ಪುರಾಣದಲ್ಲಿ ಬಚ್ಚಿಟ್ಟ ಸತ್ಯ-ಶಿವನಿಗೆ ಏಳು ಗಂಡುಮಕ್ಕಳಿದ್ದರಂತೆ!

ಶಿವನ ಮಕ್ಕಳಾದ ಗಣೇಶ ಮತ್ತು ಕಾರ್ತಿಕೇಯರ ಬಗ್ಗೆ ಎಲ್ಲರಿಗೂ ಗೊತ್ತು. ಆದರೆ ಶಿವನಿಗೆ ಇವರಿಬ್ಬರೇ ಗಂಡು ಮಕ್ಕಳಾಗಿರಲಿಲ್ಲ, ಬದಲಿಗೆ ಒಟ್ಟು ಏಳು ಗಂಡು ಮಕ್ಕಳಿದ್ದರು. ಆದರೆ ಉಳಿದ ಐವರು ಯಾವಾಗ ಜನಿಸಿದರು? ಇದರ ಬಗ್ಗೆ ಏಕೆ ಹೆಚ್ಚಿನವರಿಗೆ ಯಾವುದೇ ಮಾಹಿತಿ ಇಲ್ಲ? ಪುರಾಣಗಳಲ್ಲಿಯೂ ಇದನ್ನು ಏಕೆ ಪ್ರಸ್ತಾಪಿಸಲಾಗಿಲ್ಲ? ಈ ಎಲ್ಲಾ ಕುತೂಹಲದ ಪ್ರಶ್ನೆಗಳಿಗೆ ಕೆಳಗಿನ ಸ್ಲೈಡ್ ಶೋ ತಕ್ಕ ಉತ್ತರ ನೀಡುತ್ತದೆ, ಮುಂದೆ ಓದಿ..

ಅಯ್ಯಪ್ಪ: ಪುರಾಣಗಳಲ್ಲಿ ತಿಳಿಸಿರುವಂತೆ ಅತ್ಯಂತ ಬಲಶಾಲಿಯಾದ ದೇವರುಗಳಲ್ಲಿ ಅಯ್ಯಪ್ಪ ಒಬ್ಬನಾಗಿದ್ದಾನೆ. ಏಕೆಂದರೆ ಮೋಹಿನಿಯ ರೂಪದಲ್ಲಿ ಬಂದ ವಿಷ್ಣು ಮತ್ತು ಶಿವನ ಸಂಗಮದಿಂದ ಜನನ ತಳೆದ ಅಯ್ಯಪ್ಪನಿಗೆ ನಂತರ ಅಯ್ಯಪ್ಪನೆಂಬ ಹೆಸರು ಬಂದಿದೆ. ಕೇರಳದಲ್ಲಿ ಅಯ್ಯಪ್ಪನ್ ಎಂದೂ ತಮಿಳುನಾಡಿನಲ್ಲಿ ಅಯ್ಯನ್ನಾರ್ ಎಂದೂ ಕರೆಯುತ್ತಾರೆ.

ಕೇರಳ ಮತ್ತು ತಮಿಳುನಾಡುಗಳಲ್ಲಿ ಅಯ್ಯಪ್ಪನ ದೇವಾಯಲಗಳು ಪ್ರಮುಖವಾಗಿವೆ. ಅಯ್ಯಪ್ಪನಿಗೆ ಮಹಾಮುನಿ ಪರಶುರಾಮರು ಸಮರವಿದ್ಯೆಯನ್ನು ಕಲಿಸಿಕೊಟ್ಟರೆಂದೂ ಈ ವಿದ್ಯೆ ಮುಂದೆ ಕಳಾರಿಪಯಟ್ಟುವಾಗಿ ಬದಲಾಯಿತೆಂದೂ ತಿಳಿದುಬರುತ್ತದೆ. ಕಾಲುಗಳನ್ನು ಮಡಚಿ ಕುಳಿತಿದ್ದು ಮೊಣಕಾಲುಗಳ ಬಳಿ ಒಂದು ಪಟ್ಟಿಯನ್ನು ಧರಿಸಿರುವ ಅಯ್ಯಪ್ಪನ ಭಂಗಿ ಇತರ ದೇವರುಗಳಿಗಿಂತ ಭಿನ್ನವಾಗಿದೆ.

ಅಯ್ಯಪ್ಪ ಸ್ವಾಮಿ ದೇವರ ಜನ್ಮದ ಹಿಂದಿರುವ ರಹಸ್ಯವೇನು?

ಅಂಧಕ: ಶಿವನ ಇನ್ನೋರ್ವ ಪುತ್ರನಾದ ಅಂಧಕನನ್ನು ಶಿವನ ಆರಾಧಕನಾದ ಹಿರಣ್ಯಕಶ ಎಂಬ ಅಸುರ ಪಾಲನೆ ಮಾಡುತ್ತಾನೆ. ತನಗೊಬ್ಬ ವಂಶೋದ್ಧಾರಕ ಬೇಕು ಎಂದು ಶಿವನಲ್ಲಿ ತಪ್ಪಸ್ಸಿನ ಮೂಲಕ ಹಿರಣ್ಯಕಶನ ಬೇಡಿಕೆಯನ್ನು ಶಿವ ತನ್ನ ಬೆವರಿನಿಂದ ಹುಟ್ಟಿದ ಮಗುವಾದ ಅಂಧಕನನ್ನು ನೀಡುವ ಮೂಲಕ ಪೂರೈಸುತ್ತಾನೆ.

ವಾಸ್ತವವಾಗಿ ಅಂಧಕ ಎಂಬ ಪದ “ಅಂಧ” ಅಥವಾ ಕುರುಡು ಎಂಬ ಪದದಿಂದ ಬಂದಿದೆ. ಆದರೆ ಮುಂದೆ ಪಾರ್ವತಿಯ ಅಪಹರಣಕ್ಕೆ ಯತ್ನಿಸಿದ ಅಂಧಕನನ್ನು ಶಿವನೇ ಕೊಲ್ಲುತ್ತಾನೆ.

ಭೌಮ: ಭೂಮಿಯ ಮಗ ಎಂಬ ಅರ್ಥ ಬರುವ ಭೌಮ ಶಿವನ ಬೆವರು ಭೂಮಿಯ ಮೇಲೆ ಬಿದ್ದಾಗ ಉದ್ಭವವಾದ ಕಣದಿಂದ ಹುಟ್ಟಿದವನಾಗಿದ್ದಾನೆ. ಆ ಸಮಯದಲ್ಲಿ ಶಿವ ಗಾಢ ತಪಸ್ಸಿನಲ್ಲಿದ್ದುದರಿಂದ ಭೂದೇವಿಯೇ ಭೌಮನನ್ನು ತನ್ನ ಸ್ವಂತ ಮಗುವಿನಂತೆ ಲಾಲಿಸಿ ಬೆಳೆಸುತ್ತಾಳೆ.

ತಪಸ್ಸಿನ ಬಳಿಕ ಎಚ್ಚೆತ್ತ ಶಿವನಿಗೆ ಈ ಬಗ್ಗೆ ತಿಳಿದುಬಂದು ಬಹಳ ಪ್ರಸನ್ನನಾಗುತ್ತಾನೆ. ಮಗುವನ್ನು ಕಾಳಜಿಯಿಂದ ನೋಡಿಕೊಂಡ ಭೂಮಿಯ ಶ್ರದ್ದೆಯನ್ನು ಮೆಚ್ಚಿ ಭೌಮ ಎಂದು ನಾಮಕರಣ ಮಾಡುತ್ತಾನೆ. ಭೌಮನ ಮೈಬಣ್ಣ ಕೆಂಪಗಾಗಿದ್ದು ನಾಲ್ಕು ಕೈಗಳನ್ನು ಹೊಂದಿದ್ದನು.

ಕುಜ: ಗಾಢ ತಪಸ್ಸಿನಲ್ಲಿದ್ದ ವೇಳೆಯಲ್ಲಿ ಶಿವನ ಎದೆಯಿಂದ ಹೊರಟ ಅತ್ಯಂತ ಪ್ರಬಲ ಕಿರಣ ಭೂಮಿಯ ಮೇಲ್ಭಾವನ್ನು ತಗುಲಿತು. ಈ ಸಂಗಮದಿಂದ ಹುಟ್ಟಿದ ಮಗುವೇ ಖುಜ. ಕುಜನನ್ನು ಕಬ್ಬಿಣದ ಅಧಿಪತಿ ಎಂದೂ ಕರೆಯಲಾಗುತ್ತದೆ.

ಬಳಿಕ ಈತ ಭೂಮಿಯಿಂದ ಹೊರಹೋಗಿ ಆಕಾಶದಲ್ಲಿ ಮಂಗಳಗ್ರಹದ ರೂಪ ತಾಳಿದ ಎಂದು ಪುರಾಣಗಳಲ್ಲಿ ತಿಳಿಸಲಾಗಿದೆ. ಅಂತೆಯೇ ಮಂಗಳಗ್ರಹಕ್ಕೆ ಕುಜಗ್ರಹ ಎಂದೂ ಕರೆಯಲಾಗುತ್ತದೆ. ಪಂಚಾಂಗ ನೋಡುವವರು ಕುಜ ಎಂದೇ ಕರೆಯುತ್ತಾರೆ.

ಗಣೇಶ: ವಿಘ್ನಗಳನ್ನು ನಿವಾರಿಸುವ ದೇವರಾದ ವಿನಾಯಕ ಅಥವಾ ಗಣೇಶ ಶಿವ ಮತ್ತು ಪಾರ್ವತಿಯರ ಸಂಗಮದಿಂದ ಹುಟ್ಟಿದ ಮಗುವಾಗಿದ್ದಾನೆ. ಗಣಗಳಿಗೆ ನಾಯಕನಾದುದರಿಂದ ಗಣಪತಿ ಎಂಬ ಹೆಸರೂ ಇದೆ. ಗಣೇಶ ಬ್ರಹ್ಮಚಾರಿಯಾಗಿದ್ದನೆಂದೂ, ತನಗೆ ಬಂದ ಮದುವೆಯ ಪ್ರಸ್ತಾಪಗಳನ್ನು ಸದಾ ಮುಂದೂಡುತ್ತಿದ್ದನೆಂದೂ ತಿಳಿದುಬರುತ್ತದೆ.

ಆದರೆ ಪದ್ಮಪುರಾಣದ ಪ್ರಕಾರ ಗಣೇಶನು ಸಿದ್ಧಿ ಮತ್ತು ಬುದ್ಧಿ ಎಂಬ ಇಬ್ಬರನ್ನು ವಿವಾಹವಾಗಿದ್ದನೆಂದು ತಿಳಿಸುತ್ತದೆ. ಸಿದ್ದಿ ಎಂದರೆ ಕಲೆ ಮತ್ತು ಬುದ್ದಿ ಎಂದರೆ ಬುದ್ದಿಮತ್ತೆ ಅರ್ಥ ಬರುತ್ತದೆ. ವೇದವ್ಯಾಸರು ಮಹಾಭಾರತವನ್ನು ಪಠಿಸುತ್ತಾ ಹೋದಂತೆ ಬರೆಯುತ್ತಾ ಹೋದವನು ಗಣೇಶ ಎಂದೂ ತಿಳಿಸಲಾಗಿದೆ. ಭಾರತದಾದ್ಯಂತ ಸಾರ್ವಜನಿಕ ಹಬ್ಬವಾಗಿ ಗಣೇಶನ್ನು ಆರಾಧಿಸಲಾಗುತ್ತದೆ.

ಕಾರ್ತಿಕೇಯ: ಕಾರ್ತಿಕೇಯನನ್ನು ಯುದ್ದದ ಅಧಿಪತಿ ಎಂದು ಹೇಳಲಾಗುತ್ತದೆ. ತಾರಕ ಎಂಬ ಅಸುರ ಮತ್ತು ಆತನ ಅನುಯಾಯಿಗಳಿಂದ ಲೋಕವನ್ನು ರಕ್ಷಿಸಲೆಂದೇ ಶಿವ ಮತ್ತು ಪಾರ್ವತಿಯರ ಸಂಗಮದಿಂದ ಹುಟ್ಟಿದ ಕಾರ್ತಿಕೇಯನನ್ನು ದಕ್ಷಿಣ ಭಾರತದಲ್ಲಿ ಅತಿ ಹೆಚ್ಚಾಗಿ ಆರಾಧಿಸಲಾಗುತ್ತದೆ.

ವಿವಿಧ ಪ್ರದೇಶಗಳಲ್ಲಿ ಈತನಿಗೆ ಮುರುಗನ್, ಸುಭ್ರಹ್ಮಣಿಯಂ, ಸೆಂಥಿಲ್ ಎಂಬ ಹೆಸರುಗಳಿಂದ ಕರೆಯಲಾಗುತ್ತದೆ. ಒಂದು ಈಟಿಯನ್ನು ಹಿಡಿದು ನವಿಲಿನ ಮೇಲೆ ಕುಳಿತಿರುವ ಕಾರ್ತಿಕೇಯನನ್ನು ಓರ್ವ ಹದಿಹರೆಯದ ಬಾಲಕನ ರೂಪದಲ್ಲಿ ವರ್ಣಿಸಲಾಗಿದೆ.

ನಂದಿ: ತನಗೊಬ್ಬ ಸಾವಿರದ ಮಗನನ್ನು ನೀಡುವಂತೆ ಶಿಲಾಢನೆಂಬ ಮುನಿ ಇಂದ್ರನಲ್ಲಿ ಘೋರ ತಪಸ್ಸು ಮಾಡಿದ. ಆದರೆ ಈ ಬೇಡಿಕೆಯನ್ನು ತಾನು ಈಡೇರಿಸಲಾರೆ, ಇದು ಶಿವನೊಬ್ಬನಿಂದ ಮಾತ್ರ ಸಾಧ್ಯ ಎಂದು ಕಳಿಸುತ್ತಾನೆ. ಶಿಲಾಢ ಮತ್ತೆ ಸಾವಿರ ವರ್ಷಗಳ ಘೋರ ತಪಸ್ಸು ಆಚರಿಸುತ್ತಾನೆ. ಕೀಟಗಳು ಆತನ ಶರೀರವನ್ನು ತಿಂದು ಕೇವಲ ಮೂಳೆಗಳು ಉಳಿಯುತ್ತವೆ. ಶಿಲಾಢನ ಭಕ್ತಿಗೆ ಪ್ರಸನ್ನನಾದ ಶಿವ ಆತನಿಗೆ ಹಳೆಯ ಶರೀರವನ್ನು ನೀಡಿ ಬದುಕಿಸುತ್ತಾನೆ ಮತ್ತು ಯಜ್ಞಕುಂಡದಲ್ಲಿ ಅಪಾರ ತೇಜಸ್ಸುಳ್ಳ ಮಗುವೊಂದು ಪ್ರಕಟವಾಗುತ್ತದೆ.

ಈ ಮಗುವಿನ ಮೈಮೇಲೆ ವಜ್ರಖಚಿತ ರಕ್ಷಾಕವಚವಿರುತ್ತದೆ. ಆದರೆ ಮಗುವಿನ ಈ ಕಾಂತಿ ಮನೆಗೆ ಬರುತ್ತಲೇ ಇಲ್ಲವಾಗಿ ಈಗತಾನೇ ಹುಟ್ಟಿದ ಮಗುವಂತೆ ಮುಗ್ಧನಾಗುತ್ತಾನೆ. ಬಳಿಕ ಶಿಲಾಢ್ಯನೇ ಶಿಕ್ಷಣ ನೀಡಿ ವೇದಪಾರಾಂಗತನಾಗಿಸುತ್ತಾನೆ. ಆದರೆ ಈತ ಏಳು ವರ್ಷ ದಾಟಲಾರ ಎಂದು ವರುಣ ಮುನಿಗಳು ಭವಿಷ್ಯ ನುಡಿದ ಕಾರಣ ನಂದಿಯೇ ತಪಸ್ಸಿಗೆ ಕೂರುತ್ತಾನೆ. ಈತನ ತಪಸ್ಸನ್ನು ಮೆಚ್ಚಿದ ಶಿವ ಆತನನ್ನು ತನ್ನ ವಾಹನವನ್ನಾಗಿಸಿ ವರಾಹ ರೂಪ (ಎತ್ತು) ನೀಡುತ್ತಾನೆ ಹಾಗೂ ಶಾಶ್ವತವಾಗಿ ಪೂಜೆ ಪಡೆಯುವವನಾಗುತ್ತಾನೆ.

ಇವುಗಳೂ ನಿಮಗಿಷ್ಟವಾಗಬಹುದು

ಶಬರಿ ಕೇಳುತ್ತಾಳೆ

ರಾವಣನನ್ನು ಸಂಹಾರ ಮಾಡುವ ನೆಪದಿಂದಲಾದರೂ ನೀನು ಇಲ್ಲಿಗೆ ಬಂದೆಯಲ್ಲ, ಇಲ್ಲ ಅಂದರೆ ಎಲ್ಲಿ ಬರುತ್ತಿದ್ದೆ ಸ್ವಾಮಿ? ಶ್ರೀರಾಮ ಸ್ವಲ್ಪ ಗಂಭೀರ …

Leave a Reply

Your email address will not be published. Required fields are marked *