Maya Rao

ಮಾಯಾರಾವ್

ಮಾಯಾರಾವ್ (೦೨.೦೫.೧೯೨೮): ಕಥಕ್ ಶೈಲಿಯಲ್ಲಿ ಕರ್ನಾಟಕಕ್ಕೆ ಹೆಸರು ತಂದ ನೃತ್ಯಗಾರ್ತಿ ಮಾಯಾರಾವ್ ರವರು ಹುಟ್ಟಿದ್ದು. ಬೆಂಗಳೂರು. ತಂದೆ ಸಂಜೀವರಾವ್. ತಾಯಿ ಲಲಿತಾ ಬಾಯಿ. ಓದಿದ್ದು ಮಹಾರಾಣಿ ಕಾಲೇಜಿನಲ್ಲಿ ಬಿ.ಎ. ಬ್ಯಾಚುಲರ್‌ ಪದವಿ, ಸೆಂಟ್ರಲ್ ಕಾಲೇಜಿನಿಂದ ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವಿ.

[sociallocker]ಆರರ ವಯಸ್ಸಿನಲ್ಲಿಯೇ ಪಂ. ರಾಮರಾವ್ ಹೊನ್ನಾವರ ರವರ ಮಾರ್ಗದರ್ಶನದಲ್ಲಿ ಹಿಂದೂಸ್ತಾನಿ ಸಂಗೀತದ ಶಿಕ್ಷಣ, ಸಂಪ್ರದಾಯದ ಮನೆತನದಲ್ಲಿ ಸಂಗೀತ ದೈನಂದಿನ ಹಾಡು-ಹಸೆಗೆ ಸೀಮಿತ. ಆದರೆ ನೃತ್ಯ ಕಲಿತದ್ದು ಆಕಸ್ಮಿಕ, ಕಥಕ್ ನೃತ್ಯಪಟು ಸೋಹನ್‌ಲಾಲ್ ಕರ್ನಾಟಕಕ್ಕೆ ಬಂದಾಗ ಇವರ ಮನೆಯಲ್ಲಿಯೇ ಉಳಿದುಕೊಳ್ಳುತ್ತಿದ್ದು ಇವರ ಸೋದರಿಯರು ನೃತ್ಯ ಕಲಿಕೆಗಾರಂಭಿಸಿದಾಗ ತಂಗಿಯರ ಜೊತೆಗೆ ಸೋಹನ್‌ಲಾಲ್ ರವರಿಂದ ಜೈಪುರ ಘರಾನದ ಕಥಕ್ ಶೈಲಿಯ ಶಿಕ್ಷಣ ಪ್ರಾರಂಭ. ೩ ವರ್ಷ ಸತತ ಅಭ್ಯಾಸ. ಸಾರಸ್ವತ ಸಮಾಜದ ಸಮಾವೇಶದ ಸಂದರ್ಭದಲ್ಲಿ ೧೯೪೪ ರಲ್ಲಿ ನೀಡಿದ ಸಾರ್ವಜನಿಕ ನೃತ್ಯ ಪ್ರದರ್ಶನ.

ಕಾಲೇಜು ವಿದ್ಯಾಭ್ಯಾಸದ ಸಂದರ್ಭದಲ್ಲಿ ಸ್ಟೂಡೆಂಟ್ ಫೆಡರೇಷ್‌ನ್ನಿನ ಚಟುವಟಿಕೆಗಳಲ್ಲಿ ಭಾಗಿ. ಇದಕ್ಕಾಗಿ ಸಿದ್ದಪಡಿಸಿದ ರೂಪಕಕ್ಕೆ ಎಂ.ಎಸ್. ನಟರಾಜ್ ರವರ ಸಂಗೀತ. ಮುಂದೆ ಇವರೇ ಪತಿಯಾದರು. ಇಬ್ಬರೂ ಸೇರಿ ಹುಟ್ಟು ಹಾಕಿದ ಸಂಸ್ಥೆ ’ನಾಟ್ಯಸರಸ್ವತಿ’. ಸಂಗೀತ ನೃತ್ಯ ಎರಡು ಮಾಧ್ಯಮಗಳಲ್ಲೂ ಯುವ ಪೀಳಿಗೆಗೆ ನೀಡಿದ ತರಬೇತಿ. ಜೈಪುರದಲ್ಲಿ ಇಂಗ್ಲಿಷ್ ಉಪನ್ಯಾಸಕಿಯ ಹುದ್ದೆ ದೊರೆತು ಕಥಕ್ ಕಲಿಯಲು ಪ್ರಯಾಣ. ಸೋದರನ ಆಹ್ವಾನದ ಮೇರೆಗೆ ಶ್ರೀಲಂಕಾಗೆ ತೆರಳಿ ಕಲಿತ ಕ್ಯಾಂಡಿಯನ್ ನೃತ್ಯ.

ದೆಹಲಿಯ ಭಾರತೀಯ ಕಲಾಕೇಂದ್ರದಲ್ಲಿ ನೃತ್ಯಪಟು ಶಂಭು ಮಹಾರಾಜ್ ರವರಲ್ಲಿ ಕಥಕ್ ನೃತ್ಯಕಲಿಯಲು ದೊರೆತ ಶಿಷ್ಯವೇತನ. ತಾವೂ ಕಲಿತು ಹಲವರಿಗೆ ಕಲಿಸಿದರು. ಜೈಪುರ ಘರಾನ ಪದ್ಧತಿ ಕಥಕ್ ನೃತ್ಯಾಭ್ಯಾಸ. ಬ್ರಿಜುಮಹಾರಾಜರೊಡನೆ ಹಲವಾರು ನೃತ್ಯರೂಪಗಳ ಸಂಯೋಜನೆ. ರಷ್ಯ ವೇತನ ಪಡೆದು ಮಾಸ್ಕೊದ STATE INSTITUTE OF THEATRE ARTS ನಲ್ಲಿ ರಾಮಾಯಣದ ಬ್ಯಾಲೆ ನಿರ್ಮಾಣ. ದೆಹಲಿಯಲ್ಲಿ ಸ್ವಂತ ಸಂಸ್ಥೆ NATYA INSTITUTE OF KATHAK AND CHOREAGRAPHY ಸ್ಥಾಪನೆ. ತುಳಸೀರಾಮ್‌ ಕೃಷ್ಣಲೀಲಾ, ವೆಂಕಟೇಶ್ವರ ವಿಲಾಸಂ, ಶಾಂತಲಾ, ರೂಪಕಗಳ ನಿರ್ಮಾಣ.

ಸಂದ ಪ್ರಶಸ್ತಿ ಗೌರವಗಳು: ದೆಹಲಿಯ ಸಾಹಿತ್ಯ ಕಲಾ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ದೆಹಲಿಯ CHORE FEST AWARD, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಸರಕಾರದ ಪ್ರತಿಷ್ಠಿತ ನಾಟ್ಯರಾಣಿ ಶಾಂತಲಾ ಪ್ರಶಸ್ತಿ ಮುಂತಾದುವು.
ಲೇಖಕರು: ವೈ.ಎನ್. ಗುಂಡೂರಾವ್‌, ಕಣಜ[/sociallocker]

ಶ್ರೇಯಾಂಕ

ಕನ್ನಡ ಭೂಮಿಯನ್ನು ಚಿನ್ನದ ಭೂಮಿಯನ್ನಾಗಿ ಮಾಡಿದ ಧೀಮಂತ ವ್ಯಕ್ತಿಗಳಿಗೆ ನಮ್ಮ ನಮನಗಳು.

User Rating: 4.83 ( 2 votes)

ಇವುಗಳೂ ನಿಮಗಿಷ್ಟವಾಗಬಹುದು

A V Prakasha

ಎ.ವಿ. ಪ್ರಕಾಶ್‌

ಎ.ವಿ. ಪ್ರಕಾಶ್‌ (೧೫.೧೦.೧೯೪೫): ಪ್ರಖ್ಯಾತ ಕೊಳಲುವಾದಕರಾದ ಎ.ವಿ. ಪ್ರಕಾಶ್‌ರವರು ಹುಟ್ಟಿದ್ದು ಬೆಂಗಳೂರು. ತಂದೆ ಪ್ರಖ್ಯಾತ ಪಿಟೀಲು ವಿದ್ವಾಂಸರಾದ ಎ.ಕೆ. ವೆಂಕಟನಾರಾಯಣ, …

Leave a Reply

Your email address will not be published. Required fields are marked *