ಬೆಂಗಳೂರು ನಗರ ಪೊಲೀಸರು ಡಿಜಿಟಲ್ ಆಗುತ್ತಿದ್ದು, ಸಾಮಾಜಿಕ ಜಾಲತಾಣಗಳನ್ನು ಬಳಕೆ ಮಾಡಿಕೊಂಡು ಜನ ಸಾಮಾನ್ಯರನ್ನು ತಲುಪುವ ಕಾರ್ಯವನ್ನು ಮಾಡುತ್ತಿದ್ದಾರೆ. ಇದೇ ಮಾದರಿಯಲ್ಲಿ ರಾಜಧಾನಿಯ ಮಹಿಳೆಯರ ಸುರಕ್ಷತೆಗಾಗಿ ಸುರಕ್ಷ ಆಪ್ ಸೇವೆಯನ್ನು ಆರಂಭಿಸಿದ್ದಾರೆ. ಈ ಮೂಲಕ ಸ್ಮಾರ್ಟ್ ಪೊಲೀಸ್ ಸೇವೆಯನ್ನು ನೀಡಲು ಮುಂದಾಗಿದ್ದಾರೆ.
ದಿಂನದಿಂದ ದಿನಕ್ಕೆ ಮಹಿಳೆಯರ ಹಾಗೂ ಮಕ್ಕಳ ಮೇಲೆನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿದ್ದ ಇದನ್ನು ತಡೆಯಲು ಅತ್ಯಾಧುನಿಕ ತಂತ್ರಜ್ಞಾನದ ಜತೆಗೆ ಪೊಲೀಸರು ರಕ್ಷಣೆ ಒದಗಿಸಲು ಮುಂದಾಗಿದ್ದಾರೆ. ಸರಗಳ್ಳತನ, ದರೋಡೆ, ದೌರ್ಜನ್ಯ ಕ್ಕೆ ಗುರಿಯಾದ ಮಹಿಳೆಯರು ಸಹಾಯಕ್ಕೆ ಸುರಕ್ಷ ಆಪ್ ಬಿಡುಗಡೆಯಾಗಿದ್ದು, ಮಹಿಳೆಯರ ರಕ್ಷಣೆಗೆ ಇದು ಸಹಾಯಕಾರಿಯಾಗಿದೆ.
ಸುರಕ್ಷ ಆಪ್..!
ಮಹಿಳೆಯರ ರಕ್ಷಣೆಗೆ ಬಿಡುಗಡೆಯಾಗಿರುವ ಈ ಆಪ್ ಅನ್ನು ಪ್ಲೇ ಸ್ಟೋರ್ ಮೂಲಕ ಸ್ಮಾರ್ಟ್ಫೋನ್ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬೇಕಾಗಿದೆ. ಇದಾದ ನಂತರ ಹೆಸರು, ವಿಳಾಸ ನಮೂದಿಸಿ. ತುರ್ತು ಸಮಯದಲ್ಲಿ ಸಂರ್ಪಸಬೇಕಾದ ಸ್ನೇಹಿತ/ಸಂಬಂಧಿಕರ (ಇಬ್ಬರು) ಮೊಬೈಲ್ ಸಂಖ್ಯೆ ದಾಖಲಿಸಬೇಕಾಗಿದ್ದು, ಇದಾದ ನಂತರದಲ್ಲಿ ಬರುವ OTP ಪಡೆದು ದೃಢೀಕರಿಸಿಕೊಳ್ಳಬೇಕಾಗಿದೆ.
ಕಾರ್ಯನಿರ್ವಹಣೆಗೆ ಹೇಗೆ..?
ಮಹಿಳೆಯರು ಸಂಕಷ್ಟದಲ್ಲಿ ಸಿಲುಕಿದ ಸಂದರ್ಭದಲ್ಲಿ ಆಪ್ನಲ್ಲಿ ನೀಡಿರುವ ಕೆಂಪು ಬಟನ್ ಒತ್ತಿದ್ದಾಗ ಅಥವಾ ಮೊಬೈಲ್ ಪವರ್ ಬಟನ್ನನ್ನು 5 ಬಾರಿ ಒತ್ತಿದರೆ ಪೊಲೀಸರಿಗೆ ಹಾಗೂ ಆಪ್ನಲ್ಲಿ ದಾಖಲಿಸಿರುವ ಇಬ್ಬರು ವ್ಯಕ್ತಿಗಳ ಮೊಬೈಲ್ಗೆ ಎಚ್ಚರಿಕೆ ಸಂದೇಶ ರವಾನೆಯಾಗಲಿದೆ ಎನ್ನಲಾಗಿದೆ.
ಲೈವ್ ವೆಹಿಕಲ್ ಟ್ರ್ಯಾಕಿಂಗ್..!
ದೂರನ್ನು ಸ್ವೀಕರಿಸುವ ಕಮಾಂಡ್ ಸೆಂಟರ್ ಸಿಬ್ಬಂದಿ ಸ್ವೀಕರಿಸಿ ತುರ್ತು ಸ್ಥಿತಿಯಲ್ಲಿರುವ ಮಹಿಳೆ/ಮಕ್ಕಳ ಸ್ಥಳವನ್ನು ‘ಲೈವ್ ವೆಹಿಕಲ್ ಟ್ರ್ಯಾಕಿಂಗ್ ಸಿಸ್ಟಂ’ ಮೂಲಕ ಗುರುತಿಸಿ ತಕ್ಷಣ ಎಚ್ಚರಿಕೆ ಸಂದೇಶಗಳನ್ನು ನೋಂದಾಯಿತ ಸ್ನೇಹಿತ/ಸಂಬಂಧಿಕರ ಮೊಬೈಲ್ಗೆ ಕಳುಹಿಸುತ್ತಾರೆ.
ರಕ್ಷಣೆಗೆ ಪಿಂಕ್ ಹೊಯ್ಸಳ:
ದೂರು ಸ್ವೀಕರಿಸಿದ ನಂತರದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಮಹಿಳೆಯರ ಸಮೀಪದಲ್ಲಿರುವ ಪಿಂಕ್ ಹೊಯ್ಸಳ ಸಿಬ್ಬಂದಿಗೆ ಮಾಹಿತಿ ರವಾನೆಯಾಗುತ್ತದೆ. ಕೂಡಲೇ ಪಿಂಕ್ ಹೊಯ್ಸಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಸಂಕಷ್ಟದಲ್ಲಿ ಸಿಲುಕಿದವರನ್ನು ರಕ್ಷಣೆ ಮಾಡಲಿದ್ದಾರೆ ಎನ್ನಲಾಗಿದೆ.