Bhagya Murthy

ಭಾಗ್ಯಮೂರ್ತಿ

ಭಾಗ್ಯಮೂರ್ತಿ (೧೩.೦೪.೧೯೫೧): ಗಾನಕೋಗಿಲೆ ಎನಿಸಿರುವ ಭಾಗ್ಯಮೂರ್ತಿಯವರು ಹುಟ್ಟಿದ್ದು ಬೆಂಗಳೂರು. ತಂದೆ ಸುಬ್ರಹ್ಮಣ್ಯಶಾಸ್ತ್ರಿ, ತಾಯಿ ರಂಗನಾಯಕಮ್ಮ. ಬಿ.ಎಂ.ಎಸ್. ಮಹಿಳಾ ಕಾಲೇಜಿನಿಂದ ಪಡೆದ ಬಿ.ಎ. ಪದವಿ, ಸಾಂಪ್ರದಾಯಿಕ ಸಂಗೀತ ಪರಂಪರೆಯ ಮನೆತನ. ಚಿಕ್ಕಂದಿನಿಂದಲೂ ಸಂಗೀತದಲ್ಲಿ ಬೆಳೆದ ಆಸಕ್ತಿ. ಎಂ. ಪ್ರಭಾಕರ್‌ ರವರಲ್ಲಿ ಕರ್ನಾಟಕ ಹಾಗೂ ಸುಗಮ ಸಂಗೀತದಲ್ಲಿ ಪಡೆದ ಶಿಕ್ಷಣ.

ನೃತ್ಯ ರಂಗ ಪ್ರವೇಶಗಳ ಹಲವಾರು ಕಾರ್ಯಕ್ರಮಗಳಲ್ಲಿ, ದೇವಾಲಯ ಉತ್ಸವಗಳಲ್ಲಿ ಪ್ರಧಾನ ಗಾಯಕಿಯಾಗಿ ನಡೆಸಿಕೊಟ್ಟ ಕಾರ್ಯಕ್ರಮಗಳು. ಅಂತಾರಾಷ್ಟ್ರೀಯ ಖ್ಯಾತಿಯ ನೃತ್ಯಗಾರ್ತಿಯರಾದ ಪದ್ಮಾ ಸುಬ್ರಹ್ಮಣ್ಯಂ, ಕೃಷ್ಣವೇಣಿ, ಶಾಂತಾ ಧನಂಜಯ ಮುಂತಾದವರ ನೃತ್ಯ ಕಾರ್ಯಕ್ರಮಗಳಿಗೆ ನೀಡಿದ ನೃತ್ಯ ಸಂಗೀತ. ಜಾನಪದ ನೃತ್ಯ, ಅವಿರತ ನೃತ್ಯ, ನೃತ್ಯ ರೂಪಕಗಳಿಗೆ ಒದಗಿಸಿದ ಸಂಗೀತ.

ಕಾರೈಕುಡಿ ಕೃಷ್ಣಮೂರ್ತಿಯವರಿಂದ ಗುರುತಿಸಲ್ಪಟ್ಟು ಸಿಂಗಾಪುರದ ದೂರದರ್ಶನ ಮತ್ತು ಆಕಾಶವಾಣಿಯ ಕೇಂದ್ರಗಳ ಮೂಲಕ ದೊರೆತ ಅವಕಾಶ, ನೀಡಿದ ಹಲವಾರು ಕಾರ್ಯಕ್ರಮಗಳು. ಮೆಲ್ಬೊರನ್‌ನ ಯುವ ಜನೋತ್ಸವ ಕಾರ್ಯಕ್ರಮ, ಸಿಂಗಾಪುರದ ವಿಕ್ಟೋರಿಯಾ ಥಿಯೇಟರ್ಸ್‌ನಲ್ಲಿ ನಡೆದ ಸಾಂಸ್ಕೃತಿಕ ಉತ್ಸವ, ಸಿಂಗಾಪುರದ ಕ್ರೀಡಾ ಒಳಾಂಗಣದಲ್ಲಿ ನಡೆದ ಜಪಾನಿನ ಭ್ರಾತೃತ್ವ ಕಾರ್ಯಕ್ರಮ, ಕಾಂಬೋಡಿಯದ ರಾಮಾಯಣ ಸಾಂಸ್ಕೃತಿಕ ಉತ್ಸವ, ಸಿಂಗಾಪುರದ ಎಸ್.ಎಲ್.ಎಫ್. ಭವನದಲ್ಲಿ ನಡೆದ ಕಾರ್ಯಕ್ರಮದ ಸಂಗೀತ ನಿರ್ದೇಶಕಿಯಾಗಿ, ಹೀಗೆ ಹಲವಾರು ಅಂತಾರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಭಾಗಿ.
ಮಲಯನ್, ಚೀನಿ, ತಮಿಳು, ಜಪಾನ್ ಭಾಷೆಗಳಲ್ಲೂ ನಡೆಸಿಕೊಟ್ಟ ಗಾಯನ ಕಾರ್ಯಕ್ರಮಗಳು. ಖ್ಯಾತ ವಯೊಲಿನ್ ವಾದಕ ಎಲ್. ವೈದ್ಯನಾಥನ್ ರೊಡನೆ ಹೊರತಂದ ಧ್ವನಿಸುರಳಿಗಳು ಹಾಗೂ ಸಿಡಿಗಳು. ತಮಿಳಿನಲ್ಲೂ ಹೊರತಂದ ಭಕ್ತಿಗೀತೆಗಳ ಧ್ವನಿಸುರುಳಿ.

ಸಂದ ಪ್ರಶಸ್ತಿ ಗೌರವಗಳು ಹಲವಾರು. ಸಿಂಗೈಗಾಮ ಪ್ರಶಸ್ತಿ, ನೃತ್ಯಾಲಯ ಈಸ್ತೆಟಿಕ್ ಸೊಸೈಟಿಯಿಂದ ಗೀತಕಲಾ ನಿಪುಣೆ, ಕಲಾಮಂದಿರದಿಂದ ಗಾನಕೋಗಿಲೆ ಪ್ರಶಸ್ತಿ, ಆರ್ಯಭಟ ಸಾಂಸ್ಕೃತಿಕ ಸಂಸ್ಥೆಯಿಂದ ಉತ್ತಮ ಗಾಯಕಿ ಪ್ರಶಸ್ತಿ ಮುಂತಾದುವು. ಸದ್ಯ ಸಿಂಗಾಪುರದಲ್ಲಿ ಪತಿಯೊಡನೆ ನೆಲೆಸಿ ’ಕಲಾವರ್ಧಿನಿ ಆರ್ಟ್ ಸೆಂಟರ್‌’ ಸಂಸ್ಥೆಯ ಮೂಲಕ ಯುವ ಪೀಳಿಗೆಗೆ ನೀಡುತ್ತಿರುವ ಕರ್ನಾಟಕ ಸಂಗೀತ, ಸುಗಮ ಸಂಗೀತ ಶಿಕ್ಷಣ.
ಲೇಖಕರು: ವೈ.ಎನ್. ಗುಂಡೂರಾವ್‌, ಕಣಜ

ಶ್ರೇಯಾಂಕ

ಕನ್ನಡ ಭೂಮಿಯನ್ನು ಚಿನ್ನದ ಭೂಮಿಯನ್ನಾಗಿ ಮಾಡಿದ ಧೀಮಂತ ವ್ಯಕ್ತಿಗಳಿಗೆ ನಮ್ಮ ನಮನಗಳು.

User Rating: 4.85 ( 1 votes)

ಇವುಗಳೂ ನಿಮಗಿಷ್ಟವಾಗಬಹುದು

A V Prakasha

ಎ.ವಿ. ಪ್ರಕಾಶ್‌

ಎ.ವಿ. ಪ್ರಕಾಶ್‌ (೧೫.೧೦.೧೯೪೫): ಪ್ರಖ್ಯಾತ ಕೊಳಲುವಾದಕರಾದ ಎ.ವಿ. ಪ್ರಕಾಶ್‌ರವರು ಹುಟ್ಟಿದ್ದು ಬೆಂಗಳೂರು. ತಂದೆ ಪ್ರಖ್ಯಾತ ಪಿಟೀಲು ವಿದ್ವಾಂಸರಾದ ಎ.ಕೆ. ವೆಂಕಟನಾರಾಯಣ, …

Leave a Reply

Your email address will not be published. Required fields are marked *