AV Navad

ಪ್ರೊ. ಎ.ವಿ. ನಾವಡ

ಪ್ರೊ. ಎ.ವಿ. ನಾವಡ (೨೮-೪-೧೯೪೬):ಭಾಷಾವಿಜ್ಞಾನಿ, ಕೋಶವಿಜ್ಞಾನಿ, ಸಂಶೋಧಕ ಪ್ರೊ. ಎ.ವಿ. ನಾವಡರವರು ಹುಟ್ಟಿದ್ದು ಮಂಗಳೂರು ಸಮೀಪದ ಕೋಟೆಕಾರು. ತಂದೆ ಕವಿ ಅಮ್ಮೆಂಬಳ ಶಂಕರನಾರಾಯಣ ನಾವಡ, ತಾಯಿ ಪಾರ್ವತಿ. ಪ್ರಾರಂಭಿಕ ಶಿಕ್ಷಣ ಆನಂದಾಶ್ರಮದ ಶಾಲೆಯಲ್ಲಿ. ಮಂಗಳೂರಿನ ಸಂತ ಎಲೋಷಿಯಸ್ ಕಾಲೇಜಿನಲ್ಲಿ ಪದವಿ. ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂ.ಎ. ಪದವಿ ೫ನೇ ರ‍್ಯಾಂಕ್ ವಿಜೇತರು.

[sociallocker]ಉದ್ಯೋಗಕ್ಕಾಗಿ ಸೇರಿದ್ದು ಕುಂದಾಪುರದ ಭಂಡಾರ್‌ಕರ್ಸ್‌ ಕಾಲೇಜು, ೧೯೭೦-೯೪ರವರೆಗೆ ಉಪನ್ಯಾಸಕರಾಗಿ, ವಿಭಾಗ ಮುಖ್ಯಸ್ಥರಾಗಿ, ಪ್ರಾಧ್ಯಾಪಕರಾಗಿ ೨೪ ವರ್ಷ ಸೇವೆ. ೧೯೯೪ರಿಂದ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿ ಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ, ಪ್ರಾಧ್ಯಾಪಕರಾಗಿ, ಪ್ರಸಾರಾಂಗದ ನಿರ್ದೇಶಕರಾಗಿ, ಪುರಂದರದಾಸ ಅಧ್ಯಯನ ಪೀಠದ ಅಧ್ಯಕ್ಷರಾಗಿ ಹಲವಾರು ಜವಾಬ್ದಾರಿಗಳು. ಉಡುಪಿಯ ಎಂ.ಜಿ.ಎಂ. ಕಾಲೇಜಿನ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರದಲ್ಲಿ ಸಂಶೋಧಕರಾಗಿ ಹಲವಾರು ಮಹತ್ವದ ಯೋಜನೆಗಳ ರೂವಾರಿ. ಉಡುಪಿಯ ಗೋವಿಂದಪೈ ಸಂಶೋಧನ ಕೇಂದ್ರದ ತುಳು ನಿಘಂಟು ಯೋಜನೆಯ ಮುಖ್ಯ ಸಂಪಾದಕರಾಗಿ ಗಣನೀಯ ಸೇವೆ. ಜಾನಪದ, ವಿಜ್ಞಾನ, ಕೋಶ ವಿಜ್ಞಾನ, ಭಾಷಾ ವಿಜ್ಞಾನ ಆಸಕ್ತಿಯ ಕ್ಷೇತ್ರಗಳು. ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣಗಳಲ್ಲಿ ಪ್ರಬಂಧ ಮಂಡನೆ.

ಹಲವಾರು ಕೃತಿ ರಚನೆ. ಮಕ್ಕಳ ಸಾಹಿತ್ಯ-ರಾಜಹಂಸ, ಮಧುಚಂದ್ರ, ಪೇಟೆಗೆ ಬಂದ ಪುಟ್ಟಿ . ಸಂಶೋಧನ ಪ್ರಬಂಧಗಳು-ವಿವಕ್ಷೆ, ಒಂದು ಸೊಲ್ಲು ನೂರು ಸೊರ, ಜಾನಪದ-ವೈದ್ಯರ ಹಾಡುಗಳು, ಜಾನಪದ ಸಮಾಲೋಚನೆ, ಜಾನಪದ ಕೈಪಿಡಿ, ತುಳು ಜಾನಪದ ಗೀತೆಗಳು. ಸಂಪಾದಿತ-ವಾಙ್ಞಯ ತಪಸ್ವಿ, ನೇತ್ರಾವತಿ, ತುರಾಯಿ, ಬೆಳ್ಳಿ ಮಿನುಗು, ಹರಿದಾಸರ ಕೀರ್ತನೆಗಳಲ್ಲಿ-ಸಾವಿರ ಕೀರ್ತನೆಗಳು, ಸಾವಿರಾರು ಕೀರ್ತನೆಗಳು, ಶ್ರೀ ವಾದಿರಾಜರ ಶ್ರೀಕೃಷ್ಣ ಬಾಲಲೀಲೆ, ದಾಸರು ಕಂಡ ಪಾಂಡುರಂಗ ವಿಠಲ, ಈಸಬೇಕು ಇದ್ದು ಜೈಸಬೇಕು ಮುಂತಾದವು.

ಸಂದ ಪ್ರಶಸ್ತಿ ಗೌರವಗಳು: ‘ವಿವಕ್ಷೆ’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ ‘ಕಾಡ್ಯನಾಟ ಪಠ್ಯ ಮತ್ತು ಪ್ರದರ್ಶನ’ ಕೃತಿಗೆ ಆರ್ಯಭಟ ಪ್ರಶಸ್ತಿ. ಗುಂಡ್ಮಿ ಜಾನಪದ ಪ್ರಶಸ್ತಿ, ಫಿನ್‌ಲ್ಯಾಂಡಿನ ಅಂತಾರಾಷ್ಟ್ರೀಯ ಜಾನಪದ ಸಂಘದ ಗೌರವ ಸದಸ್ಯತ್ವ. ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡಮಿಯ ಜಾನಪದ ತಜ್ಞ ಪ್ರಶಸ್ತಿ, ಕು.ಶಿ. ಹರಿದಾಸಭಟ್ಟರ ಜಾನಪದ ಪ್ರಶಸ್ತಿ, ಪರಶುರಾಮ ಪ್ರಶಸ್ತಿ, ಸಾಹಿತ್ಯ ದಂಪತಿ ಪುರಸ್ಕಾರ, ತುಳು ಸಾಹಿತ್ಯ ಅಕಾಡಮಿ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ, ಗುಲಬರ್ಗಾ ವಿಶ್ವವಿದ್ಯಾಲಯದ ಪುಸ್ತಕ ಬಹುಮಾನ ಮುಂತಾದುವುಗಳು.
ಲೇಖಕರು: ವೈ.ಎನ್. ಗುಂಡೂರಾವ್‌, ಕಣಜ
[/sociallocker]

ಶ್ರೇಯಾಂಕ

ಕನ್ನಡ ಭೂಮಿಯನ್ನು ಚಿನ್ನದ ಭೂಮಿಯನ್ನಾಗಿ ಮಾಡಿದ ಧೀಮಂತ ವ್ಯಕ್ತಿಗಳಿಗೆ ನಮ್ಮ ನಮನಗಳು.

User Rating: 4.85 ( 1 votes)

ಇವುಗಳೂ ನಿಮಗಿಷ್ಟವಾಗಬಹುದು

Indira Halambi

ಇಂದಿರಾ ಹಾಲಂಬಿ (ಗಿರಿವಾಸಿನಿ)

ಇಂದಿರಾ ಹಾಲಂಬಿ (ಗಿರಿವಾಸಿನಿ) (೧೫.೧೦.೧೯೩೪): ಮಕ್ಕಳ ಸರ್ವತೋಮುಖವಾದ ಬೆಳವಣಿಗೆಗೆ ಪೂರಕವಾದ ಹಲವಾರು ಪ್ರಕಾರಗಳಲ್ಲಿ ಕೃತಿ ರಚಿಸಿರುವರಲ್ಲದೆ ಪ್ರಕಾಶಕಿಯಾಗಿಯೂ ಕನ್ನಡ ಸಾಹಿತ್ಯದ …

Leave a Reply

Your email address will not be published. Required fields are marked *