vyasaru

ಮಹರ್ಷಿ ವ್ಯಾಸರು ಹೇಳಿದ್ದನ್ನು ‘ಕಂಡುಹಿಡಿಯುವ’ ವಿಜ್ಞಾನಿಗಳು !

ಸೂರ್ಯನ ಮೇಲಿರುವ ಜ್ವಾಲಾಮುಖಿ

ಮಹಾಭಾರತ ಯುದ್ಧವು ನಡೆಯುತ್ತಿರುವಾಗ ಸೂರ್ಯ ಗ್ರಹಣವಿತ್ತು. ಇದರ ಬಗ್ಗೆ ವ್ಯಾಸರುದ್ವಿಧಾಭೂತ ಇವ ಆದಿತ್ಯ: |’ ಎಂದು ವರ್ಣಿಸಿದ್ದಾರೆ. ಅಂದರೆ ಸೂರ್ಯನು ಉದಯಿಸುತ್ತಲೇ ಇಭ್ಭಾಗವಾದನು. ವ್ಯಾಸರು ಮುಂದೆ ‘ಸೂರ್ಯನು ಎಂದಿನಂತೆ ಸುತ್ತುವುದನ್ನು ಬಿಟ್ಟು ಪ್ರಜ್ವಲಿತ ಜ್ವಾಲೆಯನ್ನು ಹೊರಹಾಕುತ್ತಿದ್ದಾನೆ’ ಎಂದು ಬರೆದಿದ್ದಾರೆ. ಇಂದಿನ ವೈಜ್ಞಾನಿಕ ಉಪಕರಣಗಳಿಂದ ವಿಜ್ಞಾನಿಗಳು ಸೂರ್ಯಗ್ರಹಣದ ಸಮಯದಲ್ಲಿ ಜ್ವಾಲಾಮುಖಿಯ ಉದ್ರೇಕವಾಗಿರುವುದನ್ನು ದೂರಚಿತ್ರವಾಹಿನಿಯಲ್ಲಿ ಬಿತ್ತರಿಸುತ್ತಾರೆ. ಇದರಿಂದ ವ್ಯಾಸರು ಹೇಳಿರುವುದು ಸತ್ಯ ಎಂಬುದು ಸಿದ್ಧವಾಗುತ್ತದೆ.

೧. ಗೆಲಿಲಿಯೋನ ಕಾಲಕ್ಕಿಂತಲೂ ಸಾವಿರಾರು ವರ್ಷಗಳ ಮೊದಲು ಬರೆದಂತಹ ಋಗ್ವೇದದಲ್ಲಿ ಸೂರ್ಯನ ಕಲೆಗಳ ವರ್ಣನೆ ಇದೆ.

[sociallocker]೨. ಆಕಾಶಗಂಗೆಯು ಗೋಲವಿರುವುದು ವಿಜ್ಞಾನಕ್ಕೆ ಇತ್ತೀಚೆಗೆ ತಿಳಿದ ಸಂಗತಿ, ಇದು ವೇದ ಕಾಲದ ಹಿಂದೂಗಳಿಗೆ ತಿಳಿದಿತ್ತು. ಆಕಾಶಗಂಗೆಯು ಮೂಲಭೂತವಾಗಿದ್ದು ಅದರಿಂದ ಈ ಸೌರವ್ಯೂಹ ನಿರ್ಮಾಣವಾಗಿದೆ ಹಾಗೂ ನಮ್ಮ ಜಗತ್ತು ಅದರ ಮೇಲೆ ಅವಲಂಬಿಸಿದೆ ಎಂಬುದು ವೇದಕಾಲದ ಜ್ಞಾನ.

ಆಧಾರ: ವೈದಿಕ ವಿಜ್ಞಾನ ಹಾಗೂ ವೇದಕಾಲನಿರ್ಣಯ, ಪು ೨೫. ಡಾ. ಪದ್ಮಾಕರ ವಿಷ್ಣು ವರ್ತಕ

ಗ್ರಹ

ಎಲ್ಲ ಗ್ರಹಗಳು ಪ್ರಾಥಮಿಕ ಹಂತದಲ್ಲಿ ಕಾಯ್ದ ಸ್ಥಿತಿಯಲ್ಲಿದ್ದರೂ ಕಾಲಾಂತರದಲ್ಲಿ ತಂಪಾದವು. ಇದರ ಬಗ್ಗೆ ಋಗ್ವೇದದಲ್ಲಿ ಉಲ್ಲೇಖಿಸಲಾಗಿದೆ. ಆಧುನಿಕ ವಿಜ್ಞಾನವು ಅದನ್ನು ಇತ್ತೀಚೆಗೆ ಸಂಶೋಧಿಸಿದೆ.

ನಕ್ಷತ್ರ

ಸಾವಿರಾರು ವರ್ಷಗಳ ಹಿಂದೆ ವ್ಯಾಸರು ಇಂದಿನ ವಿಜ್ಞಾನಕ್ಕೆ ತಿಳಿದ ಅಗಣಿತ ನಕ್ಷತ್ರಗಳಲ್ಲಿ ಒಂದು ಅಭಿಜಿತ ನಕ್ಷತ್ರವು ೧೨ ಸಾವಿರ ವರ್ಷಗಳ ಹಿಂದೆ ಉತ್ತರ ಧ್ರುವವಾಗಿದ್ದು, ಅದರ ಸ್ಥಾನಪಲ್ಲಟವಾಗಿರುವ ಬಗ್ಗೆ ಮಹಾಭಾರತದಲ್ಲಿ ಹೇಳಿದ್ದರು. ಆಧುನಿಕ ಶಾಸ್ತ್ರಜ್ಞರು ಈಗ ಆ ಸಮಯದಲ್ಲಿ ‘ವೇಗಾ’ ಎಂಬ ನಕ್ಷತ್ರವು ನಿಜವಾಗಿಯೂ ಉತ್ತರ ಧ್ರುವವಾಗಿತ್ತು ಎಂದು ದೃಢೀಕರಿಸಿದ್ದಾರೆ.
http://balsanskar.net/kannada/lekh/768.html[/sociallocker]

ಶ್ರೇಯಾಂಕ

ಮತ ನೀಡಿ ಬಲಪಡಿಸಿ ಮತ್ತು ಸಾಮಾಜಿಕ ಜಾಲ ತಾಣದಲ್ಲಿ ಹಂಚಿರಿ.

User Rating: 3.99 ( 14 votes)

ಇವುಗಳೂ ನಿಮಗಿಷ್ಟವಾಗಬಹುದು

ತಾಮ್ರದ ಕೊಡ ಹಾಗೂ ಪ್ಲಾಸ್ಟಿಕ್ ಕೊಡಗಳಲ್ಲಿಯ ವ್ಯತ್ಯಾಸ

ತಾಮ್ರದ ಕೊಡ ಹಾಗೂ ಪ್ಲಾಸ್ಟಿಕ್ ಕೊಡಗಳಲ್ಲಿಯ ವ್ಯತ್ಯಾಸವೇನು…???? ತಾಮ್ರದ ಕೊಡ ಬಾವಿಯಲ್ಲಿ ಇಳಿದಾಗ ಬಾಗಿ ತನ್ನೊಳಗೆ ಪೂರ್ಣ ನೀರು ತುಂಬಿಕೊಂಡು …

Leave a Reply

Your email address will not be published. Required fields are marked *