ನಮ್ಮ ಅಶುಚಿತ್ವ (ಅಸ್ವಚ್ಛತೆಯ) ಅವಸ್ಥೆಯನ್ನು ಶುಚಿತಗೊಳಿಸಲು (ಸ್ವಚ್ಛವಾಗಿಡಲು) ಈ ಕೃತಿಯು ಉಪಯೋಗಕ್ಕೆ ಬರುತ್ತದೆ. ಕೈ-ಕಾಲುಗಳನ್ನು ತೊಳೆದುಕೊಂಡು ಬಾಯಿ ಮುಕ್ಕಳಿಸಿದ ಮೇಲೆ ಜನಿವಾರವನ್ನು ಕಿವಿಯ ಮೇಲಿನಿಂದ ತೆಗೆಯಬೇಕು. ಇದರ ಹಿಂದಿನ ಶಾಸ್ತ್ರೀಯ ಕಾರಣವೇನೆಂದರೆ ಶರೀರದ ನಾಭಿಯ ಮೇಲಿನ ಭಾಗವು ಧಾರ್ಮಿಕ ಕಾರ್ಯಗಳಿಗೆ ಪವಿತ್ರ ಮತ್ತು ಅದರ ಕೆಳಗಿನ ಭಾಗವು ಅಪವಿತ್ರ ಎಂದು ತಿಳಿದುಕೊಳ್ಳಲಾಗಿದೆ.
ಆದಿತ್ಯ, ವಸು, ರುದ್ರ, ಅಗ್ನಿ, ಧರ್ಮ, ವೇದ, ಆಪ, ಸೋಮ, ಅನಿಲ ಮುಂತಾದ ಎಲ್ಲ ದೇವತೆಗಳ ವಾಸ್ತವ್ಯವು ಬಲಕಿವಿಯಲ್ಲಿರುವುದರಿಂದ ಬಲಕಿವಿಗೆ ಬಲಗೈಯನ್ನು ಸ್ಪರ್ಶಿಸಿದರೆ ಆಚಮನದ ಫಲ ಸಿಗುತ್ತದೆ. ಇಂತಹ ಪವಿತ್ರವಾದ ಬಲಕಿವಿಯ ಮೇಲೆ ಯಜ್ಞೋಪವೀತವನ್ನು (ಜನಿವಾರವನ್ನು) ಇರಿಸಿದರೆ ಅಶುಚಿತ್ವವು ಬರುವುದಿಲ್ಲ.
[sociallocker]ಬಲಕಿವಿಯ ಮೇಲೆ ಜನಿವಾರವನ್ನು ಹಾಕಿಕೊಳ್ಳುವುದರಿಂದ ಜನಿವಾರದಲ್ಲಿರುವ ಬ್ರಾಹ್ಮತೇಜವು ಕಿವಿಯ ಟೊಳ್ಳಿಗೆ ಸ್ಪರ್ಶವಾಗುವುದರಿಂದ ಜೀವದ ಬಲನಾಡಿಯು ಕಾರ್ಯನಿರತವಾಗುತ್ತದೆ ಮತ್ತು ಜೀವದ ಸುತ್ತಲೂ ಕಡಿಮೆ ಕಾಲಾವಧಿಯಲ್ಲಿ ತೇಜೋಮಯ ಲಹರಿಗಳ ಸಂರಕ್ಷಣಾತ್ಮಕ ವಾಯುಮಂಡಲವು ತಯಾರಾಗುತ್ತದೆ. ಮೂತ್ರ ಮತ್ತು ಶೌಚದಂತಹ ರಜ-ತಮಾತ್ಮಕ ಕರ್ಮಗಳನ್ನು ಮಾಡುವಾಗ ಕಡಿಮೆ ಕಾಲಾವಧಿಯಲ್ಲಿ ಸಂರಕ್ಷಣಾತ್ಮಕ ಕಾರ್ಯವನ್ನು ಮಾಡುವ ಸೂರ್ಯನಾಡಿಯನ್ನು ಜಾಗೃತಗೊಳಿಸಲು ಜನಿವಾರವನ್ನು ಬಲಕಿವಿಯ ಮೇಲೆ ಹಾಕಿಕೊಳ್ಳುತ್ತಾರೆ.
ಜನಿವಾರವು ಸೊಂಟವನ್ನು ಸ್ಪರ್ಶಿಸುತ್ತಿರುತ್ತದೆ. ಮೂತ್ರ ಮತ್ತು ಶೌಚವಿಧಿಯಂತಹ ಪ್ರಕ್ರಿಯೆಗಳಲ್ಲಿ ದೇಹದಲ್ಲಾಗುವ ರಜ-ತಮಾತ್ಮಕ ಲಹರಿಗಳ ರೂಪಾಂತರಾತ್ಮಕ ಬದಲಾವಣೆಯಿಂದಾಗಿ ಸೊಂಟದ ಸುತ್ತಲಿನ ಭಾಗವು ಅಶುದ್ಧವಾಗುತ್ತದೆ. ಜನಿವಾರವು ಈ ಸೊಂಟದ ಸುತ್ತಲಿನ ಅಶುದ್ಧ ಭಾಗವನ್ನು ಸ್ಪರ್ಶಿಸಿದರೆ ಅದರ ಪಾವಿತ್ರ್ಯವು ಕಡಿಮೆಯಾಗುತ್ತದೆ. ಹೀಗಾಗಬಾರದೆಂದು ಮೂತ್ರ ಮತ್ತು ಶೌಚಾದಿ ವಿಧಿಗಳ ಸಮಯದಲ್ಲಿ ಜನಿವಾರವನ್ನು ಬಲಕಿವಿಯ ಮೇಲೆ ಹಾಕುವ ಆಚಾರವಿದೆ.
– ಓರ್ವ ವಿದ್ವಾಂಸ (ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ, ೧೧.೧೨.೨೦೦೭, ಮಧ್ಯಾಹ್ನ ೨.೧೯)
(ಆಧಾರ: ಸನಾತನ ಸಂಸ್ಥೆಯ ಗ್ರಂಥ ‘ದಿನಚರಿಗೆ ಸಂಬಂಧಿಸಿದ ಆಚಾರಗಳು ಮತ್ತು ಅವುಗಳ ಹಿಂದಿನ ಶಾಸ್ತ್ರ’)
‘ನಿವೀತೀ ದಕ್ಷಿಣೇ ಕರ್ಣೇ ಯಜ್ಞೋಪವೀತಂ ಕೃತ್ವಾ ಉತ್ಕಟಕಮಾಸೀನಃ ಅಹನಿ ಉದಂಮುಖಃ ರಾತ್ರೌ ದಕ್ಷಿಣಮುಖಃ ತೃಣೈರಂತಿರಿತೇ ಮೂತ್ರಪುರೀಷೆ ವಿಸೃಜೇತ್| – ವೈಖಾನಸಧರ್ಮಸೂತ್ರ, ಖಂಡ ೧೬, ಅಂಶ ೧೦ ಅರ್ಥ: ಜನಿವಾರವನ್ನು ಮಾಲೆಯಂತೆ ಮಾಡಿ ಬಲಕಿವಿಯ ಮೇಲಿಟ್ಟು, ಕುಕ್ಕರುಗಾಲಿನಲ್ಲಿ ಕುಳಿತು ಹಗಲು ಹೊತ್ತಿನಲ್ಲಿ ಉತ್ತರದ ಕಡೆಗೆ ಮತ್ತು ರಾತ್ರಿ ದಕ್ಷಿಣದ ಕಡೆಗೆ ಮುಖ ಮಾಡಿ ಹುಲ್ಲಿನಿಂದ ಮುಚ್ಚಿದ ನೆಲದ ಮೇಲೆ ಮಲಮೂತ್ರ ವಿಸರ್ಜನೆ ಮಾಡಬೇಕು.
ಜನಿವಾರವು ಪವಿತ್ರವಾಗಿರುತ್ತದೆ. ಮಲಮೂತ್ರವನ್ನು ವಿಸರ್ಜಿಸುವಾಗ ನಾವು ಅಶುದ್ಧ ಅವಸ್ಥೆಯಲ್ಲಿರುತ್ತೇವೆ. ಬ್ರಾಹ್ಮಣರ ಬಲಕಿವಿಯಲ್ಲಿ ಅಗ್ನಿ, ಆಪ, ವರುಣ, ಸೂರ್ಯ, ವಾಯು, ಇಂದ್ರ ಮತ್ತು ಚಂದ್ರ ಈ ಏಳು ದೇವತೆಗಳು ನಿತ್ಯವೂ ವಾಸವಾಗಿರುತ್ತಾರೆ. ಇದರಿಂದ ಆ ಸ್ಥಳದಲ್ಲಿ ಜನಿವಾರವನ್ನು ಇಡಬೇಕು. ಹಾಗೆ ಮಾಡಲು ಮರೆತರೆ ಬೇರೆ ಜನಿವಾರವನ್ನು ಹಾಕಿಕೊಳ್ಳಬೇಕು. ಜನಿವಾರವನ್ನು ಮಾಲೆಯಂತೆ ಮಾಡಿ ಬಲಕಿವಿಯ ಹತ್ತಿರ ಇಟ್ಟು ಮಲಮೂತ್ರ ವಿಸರ್ಜನೆ ಮಾಡಬೇಕು.
ಊರ್ಧ್ವಂ ನಾಭೇರ್ಮೇಧ್ಯತರಃ ಪುರುಷಃ ಪರಿಕೀರ್ತಿತಃ|
– ಮನುಸ್ಮೃತಿ, ಅಧ್ಯಾಯ ೧, ಶ್ಲೋಕ ೯೨
ಅರ್ಥ: ಪುರುಷನ ನಾಭಿಯ ಮೇಲಿನ ದೇಹದ ಭಾಗವು ಹೆಚ್ಚು ಪವಿತ್ರವಾಗಿರುತ್ತದೆ.
ನಾಭಿಯ ಕೆಳಗಿನ ಭಾಗವನ್ನು ಅಪವಿತ್ರವೆಂದು ಪರಿಗಣಿಸಲಾಗಿರುವುದರಿಂದ ಮೂತ್ರವನ್ನು ಮತ್ತು ಪುರೀಷವನ್ನು (ಶೌಚವನ್ನು) ವಿಸರ್ಜಿಸುವಾಗ ಜನಿವಾರವನ್ನು ನಿವೀತವನ್ನಾಗಿಸಿ (ಎರಡೂ ಹೆಗಲಿನಿಂದ ಕೊರಳಿನಲ್ಲಿ ಮಾಲೆಯಂತೆ) ಬಲಗಿವಿಯ ಮೇಲೆ ಇಡಬೇಕು. ಬಲಗಿವಿಯ ಮಹತ್ವವನ್ನು ಶಾಸ್ತ್ರದಲ್ಲಿ ಬಹಳಷ್ಟು ಕಡೆಗಳಲ್ಲಿ ಹೇಳಲಾಗಿದ್ದು ಆದಿತ್ಯ, ವಸು, ರುದ್ರ, ವಾಯು, ಅಗ್ನಿ, ಧರ್ಮ, ವೇದ, ಆಪ, ಸೋಮ, ಸೂರ್ಯ, ಅನಿಲ ಮುಂತಾದ ಎಲ್ಲ ದೇವತೆಗಳು ಬಲಗಿವಿಯಲ್ಲಿ ವಾಸವಿರುವುದರಿಂದ ಬಲಗಿವಿಯನ್ನು ಕೇವಲ ಸ್ಪರ್ಶಿಸುವುದರಿಂದಲೇ ಆಚಮನದ ಫಲವು ಲಭಿಸುತ್ತದೆ. ಇಂತಹ ಪವಿತ್ರ ಬಲಗಿವಿಯ ಮೇಲೆ ಜನಿವಾರವನ್ನು ಇಡುವುದರಿಂದ ಅದಕ್ಕೆ ಅಶುಚಿತ್ವವು ತಗಲುವುದಿಲ್ಲ.
ಬಲಗಿವಿಗೆ ಇಷ್ಟೊಂದು ಮಹತ್ವ ಬರಲು ವೈಜ್ಞಾನಿಕ ಕಾರಣವೆಂದರೆ ಬಲಗಡೆಯ ಕಿವಿಯಲ್ಲಿನ ನರ ಹಾಗೂ ಗುಪ್ತೇಂದ್ರಿಯ ಮತ್ತು ಅಂಡಕೋಶ ಇವುಗಳ ನಡುವೆ ಅನ್ಯೋನ್ಯ ಸಂಬಂಧವಿದೆ. ಮೂತ್ರ ವಿಸರ್ಜನೆಯ ಸಮಯದಲ್ಲಿ ಸೂಕ್ಷ್ಮವೀರ್ಯಸ್ರಾವವಾಗುವ ಸಾಧ್ಯತೆಯಿರುತ್ತದೆ. ಬಲಗಿವಿಗೆ ದಾರವನ್ನು ಸುತ್ತುವುದರಿಂದ ವೀರ್ಯನಾಶವನ್ನು ತಪ್ಪಿಸಬಹುದೆಂದು ಆಯುರ್ವೇದ ಶಾಸ್ತ್ರದಲ್ಲಿ ಸಿದ್ಧಪಡಿಸಲಾಗಿದೆ. ಸ್ವಪ್ನದಲ್ಲಿ ಆಗಾಗ ವೀರ್ಯಪತನ ಆಗುತ್ತಿದ್ದಲ್ಲಿ ಬಲಗಿವಿಯನ್ನು ಕಟ್ಟಿ ಮಲಗಿದರೆ ಆ ದೋಷವು ನಿವಾರಣೆಯಾಗುತ್ತದೆ ಎನ್ನುವುದು ಕಂಡು ಬಂದಿದೆ. ಯಾವುದೇ ಪ್ರಾಣಿಯ ಕಿವಿಯನ್ನು ಹಿಡಿದು, ಅದರ ಮದವನ್ನು (ಸೊಕ್ಕನ್ನು) ಕಡಿಮೆ ಮಾಡಬಹುದು ಎಂಬುದು ಕಂಡು ಬರುತ್ತದೆ. ಅಂಡವೃದ್ಧಿಗೆ ಏಳು ಕಾರಣಗಳಿದ್ದು, ಮೂತ್ರಜ ಅಂಡವೃದ್ಧಿ ಇವುಗಳಲ್ಲಿ ಒಂದಾಗಿದೆ. ಕಿವಿಗೆ ದಾರವನ್ನು ಕಟ್ಟಿದರೆ ಮೂತ್ರಜ ಅಂಡವೃದ್ಧಿ ಆಗುವುದಿಲ್ಲ.’
(ಆಧಾರ : ಸನಾತನ ಸಂಸ್ಥೆಯ ಗ್ರಂಥ “ಹದಿನಾರು ಸಂಸ್ಕಾರಗಳು”)
ಟಿಪ್ಪಣಿ : ವೈಜ್ಞಾನಿಕ ಕಾರಣಗಳು ಕೇವಲ ಶಾರೀರಿಕ ಸ್ತರದಲ್ಲಿ ಮತ್ತು ಕೆಲವು ಪ್ರಮಾಣದಲ್ಲಿ ಮಾನಸಿಕ ಸ್ತರದಲ್ಲಿ ಆಗುವ ಲಾಭಗಳನ್ನು ಮಾತ್ರ ತಿಳಿಸುತ್ತವೆ.
Sanatan Sanstha
ಶ್ರೇಯಾಂಕ
ಮತ ನೀಡಿ ಬಲಪಡಿಸಿ ಮತ್ತು ಸಾಮಾಜಿಕ ಜಾಲ ತಾಣದಲ್ಲಿ ಹಂಚಿರಿ.