ಮಹಾಭಾರತ ಯುದ್ಧದ ಬಳಿಕ ಪಾ೦ಡವರು-ಶ್ರೀ ಕೃಷ್ಣನ ಕಥೆ ಏನಾಗುತ್ತದೆ?

ಮಹಾಭಾರತವೆ೦ಬ ಮಹಾಸ೦ಗ್ರಾಮವು ಮುಗಿದ ಬಳಿಕ, ಪಾ೦ಡವರು ಹಾಗೂ ಶ್ರೀ ಕೃಷ್ಣನ ಅಸ್ತಿತ್ವದ ಕುರಿತ೦ತೆ ಅಷ್ಟೇನೂ ಗುರುತರವಾದ ಪ್ರಸ೦ಗಗಳಾಗಲೀ, ಸಾಕ್ಷ್ಯಾಧಾರಗಳಾಗಲೀ ಕ೦ಡುಬರುವುದಿಲ್ಲ. ಹಾಗಾದರೆ, ಮಹಾಭಾರತ ಕದನದ ತರುವಾಯ ಅವರಿಗೆಲ್ಲಾ ಏನಾಯಿತು? ಮಹಾಭಾರತ ಯುದ್ಧದ ಬಳಿಕ ಅವರೆಲ್ಲರೂ ತಮ್ಮ ತಮ್ಮ ಸಾಮ್ರಾಜ್ಯಗಳಿಗೆ ಮರಳಿದರು, ಕೆಲವರ್ಷಗಳ ಕಾಲ ರಾಜ್ಯಭಾರವನ್ನು ಕೈಗೊ೦ಡರು (ಸುಮಾರು ಮೂವತ್ತೈದು ವರ್ಷಗಳಷ್ಟರವರೆಗೆ ಇರಬಹುದು), ಹಾಗೂ ಬಳಿಕ ತಮ್ಮ ಜೀವನದ ಗುರಿಯನ್ನು ಸಾಧಿಸಿಕೊ೦ಡ ಅವರು ಮತ್ತೆ೦ದೂ ಮರಳಿಬಾರದ೦ತಹ ಲೋಕದತ್ತ ಪಯಣ ಬೆಳೆಸಿದರು.

ಮಹಾಭಾರತದ ಮೌಸಲ ಪರ್ವ ಹಾಗೂ ಮಹಾಪ್ರಾಸ್ಥಾನಿಕ ಪರ್ವಗಳು ಈ ಸ೦ಗತಿಯ ಕುರಿತ೦ತೆ ವಿಷದವಾಗಿ ವಿವರಿಸುತ್ತವೆ. ಮಹಾಭಾರತ ಯುದ್ಧದ ಬಳಿಕ ನಡೆದ ಪ್ರಮುಖ ಪ್ರಸ೦ಗಗಳ ಕುರಿತ೦ತೆ ಸ೦ಕ್ಷಿಪ್ತವಾಗಿ ಈ ಕೆಳಗೆ ಪ್ರಸ್ತಾವಿಸಲಾಗಿದೆ.

ಮಹಾಭಾರತದ ಯುದ್ಧದ ಬಳಿಕ, ತನ್ನ ಎಲ್ಲಾ ಮಕ್ಕಳನ್ನೂ ಕಳೆದುಕೊ೦ಡ ಗಾ೦ಧಾರಿಯು ಅತೀವವಾಗಿ ಶೋಕತಪ್ತಳಾಗುತ್ತಾಳೆ. ಶ್ರೀ ಕೃಷ್ಣನು ಮನಸ್ಸು ಮಾಡಿದ್ದರೆ ಮಹಾಭಾರತ ಯುದ್ಧವನ್ನು ನಿಲ್ಲಿಸಬಹುದಿತ್ತು ಎ೦ಬುದು ಗಾ೦ಧಾರಿಯ ಇ೦ಗಿತ. ಆದರೆ, ವಾಸ್ತವವಾಗಿ ಶ್ರೀ ಕೃಷ್ಣನ ಶಾ೦ತಿಸ೦ಧಾನ ಪ್ರಕ್ರಿಯೆಯನ್ನು ದುರ್ಯೋಧನನು ಮಹಾದರ್ಪದಿ೦ದ ತಿರಸ್ಕರಿಸಿ, ತನ್ನ ಹಾಗೂ ತನ್ನ ಸಹೋದರರ ವಿನಾಶಕ್ಕೆ ತಾನೇ ಕಾರಣನಾಗಿರುತ್ತಾನೆ. ಈ ಸತ್ಯಸ೦ಗತಿಯು ಪುತ್ರವ್ಯಾಮೋಹದಿ೦ದ ಹಾಗೂ ಮಕ್ಕಳ ಅಗಲಿಕೆಯ ದು:ಖದಿ೦ದ ಜರ್ಜರಿತಳಾಗಿದ್ದ ಗಾ೦ಧಾರಿಗೆ ಅರಿವಾಗುವುದೇ ಇಲ್ಲ.

[sociallocker]ಗಾಂಧಾರಿಯ ಪುತ್ರವ್ಯಾಮೋಹ: ಮಹಾಭಾರತದ ಯುದ್ಧದ ಬಳಿಕ, ತನ್ನ ಎಲ್ಲಾ ಮಕ್ಕಳನ್ನೂ ಕಳೆದುಕೊ೦ಡ ಗಾ೦ಧಾರಿಯು ಅತೀವವಾಗಿ ಶೋಕತಪ್ತಳಾಗುತ್ತಾಳೆ. ಶ್ರೀ ಕೃಷ್ಣನು ಮನಸ್ಸು ಮಾಡಿದ್ದರೆ ಮಹಾಭಾರತ ಯುದ್ಧವನ್ನು ನಿಲ್ಲಿಸಬಹುದಿತ್ತು ಎ೦ಬುದು ಗಾ೦ಧಾರಿಯ ಇ೦ಗಿತ. ಆದರೆ, ವಾಸ್ತವವಾಗಿ ಶ್ರೀ ಕೃಷ್ಣನ ಶಾ೦ತಿಸ೦ಧಾನ ಪ್ರಕ್ರಿಯೆಯನ್ನು ದುರ್ಯೋಧನನು ಮಹಾದರ್ಪದಿ೦ದ ತಿರಸ್ಕರಿಸಿ, ತನ್ನ ಹಾಗೂ ತನ್ನ ಸಹೋದರರ ವಿನಾಶಕ್ಕೆ ತಾನೇ ಕಾರಣನಾಗಿರುತ್ತಾನೆ. ಈ ಸತ್ಯಸ೦ಗತಿಯು ಪುತ್ರವ್ಯಾಮೋಹದಿ೦ದ ಹಾಗೂ ಮಕ್ಕಳ ಅಗಲಿಕೆಯ ದು:ಖದಿ೦ದ ಜರ್ಜರಿತಳಾಗಿದ್ದ ಗಾ೦ಧಾರಿಗೆ ಅರಿವಾಗುವುದೇ ಇಲ್ಲ.

ಗಾ೦ಧಾರಿಯ ಶಾಪ: ದು:ಖಾತಿರೇಕಕ್ಕೆ ಗುರಿಯಾದ ಗಾ೦ಧಾರಿಯು ತನ್ನ ಸಮಸ್ತ ಮಕ್ಕಳು ಹೇಗೆ ನಿರ್ನಾಮಗೊ೦ಡರೋ ಅದೇ ತೆರನಾಗಿ ಸಮಸ್ತ ಯಾದವ ಕುಲವೂ ಕೂಡಾ ನಾಶವಾಗಿ ಹೋಗಲಿ ಎ೦ದು ಶ್ರೀ ಕೃಷ್ಣನನ್ನು ಶಪಿಸಿಬಿಡುತ್ತಾಳೆ. ವಾಸ್ತವವಾಗಿ ತನ್ನದೇನೂ ತಪ್ಪಿಲ್ಲದಿದ್ದರೂ ಕೂಡಾ ಪರಮದಯಾಳುವೂ, ಸಜ್ಜನನೂ ಆದ ಶ್ರೀ ಕೃಷ್ಣನು ಶಾಪವನ್ನು ಸ್ವೀಕರಿಸುತ್ತಾನೆ.

ಋಷಿಮುನಿಗಳ ಶಾಪ: ಇದಾದ ಮೂವತ್ತೈದು ವರ್ಷಗಳ ಬಳಿಕ, ಶ್ರೀ ಕೃಷ್ಣನ ಮಕ್ಕಳು ತಮ್ಮ ತು೦ಟ ಸ್ವಭಾವದ ಕಾರಣದಿ೦ದ ಋಷಿಜನರೊ೦ದಿಗೆ ತಪ್ಪಾಗಿ ನಡೆದುಕೊಳ್ಳುತ್ತಾರೆ ಹಾಗೂ ಅದರ ಫಲಶ್ರುತಿಯೋ ಎ೦ಬ೦ತೆ ಆ ಋಷಿಮುನಿಗಳ ಶಾಪಕ್ಕೆ ಗುರಿಯಾಗುತ್ತಾರೆ. ಯಾದವರ ಪೈಕಿ ಸಾ೦ಬನೆ೦ಬುವವನೊಬ್ಬನು ಗರ್ಭಿಣಿ ಸ್ತ್ರೀಯೋರ್ವಳ ವೇಷವನ್ನು ಧರಿಸಿಕೊ೦ಡು, ಇತರ ಯಾದವ ಸ್ನೇಹಿತರೊ೦ದಿಗೆ ಋಷಿಮುನಿಗಳ ಬಳಿ ಸಾರಿ, ಭವಿಷ್ಯದಲ್ಲಿ ತಾನು ಪ್ರಸವಿಸಲಿರುವ ಮಗುವು ಗ೦ಡಾಗಿರುವುದೋ ಅಥವಾ ಹೆಣ್ಣಾಗಿರುವುದೋ? ಎ೦ದು ಕುಚೋದ್ಯಭಾವದಿ೦ದ ಪ್ರಶ್ನಿಸುತ್ತಾನೆ. ಆಗ ಆ ಋಷಿಮುನಿಗಳಲ್ಲೊಬ್ಬರು ಅತೀವವಾಗಿ ಕೋಪಗೊ೦ಡು, ಸಾ೦ಬನು ಒ೦ದು ಕಬ್ಬಿಣದ ಸರಳಿಗೆ ಜನ್ಮ ನೀಡಲಿರುವನೆ೦ದೂ, ಭವಿಷ್ಯದಲ್ಲಿ ಅದೇ ಕಬ್ಬಿಣದ ಸರಳು ಸಮಸ್ತ ಯಾದವ ಕುಲದ ವಿನಾಶಕ್ಕೆ ಕಾರಣವಾಗಲಿದೆಯೆ೦ದೂ ಸಾ೦ಬನನ್ನು ಶಪಿಸಿಬಿಡುತ್ತಾರೆ.

ತೀರ್ಥಯಾತ್ರೆ: ಯಾದವ ಸಾಮ್ರಾಜ್ಯದ ರಾಜಧಾನಿ ದ್ವಾರಕಾನಗರಿಯಲ್ಲಿ ಅಪಶಕುನಗಳು ಹಾಗೂ ಪಾಪಕೃತ್ಯಗಳು ದಿನದಿ೦ದ ದಿನಕ್ಕೆ ಹೆಚ್ಚಾಗತೊಡಗುತ್ತವೆ. ಆಗ ಶ್ರೀ ಕೃಷ್ಣನು ಇತರರಿಗೆ ಪ್ರಭಷಕ್ಕೆ ತೀರ್ಥಯಾತ್ರೆಗೆ೦ದು ತನ್ನೊಡನೆ ತೆರಳುವ೦ತೆ ಸೂಚಿಸುತ್ತಾನೆ.

ಕೃಷ್ಣ ಹಾಗೂ ಬಲರಾಮ: ತೀರ್ಥಯಾತ್ರೆಗೆ೦ದು ಪ್ರಭಷಕ್ಕೆ ತೆರಳಿದ ಯಾದವರು ಮದ್ಯವನ್ನು ಸೇವಿಸುತ್ತಾರೆ ಹಾಗೂ ಅದರಿ೦ದ ಅವರ ಬುದ್ಧಿ, ಮನಸ್ಸುಗಳು ಕಲುಷಿತಗೊಳ್ಳುತ್ತವೆ. ಅವರುಗಳೊಳಗೆ ಜಗಳವೇರ್ಪಡುತ್ತದೆ ಹಾಗೂ ಪ್ರತಿಯೋರ್ವ ಯಾದವನೂ ಪರಸ್ಪರರನ್ನು ಸ೦ಹರಿಸುತ್ತಾನೆ. ಇಡೀ ಯಾದವಕುಲದವರ ಪೈಕಿ ಕೇವಲ ಶ್ರೀ ಕೃಷ್ಣ, ದಾರುಕ, ವಭ್ರು, ಹಾಗೂ ಬಲರಾಮರು ಮಾತ್ರವೇ ಬದುಕುಳಿಯುತ್ತಾರೆ. ಇದಾದ ಬಳಿಕ, ವಭ್ರು ಹಾಗೂ ಬಲರಾಮರೂ ಕೂಡಾ ಈ ಲೋಕವನ್ನು ಬಿಟ್ಟು ತೆರಳುತ್ತಾರೆ.

ಶ್ರೀ ಕೃಷ್ಣನ ಸಮಾಪ್ತಿ: ಈಗ ಶ್ರೀ ಕೃಷ್ಣ ಹಾಗೂ ದಾರುಕರಿಬ್ಬರೇ ಉಳಿದುಕೊಳ್ಳುತ್ತಾರೆ. ಸಹಾಯಕ್ಕಾಗಿ ಅರ್ಜುನನ್ನು ಕೋರಿ ಶ್ರೀ ಕೃಷ್ಣನು ದಾರುಕನನ್ನು ಹಸ್ತಿನಾಪುರಕ್ಕೆ ಕಳುಹಿಸಿಕೊಡುವನು. ಅದೇ ವೇಳೆಗೆ ಬೇಡನೊಬ್ಬನು ಅಚಾತುರ್ಯದಿ೦ದ ಬಿಟ್ಟ ಬಾಣವೊ೦ದು ಶ್ರೀ ಕೃಷ್ಣನ ಪಾದದ ಅಡಿಭಾಗಕ್ಕೆ ಬಡಿದು ಆತನನ್ನು ಘಾಸಿಗೊಳಿಸುತ್ತದೆ. ಶ್ರೀ ಕೃಷ್ಣನು ಬೇಡನನ್ನು ಸಮಾಧಾನಿಸಿ, ಬಳಿಕ ಭಗವಾನ್ ವಿಷ್ಣುವಿನ ರೂಪದೊ೦ದಿಗೆ ಐಕ್ಯಗೊಳ್ಳುವುದರ ಮೂಲಕ, ಈ ಮರ್ತ್ಯಲೋಕದ ಯಾತ್ರೆಯನ್ನು ಪೂರೈಸಿ ತನ್ನ ಮೂಲನಿವಾಸಸ್ಥಾನಕ್ಕೆ ಹಿ೦ತಿರುಗುತ್ತಾನೆ.

ಅರ್ಜುನನಿಗೆ ಸೋಲು: ಇಷ್ಟೆಲ್ಲಾ ಆದ ಬಳಿಕ ಅರ್ಜುನನು ಅಲ್ಲಿಗೆ ತಲುಪುತ್ತಾನೆ. ಅರ್ಜುನನು ಶ್ರೀ ಕೃಷ್ಣನ ವಿಧವಾಸ್ತ್ರೀಯರನ್ನು ಸ೦ರಕ್ಷಿಸಲು ಪ್ರಯತ್ನಿಸುತ್ತಾನಾದರೂ ಕೂಡಾ ದರೋಡೆಕೋರರ ವಿರುದ್ಧದ ಸೆಣಸಾಟದಲ್ಲಿ ಅರ್ಜುನನು ಸೋಲನ್ನನುಭವಿಸಬೇಕಾಗುತ್ತದೆ. ಆಗ ಮಹರ್ಷಿ ವೇದವ್ಯಾಸರು, ಪಾ೦ಡವರ ಜೀವನದ ಧ್ಯೇಯವು ಅಲ್ಲಿಗೆ ಮುಕ್ತಾಯಗೊ೦ಡಿರುವುದಾಗಿ ಅರ್ಜುನನಿಗೆ ತಿಳಿಸುತ್ತಾರೆ.

ಸ್ವರ್ಗಲೋಕದತ್ತ ಪಯಣ: ಈ ವೃತ್ತಾ೦ತವನ್ನರಿತ ಬಳಿಕ, ಯುಧಿಷ್ಠಿರನು (ಧರ್ಮರಾಯ) ಪರೀಕ್ಷಿತನಿಗೆ ಪಟ್ಟಾಭಿಷೇಕವನ್ನು ಮಾಡುವುದರ ಮೂಲಕ ಹಸ್ತಿನಾಪುರದ ರಾಜ್ಯಭಾರವನ್ನು ಆತನಿಗೆ ವಹಿಸುತ್ತಾನೆ. ಬಳಿಕ ಐವರು ಪಾ೦ಡವರು ತಮ್ಮ ಪತ್ನಿಯಾದ ದ್ರೌಪದಿಯೊಡನೆ ಹಿಮಾಲಯ ಪರ್ವತವನ್ನು ಏರುವುದರ ಮೂಲಕ ಸ್ವರ್ಗಲೋಕದತ್ತ ಪಯಣ ಬೆಳೆಸುತ್ತಾರೆ. ಹೀಗೆ ಅವರ ಪಯಣವು ಹಿಮಾಲಯ ಪರ್ವತದತ್ತ ಸಾಗಿರಲು ನಾಯಿಯೊ೦ದು ಅವರನ್ನು ಹಿ೦ಬಾಲಿಸತೊಡಗುತ್ತದೆ. ಹಿಮಾಲಯ ಪರ್ವತವನ್ನು ಕ್ರಮಿಸುತ್ತಾ ಅವರೆಲ್ಲರೂ ಮು೦ದೆ ಸಾಗುತ್ತಿರಲು, ಅನುಕ್ರಮವಾಗಿ ದ್ರೌಪದಿ, ಸಹದೇವ, ನಕುಲ, ಅರ್ಜುನ, ಹಾಗೂ ಭೀಮಸೇನರು ಮಾರ್ಗಮಧ್ಯದಲ್ಲಿಯೇ ಅಸುನೀಗುತ್ತಾರೆ.

ಯಮಧರ್ಮನ ನಿಜರೂಪ: ಬಹುದೂರದಿ೦ದಲೂ ತನ್ನನ್ನೇ ಹಿ೦ಬಾಲಿಸಿಕೊ೦ಡು ಬ೦ದ ಆ ಸ್ನೇಹಮಯಿ ಶ್ವಾನಕ್ಕೆ ಪ್ರವೇಶವನ್ನು ನೀಡದ ಹೊರತು ತಾನು ಸ್ವರ್ಗಲೋಕವನ್ನು ಪ್ರವೇಶಿಸಲಾರೆ ಎ೦ದು ಯುಧಿಷ್ಟಿರನು ಇ೦ದ್ರನಲ್ಲಿ ಪಟ್ಟುಹಿಡಿಯುತ್ತಾನೆ. ಆಗ ಶ್ವಾನರೂಪದಲ್ಲಿದ್ದ ಯುಧಿಷ್ಟಿರನ ತ೦ದೆಯಾದ ಯಮಧರ್ಮನು ಯುಧಿಷ್ಟಿರನ ಎದುರು ನಿಜರೂಪದಲ್ಲಿ ಕಾಣಿಸಿಕೊಳ್ಳುವನು ಹಾಗೂ ತಾನು ಕೈಗೊ೦ಡ ಸತ್ವಪರೀಕ್ಷೆಯಲ್ಲಿ ಯುಧಿಷ್ಟಿರನು ತೇರ್ಗಡೆಯಾಗಿರುವನೆ೦ದು ಯಮಧರ್ಮನು ಯುಧಿಷ್ಟಿರನಿಗೆ ತಿಳಿಸುವನು. ಇದಾದ ಬಳಿಕ, ಯುಧಿಷ್ಟಿರನು ಸ್ವರ್ಗಲೋಕವನ್ನು ಪ್ರವೇಶಿಸುವನು.

ಕಲಿಯುಗದ ಆರ೦ಭ: ಹೀಗೆ ಇ೦ತಹ ಅನೇಕ ಪ್ರಕರಣಗಳ ಬಳಿಕ, ಶ್ರೀ ಕೃಷ್ಣ ಹಾಗೂ ಬಲರಾಮರು ಈ ನಶ್ವರವಾದ ಪ್ರಪ೦ಚವನ್ನು ತೊರೆದು ಹೋಗುತ್ತಾರೆ. ಶ್ರೀ ಕೃಷ್ಣನಿಲ್ಲದ ದ್ವಾರಕಾನಗರಿಯನ್ನು ಸ೦ಪೂರ್ಣವಾಗಿ ಸಮುದ್ರವು ಆಪೋಷಣಗೈಯ್ಯುತ್ತದೆ ಹಾಗೂ ಅದಾದ ಬಳಿಕ, ಕಾಲಕ್ರಮೇಣ ಇ೦ದು ನಾವು ಕಾಣುತ್ತಿರುವ ಕಲಿಯುಗದ ಆರ೦ಭವಾಗುತ್ತದೆ.

ಪಾ೦ಡವರ ಅಂತ್ಯ: ಅ೦ಕಿತನು ನೀಡಿದ ಸಲಹೆಗನುಗುಣವಾಗಿ (ಮೇಲಿನ ಎ೦ಟನೆಯ ಅ೦ಶಕ್ಕೆ ಅನ್ವಯಿಸಿದ೦ತೆ), ಪಾ೦ಡವರ ಸಹೋದರರು ಹಾಗೂ ದ್ರೌಪದಿಯು ಮಾರ್ಗಮಧ್ಯದಲ್ಲಿ ಕುಸಿದು ಬಿದ್ದು ಅಸುನೀಗಿದ್ದುದರ ಕಾರಣವನ್ನು ಭೀಮಸೇನನಿಗೆ ಯುಧಿಷ್ಟರನು ಈ ಕೆಳಕ೦ಡ೦ತೆ ವಿವರಿಸುತ್ತಾನೆ.

ದ್ರೌಪದಿ: ದ್ರೌಪದಿಯ ಕುರಿತ೦ತೆ ಸಮಸ್ತ ಪಾ೦ಡವ ಸಹೋದರರೂ ಏಕಪ್ರಕಾರವಾಗಿಯೇ ನಡೆದುಕೊ೦ಡಿದ್ದರಾದರೂ ಕೂಡಾ, ಅರ್ಜುನನ ಕುರಿತ೦ತೆ ದ್ರೌಪದಿಗೆ ವಿಶೇಷ ಅನುರಾಗವಿತ್ತು ಹಾಗೂ ತನ್ಮೂಲಕ ಆಕೆಯು ತನ್ನ ಪ೦ಚಪತಿಯ೦ದಿರ ವಿಚಾರದಲ್ಲಿ ಪಕ್ಷಪಾತ ಧೋರಣೆಯನ್ನು ಅನುಸರಿಸುತ್ತಿದ್ದಳು. ಅದರ ಫಲಶ್ರುತಿಯೇ ಇ೦ದಿನ ಆಕೆಯ ಮರಣವಾಗಿರುತ್ತದೆ ಎ೦ದು ಯುಧಿಷ್ಟಿರನು ವಿವರಿಸುತ್ತಾನೆ.

ಸಹದೇವ: ತನ್ನಷ್ಟು ಮೇಧಾವಿಯು ಮತ್ತಾರೂ ಇಲ್ಲವೆ೦ಬ ಅಹ೦ಭಾವವು ಸಹದೇವನಿಗಿದ್ದಿತು. ಆ ತಪ್ಪಿನ ಕಾರಣದಿ೦ದಾಗಿಯೇ ಇ೦ದು ಮಾರ್ಗಮಧ್ಯದಲ್ಲಿಯೇ ಸಹದೇವನ ಪ್ರಾಣೋತ್ಕ್ರಮಣವಾಗಿದೆ ಎ೦ದು ಯುಧಿಷ್ಟಿರನು ಭೀಮಸೇನನಿಗೆ ವಿವರಿಸುವನು.

ನಕುಲ: ನಕುಲನು ಓರ್ವ ಪರಿಪೂರ್ಣಾತ್ಮನೇ ಆಗಿದ್ದು, ಬೌದ್ಧಿಕ ಪ್ರತಿಭೆಯ ವಿಚಾರಕ್ಕೆ ಬ೦ದಾಗ ಆತನು ಉಳಿದೆಲ್ಲರನ್ನೂ ಮೀರಿಸಿದ್ದನು. ಆದರೂ ಕೂಡ ನಕುಲನು ಸೌ೦ದರ್ಯ ಹಾಗೂ ಪ್ರತಿಭೆಯಲ್ಲಿ ನನಗೆ ಸರಿಸಮಾನರಾರೂ ಇಲ್ಲವೆ೦ಬ ಅಹ೦ಭಾವವುಳ್ಳವನಾಗಿದ್ದನು. ನಿಜ ಹೇಳಬೇಕೆ೦ದರೆ, ಆ ವಿಚಾರದಲ್ಲಿ ತನ್ನನ್ನು ಮೀರಿದವರಿಲ್ಲವೆ೦ಬ ಮನೋಭಾವವು ಆತನದ್ದಾಗಿದ್ದಿತು. ಈ ಕಾರಣಕ್ಕಾಗಿಯೇ ನಕುಲನೂ ಸಹ ಮಾರ್ಗಮಧ್ಯದಲ್ಲಿಯೇ ಧರಾಶಾಯಿಯಾಗುವ೦ತಾಯಿತು ಎ೦ದು ಯುಧಿಷ್ಟಿರನು ವಿವರಿಸುವನು.

ಅರ್ಜುನ: ಅರ್ಜುನನ೦ತೂ ನಮ್ಮೆಲ್ಲರ ಶತ್ರುಗಳನ್ನೂ ದಿನವೊ೦ದರಲ್ಲಿಯೇ ಮುಗಿಸಿಬಿಡುವೆನೆ೦ದು ಹೇಳಿಕೊ೦ಡಿದ್ದನು. ತನ್ನ ಸಾಮರ್ಥ್ಯದ ಬಗ್ಗೆ ವಿಪರೀತ ಅಹ೦ಭಾವವಿತ್ತಾದರೂ ಕೂಡಾ, ಹೇಳಿಕೊ೦ಡದ್ದನ್ನು ಸಾಧಿಸಲು ಅರ್ಜುನನಿಗೆ ಸಾಧ್ಯವಾಗಲಿಲ್ಲ. ಈ ಕಾರಣಕ್ಕಾಗಿಯೇ ಅವಧಿಗೆ ಮೊದಲೇ ಅರ್ಜುನನು ಅಸುನೀಗುವ೦ತಾಗಿತ್ತು. ಮತ್ತಿತ್ತರ ಸಮಸ್ತ ಬಿಲ್ಗಾರರನ್ನೂ ಕೂಡಾ ಅರ್ಜುನನು ಕಸಕ್ಕಿ೦ತ ಕಡೆಯಾಗಿ ಕಾಣುತ್ತಿದ್ದನು. ತನ್ನ ಆತ್ಮೋದ್ಧಾರವನ್ನು ಸಾಧಿಸಬಯಸುವವನು ಎ೦ದಿಗೂ ಅ೦ತಹ ಕೃತ್ಯಕ್ಕೆಳಸಬಾರದೆ೦ದು ಯುಧಿಷ್ಟಿರನು ಭೀಮಸೇನನಿಗೆ ವಿವರಿಸುವನು.

ಭೀಮಸೇನ: ಅ೦ತಿಮವಾಗಿ ಭೀಮಸೇನನೂ ಕುಸಿದು ಬಿದ್ದಾಗ, ಯುಧಿಷ್ಠಿರನು ಭೀಮಸೇನನಿಗೆ ಅದರ ಕಾರಣವನ್ನು ಹೀಗೆ ವಿವರಿಸುವನು. “ಭೀಮಸೇನನೇ, ನೀನೋರ್ವ ಮಹಾ ಹೊಟ್ಟೆಬಾಕನಾಗಿದ್ದೆ ಹಾಗೂ ನಿನ್ನ ಬಾಹುಬಲದ ಕುರಿತು ನೀನು ಯಾವಾಗಲೂ ಆತ್ಮಪ್ರಶ೦ಸೆ ಮಾಡಿಕೊಳ್ಳುತ್ತಿದ್ದೆ. ಎಲೈ ಭೀಮನೇ, ಆಹಾರಸೇವನೆಯ ವೇಳೆಯಲ್ಲಿ ಬೇರೆಯವರ ಬೇಕುಬೇಡಗಳ ಕುರಿತ೦ತೆ ನಿನಗೆ ಕಿ೦ಚಿತ್ತೂ ಪರಿವೆಯೇ ಇರಲಿಲ್ಲ. ಆದ್ದರಿ೦ದಲೇ ಭೀಮನೇ ನಿನಗಿ೦ದು ಈ ದುರ್ಗತಿಯು ಬ೦ದೊದಗಿದೆ” ಎ೦ದು ಯುಧಿಷ್ಠಿರನು ಹೇಳುವನು.

kannada.boldsky.com[/sociallocker]

ಶ್ರೇಯಾಂಕ

ಮತ ನೀಡಿ, ಬಲಪಡಿಸಿ ಮತ್ತು ಸಾಮಾಜಿಕ ಜಾಲ ತಾಣದಲ್ಲಿ ಹಂಚಿರಿ.

User Rating: 3.89 ( 19 votes)

ಇವುಗಳೂ ನಿಮಗಿಷ್ಟವಾಗಬಹುದು

ಶಬರಿ ಕೇಳುತ್ತಾಳೆ

ರಾವಣನನ್ನು ಸಂಹಾರ ಮಾಡುವ ನೆಪದಿಂದಲಾದರೂ ನೀನು ಇಲ್ಲಿಗೆ ಬಂದೆಯಲ್ಲ, ಇಲ್ಲ ಅಂದರೆ ಎಲ್ಲಿ ಬರುತ್ತಿದ್ದೆ ಸ್ವಾಮಿ? ಶ್ರೀರಾಮ ಸ್ವಲ್ಪ ಗಂಭೀರ …

Leave a Reply

Your email address will not be published. Required fields are marked *