ಮಾನಸಿಕ ಕಾಯಿಲೆಗಳು

ಮಾನಸಿಕ ಕಾಯಿಲೆಗಳು
ಮಾನಸಿಕ ಕಾಯಿಲೆಗಳು

ಬಹು ಪುರಾತನ ಕಾಲದಿಂದಲೂ, ಮಾನಸಿಕ ಕಾಯಿಲೆಗಳು ಜನರನ್ನು ಕಾಡುತ್ತಿದ್ದರೂ,ಜನರು ಅವುಗಳ ಬಗ್ಗೆ ಲಕ್ಷ್ಯ ವಹಿಸದೇ ಪರಿಚಯವೇ ಇಲ್ಲದವರಂತೆ ವರ್ತಿಸುತ್ತಾರೆ. ಹುಚ್ಚು, ಬುದ್ದಿಭ್ರಮಣೆ, ತಲೆಕೆಟ್ಟು ಹೋಗುವುದು, ಮತಿಭ್ರಮಣೆ, ಮರುಳು ಎಂಬಿತ್ಯಾದಿ ಪದಗಳಷ್ಟೆ ಅವರಿಗೆ ಗೊತ್ತು. ಮನೋರೋಗಿ ಅಥವಾ ಮಾನಸಿಕ ಕಾಯಿಲೆಯವಳು ಎಂದರೆ ಕೆದರಿನ ಕೂದಲು,ಹರಿದು ಚಿಂದಿಯಾದ ಉಡುಪು, ದಿನಗಟ್ಟಲೇ ಸ್ನಾನ ಕಾಣದೇ ಕೊಳಕಾದ ಶರೀರ, ಕ್ಷಣ ಕ್ಷಣಕ್ಕೆ ಬದಲಾಗುವ ಗುಣ ಸ್ವಭಾವ- ಅಳು, ನಗು, ಭಯ, ಕೋಪಗಳ ಭಾವ ವಿಕಾರ, ಗುರಿ ಇಲ್ಲದ ಅಲೆದಾಟ, ಆಗಿಂದಾಗ್ಗೆ ಕಾಣಿಸಿಕೊಳ್ಳುವ ಅರ್ಥವಿಲ್ಲದ ಹಿಂಸಾಚಾರ ನೆನಪಿಗೆ ಬರುತ್ತದೆ. ಹೀಗಾಗಿ ಮನೋರೋಗಿ ಎಂದಾಕ್ಷಣ ಜನಗಳ ಮನಸ್ಸಿನಲ್ಲಿ ಭಯ, ಜಿಗುಪ್ಸೆ, ಸಿಟ್ಟು ಮೂಡಿಬರುತ್ತದೆ. ಮನೋರೋಗಿಯನ್ನು ದೂರಸರಿಸುತ್ತರೆ. ಅಪಾಯಕಾರಿ ಎಂದು ಅವರಿಂದ ದೂರ ಉಳಿಯುತ್ತಾರೆ.

ಸಾಮಾನ್ಯ ನಂಬಿಕೆಗಳು

  • ಪಾಪಕರ್ಮ ಫಲ: ಹಿಂದಿನ ಜನ್ಮದಲ್ಲೋ,ಈ ಜನ್ಮದಲ್ಲೋ ತಾನು ಮಾಡಿದ ಪಾಪ ಕೆಲಸಗಳಿಗೆ, ಮಾನಸಿಕ ಕಾಯಿಲೆಯನ್ನು ಪಡೆಯುವುದರ ಮೂಲಕ ವ್ಯಕ್ತಿ ಶಿಕ್ಷೆಯನ್ನು ಅನುಭವಿಸುತ್ತಾನೆಂಬ –ಈ ನಂಬಿಕೆ ತಪ್ಪು.
  • ಮಾಟ ಮಂತ್ರ-ತಂತ್ರಗಳ ಫಲ: ಕೆಲವರು ಸಾಧನೆ ಮಾಡಿ ದುಷ್ಟ ವಿದ್ಯೆಯನ್ನು ಬಳಸಿ, ಇತರರಿಗೆ ಅಥವಾ ಆಯ್ದ ವ್ಯಕ್ತಿಗಳಿಗೆ ಮಾನಸಿಕ ಕಾಯಿಲೆ ಬರುವಂತೆ ಮಾಡುತ್ತಾರೆ.-ಇದು ಸುಳ್ಳು.
  • ದೆವ್ವ ಭೂತ/ಪಿಶಾಚಿಗಳ ಕೀಟಳೆ: ಅಕಾಲ ಮರಣಕ್ಕೆ ಈಡಾದವರಿಗೆ ಮೋಕ್ಷ-ಸದ್ಗತಿ ಇಲ್ಲ. ಅವರ ಆತ್ಮಗಳು ಅತೃಪ್ತರಾಗಿ ತಿರುಗಾಡುತ್ತಿರುತ್ತವೆ. ಅಮಾಯಕರ ದೇಹವನ್ನು ಪ್ರವೇಶಿಸಿ ಮನೋರೋಗ ವನ್ನುಂಟು ಮಾಡಿ ಖುಷಿಪಡುತ್ತವೆ.” – ಇದು ಮಿಥ್ಯ.
  • ಮದ್ದು ಹಾಕುವುದು: ವಿಷಕಾರಿ/ ಹುಚ್ಚು ಬರಿಸುವ ಮದ್ದನ್ನು ವ್ಯಕ್ತಿಗೆ ಯಾರೋ ದುರಾತ್ಮರು ಹಾಕಿದ್ದರೆ/ ಹಾಕಿಸಿದ್ದರೆ.” – ಇದು ಸಾಧ್ಯವಿಲ್ಲ.
  • ದೇವರ ಮುನಿಸು-ಶಾಪ: ಹರಕೆ ಕಾಣಿಕೆಗಳನ್ನು ಸಲ್ಲಿಸದೇ ಹೋದರೆ, ದೇವರ ಪೂಜೆ ಪುನಸ್ಕಾರಗಳನ್ನು ಶ್ರದ್ದೆಯಿಂದ ಮಾಡದೇ ಹೋದರೇ, ದೇವರಿಗೆ ದೇವಸ್ಥಾನಗಳಿಗೆ ಅಪಚಾರ ಮಾಡಿದರೆ, ದೇವರಿಗೆ ಕೋಪ ಬಂದು, ಆ ವ್ಯಕ್ತಿಗೆ ಅಥವ ಆ ಕುಟುಂಬಕ್ಕೆ ಮಾನಸಿಕ ಕಾಯಿಲೆ ಬರುವಂತೆ ಮಾಡುತ್ತಾನೆ.- ಈ ನಂಬಿಕೆ ತಪ್ಪು.
  • ಮನಸ್ಸಿಗೆ ಆಘಾತವಾಗುವಂತಹ ಕಷ್ಟ ನಷ್ಟ, ಸೋಲು, ಸಾವು, ಅಪಮಾನ,ನಿರಾಶೆ, ದುರಂತಗಳು,ಮೋಸ ವಂಚನೆಗಳು ಮಾನಸಿಕ ಸಮತೋಲನವನ್ನು ತಪ್ಪಿಸಿ ಮಾನಸಿಕ ಕಾಯಿಲೆಯನ್ನುಂಟು ಮಾಡುತ್ತವೆ. – ಕೆಲವರಲ್ಲಿ ಹೀಗಾಗುತ್ತದೆ.
  • ದುಶ್ಚಟಗಳು: ಮದ್ಯಪಾನ, ಮಾದಕ ವಸ್ತು ಸೇವನೆ, ವೇಶ್ಯಾ ಸಂಪರ್ಕ ಜೂಜಾಡುವುದು ಇತ್ಯಾದಿ ದುಶ್ಚಗಳಿಂದ ಮಾನಸಿಕ ಕಾಯಿಲೆ ಬರುತ್ತದೆ. – ಇದು ಸರಿ
  • ಹತೋಟಿ ಇಲ್ಲದ ಅರಿಷಡ್ವರ್ಗಗಳು: ಅತಿಯಾದ ಕಾಮ, ಕ್ರೋಧ, ಲೋಭ,ಮೋಹ, ಮದ, ಮತ್ಸರಗಳು, ಮಾನಸಿಕ ಕಾಯಿಲೆಗಳಿಗೆ ಕಾರಣವಾಗುತ್ತವೆ.
  • ಅನುವಂಶೀಯತೆ: ಹುಚ್ಚು ವಂಶ ಪಾರಾಂಪರ್ಯವಾಗಿ ಬರುತ್ತದೆ. ತಂದೆಗೋ, ತಾಯಿಗೋ ಈ ಕಾಯಿಲೆ ಇದ್ದರೆ, ಅದು ಮಕ್ಕಳಿಗೂ ಬರುತ್ತದೆ.
  • ಅತಿಯಾದ ಬೌದ್ದಿಕ ಚಿಂತನೆ: ವಿಪರೀತ ಓದುವುದು, ಯಾವುದಾದರೂ ವಿಷಯಗಳ ಬಗ್ಗೆ ಸದಾ ಚಿಂತನೆ ಮಾಡುವುದರಿಂದ ತಲೆಕೆಡುತ್ತದೆ. – ಇದು ತಪ್ಪು
  • ತಲೆಗೆ ಪೆಟ್ಟು: ತಲೆಗೆ ಜೋರಾಗಿ ಏಟು ಬಿದ್ದರೆ ಅಪಾಯ. ಇದರಿಂದ ಮತಿಭ್ರಮಣೆ ಉಂಟಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.
  • ಭೀಭತ್ಸ ದೃಶ್ಯಗಳೂ: ಭೀಕರವಾದ ಅನುಭವಗಳಿಂದ, ಮನಸ್ಸಿಗೆ ಆಘಾತವಾಗಿ ಹುಚ್ಚು ಹಿಡಿಯುತ್ತದೆ.ಇದು ಕೆಲವು ಸಲ ಸರಿ.
  • ಇಳಿವಯಸ್ಸು: ತುಂಬಾ ವಯಸ್ಸಾದರೆ, ಮಾತು ಹಿಡಿತ ತಪ್ಪಿ ಅರಳು ಮರುಳು ಜೊತೆಗೆ ಮನಸ್ಸು ರೋಗಗ್ರಸ್ತವಾಗುತ್ತದೆ. ಹೀಗಾಗಬಹುದು
  • ಒಂಟಿತನ: ಬಹುಕಾಲ ಒಂಟಿಯಾಗಿದ್ದರೆ, ಜನರಿಂದ ತಿರಸ್ಕೃತನಾದರೆ ವ್ಯಕ್ತಿಗೆ ಮಾನಸಿಕ ಕಾಯಿಲೆ ಬರುತ್ತದೆ. ಕೆಲವೊಮ್ಮೆ ನಿಜ
  • ಪಿತ್ಥ ಪದಾರ್ಥಗಳನ್ನು: ಹೆಚ್ಚು ತಿಂದರೆ, ದೇಹದಲ್ಲಿ ಪಿತ್ಥ ಕೆರಳಿದರೆ, ಹುಚ್ಚು ಕಾಯಿಲೆ ಬರುತ್ತದೆ,”ಇದಕ್ಕೆ ಆಧಾರವಿಲ್ಲ.

ಮಾನಸಿಕ ಕಾಯಿಲೆಗಳು ಬರಲು ಕಾರಣವೇನು?

  • *ಅನುವಂಶೀಯತೆ.
  • ಮಿದುಳಿನಲ್ಲಿ ಆಗುವ ರಾಸಾಯನಿಕ ಬದಲಾವಣೆಗಳು ಡೋಪಮಿನ್, ಸೆರೋಟೋನಿನ್, ಗಾಬಾ ಇತ್ಯಾದಿ ನರವಾಹಕ ವ್ಯವಸ್ಥೆ ಏರುಪೇರಾಗುತ್ತದೆ.
  • ಮಿದುಳಿಗೆ ಸಣ್ಣ ಅಥವಾ ದೊಡ್ಡ ಪ್ರಮಾಣದ ಹಾನಿ.
  • ಮಿದುಳಿಗೆ ರಕ್ತ ಪೂರೈಕೆಯಲ್ಲಿ ಕೊರತೆಯುಂಟಾಗುವದು.
  • ಅತಿಯಾದ ಆಲ್ಕೋಹಾಲ್- ಮಾದಕವಸ್ತುಗಳ ಸೇವನೆ.ವಿವಿಧ ರೇತಿಯ ನಂಜು ವಸ್ತುಗಳು ಮಿದುಳನ್ನು ಹಾನಿ ಮಾಡುವುದು.
  • ಬಾಲ್ಯದಲ್ಲಿ ನೋವಿನ ಅನುಭವಗಳು, ಪ್ರೀತಿ ಆಸರೆಯಿಂದ ವಂಚಿತವಾಗಿರುವುದು.
  • ಮೇಲಿಂದ ಮೇಲೆ ಕಷ್ಟ ನಷ್ಟ, ಸೋಲು ನಿರಾಶೆಗಳುಂಟಾಗುವುದು.
  • ಮಾನಸಿಕ ಚಿಂತೆ, ವ್ಯಥೆ, ಒತ್ತಡಗಳು, ಅತೃಪ್ತಿ, ಅಸಮಾಧಾನ, ಆರ್ಥಿಕ ಸಮಸ್ಯೆಗಳು.
  • ದೀರ್ಘಕಾಲದ ಹಾಗೂ ಸಾಮಾಜಿಕ ಕಳಂಕವನ್ನುಂಟು ಮಾಡುವ ಪ್ರಾಣಾಪಾಯವನ್ನುಂಟು ಮಾಡುವ *ಕಾಯಿಲೆಗಳು ಅಥವಾ ಅನಾರೋಗ್ಯ.
  • ಸಾಮಾಜಿಕ ಅವ್ಯವಸ್ಥೆ ಹಾಗೂ ತೊಂದರೆದಾಯಕ ಪರಿಸರ.

ಚಿಕಿತ್ಸೆ

  • ಔಷಧಿಗಳು: ಖಿನ್ನತೆ ನಿವಾರಕ, ಪ್ರಧಾನ ಮತ್ತು ಅಲ್ಪಮಟ್ಟದ ಶಮನಕಾರಿಗಳು.
  • ವಿದ್ಯುತ್ ಕಂಪನ ಚಿಕಿತ್ಸೆ.
  • ಮನೋಚಿಕಿತ್ಸೆ ಮತ್ತು ನಡವಳಿಕೆ ಚಿಕಿತ್ಸೆ
  • ಆಪ್ತಸಲಹೆ ಮತ್ತು ಸಮಾಧಾನ
  • ತರಭೇತಿ ಮತ್ತು ಅಂಗಮರ್ದನ ಚಿಕಿತ್ಸೆ.
  • ಅನುಕೂಲಕರ ಪರಿಸರ.
  • ವಿರಾಮಕರ ಹಾಗೂ ಕಲಾ ಚಟುವಟಿಕೆಗಳು, ಯೋಗ, ಧ್ಯಾನ.

Review Overview

User Rating: 2.15 ( 3 votes)

ಇವುಗಳೂ ನಿಮಗಿಷ್ಟವಾಗಬಹುದು

ಹುಳಿ ಮಿಶ್ರಿತ ಹಣ್ಣಿನ ಸಿಪ್ಪೆಯ ಲೆಕ್ಕಕ್ಕೆ ಸಿಗದಷ್ಟು ಆರೋಗ್ಯ ಪ್ರಯೋಜನಗಳು

ಸಾಮಾನ್ಯವಾಗಿ ಕಿತ್ತಳೆ ಹಣ್ಣುಗಳನ್ನು ಸುಲಿದ ಬಳಿಕ ತಿರುಳನ್ನು ತಿಂದು ಸಿಪ್ಪೆಯನ್ನು ಮಾತ್ರ ನಾವು ಎಸೆದುಬಿಡುತ್ತೇವೆ. ಆದರೆ ಈ ಸಿಪ್ಪೆಗಳಲ್ಲಿಯೂ ಹಲವಾರು …

Leave a Reply

Your email address will not be published. Required fields are marked *