ಪಾರ್ಶ್ವವಾಯು

ಪಾರ್ಶ್ವವಾಯುವಿಗೆ ಆಯುರ್ವೇದ ಮದ್ದು

ಪಾರ್ಶ್ವವಾಯುಪಾರ್ಶ್ವವಾಯು ನಮ್ಮ ಮಿದುಳಿಗೆ ರಕ್ತ ಸಂಚಾರ ಅಗತ್ಯವಾಗಿದೆ. ಈ ರಕ್ತ ಸಂಚಾರದಲ್ಲಿ ಸ್ವಲ್ಪ ಹೆಚ್ಚು ಅಥವಾ ಕಡಿಮೆಯಾಗುವುದು ಅಥವಾ ರಕ್ತನಾಳಗಳು ಹಾನಿಗೊಳಗಾಗುವುದರಿಂದ ಅಥವಾ ರಕ್ತನಾಳಗಳಲ್ಲಿ ಕೊಬ್ಬು ಸಂಗ್ರಹವಾಗುವುದರಿಂದ ರಕ್ತನಾಳಗಳಲ್ಲಿ ಬ್ಲಾಕ್‌ ಆಗಿ ಸ್ಟ್ರೋಕ್‌ ಉಂಟಾಗುತ್ತದೆ. ನರಮಂಡಲಕ್ಕೆ ಹೊಡೆತ ಉಂಟಾಗುವುದನ್ನು ಸ್ಟ್ರೋಕ್‌ ಎನ್ನಲಾಗುತ್ತದೆ. ್ಚಛ್ಟಿಛಿಚ್ಟಿa್ಝ vas್ಚ್ಠ್ಝa್ಟ a್ಚ್ಚಜಿdಛ್ಞಿಠಿ ಅಂತ ಕೂಡ ಹೇಳಲಾಗುತ್ತದೆ. ಆಯುರ್ವೇದದಲ್ಲಿ ಇದಕ್ಕೆ ಪಕ್ಷಪಾತ ಎನ್ನಲಾಗುತ್ತದೆ.

ಪಕ್ಷ ಅಂದರೆ ಒಂದು ಸೈಡ್‌ (ಭಾಗ), ಪಾತ ಎಂದರೆ daಞಜಛಿ ಟ್ಛ ್ಞಛ್ಟಿvಟ್ಠs/್ಝಟss ಟ್ಛ ಞ್ಠs್ಚ್ಝಛಿ ್ಛ್ಠ್ಞ್ಚಠಿಜಿಟ್ಞ ಅಂದರೆ ದೇಹದ ಒಂದು ಭಾಗ ಸಂಪೂರ್ಣವಾಗಿ ಕಾರ್ಯಹೀನತೆ ಹೊಂದುವುದು ಹಾಗೂ ಚಲನಶಕ್ತಿ ಕಳೆದುಕೊಳ್ಳುವುದು.

ನಮ್ಮ ರಕ್ತ ಪರಿಚಲನೆಯಲ್ಲಿ ಶೇ.25ರಷ್ಟು ಪ್ರಮಾಣವು ಮಿದುಳಿಗೆ ಬೇಕಾಗುತ್ತದೆ. ಯಾಕೆಂದರೆ ನರಮಂಡಲ ಕಾರ್ಯ ನಿರ್ವಹಿಸಬೇಕಾದರೆ ರಕ್ತ ಸಂಚಾರವು ಅಗತ್ಯವಾಗಿದೆ.

ಮಿದುಳಿನ ಬಲ ಭಾಗದ ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟಿದ್ದರೆ ಶರೀರದ ಎಡ ಭಾಗವು ಕಾರ್ಯಹೀನತೆ ಹೊಂದುತ್ತದೆ. ಎಡ ಭಾಗದಲ್ಲಿ ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟಿದ್ದರೆ ಶರೀರದ ಬಲ ಭಾಗವು ಕಾರ್ಯಹೀನತೆ ಹೊಂದುತ್ತದೆ. ಈ ರೀತಿ ಇದ್ದರೆ ಹೆಮಿಪ್ಲೀಜಿಯಾ ಅಂತ ಹೇಳಲಾಗುತ್ತದೆ. ದೇಹದ ಅರ್ಧ ಭಾಗವು ನಿಷ್ಕ್ರಿಯವಾಗುವುದು.

ಪ್ಯಾರಾಪ್ಲೀಜಿಯಾ: ಎರಡು ಕಾಲುಗಳು ನಿಷ್ಕ್ರಿಯ ಆಗುತ್ತವೆ. ಇಲ್ಲಿ ಸ್ಪೈನಲ್‌ ಕಾರ್ಡ್‌ನಲ್ಲಿ ಬ್ಲಡ್‌ ಕ್ಲಾಟ್‌ ಆಗುತ್ತದೆ.

ಘಟರ್‌ ಪ್ಲೀಜಿಯಾ: ಒಂದು ಕೈ ಅಥವಾ ಒಂದು ಕಾಲು ಸಂಪೂರ್ಣವಾಗಿ ನಿಷ್ಕ್ರಿಯವಾಗುತ್ತದೆ.

ಅಕ್ಯೂಟ್‌ ಪೆರಾಲಿಸಿಸ್‌ ಸ್ಟ್ರೋಕ್‌: ಸಡನ್‌ ಆಗಿ ಪಾಶ್ರ್ವವಾಯು ಉಂಟಾಗಿ ಶರೀರದ ಭಾಗಗಳನ್ನು ನಿಷ್ಕ್ರಿಯಗೊಳಿಸಿದರೆ ಅದನ್ನು ಅಕ್ಯೂಟ್‌ ಪೆರಾಲಿಸಿಸ್‌ ಎನ್ನುತ್ತೇವೆ.

ಕೊರಿನ್‌ ಪೆರಾಲಿಸಿಸ್‌ ಸ್ಟ್ರೋಕ್‌:ಸ್ಟ್ರೋಕ್‌ ಉಂಟಾಗಿ ಒಂದೊಂದು ಭಾಗವು ನಿಷ್ಕ್ರಿಯವಾಗುತ್ತದೆ.

ಬೆಲ್ಸ್‌ ಪೆರಾಲಿಸಿಸ್‌

ಮುಖಭಾಗದಲ್ಲಿ ಅರ್ಧ ಭಾಗ ನಿಷ್ಕ್ರಿಯ ಹೊಂದುತ್ತದೆ. ಇಲ್ಲಿ ಮುಖದ ನರಗಳಲ್ಲಿ ವೈರಸ್‌ನ ಸೋಂಕು ಉಂಟಾಗುತ್ತದೆ.

ರಾತ್ರಿ ವೇಳೆಯಲ್ಲಿ ತಣ್ಣನೆ ಗಾಳಿಯಲ್ಲಿ ಮಲಗಿದ್ದಾಗ ಇದ್ದಕ್ಕಿದ್ದಂತೆ ಬೆಲ್ಸ್‌ ಪೆರಾಲಿಸಿಸ್‌ ಆಗಿರುತ್ತದೆ. ಈ ರೀತಿಯಾದಾಗ ಕಣ್ಣುಗಳನ್ನು ಸಂಪೂರ್ಣವಾಗಿ ಮುಚ್ಚಲು ಆಗುವುದಿಲ್ಲ. ಕಣ್ಣುಗಳಿಂದ ನೀರು ಬರುವುದು, ಕಿವಿಯಲ್ಲಿ ಶಬ್ದ ಕಡಿಮೆ ಕೇಳುತ್ತದೆ, ಒಂದು ಕಡೆ ಬಾಯಿ ಬಿಗಿದುಕೊಳ್ಳುತ್ತದೆ. ಬಾಯಿಯಲ್ಲಿ ಗಾಳಿ ತೆಗೆದುಕೊಳ್ಳಲು ಆಗುವುದಿಲ್ಲ, ಮುಖದಲ್ಲಿ ಸಂವೇದನಾಶೀಲತೆ ಕಡಿಮೆಯಾಗಿರುತ್ತದೆ.

ಕಾರಣಗಳು

ಹೈಪರ್‌ ಟೆನ್ಷನ್‌ ಅಧಿಕವಾಗಿ ರಕ್ತದ ಒತ್ತಡದಿಂದ ಮಿದುಳಿನಲ್ಲಿ ರಕ್ತನಾಳಗಳು ಹಾನಿಗೆ ಒಳಗಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹೃದಯ ಸಂಬಂಧಿ ಕಾಯಿಲೆಗಳಲ್ಲಿ ಹಾರ್ಟ್‌ವಾಲ್‌ಗೆ ಏನಾದರು ತೊಂದರೆಯಾದರೆ ಇಂಬಾಲಿಸಂ ಫಾರ್ಮೇಶನ್‌ ನಂತರ ರಕ್ತನಾಳದ ಮೂಲಕ ನರಮಂಡಲಕ್ಕೆ ಹೋಗಿ ಅಲ್ಲಿ ಬ್ಲಾಕ್‌ ಆಗುವ ಸಾಧ್ಯತೆ ಇರುತ್ತದೆ. ರಕ್ತದಲ್ಲಿ ಕೊಬ್ಬಿನ ಅಂಶ ಹೆಚ್ಚಾದರೆ ಕೂಡ ಬ್ಲಾಕ್‌ ಆಗುವ ಸಾಧ್ಯತೆ ಇರುತ್ತದೆ. ಬದಲಾದ ಜೀವನಶೈಲಿ,ಬೊಜ್ಜು ಕೂಡ ಪಾಶ್ರ್ವವಾಯುವಿಗೆ ಕಾರಣವಾಗಿದೆ.

ಪಾಶ್ರ್ವವಾಯುವಿನಲ್ಲಿ ಶರೀರದ ಒಂದು ಭಾಗ ಅಂದರೆ ಕೈ ಮತ್ತು ಕಾಲು, ತಲೆಭಾಗ ಅಥವಾ ಶಕ್ತಿ ಕುಂದುವುದು ಹಾಗೂ ಮರಗಟ್ಟುವುದು, ಮಾತನಾಡಲು ಕಷ್ಟ, ಬಾಯಿಯಲ್ಲಿ ಜೊಲ್ಲು ಸ್ರಾವ, ಮೂತ್ರ ವಿಸರ್ಜಿಸಲು ತೊಂದರೆ, ನಡೆಯಲು ಕಷ್ಟವಾಗುತ್ತದೆ. ನಡೆದಾಡುವಾಗ ದೇಹವನ್ನು ಬ್ಯಾಲೆನ್ಸ್‌ ಮಾಡಲು ಆಗುವುದಿಲ್ಲ. ತಲೆನೋವು ಬರುತ್ತದೆ.

ಆಯುರ್ವೇದದಲ್ಲಿ ಇದಕ್ಕೆ ಸೂಕ್ತ ಚಿಕಿತ್ಸೆ ಇದೆ. ವಿರೇಚನ ಕರ್ಮ ಚಿಕಿತ್ಸೆಯು ಇದಕ್ಕೆ ಪರಿಣಾಮಕಾರಿಯಾಗಿದೆ. ವಿರೇಚನದಲ್ಲಿ ದೋಷಗಳನ್ನು ಹೊರಗೆ ಹಾಕುವುದು ಒಂದು ವಿಧಾನವಾಗಿದೆ. ಅಭ್ಯಂಗದಲ್ಲಿ ಶರೀರ ಪೂರ್ತಿ ತೈಲ ಮಜ್ಜನ ಮಾಡಿ ಸ್ಟೀಮ್‌ ಕೊಡುವುದು. ಇದರಿಂದ ರಕ್ತ ಸಂಚಾರವು ಚೆನ್ನಾಗಿ ಆಗುತ್ತದೆ. ಏಕೆಂದರೆ ಪಾಶ್ರ್ವವಾಯು ರೋಗಿಗಳಲ್ಲಿ ಲಾಸ್‌ ಆಫ್‌ ಮಸಲ್‌ ಫಂಕ್ಷನ್‌ ಇರುವುದರಿಂದ ಅಲ್ಲಿ ರಕ್ತ ಸಂಚಾರವು ಜಾಸ್ತಿ ಆಗುತ್ತದೆ. ಅಲ್ಲಿ ಇರುವ ಮಸಲ್ಸ್‌ ಫಂಕ್ಷನ್‌ ಕೂಡ ಹೆಚ್ಚಾಗುತ್ತದೆ.

ಬಸ್ತಿ ಕರ್ಮದಲ್ಲಿ ಕಷಾಯ ಬಸ್ತಿ ಮತ್ತು ಕ್ಷೀರ ಬಸ್ತಿ ಚಿಕಿತ್ಸೆ ನೀಡಲಾಗುವುದು.

ಬೆಲ್ಸ್‌ ಪೆರಾಲಿಸಿಸ್‌ನಲ್ಲಿ ಕುಕ್ಕುಡ ಸ್ಪಂದನ ಅಂತ ಚಿಕಿತ್ಸೆ ನೀಡಲಾಗುತ್ತದೆ. ಏಕೆಂದರೆ ಮುಖದ ನರಗಳಿಗೆ ವೈರಸ್‌ ಸೋಂಕು ಆಗಿರುತ್ತದೆ.

  • ತಡೆಯಲು ಸಲಹೆ
  • ಆಹಾರದಲ್ಲಿ ಕೊಬ್ಬಿನ ಅಂಶಗಳನ್ನು ಕಡಿಮೆ ಮಾಡಬೇಕು.
  • ಹಣ್ಣು, ತರಕಾರಿಗಳನ್ನು ಅಧಿಕ ಪ್ರಮಾಣದಲ್ಲಿ ಬಳಸಬೇಕು.
  • ತೂಕ ಕಡಿಮೆ ಮಾಡಿಕೊಳ್ಳಬೇಕು.
  • ಬದಲಾಗುತ್ತಿರುವ ಜೀವನಶೈಲಿಗೆ ಮಾರು ಹೋಗದೆ ಒತ್ತಡದ ಬದುಕಿಗೆ ಸ್ವಲ್ಪ ರಿಲೀಫ್‌ ನೀಡಬೇಕು.
  • ಹೃದಯ ಸಂಬಂಧಿ ಕಾಯಿಲೆ, ರಕ್ತದೊತ್ತಡ, ಮಧುಮೇಹ, ಕೊಲೆಸ್ಟ್ರಾಲ್‌ ಇದಕ್ಕೆ ಸೂಕ್ತವಾದ ಚಿಕಿತ್ಸೆ ತೆಗೆದುಕೊಳ್ಳಬೇಕು.
  • ಧೂಮಪಾನ, ಮದ್ಯಪಾನದಿಂದ ದೂರವಿರಬೇಕು.

ರಾತ್ರಿ ವೇಳೆಯಲ್ಲಿ ತಣ್ಣನೆ ಗಾಳಿಯಲ್ಲಿ ಮಲಗಿದ್ದಾಗ ಇದ್ದಕ್ಕಿದ್ದಂತೆ ಬೆಲ್ಸ್‌ ಪೆರಾಲಿಸಿಸ್‌ ಆಗಿರುತ್ತದೆ. ಈ ರೀತಿಯಾದಾಗ ಕಣ್ಣುಗಳನ್ನು ಸಂಪೂರ್ಣವಾಗಿ ಮುಚ್ಚಲು ಆಗುವುದಿಲ್ಲ. ಕಣ್ಣುಗಳಿಂದ ನೀರು ಬರುವುದು, ಕಿವಿಯಲ್ಲಿ ಶಬ್ದ ಕಡಿಮೆ ಕೇಳುತ್ತದೆ, ಒಂದು ಕಡೆ ಬಾಯಿ ಬಿಗಿದುಕೊಳ್ಳುತ್ತದೆ. ಬಾಯಿಯಲ್ಲಿ ಗಾಳಿ ತೆಗೆದುಕೊಳ್ಳಲು ಆಗುವುದಿಲ್ಲ, ಮುಖದಲ್ಲಿ ಸಂವೇದನಾಶೀಲತೆ ಕಡಿಮೆಯಾಗಿರುತ್ತದೆ.

http://vijaykarnataka.indiatimes.com/lavalavk/health/article/paralysis-and-ayurvedic-treatment/articleshow/52321375.cms

Paralysis or the inability of a muscle to move is one of the most common disabilities resulting from stroke. As many as 9 out of 10 stroke survivors have some degree of paralysis immediately following a stroke. Continued rehabilitation and therapy can help stroke survivors regain voluntary movement even years following their stroke.

ಶ್ರೇಯಾಂಕ

ಮತ ನೀಡಿ, ಬಲಪಡಿಸಿ ಮತ್ತು ಸಾಮಾಜಿಕ ಜಾಲ ತಾಣದಲ್ಲಿ ಹಂಚಿರಿ.

User Rating: 2.93 ( 2 votes)

ಇವುಗಳೂ ನಿಮಗಿಷ್ಟವಾಗಬಹುದು

ಹುಳಿ ಮಿಶ್ರಿತ ಹಣ್ಣಿನ ಸಿಪ್ಪೆಯ ಲೆಕ್ಕಕ್ಕೆ ಸಿಗದಷ್ಟು ಆರೋಗ್ಯ ಪ್ರಯೋಜನಗಳು

ಸಾಮಾನ್ಯವಾಗಿ ಕಿತ್ತಳೆ ಹಣ್ಣುಗಳನ್ನು ಸುಲಿದ ಬಳಿಕ ತಿರುಳನ್ನು ತಿಂದು ಸಿಪ್ಪೆಯನ್ನು ಮಾತ್ರ ನಾವು ಎಸೆದುಬಿಡುತ್ತೇವೆ. ಆದರೆ ಈ ಸಿಪ್ಪೆಗಳಲ್ಲಿಯೂ ಹಲವಾರು …

Leave a Reply

Your email address will not be published. Required fields are marked *