ಪಿ.ಬಿ.ಧುತ್ತರಗಿ

ಪಿ. ಬಿ. ಧುತ್ತರಗಿ (ಪುಂಡಲೀಕಪ್ಪ ಬಸನಗೌಡ ಧುತ್ತರಗಿ) ಕರ್ನಾಟಕದ ಒಬ್ಬ ರಂಗಭೂಮಿ ಕಲಾವಿದರು. ಬಿಜಾಪುರ ಜಿಲ್ಲೆಯವರಾದ ಇವರು, ಈಗ ಕೊಪ್ಪಳ ಜಿಲ್ಲೆಯಲ್ಲಿ ವಾಸವಾಗಿದ್ಧರೆ. ರಂಗಭೂಮಿ ಕಲಾವಿದರಾಗಿ, ನಾಟಕಗಳ ರಚನೆ-ನಿರ್ದೇಶಕರಾಗಿ, ನಾಟಕ ಕಂಪನಿಯ ಮಾಲೀಕರಾಗಿ ಇವರು ಕೆಲಸ ಮಾಡಿದ್ದಾರೆ. ಜನಪ್ರಿಯ ಚಲನಚಿತ್ರವಾದ ಸಂಪತ್ತಿಗೆ ಸವಾಲ್, ಮೊದಲು ಜನಪ್ರಿಯ ನಾಟಕವಾಗಿ ಪ್ರದರ್ಶನವಾಗಿದ್ದು ಇವರು ನಾಟಕ ಕಂಪನಿಯಲ್ಲಿ. ಈ ನಾಟಕವನ್ನು ರಚಿಸಿ-ನಿರ್ದೇಶಿಸಿದವರು ಧುತ್ತರಗಿಯವರು.

ರಂಗಭೂಮಿಯಲ್ಲಿ ಇವರು ಮಾಡಿರುವ ಕೆಲಸಕ್ಕಾಗಿ ಕರ್ನಾಟಕ ರಾಜ್ಯ ಸರ್ಕಾರವು ಗುಬ್ಬಿ ವೀರಣ್ಣ ಪ್ರಶಸ್ತಿಯನ್ನು ಇವರಿಗೆ ನೀಡಿದೆ. ಆದರೆ ಎಂಬತ್ತು ವರ್ಷ ವಯಸ್ಸಿನ ಇವರು, ಇನ್ನೂ ಆರ್ಥಿಕವಾಗಿ ತೊಂದರೆಯಲ್ಲಿದ್ದಾರೆ.

ಅನಾರೋಗ್ಯದಿಂದ ಬಳಲುತ್ತಿದ್ದ ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತ ಹಿರಿಯ ನಾಟಕಕಾರ ಹಾಗೂ ನಿರ್ದೇಶಕ ಪುಂಡಲೀಕಪ್ಪ ಬಸನಗೌಡ ಧುತ್ತರಗಿ (78)ಯವರು ೧ನೇ ನವೆಂಬರ ೨೦೦೮ರಲ್ಲಿ ಕೆರೂಡಿ ಆಸ್ಪತ್ರೆಯಲ್ಲಿ ನಿಧನರಾದರು. ಪುಂಡಲೀಕ ಬಸವನಗೌಡ ಧುತ್ತರಗಿ ವೃತ್ತಿರಂಗಭೂಮಿಯ ಪ್ರಖ್ಯಾತ ನಾಟಕಕಾರರು. ನಟ, ನಾಟಕ ಕಂಪನಿಯ ಮಾಲೀಕರು ಆಗಿದ್ದ ಇವರು ರಚಿಸಿದ ನಾಟಕಗಳನ್ನು ಬಹುತೇಕ ಎಲ್ಲ ನಾಟಕ ಕಂಪೆನಿಗಳೂ ಪ್ರಯೋಗಿಸಿವೆ. ಹಾಗಾಗಿ ಐದು ದಶಕಗಳ ಕಾಲ ಕನ್ನಡ ವೃತ್ತಿ ರಂಗಭೂಮಿಯ ಅವಿಭಾಜ್ಯ ಅಂಗವಾಗಿದ್ದರು. ಧುತ್ತರಗಿ ರಚಿಸಿದ ಸಂಪತ್ತಿಗೆ ಸವಾಲು ವರ್ಗ ಸಂಘರ್ಷ ಕುರಿತ ಮೊದಲ ನಾಟಕ. ಡಾ. ರಾಜಕುಮಾರ್ ನಾಯಕನ ಪಾತ್ರದಲ್ಲಿ ಅಭಿನಯಿಸಿದ ಇದೇ ಹೆಸರಿನ ಚಲನಚಿತ್ರ ಭಾರಿ ಜನಪ್ರಿಯ ಚಿತ್ರವಾಯಿತಲ್ಲದೆ, ತಮಿಳು, ತೆಲುಗು, ಮಲೆಯಾಳಿ ಭಾಷೆಯಲ್ಲೂ ಚಿತ್ರೀಕರಣಗೊಂಡು 4 ಭಾಷೆಯಲ್ಲಿ ಮೂಡಿಬಂದ ಹೆಗ್ಗಳಿಕೆ ಪಡೆಯಿತು. `ಕಲ್ಪನಾ ಪ್ರಪಂಚದಿಂದ ಆರಂಭಿಸಿ ಒಟ್ಟು 63 ನಾಟಕಗಳನ್ನು ರಚಿಸಿರುವ ಧುತ್ತರಗಿ ಅವರ ಮಲಮಗಳು (ಮುದುಕನ ಮದುವೆ), ತಾಯಿಕರುಳು, ಸುಖದ ಸುಪ್ಪತ್ತಿಗೆ, ಸಂಪತ್ತಿಗೆ ಸವಾಲು, ಸೊಸೆ ತಂದ ಸೌಭಾಗ್ಯ (ಚಿಕ್ಕಸೊಸೆ) ಕಿತ್ತೂರು ಚೆನ್ನಮ್ಮ, ಸಿಂಧೂರ ಲಕ್ಷ್ಮಣ, ಪುರಂದರದಾಸ ಮುಂತಾದವು ಶ್ರೇಷ್ಠ ಹಾಗೂ ಜನಪ್ರಿಯ ನಾಟಕಗಳಾಗಿದ್ದು, ವಿವಿಧ ನಾಟಕ ಕಂಪೆನಿಗಳಲ್ಲಿ ಹಾಗೂ ಗ್ರಾಮೀಣ ಹವ್ಯಾಸಿಗಳಲ್ಲಿ ಲಕ್ಷಗಟ್ಟಲೆ ಪ್ರದರ್ಶನ ಕಂಡಿವೆ. ಪತ್ನಿ ಸರೋಜಮ್ಮ ಧುತ್ತರಗಿ ವೃತ್ತಿರಂಗಭೂಮಿಯ ಜನಪ್ರಿಯ ತಾರೆ. ಪತ್ನಿಯೊಂದಿಗೆ 15 ವರ್ಷಕ್ಕಿಂತ ಹೆಚ್ಚು ಕಾಲ ನಾಟಕ ಕಂಪೆನಿಯೊಂದನ್ನು ಅವರು ನಡೆಸಿದ್ದರು. ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ (1985), ರಾಜ್ಯೋತ್ಸವ ಪ್ರಶಸ್ತಿ (1996)ಗೆ ಭಾಜನರಾದ ಅವರಿಗೆ ಕನ್ನಡ ರಂಗಭೂಮಿಯ ಅತ್ಯುನ್ನತ ಪ್ರಶಸ್ತಿಯಾದ ಗುಬ್ಬಿ ವೀರಣ್ಣ ಪ್ರಶಸ್ತಿಯನ್ನು 2000ರಲ್ಲಿ ಪ್ರದಾನ ಮಾಡಲಾಗಿತ್ತು. ಪತ್ನಿ ಸರೋಜಮ್ಮನವರಿಗೆ ಪ್ರಸಕ್ತ ವರ್ಷದ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಲಾಗಿತ್ತು. ಅವರು ಇತ್ತ ಬೆಂಗಳೂರಿನಲ್ಲಿ ಪ್ರಶಸ್ತಿ ಸ್ವೀಕರಿಸುತ್ತಿದ್ದಾಗಲೇ ಅತ್ತ ಧುತ್ತರಗಿ ಅವರು ನಿಧನರಾದುದು, ನಾಟಕಕಾರನ ಜೀವನದ ಬಹುದೊಡ್ಡ ನಾಟಕೀಯ ದುಃಖಾಂತ್ಯಕ್ಕೆ ಕನ್ನಡಿ ಹಿಡಿಯಿತು.

ಇವುಗಳೂ ನಿಮಗಿಷ್ಟವಾಗಬಹುದು

A V Prakasha

ಎ.ವಿ. ಪ್ರಕಾಶ್‌

ಎ.ವಿ. ಪ್ರಕಾಶ್‌ (೧೫.೧೦.೧೯೪೫): ಪ್ರಖ್ಯಾತ ಕೊಳಲುವಾದಕರಾದ ಎ.ವಿ. ಪ್ರಕಾಶ್‌ರವರು ಹುಟ್ಟಿದ್ದು ಬೆಂಗಳೂರು. ತಂದೆ ಪ್ರಖ್ಯಾತ ಪಿಟೀಲು ವಿದ್ವಾಂಸರಾದ ಎ.ಕೆ. ವೆಂಕಟನಾರಾಯಣ, …

Leave a Reply

Your email address will not be published. Required fields are marked *