ಬೇಸಿಗೆ ರಜೆಯಿಂದ ಶಾಲೆಯ ಮಡಿಲಿಗೆ

“ಬೇಸಿಗೆ ರಜೆಯಿಂದ ಶಾಲೆಯ ಮಡಿಲಿಗೆ”

ಕಟ್ಟಪ್ಪನ ರಹಸ್ಯವೂ ಬಗೆ ಹರಿಯಿತು?
ಐಪಿಎಲ್ ಪಂದ್ಯಾವಳಿಯೂ ಮುಗಿಯಿತು?
ಇವುಗಳ ನಡುವೆ ಬೇಸಿಗೆ ರಜೆಯೂ ಕಳೆಯಿತು ?

ಆ ಪ್ರವಾಸಗಳೂ , ಬೇಸಿಗೆ ಶಿಬಿರದ ಆ ಸಾಹಸಗಳು ?
ಅಜ್ಜಿಯ ಮನೆಗೆ ಹೋದ ಮೋಜಿನ ದಿನಗಳು ?
ನೆನಪುಗಳೇ ಇನ್ನು ಎಲ್ಲಾ ಬರೀ ನೆನಪುಗಳು ?

ಕಾಡಲಿದೆ ಮರೆತೇ ಹೋದಂತಿದ್ದ ಕ್ರೂರ ಅಲಾರಾಂ ಸದ್ದು⏰
ತಯಾರಾಗಬೇಕಿದೆ ಮುಂಜಾವು ಸೂರ್ಯನ ಜೊತೆಗೆದ್ದು ?
ತಲುಪಬೇಕಿದೆ ಶಾಲೆಯನ್ನು ಮತ್ತೊಮ್ಮೆ ಎದ್ದು ಬಿದ್ದು ??‍♀️

ಅಮ್ಮಂದಿರ ದಿನ ಇನ್ನು ಮತ್ತಷ್ಟು ಉದ್ದಾ ?
ರಾತ್ರಿಯ ನಿದ್ದೆಯಂತೂ ಮಗದಷ್ಟು ಗಿಡ್ದಾ?
ಮಾಡಲೇಬೇಕಿದೆ ಕಾಲನೊಂದಿಗೆ ಮರಳಿ ಮಹಾಯುದ್ಧ ⌛️

ಶಾಲೆಗೇ ಹೊರಡಿ ಮಕ್ಕಳೇ,ಶಾಲೆಗೇ ಹೊರಡಿ ?
ವಿದ್ಯೆ ಕಲಿಯಲು, ಭವ್ಯ ಭವಿಷ್ಯ ಕಟ್ಟಿಕೊಳ್ಳಲು ?
ರಜೆ ಸುಂದರ, ಆದರದಕ್ಕಿಂತಾ ಶಿಕ್ಷಣ ಅದ್ಭುತ ?

ಶುಭವಾಗಲಿ? ನಿಮ್ಮ ಕಲಿಕೆ ಅರಿವಿನದ್ದಾಗಿರಲೀ ?

ಕೆ?ಬಿ?ಬಿ ?
(ಕಾಮನ ಬಿಲ್ಲಿನ ಬತ್ತಳಿಕೆಯಿಂದಾ)
೨೧೦೫೨೦೧೭

ಇವುಗಳೂ ನಿಮಗಿಷ್ಟವಾಗಬಹುದು

ಹಿರಿಯ ನಟ, ನಿರ್ದೇಶಕ ಕಾಶಿನಾಥ್ ಇನ್ನಿಲ್ಲ

ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ನಟ ಹಾಗೂ ನಿರ್ದೇಶಕ ಕಾಶಿನಾಥ್ ಅವರು ಗುರುವಾರ ವಿಧಿವಶರಾಗಿದ್ದಾರೆ. ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ …

Leave a Reply

Your email address will not be published. Required fields are marked *