Bangle

ಬಳೆಗಳು (ಕಂಕಣಗಳು)

ಬಳೆಗಳು: ಬಳೆಗಳನ್ನು ಕುಮಾರಿಯರ ಹಾಗೂ ಮುತ್ತೈದೆಸ್ತ್ರೀಯರ ಮಹತ್ವದ ಅಲಂಕಾರಗಳೆಂದು ತಿಳಿದುಕೊಳ್ಳಲಾಗುತ್ತದೆ. ವಿಧವಾಸ್ತ್ರೀಯರು ಬಳೆಗಳನ್ನು ಧರಿಸುವುದು ನಿಷಿದ್ಧವಾಗಿದೆ. ವಿವಿಧ ಲೋಹ, ಗಾಜು, ಶಂಖ, ಆರಗು ಮತ್ತು ಆನೆಯ ದಂತಗಳಿಂದ ಬಳೆಗಳನ್ನು ತಯಾರಿಸುವುದು ನಮ್ಮ ಪ್ರಾಚೀನ ಪದ್ಧತಿಯಾಗಿದೆ. ಪಂಜಾಬಿನಲ್ಲಿ ಆನೆದಂತದ ಮತ್ತು ಬಂಗಾಲದಲ್ಲಿ ಶಂಖದಿಂದ ತಯಾರಿಸಿದ ಬಳೆಗಳಿಗೆ ವಿಶೇಷ ಮಹತ್ವವಿದೆ.

ಅ. ಮಹತ್ವ

೧. ‘ಹಸಿರು ಬಳೆಗಳನ್ನು ಧರಿಸುವುದು ಮುತ್ತೈದೆಯರ ಪಾತಿವ್ರತ್ಯದ ಪ್ರಕಟ ಶಕ್ತಿರೂಪದ ಅಲಂಕಾರಸಹಿತ ಪೂಜೆಯನ್ನು ಮಾಡುವುದರ ಪ್ರತೀಕವಾಗಿದೆ’. – ಓರ್ವ ವಿದ್ವಾಂಸ (ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ, ೬.೮.೨೦೦೬, ಸಾಯಂ. ೬.೪೬)

೨. ಬಳೆಗಳಲ್ಲಿ ಕಾರ್ಯನಿರತ ದೇವಿತತ್ತ್ವದ ಶಕ್ತಿಲಹರಿಗಳು ಮಣಿಕಟ್ಟಿನಲ್ಲಿ ಆಕರ್ಷಿಸಿ, ಸಂಪೂರ್ಣ ಕೈಯಲ್ಲಿ ಪಸರಿಸುವುದರಿಂದ ಕೈಗಳಿಗೆ ಕಾರ್ಯವನ್ನು ಮಾಡಲು ಶಕ್ತಿಯು ಸಿಗುತ್ತದೆ. – ಈಶ್ವರ (ಕು.ಮಧುರಾ ಭೋಸಲೆಯವರ ಮಾಧ್ಯಮದಿಂದ, ೧೨.೧೧.೨೦೦೭, ರಾತ್ರಿ ೮.೧೫)

೩. ಬಳೆಗಳು ಸ್ತ್ರೀಯರನ್ನು ಕೆಟ್ಟ ಶಕ್ತಿಗಳಿಂದ ರಕ್ಷಿಸುತ್ತವೆ ೩ಅ. ಬಳೆಗಳಲ್ಲಿರುವ ಸಾತ್ತ್ವಿಕತೆ, ದೇವಿತತ್ತ್ವ ಮತ್ತು ಚೈತನ್ಯದಿಂದಾಗಿ ಮಣಿಕಟ್ಟು ಮತ್ತು ಬೆರಳುಗಳ ಸುತ್ತಲೂ ರಕ್ಷಣಾಕವಚವು ನಿರ್ಮಾಣವಾಗಿ ಕೆಟ್ಟ ಶಕ್ತಿಗಳ ಆಕ್ರಮಣಗಳಿಂದ ರಕ್ಷಣೆಯಾಗುತ್ತದೆ. – ಈಶ್ವರ (ಕು.ಮಧುರಾ ಭೋಸಲೆಯವರ ಮಾಧ್ಯಮದಿಂದ, ೧೨.೧೧.೨೦೦೭, ರಾತ್ರಿ ೮.೧೫)[sociallocker]

೧. ಗಾಜಿನ ಬಳೆಗಳಿಂದ ನಿರ್ಮಾಣವಾಗುವ ನಾದಲಹರಿಗಳಿಂದಾಗುವ ಲಾಭಗಳು

Bangle
ಬಳೆಗಳು

೧ಅ. ‘ಬಳೆಗಳಿಂದ ನಿರ್ಮಾಣವಾಗುವ ನಾದಲಹರಿಗಳಿಂದ ಪ್ರಕ್ಷೇಪಿತವಾಗುವ ಸೂಕ್ಷ್ಮ-ಶಸ್ತ್ರಾಸ್ತ್ರಗಳ ಮೂಲಕ (ಮಾರಕ ಶಕ್ತಿಯ ಮೂಲಕ) ಇಂದ್ರಿಯಗಳ ರಕ್ಷಣೆಯಾಗಿ ಆಯಾಯ ಇಂದ್ರಿಯಗಳ ಸಾತ್ತ್ವಿಕತೆಯು ಹೆಚ್ಚಾಗುತ್ತದೆ.’

೧ಆ. ಬಳೆಗಳಿಂದ ಸ್ತ್ರೀಯರಲ್ಲಿರುವ ಕ್ರಿಯಾಶಕ್ತಿಯು ಜಾಗೃತವಾಗಿ ಸ್ತ್ರೀಯರ ದೇಹಕೋಶಗಳ ಶುದ್ಧಿಯಾಗುತ್ತದೆ, ಕೆಟ್ಟ ಶಕ್ತಿಗಳಿಂದ ಸ್ತ್ರೀಯರ ರಕ್ಷಣೆಯಾಗುತ್ತದೆ ಮತ್ತು ವಾಸ್ತುಶುದ್ಧಿಯಾಗುತ್ತದೆ.

ಅ. ಬಳೆಗಳ ಚಲನವಲನದಿಂದ ರಜೋಗುಣವು ನಿರ್ಮಾಣವಾಗುತ್ತದೆ. ಈ ರಜೋಗುಣವು ಸ್ತ್ರೀಯರ ದೇಹದಲ್ಲಿನ ಆದಿಶಕ್ತಿಯ ತತ್ತ್ವವನ್ನು ಕಾರ್ಯನಿರತಗೊಳಿಸಲು ಪೂರಕವಾಗಿರುತ್ತದೆ. ಬಳೆಗಳಲ್ಲಿರುವ ಕ್ರಿಯಾಲಹರಿಗಳು ಒಂದಾಗುವುದರಿಂದ ಅವು ಕ್ರಿಯಾಶಕ್ತಿಯ ಲಹರಿಗಳಿಂದ ತುಂಬಿಕೊಳ್ಳುತ್ತವೆ.

ಆ. ಜಾಗೃತವಾದ ಶಕ್ತಿತತ್ತ್ವದಿಂದ ಸ್ತ್ರೀಯರ ಪ್ರಾಣಮಯ ಮತ್ತು ಮನೋಮಯಕೋಶಗಳ ಶುದ್ಧಿಯಾಗಲು ಸಹಾಯವಾಗುತ್ತದೆ.

ಇ. ಕ್ರಿಯಾಶಕ್ತಿಯ ಲಹರಿಗಳು ದೇಹಕ್ಕೆ ಸ್ಪರ್ಶವಾಗುವುದರಿಂದ ಜೀವದ ಸೂರ್ಯನಾಡಿಯು ಕಾರ್ಯನಿರತವಾಗಿ ಶಕ್ತಿಲಹರಿಗಳು ವಾಯುಮಂಡಲದಲ್ಲಿ ಪ್ರಕ್ಷೇಪಿಸುತ್ತವೆ.

ಈ. ಬಳೆಗಳಿಂದ ಪ್ರಕ್ಷೇಪಿತವಾಗುವ ಕ್ರಿಯಾಶಕ್ತಿಯ ಲಹರಿಗಳಿಂದ ಜೀವದ ಸುತ್ತಲೂ ರಜೋಲಹರಿಗಳ ಗತಿಮಾನ ಕವಚವು ನಿರ್ಮಾಣವಾಗುತ್ತದೆ. ಇದರಿಂದಾಗಿ ವಾಯುಮಂಡಲದಲ್ಲಿನ ಕೆಟ್ಟ ಶಕ್ತಿಗಳಿಂದ ಜೀವದ ರಕ್ಷಣೆಯಾಗುತ್ತದೆ.

ಉ.ಆದಿಶಕ್ತಿಯ ಲಹರಿಗಳು ವಾಸ್ತುವಿನಲ್ಲಿ ಹರಡುವುದರಿಂದ ವಾಸ್ತುವಿನಲ್ಲಿರುವ ರಜ-ತಮ ಕಣಗಳ ವಿಘಟನೆಯಾಗಿ ವಾಸ್ತುವಿನ ಶುದ್ಧಿಯಾಗುತ್ತದೆ, ಇದರಿಂದಾಗಿ ಬಳೆಗಳ ಆಘಾತದಾಯಕ ನಾದಕ್ಕೆ ಕೆಟ್ಟ ಶಕ್ತಿಗಳು ಹೆದರುತ್ತವೆ. – ಓರ್ವ ವಿದ್ವಾಂಸರು (ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ, ೧೭.೧೧.೨೦೦೫, ಮಧ್ಯಾಹ್ನ ೧.೫೯)

ನಾದವನ್ನು ನಿರ್ಮಿಸುವ ಬಳೆಗಳಿಂದ ಮೇಲಿನ ಲಾಭಗಳಾಗುತ್ತವೆ. ಆದುದರಿಂದ ನಾದ ಲಹರಿಗಳನ್ನು ನಿರ್ಮಾಣ ಮಾಡದಿರುವ ಪ್ಲಾಸ್ಟಿಕ್ ಬಳೆಗಳನ್ನು

ಉಪಯೋಗಿಸಬಾರದು. (ಆಧಾರ : ಸನಾತನ ಸಂಸ್ಥೆಯು ನಿರ್ಮಿಸಿದ ಗ್ರಂಥ ‘ಸ್ತ್ರೀಯರ ಆಭರಣಗಳ ಹಿಂದಿನ ಶಾಸ್ತ್ರ (ಕೈ-ಕಾಲುಗಳಲ್ಲಿ ಧರಿಸುವ ಆಭರಣಗಳು)’)
dharmagranth[/sociallocker]

ಶ್ರೇಯಾಂಕ

ಮತ ನೀಡಿ ಬಲಪಡಿಸಿ ಮತ್ತು ಸಾಮಾಜಿಕ ಜಾಲ ತಾಣದಲ್ಲಿ ಹಂಚಿರಿ.

User Rating: 4.8 ( 3 votes)

ಇವುಗಳೂ ನಿಮಗಿಷ್ಟವಾಗಬಹುದು

ಶಬರಿ ಕೇಳುತ್ತಾಳೆ

ರಾವಣನನ್ನು ಸಂಹಾರ ಮಾಡುವ ನೆಪದಿಂದಲಾದರೂ ನೀನು ಇಲ್ಲಿಗೆ ಬಂದೆಯಲ್ಲ, ಇಲ್ಲ ಅಂದರೆ ಎಲ್ಲಿ ಬರುತ್ತಿದ್ದೆ ಸ್ವಾಮಿ? ಶ್ರೀರಾಮ ಸ್ವಲ್ಪ ಗಂಭೀರ …

Leave a Reply

Your email address will not be published. Required fields are marked *