ಮೊಟ್ಟೆಗಳ ಗಾತ್ರವು ತಳಿಗಳಿಗನುಗುಣವಾಗಿ ವಿಭಿನ್ನವಾಗಿರುತ್ತದೆ; ಕೆಲವು ಬಹು ದೊಡ್ಡ ಮತ್ತು ಅತೀ ಚಿಕ್ಕ ತಳಿಗಳು ಒಂದುಸಲಕ್ಕೆ ಎರಡು ಮೊಟ್ಟೆಗಳನ್ನು ಇಡುತ್ತವೆ, ಅದರಂತೆ ಇತರ ತಳಿಗಳು 10 ಮೊಟ್ಟೆಗಳನ್ನು ಇಡುವ ಸಾಮರ್ಥ್ಯವನ್ನು ಹೊಂದಿದ್ದು, ಇವುಗಳು ಸರಾಸರಿ 3 ರಿಂದ ಆರು ಮೊಟ್ಟೆಗಳನ್ನು ಇಡುತ್ತವೆ. ಎರಡೂ ಲಿಂಗದ ಪಕ್ಷಿಗಳು ಮೊಟ್ಟೆಗಳಿಗೆ ಕಾವುಕೊಡುತ್ತವೆ.

ಮಾನವರ ಜೊತೆಗಿನ ಸಂಬಂಧ

ಮಿಂಚುಳ್ಳಿಗಳು ಸಾಮಾನ್ಯವಾಗಿ ನಾಚಿಕೆಯ ಸ್ವಭಾವದ ಪಕ್ಷಿಗಳು, ಇದನ್ನು ಹೊರತು ಪಡಿಸಿಯೂ ಇವು ಮಾನವ ಸಂಪ್ರದಾಯದಲ್ಲಿ ಹೆಚ್ಚಿನ ವಿಶೇಷತೆಯನ್ನು ಪಡೆದಿವೆ, ಸಾಮಾನ್ಯವಾಗಿ ಅವುಗಳ ಹೊಳೆಯುವ ಪುಕ್ಕಗಳು ಅಥವಾ ಕೆಲವು ತಳಿಗಳಲ್ಲಿನ ಅವುಗಳ ಕುತೂಹಲಕಾರಿ ವರ್ತನೆಯೇ ಇದಕ್ಕೆ ಕಾರಣ. ಸಾಕ್ರೆಡ್ ಮಿಂಚುಳ್ಳಿಯನ್ನು, ಇತರ ಪಸಿಫಿಕ್ ಮಿಂಚುಳ್ಳಿಗಳೊಂದಿಗೆ, ಪೊಲಿನೆಸಿಯಾದವರಿಂದ ಪೂಜಿಸಲಾಗುತ್ತದೆ, ಅವರು ಇದು ಸಾಗರಗಳ ಮೇಲೆ ಮತ್ತು ಅಲೆಗಳ ಮೇಲೆ ಹತೋಟಿಯನ್ನು ಹೊಂದಿದೆ ಎಂದು ನಂಬುತ್ತಾರೆ. ಬೋರ್ನೆಯೊದ ದಸನ್ ಜನರು, ಮೂಡಣ ಡ್ವಾರ್ಫ್ ಮಿಂಚುಳ್ಳಿಯನ್ನು ಕೆಟ್ಟ ಶಕುನ ಎಂದು ಪರಿಗಣಿಸುತ್ತಾರೆ, ಮತ್ತು ನೇನಾನಿಗಳು ಯುದ್ಧಕ್ಕೆ ಹೋಗುವ ದಾರಿಯಲ್ಲಿ ಇದನ್ನು ಕಂಡರೆ ಮನೆಗೆ ಮರಳಿ ಬರುತ್ತಾರೆ. ಬೋರ್ನೆಯಾದ ಇನ್ನೊಂದು ಪಂಗಡದವರು ಪಟ್ಟಿಯ ಮಿಂಚುಳ್ಳಿಯನ್ನು ಶಕುನದ ಪಕ್ಷಿ ಎಂದು ಪರಿಗಣಿಸುತ್ತಾರೆ, ಆದರೆ ಸಾಮಾನ್ಯವಾಗಿ ಶುಭ ಶಕುನವಾಗಿ ಪರಿಗಣಿಸಲಾಗುತ್ತದೆ. ಹಾಲ್ಸಿಯೊನಿಡೇ ಸಂತತಿಯ, ಹಾಲ್ಸಿಯೋನ್, ಮಿಂಚುಳ್ಳಿ ಮಾದರಿಯ ಕಟ್ಟುಕಥೆಯ ಪಕ್ಷಿ ಆಗಿದೆ.

“ಓವಿದ್ ಮತ್ತು ಹೈಜಿನಸ್ ಎರಡೂ ರೂಪ ಪರಿವರ್ತನೆಯನ್ನು ಮಾಡುತ್ತವೆ, ಇದು ಚಳಿಗಾಲದಲ್ಲಿ ಚಂಡಮಾರುತಗಳು ಕಂಡಿತವಾಗಿಯು ಆಗದೇ ಇರುವಂತಹ ಏಳುದಿನಗಳು, “ಹಾಲ್ಸೋನ್ ದಿನಗಳಿಗಾಗಿ” ವ್ಯುತ್ಪತ್ತಿಯ ಆರಂಭವಾಗಿದೆ. ಅವರ ಹೇಳಿಕೆಯ ಪ್ರಕಾರ ಮೂಲತಹ ಪ್ರತಿವರ್ಷದ ಈ ಏಳುದಿನಗಳ (ಯಾವುದಾದರೊಂದು ಬದಿಯಲ್ಲಿ ವರ್ಷದ ಅತೀ ಚಿಕ್ಕ ದಿನವನ್ನು ಹೊಂದುವುದರೊಂದಿಗೆ) ಸಮಯದಲ್ಲಿ ಆಲ್ಸ್ಯೋನ್ ([ಮಿಂಚುಳ್ಳಿಯಂತೆ]) ಅದರ ಮೊಟ್ಟೆಗಳನ್ನು ಇಡುತ್ತದೆ ಮತ್ತು ತನ್ನ ಗೂಡನ್ನು ಸರೋವರದ ತೀರದಲ್ಲಿ ಮಾಡಿಕೊಳ್ಳುತ್ತದೆ, ಈ ಸಮಯದಲ್ಲಿ ವಾಯು ದೇವರು ಎಂದೇ ಗುರುತಿಸುವ ಅದರ ತಂದೆ ಯೋಲಸ್, ವಾಯುವನ್ನು ತಡೆಹಿಡಿದು ಅಲೆಗಳನ್ನು ಪ್ರಶಾಂತ ಹೊಳಿಸುತ್ತಾನೆ ಇದರಿಂದ ಅದು ಸುರಕ್ಷತೆಯಲ್ಲಿ ತನ್ನ ಕೆಲವನ್ನು ಪೂರ್ಣಗೊಳಿಸಲು ಅನುಕೂಲವಾಗುತ್ತದೆ. ಅಂದಿನಿಂದ ಈ ನುಡಿಗಟ್ಟನ್ನು ಸಾಮಾನ್ಯವಾಗಿ ಶಾಂತಿಯುತವಾದ ಸಮಯವನ್ನು ಸೂಚಿಸಲು ಉಪಯೋಗಿಸಲಾಗುತ್ತಿದೆ.”

ಮಿಂಚುಳ್ಳಿಗಳ (ಆಲ್ಸೆಡೊ ಅಟ್‌ದಿಸ್) ವ್ಯುತ್ಪತ್ತಿಯು ಅಸ್ಪಷ್ಟವಾದುದು; ಪದವು ಕಿಂಗ್’ಸ್ ಫಿಷೆರ್‌ ನಿಂದ ಬಂದಿದೆ, ಆದರೆ ಆ ಹೆಸರೇ ಏಕೆ ಅನ್ವಯವಾಗಿದೆ ಎಂಬುದು ತಿಳಿದಿಲ್ಲ

ಮಾನ್ಯತೆ ಮತ್ತು ಸಂರಕ್ಷಣೆ

ಬಹು ಸಂಖ್ಯೆಯ ತಳಿಗಳನ್ನು ಮಾನವ ಚಟುವಟಿಕೆಗಳಿಂದ ವಿಪತ್ತಿನಲ್ಲಿವೆ ಮತ್ತು ಅವು ನಿರ್ನಾಮವಾಗುವ ಅಪಾಯದಲ್ಲಿವೆ ಎಂದು ಪರಿಗಣಿಸಲಾಗಿದೆ. ಇವುಗಲಲ್ಲಿ ಹೆಚ್ಚಿನವು ಮಿತಿಯ ವಿತರಣೆಯನ್ನು ಹೊಂದಿದ್ದ ಅರಣ್ಯ ತಳಿಗಳು, ಮುಖ್ಯವಾಗಿ ಸಂಕುಚಿತ ಭಾವನೆಯ ತಳಿಗಳು. ಅವು ಅರಣ್ಯಗಳ ತೀರುವಳಿಯ ಅಥವಾ ಕೆಳಮಟ್ಟಕ್ಕೆ ತರುವಿಕೆಯಿಂದ ಆವಾಸಸ್ಥಾನಗಳನ್ನು ಕಳೆದುಕೊಳ್ಳುವ ಭಯದಲ್ಲಿವೆ, ಮತ್ತು ಕೆಲವು ಹೊಸಾ ತಳಿಗಳ ಪರಿಚಯದಿಂದ ತಮ್ಮ ನೆಲೆಯನ್ನು ಕಳೆದುಕೊಳ್ಳುವ ಭಯದಲ್ಲಿವೆ. ಪ್ರೆಂಚ್ ಪೊಲಿನೇಷಿಯಾದ ಮಾರ್ಕ್ವೆಸನ್ ಮಿಂಚುಳ್ಳಿಯು ಗಂಭೀರವಾಗಿ ಅಪಾಯದಲ್ಲಿದೆ, ಇದಕ್ಕೆ ಕಾರಣ ಆವಾಸಸ್ಥಾನದ ನಾಶ, ಮತ್ತು ಜಾನುವಾರುಗಳ ಪರಿಚಯದಿಂದ ಉಂಟಾದ ಕೆಳಮಟ್ಟ, ಮತ್ತು ತಳಿಗಳ ಪರಿಚಯದಿಂದ ಉಂಟಾದ ಬೇಟೆಯ ಕೊರತೆಗಳು.

https://kn.wikipedia.org/wiki/%E0%B2%AE%E0%B2%BF%E0%B2%82%E0%B2%9A%E0%B3%81%E0%B2%B3%E0%B3%8D%E0%B2%B3%E0%B2%BF

image: http://gowild.wwf.org.uk/

Leave a Reply

Your email address will not be published. Required fields are marked *