ಮಂಗಳಸೂತ್ರ ಎಂಬುದು ಒಂದು ಆಭರಣ ಎಂದು ಪರಿಗಣಿಸಿದರೆ ಅದು ತಪ್ಪಾಗುತ್ತದೆ. ಮಂಗಳಸೂತ್ರವನ್ನು ತೊಡುವುದರಿಂದ ಆಕೆಯ ಸೌಂದರ್ಯ ಹೆಚ್ಚುವುದಲ್ಲದೇ ಆಕೆಗೆ ಅದು ಸೌಭಾಗ್ಯದ ಸಂಕೇತ ಕೂಡ.
ಶ್ರೀಆದಿಶಂಕರರು ತಮ್ಮ ಸೌಂದರ್ಯಲಹರಿಯಲ್ಲಿ ಅದರ ಪ್ರಾಮುಖ್ಯತೆಗೆ ಒತ್ತುಕೊಟ್ಟಿದ್ದಾರೆ.
ಹಿಂದೂ ಸಂಸ್ಕೃತಿಯಲ್ಲಿ ಮಂಗಳಸೂತ್ರಕ್ಕೆ ಬಹಳ ಪ್ರಾಮುಖ್ಯತೆ ಇದೆ.
ಅದನ್ನು ತೊಡುವುದು ಗಂಡ-ಹೆಂಡತಿಯ ಸಂಬಂಧವನ್ನು ವೈಭವೀಕರಿಸಲಾಗಿದೆ. ಅದು ಗಂಡನ ಆಯಸ್ಸು ಹೆಚ್ಚಲಿ ಎಂಬ ಆಶಯದ ಸಂಕೇತ. ಮದುವೆಯಲ್ಲಿ ವರ ಅದನ್ನು ಕನ್ಯೆಯ ಕೊರಳಿಗೆ ಕಟ್ಟುತ್ತಾನೆ. ಹಾಗೆ ಕಟ್ಟುವಾಗ ಹೀಗೆಂದು ಪ್ರಮಾಣ ಮಾಡುತ್ತಾನೆ “ನಾನು ಈ ಮಗಳಸೂತ್ರವನ್ನು ಕಟ್ಟುತ್ತಿರುವುದರ ಮೂಲ ಉದ್ಧೇಶ ನೀನು ಧೀರ್ಘಕಾಲ ಸುಮಂಗಲಿಯಾಗಿ ಬಾಳು.”
ಮದುವೆಯಾದ ಮಹಿಳೆಯರು ಮಂಗಳಸೂತ್ರವನ್ನು ತಮ್ಮ ಜೀವನಪೂರ್ತಿ ತೊಡುತ್ತಾರೆ.
[sociallocker]ಹೀಗೆ ತೊಡುವುದರ ಹಿಂದಿನ ಉದ್ಧೇಶ ತಮ್ಮ ಪತಿ ಮತ್ತು ಕುಟುಂಬದ ಸದಸ್ಯರು ಚೆನ್ನಾಗಿ ಬಾಳಲಿ ಮತ್ತು ದುಷ್ಟ ಜನರ ಕೆಟ್ಟ ದೃಷ್ಟಿ ಅವರ ಮೇಲೆ ಬೀಳದಿರಲಿ ಎಂದು.ಮಂಗಳಸೂತ್ರದಲ್ಲಿ ಮೂರು ಗಂಟುಗಳಿರುತ್ತವೆ. ಆ ಮೂರು ಗಂಟುಗಳು ಹೆಣ್ಣಿನ ಮೂರು ಸ್ಥಿತಿಗಳನ್ನು ಸೂಚಿಸುತ್ತವೆ. ಅವುಗಳ ಅರ್ಥ ಹೀಗಿದೆ.—-
೧) ಮೊದಲ ಗಂಟು ಅವಳು ತನ್ನ ಗಂಡನಿಗೆ ವಿಧೇಯಳಾಗಿರುವುದರ ಸಂಕೇತ,
೨) ಎರಡನೆಯ ಗಂಟು ಕುಟುಂಬದ ಸದಸ್ಯರಿಗೆ ಸೇರಿದವಳಾಗಿರುವುದರ ಸಂಕೇತ,ಇನ್ನು
೩) ಮೂರನೆಯ ಗಂಟು ತಾನು ದೇವರಿಗೆ ಅರ್ಪಿತಳು ಎಂಬುದರ ಸಂಕೇತ.
ಅರಿಷಿನಕುಂಕುಮ ಹಚ್ಚಿಕೊಳ್ಳುವಾಗ ಮೊದಲು ಅದಕ್ಕೆ ಹಚ್ಚಿ ನಂತರ ಹಣೆಗೆ ಇಟ್ಟುಕೊಳ್ಳುವುದರಿಂದ ಮಹಿಳೆ ಅದರ ಪಾವಿತ್ರತೆಯನ್ನು ಹೆಚ್ಚು ಎಂದು ತೋರಿಸುವುದಲ್ಲದೇ ತಾನೂ ಮುತ್ತೈದೆಯಾಗಿ ಸಮಾಜದಲ್ಲಿ ಗೌರವಾನ್ವಿತಳು ಎಂಬುದನ್ನು ಸೂಚಿಸುತ್ತದೆ.
ಕೆಲವ ಮಹಿಳೆಯರು ರಾತ್ರಿ ಮಲಗುವಾಗ ಚಿನ್ನದ ಮಂಗಳಸೂತ್ರವನ್ನು ಗೂಟಕ್ಕೆ ಹಾಕಿ ಮಲಗುವುದುಂಟು. ಅದು ಧಾರ್ಮಿಕವಾಗಿ ತಪ್ಪು.
ಆದರೆಅವರ ಸಮಜಾಯಿಷಿ ಏನೆಂದರೆ ಮಲಗಿದಾಗ ಹೊರಳಾಡುವುದರಿಂದ ಚಿನ್ನದ ಸೂತ್ರ ಕೆಡಬಹುದು ಎಂಬುದಾಗಿದೆ.
ಇದು ತಪ್ಪಾದರೂ ಅವರವರ ವಿವೇಚನೆಗೆ ಬಿಟ್ಟಿದ್ದು !![/sociallocker]
ಶ್ರೇಯಾಂಕ
ಮತ ನೀಡಿ ಬಲಪಡಿಸಿ ಮತ್ತು ಸಾಮಾಜಿಕ ಜಾಲ ತಾಣದಲ್ಲಿ ಹಂಚಿರಿ.