ಪ್ರೊ. ಎನ್.ಎ. ನಿಕ್ಕಂ (೫-೫-೧೯೦೩ – ೧೯೭೪): ದಾರ್ಶನಿಕ, ತತ್ತ್ವಶಾಸ್ತ್ರ ಪ್ರಾಧ್ಯಾಪಕ, ಚಿಂತಕ ನಾರಾಯಣರಾವ್ ಅಪ್ಪೂರಾವ್ ನಿಕ್ಕಂರವರು ಹುಟ್ಟಿದ್ದು ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಕೆಸ್ತೂರು ಗ್ರಾಮದಲ್ಲಿ. ಪ್ರಾಥಮಿಕ ಶಿಕ್ಷಣ ಕೆಸ್ತೂರು, ಮದ್ದೂರು. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿ.ಎ. ಪದವಿ. ೧೯೨೯ರ ತತ್ತ್ವಶಾಸ್ತ್ರದಲ್ಲಿ ಎಂ.ಎ. ಪದವಿ. ಬಾಬಾ ಸ್ಮಾರಕ ಸುವರ್ಣಪದಕ ವಿಜೇತರು. ದಾಮೋದರದಾಸ್ ವಿದ್ಯಾರ್ಥಿವೇತನದಿಂದ ಇಂಗ್ಲೆಂಡಿನಲ್ಲಿ ತತ್ತ್ವಶಾಸ್ತ್ರದಲ್ಲಿ ಉಚ್ಚಶಿಕ್ಷಣ.
[sociallocker]೧೯೪೪ರಲ್ಲಿ ಬೆಂಗಳೂರಿನ ಮಹಾರಾಣಿ ಕಾಲೇಜಿನಲ್ಲಿ ತತ್ತ್ವಶಾಸ್ತ್ರದ ಸಹಾಯಕ ಪ್ರಾಧ್ಯಾಪಕರಾಗಿ ನೇಮಕ. ಫುಲ್‌ಬ್ರೈಟ್ ಮತ್ತು ಫೋರ‍್ಡ್ ಫೌಂಡೇಶನ್ ವಿದ್ಯಾರ್ಥಿವೇತನದಿಂದ ಅಮೆರಿಕದ ಯೇಲ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ. ಸೆಲಿಮನ್ ಕಾಲೇಜಿನ ಪಂಡಿತ ಸಭೆಯ ಸದಸ್ಯತ್ವ. ಮೈಸೂರಿನ ಮಹಾರಾಣಿ ಕಾಲೇಜಿಗೆ ಬಂದು ತತ್ತ್ವಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರ ಹುದ್ದೆ. ಭಾರತೀಯ ತತ್ತ್ವಶಾಸ್ತ್ರ ಮತ್ತು ದರ್ಶನಗಳ ಬಗ್ಗೆ ಸೆಳೆದ ವಿದೇಶಿಯರ ಗಮನ. ಭಾರತೀಯ ದಾರ್ಶನಿಕ ಪರಿಷತ್ತಿನ ಕಾರ‍್ಯದರ್ಶಿ ಹುದ್ದೆ (೧೯೪೯-೬೧). ಯುನೆಸ್ಕೊ ಸಂಸ್ಥೆಯ ಯೋಜನೆಯಲ್ಲಿ ದೆಹಲಿಯಲ್ಲಿ ಏರ‍್ಪಡಿಸಿದ ಚಕ್ರಗೋಷ್ಠಿ ಅಧ್ಯಕ್ಷತೆ. ಅಂತಾರಾಷ್ಟ್ರೀಯ ದಾರ್ಶನಿಕ ಸಂಸ್ಥೆಯ ಚುನಾಯಿತ ಸದಸ್ಯರು. ಅಥೆನ್ಸ್, ವಾರ್ಸಾ, ಪ್ಯಾರಿಸ್, ಜೆರೂಸಲೆಂ, ಸಾಂತಾಬಾರ‍್ಬರಾ, ಆಮ್ಸ್ಟ್‌ರ್‌ಡ್ಯಾಂ, ಹೈಡಲ್‌ಬರ್ಗ್, ಆಕ್ಸ್‌ಫರ್ಡ್, ಕೇಂಬ್ರಿಡ್ಸ್ ಸಮ್ಮೇಳನಗಳಲ್ಲಿ ಪ್ರತಿನಿಯಾಗಿ ಭಾಗಿ. ೧೯೫೮ರಲ್ಲಿ ವೆನಿಸ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ದಾರ್ಶನಿಕ ಪರಿಷತ್ತಿನ ಸಮ್ಮೇಳನದ ಅಧ್ಯಕ್ಷತೆ. ಯುನೆಸ್ಕೊ-ಅಂತಾರಾಷ್ಟ್ರೀಯ ಒಕ್ಕೂಟದ ಸಮಿತಿಯಲ್ಲಿ ಎರಡು ಬಾರಿ ಸದಸ್ಯರಾಗಿ ಚುನಾಯಿತರು. ಮೈಸೂರು ವಿಶ್ವವಿದ್ಯಾಲಯದ ಕುಲಪತಿಯಾಗಿ ನೇಮಕ ೧೯೬೦ರಲ್ಲಿ.ಹಲವಾರು ಗ್ರಂಥಗಳ ರಚನೆ. ಭಾರತೀಯ ಸಂಸ್ಕೃತಿಯ ಕೆಲವು ಕಲ್ಪನೆಗಳು. ಶುದ್ಧ ಪ್ರಜ್ಞೆಯ ಬಗ್ಗೆ ಕಾಂಟನ ವಿಮರ್ಶೆಗೆ ಒಂದು ಪ್ರಸ್ತಾವನೆ. ಬುದ್ಧಿ ಅರಿವು ಮತ್ತು ಸಹಜ ಪ್ರಜ್ಞೆ, ಉಪನಿಷತ್ತಿನ ಬೋಧಕರು, ರಮಣಮಹರ್ಷಿ, ಅಧ್ಯಾತ್ಮಯೋಗದ ಅಧ್ಯಯನ, ಹತ್ತು ಪ್ರಧಾನ ಉಪನಿಷತ್ತುಗಳು, ಗಾಂಯವರ ಧರ್ಮ ಸಾಕ್ಷಾತ್ಕಾರ ಇವು ನಿಕ್ಕಂರವರ ಪ್ರಮುಖ ಗ್ರಂಥಗಳು. “ಶಾಂತಿ ಸಾಧನೆಗೆ ಮಾನವ ಕುಲದ ಮೇಲೆ ಪ್ರಭಾವ ಬೀರಿದ ಗ್ರಂಥಗಳು” ಎಂಬ ಮಾಲಿಕೆಯಲ್ಲಿ ಪ್ರಕಟಿಸಿದ ‘ಅಶೋಕನ ಧರ್ಮಶಾಸನಗಳು’ (ಶಿಕಾಗೋ ವಿಶ್ವವಿದ್ಯಾಲಯ-೧೯೫೯) ಎಂಬ ಗ್ರಂಥದ ಸಂಪಾದಕರಾಗಿದ್ದ ನಿಕ್ಕಂರವರು ತೀರಿಕೊಂಡದ್ದು ೧೯೭೪ರಲ್ಲಿ.
ಲೇಖಕರು: ವೈ.ಎನ್. ಗುಂಡೂರಾವ್, ಕಣಜ[/sociallocker]
ಶ್ರೇಯಾಂಕ
ಕನ್ನಡ ಭೂಮಿಯನ್ನು ಚಿನ್ನದ ಭೂಮಿಯನ್ನಾಗಿ ಮಾಡಿದ ಧೀಮಂತ ವ್ಯಕ್ತಿಗಳಿಗೆ ನಮ್ಮ ನಮನಗಳು.