what makes marwaris so successful in business

ಮಾರ್ವಾಡಿಗಳ ಯಶಸ್ವಿ ಬಿಸಿನೆಸ್‌ನ ಗುಟ್ಟುಗಳೇನು?

ಮಾರ್ವಾಡಿಗಳು ಮತ್ತು ವ್ಯಾಪಾರ ಒಂದೇ ನಾಣ್ಯದ ಎರಡು ಮುಖಗಳು ಎನ್ನುವಷ್ಟು ಗಾಢವಾದ ನಂಟಿದೆ. ದೇಶದ ಆರ್ಥಿಕತೆ ಮತ್ತು ಹೊಸ ಉದ್ಯಮಗಳ ಶೋಧದಲ್ಲಿ ಮಾರ್ವಾಡಿ ಸಮುದಾಯದ ಪಾಲಿದೆ. ಮರಳುಗಾಡಿನ ನಾಡು ರಾಜಸ್ಥಾನದ ಮೂಲದ ಈ ಸಮುದಾಯ ದೇಶ ಮತ್ತು ದೇಶದಾಚೆಗೆ ವಾಣಿಜ್ಯ/ವ್ಯವಹಾರ ವಲಯದಲ್ಲಿ ತಮ್ಮ ಗುರುತನ್ನು ದಾಖಲಿಸಿದೆ.

ವ್ಯಾಪಾರ/ಉದ್ಯಮದಲ್ಲಿ ಇವರಿಗೆ ಯಶಸ್ಸು ದಕ್ಕುವುದು ಹೇಗೆ ಎನ್ನುವುದನ್ನು ಥಾಮಸ್‌ ಎ ಟಿಂಬರ್‌ಬರ್ಗ್‌ ಅವರ ಪುಸ್ತಕ ಬಿಡಿಸಿಟ್ಟಿದೆ. ‘ದಿ ಮಾರ್ವಾಡೀಸ್‌: ಫ್ರಮ್‌ ಜಗತ್‌ ಸೇಠ್‌ ಟು ದಿ ಬಿರ್ಲಾಸ್‌‘ ಪುಸ್ತಕದಲ್ಲಿ ಮಾರ್ವಾಡಿಗಳ ಯಶಸ್ಸಿನ ಗುಟ್ಟುಗಳನ್ನು ಥಾಮಸ್‌ ವಿಶ್ಲೇಷಿಸಿದ್ದಾರೆ.

1. ಹೆಚ್ಚಿನ ಮಾರಾಟ, ಕಡಿಮೆ ಲಾಭ

ದೀರ್ಘಕಾಲದ ವ್ಯವಹಾರಕ್ಕೆ ಒತ್ತು ನೀಡಬೇಕು. ಲಾಭದಲ್ಲಿ ಕಡಿಮೆಯಾದರೂ, ವ್ಯವಹಾರ ನಿರಂತರವಾಗಿ ನಡೆಯುವಂತೆ ಎಚ್ಚರವಹಿಸಬೇಕು. ಇಂಥ ಕಡೆ ಅನುದಿನವೂ ನಿಗಾ ಇಡುವ ಅಗತ್ಯ ಇರುವುದಿಲ್ಲ.

2. ಹಣದ ಮೇಲೆ ನಿಗಾ

ಮಾರ್ವಾಡಿ ವ್ಯಾಪಾರಿಗಳು ಮತ್ತು ಉದ್ಯಮ ಸಮೂಹಗಳು ಮುಖ್ಯವಾಗಿ ಎರಡು ವಿಷಯಗಳ ಬಗ್ಗೆ ಗಮನ ನೀಡುತ್ತವೆ. ದೀರ್ಘ ಕಾಲದಲ್ಲಿ ಹೆಚ್ಚು ಲಾಭ ಬರುವಂಥ ಜಾಗಗಳಲ್ಲಿ ಹೂಡಿಕೆಯನ್ನು ಮಾಡುತ್ತಾರೆ. ಹೂಡಿಕೆ ವಿಷಯದಲ್ಲಿ ಅವರದು ಬಹಳಷ್ಟು ಲೆಕ್ಕಾಚಾರ ಮತ್ತು ತಂತ್ರಗಾರಿಕೆ ಇರುತ್ತದೆ. ಎರಡನೇಯದಾಗಿ ಉದ್ಯಮಗಳು ಹೇಗೆ ಹರಡಿಕೊಂಡಿವೆ, ಇದರಲ್ಲಿ ನಾವು ಪಾಲು ಪಡೆಯಲು ಸಾಧ್ಯವಾ ಅಥವಾ ಹೊಸ ಉದ್ಯಮವನ್ನು ಆರಂಭಿಸಬೇಕಾ ಎಂದು ಹಣಕಾಸು ಹೂಡಿಕೆಗೆ ಮೊದಲು ಪರಾಮರ್ಶೆ ಮಾಡುತ್ತಾರೆ.

3. ಹಂಚಿಕೆ ಮತ್ತು ನಿಗಾ

ಸೀಮಿತವಾದ ಆರ್ಥಿಕ ಚಟುವಟಿಕೆ ಇರುವ ಸಂದರ್ಭದಲ್ಲಿ ಹೂಡಿಕೆಯನ್ನು ಹೇಗೆ ಹಂಚಬೇಕು, ವ್ಯವಹಾರಕ್ಕೆ ಯಾರನ್ನು ನಿಯೋಜಿಸಬೇಕು ಎನ್ನುವುದನ್ನು ಮಾರ್ವಾಡಿಗಳು ಬಲ್ಲರು. ಯಾವಾಗ ಮತ್ತು ಎಲ್ಲಿ ಮಧ್ಯಪ್ರವೇಶಿಸಬೇಕು ಎನ್ನುವ ಅರಿವು ಒಬ್ಬ ವ್ಯಾಪಾರಿಗೆ ಅಗತ್ಯ. ಅಸಮರ್ಥನಾದವನ ಜಾಗಕ್ಕೆ ಸಮರ್ಥರನ್ನು ತರುವುದು ಸಾಮಾನ್ಯ ಕೆಲಸ. ಇದರಲ್ಲಿ ವಿಶೇಷವೇನಿಲ್ಲ. ಸುಲಭವಾಗಿ ಕೆಲಸ ನಡೆಯುತ್ತಿರುವ ಕಡೆ ಕುಟುಂಬ ಸದಸ್ಯರನ್ನು ನಿಯೋಜಿಸಬಾರದು. ಸವಾಲುಗಳ ಇರುವೆಡೆಗೆ ನಿಯೋಜಿಸಬೇಕು.

4. ಆದಾಯವನ್ನೂ ಹೂಡಿಕೆ ಮಾಡಿ…

ವ್ಯವಹಾರದಿಂದ ಬರುವ ಆದಾಯವನ್ನು ರಿಯಲ್‌ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಬೇಕು. ಸಂಪತ್ತು ವೃದ್ಧಿ ಜತೆಗೆ ವೃದ್ಧಾಪ್ಯಕ್ಕೆ ಆಸರೆಯಾಗುತ್ತದೆ. ಮನೆ/ಅಂಗಡಿ ನಿರ್ಮಾಣ ಮಾಡಿ ಬಾಡಿಗೆ ನೀಡುವುದರಿಂದ ಮಾಸಿಕ ಆದಾಯವೂ ಲಭ್ಯ. ಅಲ್ಲದೇ ಲಾಭದ ಹಣವನ್ನು ಹೂಡಿಕೆ ಮಾಡುವಾಗ ಮಾರುಕಟ್ಟೆ ಸಾಧನಗಳ ಜತೆಗೆ ನಮ್ಮ ಸ್ನೇಹಿತರು ಮತ್ತು ಆಪ್ತರನ್ನೂ ಪರಿಗಣಿಸಬಹುದು. ಮಾರ್ವಾಡಿಗಳ ಈ ತಂತ್ರಗಾರಿಕೆಯಿಂದ ಇಡೀ ಸಮುದಾಯದ ಬೆಳವಣಿಗೆಯಾಗಿದೆ.

5. ಪ್ರೀತಿಯಿಂದ ದಿನವೂ ಕೆಲಸ ಮಾಡಿ

ಕೆಲಸವೆನ್ನುವುದು ಯಾಂತ್ರಿಕ ಕ್ರಿಯೆಯಾಗಬಾರದು. ದೈಹಿಕ ಮತ್ತು ಮಾನಸಿಕವಾಗಿ ನಾವು ವ್ಯವಹಾರದಲ್ಲಿ ತೊಡಗಿದಾಗ ಆದಾಯ ಹರಿದು ಬರುತ್ತದೆ.

6. ಬೆಳವಣಿಗೆ ಕಾಯುತ್ತಾ ಕೂರಬೇಡಿ..

ಉದ್ಯಮವನ್ನು ವಿಸ್ತರಿಸುವುದು ಯಶಸ್ವಿ ಬಿಸಿನೆಸ್‌ಮನ್‌ ಲಕ್ಷಣ. ಉದ್ಯಮ ಅಥವಾ ವ್ಯವಹಾರ ಆರಂಭಿಸುವುದಷ್ಟೇ ಮುಖ್ಯವಲ್ಲ, ಅದರ ನಿರ್ವಹಣೆಗೆ ಒತ್ತು ನೀಡಬೇಕು. ಕೆಲವು ಕಂಪನಿಗಳು ತಮ್ಮ ಗುರಿಯನ್ನು ವಿಸ್ತರಿಸುತ್ತವೆ, ಆದರೆ ಕೆಲವಷ್ಟೇ ಅದನ್ನು ಪರಿಣಾಮಕಾರಿಯಾಗಿ ಕಾರ್ಯರೂಪಕ್ಕೆ ತರುತ್ತವೆ.

7. ಕಾರ್ಪೊರೆಟ್‌ ಸಂಸ್ಕೃತಿ ಕಲಿಯಿರಿ

ಮಾರುಕಟ್ಟೆ ಮತ್ತು ಕಾಲ-ಸಂದರ್ಭಕ್ಕೆ ಕಂಪನಿಗಳು ಅಥವಾ ವ್ಯಾಪಾರಿಗಳು ಹೊಂದಿಕೊಳ್ಳಬೇಕು, ರೂಪಾಂತರಗೊಳ್ಳಬೇಕು. ಬದಲಾವಣೆ ಅಥವಾ ಹೊಂದಿಕೊಳ್ಳುವುದು ಮುಖ್ಯವಾದ ಕೆಲಸ. ಕೆಲಸದ ಮೇಲೆ ಪ್ರೀತಿ ಬೆಳೆಸುವಂತೆ ಮ್ಯಾನೇಜರ್‌ಗಳನ್ನು/ಕೆಲಸಗಾರರನ್ನು ಉತ್ತೇಜಿಸಬೇಕು. ಕೆಲಸ ಮೆಚ್ಚಿ ನೀಡುವ ಇನ್ಸೆಂಟೀವ್‌ಗಳು ಈ ನಿಟ್ಟಿನಲ್ಲಿ ಪರಿಣಾಮಕಾರಿ.

8. ಹೊಸ ಬೆಳವಣಿಗೆಗಳನ್ನು ತಪ್ಪಿಸಿಕೊಳ್ಳದಿರಿ

ಕೆಲವು ಬಿಸಿನೆಸ್‌ಗಳು ಜ್ಞಾನ ಮತ್ತು ಅನುಭವವನ್ನು ಆಧರಿಸಿರುತ್ತವೆ. ನಮ್ಮ ಮುಂದಿನ ಅವಕಾಶಗಳನ್ನು ತಪ್ಪಿಸಿಕೊಂಡರೇ, ಸೋಲು ಎದುರಾಗಬಹುದು. ವೃತ್ತಿಯಲ್ಲಿನ ಯಶಸ್ಸು, ವೈಫಲ್ಯಗಳ ಕತೆಗಳು ನಮಗೆ ಗೊತ್ತಿರಬೇಕು. ಶಾಲೆಗಳಲ್ಲಿ ಚರ್ಚಾ ಪಟುವಿಗೆ ಯಾವುದೇ ಪ್ರಶ್ನೆಗೆ ಕನಿಷ್ಠ ಎರಡು ಬದಿಗಳಿರುತ್ತವೆ ಎಂದು ಚೆನ್ನಾಗಿ ಗೊತ್ತಿರುತ್ತದೆ. ಆದರೆ, ಜೈನರ ತರ್ಕದ ಪ್ರಕಾರ – ಅನೇಕ ಬದಿಗಳಿರುತ್ತವೆ. ಒಂದು ಪರಿಸ್ಥಿತಿಯಲ್ಲಿ ಯಾವುದು ಸರಿ ಎಂದು ತೀರ್ಮಾನ ಮಾಡುವುದು ಯಶಸ್ವಿ ವ್ಯಾಪಾರಿಯ ಲಕ್ಷಣ.

ರಿಸ್ಕ್‌ ಸ್ವೀಕರಿಸುವವನಿಗೆ ಗೆಲುವು

ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಳ್ಳುವ ಸಾಮರ್ಥ್ಯ‌ ಮಾರ್ವಾಡಿಗಳಲ್ಲಿದ್ದು, ಇದು ಯಶಸ್ಸಿನ ಕಾರಣಗಳಲ್ಲಿ ಒಂದಾಗಿದೆ. ಹೊಂದಿಕೊಳ್ಳುವ ಮಾನಸಿಕತೆಯು ಜವಾಬ್ದಾರಿಗಳ ನಿರ್ವಹಣೆ ಮತ್ತು ಯಶಸ್ಸಿಗೆ ಸಾಧನವಾಗುತ್ತದೆ. ಅಲ್ಲದೇ ಮಾರ್ವಾಡಿಗಳು ತಮ್ಮ ಕೌಶಲ ಮತ್ತು ಬೆಂಬಲಿಸುವ ವ್ಯವಸ್ಥೆಯಿಂದಾಗಿ ಉನ್ನತಿಯನ್ನು ಪಡೆಯುತ್ತಿದ್ದಾರೆ. ರಿಸ್ಕ್‌ಗಳನ್ನು ಸ್ವೀಕರಿಸುವ ಸಾಮರ್ಥ್ಯ‌ವೂ ಮಾರ್ವಾಡಿಗಳಲ್ಲಿದೆ ಎನ್ನುವ ಅಂಶಗಳನ್ನು ಲೇಖಕ ಥಾಮಸ್‌ ಎ ಟಿಂಬರ್‌ಬರ್ಗ್‌ ಅವರು ತಮ್ಮ ಪುಸ್ತಕದಲ್ಲಿ ದಾಖಲಿಸಿದ್ದಾರೆ.

http://vijaykarnataka.indiatimes.com/business/articles/what-makes-marwaris-so-successful-in-business-7-secrets-that-make-marwaris-so-good-in-business/articleshow/55265281.cms

ಶ್ರೇಯಾಂಕ

ಮತ ನೀಡಿ, ಬಲಪಡಿಸಿ ಮತ್ತು ಸಾಮಾಜಿಕ ಜಾಲ ತಾಣದಲ್ಲಿ ಹಂಚಿರಿ.

User Rating: 4.85 ( 5 votes)

ಇವುಗಳೂ ನಿಮಗಿಷ್ಟವಾಗಬಹುದು

ತಾಮ್ರದ ಕೊಡ ಹಾಗೂ ಪ್ಲಾಸ್ಟಿಕ್ ಕೊಡಗಳಲ್ಲಿಯ ವ್ಯತ್ಯಾಸ

ತಾಮ್ರದ ಕೊಡ ಹಾಗೂ ಪ್ಲಾಸ್ಟಿಕ್ ಕೊಡಗಳಲ್ಲಿಯ ವ್ಯತ್ಯಾಸವೇನು…???? ತಾಮ್ರದ ಕೊಡ ಬಾವಿಯಲ್ಲಿ ಇಳಿದಾಗ ಬಾಗಿ ತನ್ನೊಳಗೆ ಪೂರ್ಣ ನೀರು ತುಂಬಿಕೊಂಡು …

Leave a Reply

Your email address will not be published. Required fields are marked *