ಮಹಾಭಾರತ ಹಾಗು ರಾಮಾಯಣವು ಭಾರತದ ಪ್ರಸಿದ್ಧವಾದ ಮಹಾಕಾವ್ಯಗಳಾಗಿವೆ. ಇದನ್ನು ಅತ್ಯಂತ ಪವಿತ್ರವಾದ ಗ್ರಂಥ ಎಂದೂ ಸಹ ಕರೆಯುತ್ತೇವೆ. ದ್ವಾಪರಯುಗದಲ್ಲಿ ನಡೆದ ಮಹಾಭಾರತದ ಕಥೆಯು ಮೂಲತಃ ಮಾನವನಾದವನು ಧರ್ಮ ಮಾರ್ಗದ ಮೂಲಕ ಹೇಗೆ ಸಾಗಬೇಕು ಎಂಬುದನ್ನು ಸ್ಪಷ್ಟವಾಗಿ ತಿಳಿಸುತ್ತದೆ.
[content_block id=3102]ಮಹಾಭಾರತದಲ್ಲಿ ನಾವು ಹಲವಾರು ಕ್ರೋಧಗಳು, ಅಧಿಕಾರದ ಮದ, ದ್ರೋಹ, ವಂಚನೆ, ನ್ಯಾಯ ಇನ್ನು ಹಲವಾರು ಕಾಣಬಹುದು. ಆದರೆ ಪಾಂಡವರು ನೈತಿಕವಾದ ಮಾರ್ಗದಲ್ಲಿ ಬದುಕು ನಡೆಸುವ ಧರ್ಮ ರಕ್ಷಕರಾಗಿ, ನಾಯಕರಾಗಿ ಮಹಾಭಾರತದಲ್ಲಿ ಕಂಡು ಬರುತ್ತಾರೆ. ಮಹಾಭಾರತ ಯುದ್ಧದ ನಂತರ ಪಾಂಡವರು ಏನಾದರು? ಎಲ್ಲಿಗೆ ಹೋದರು ಎಂಬ ಹಲವಾರು ಪ್ರಶ್ನೆಗಳಿಗೆ ಉತ್ತರ ಇನ್ನು ಕುತೂಹಲವಾಗಿ ಇದೆ.
ಆ ಸ್ವಾರಸ್ಯಕರವಾದ ವಿವರಗಳ ಬಗ್ಗೆ ಮಹಾಭಾರತದ ಮಹಾಪ್ರಸ್ಥಾನಿಕಾ ಪರ್ವದಲ್ಲಿ ಸುಂದರವಾಗಿ ವಿವರಿಸಲಾಗಿದೆ. ಅದರ ಪ್ರಕಾರ ಕೊನೆಗೆ ಪಾಂಡವರು ತಮ್ಮ ಎಲ್ಲಾ ಅಸ್ತ್ರ-ಶಸ್ತ್ರಗಳನ್ನು ತ್ಯಜಿಸಿ ಹಲವು ತೀರ್ಥ ಕ್ಷೇತ್ರಗಳಿಗೆ ಭೇಟಿ ನೀಡಿದರಂತೆ. ನಂತರ ದೇವರ ದರ್ಶನ ಮಾಡಿ ಸ್ವರ್ಗಕ್ಕೆ ಹಿಮಾಲಯದ ಮೂಲಕವಾಗಿ ನಡೆದರಂತೆ. ಇದು ಎಲ್ಲಿದೆ ಗೊತ್ತ?
ಎಲ್ಲಿದೆ?
ಹೀಗೆ ಪಾಂಡವರು ತೆರಳಿದ ಮಾರ್ಗ ಯಾವುದು ಎಂದರೆ? ಅದು ಉತ್ತರಾಖಂಡದ ಬದರಿನಾಥ ಕ್ಷೇತ್ರದಿಂದ ಕೆಲವು ಕಿ.ಮೀ ಗಳಷ್ಟು ದೂರದಲ್ಲಿ ಪಾಂಡವರ ಪ್ರಯಾಣ ಪ್ರಾರಂಭವಾಗುತ್ತದೆ. ಇದನ್ನು ಮುಖ್ಯಾವಾಗಿ “ಸಾತೋಪಂಥ್ ಟ್ರೆಕ್” ಎಂದು ಕರೆಯುತ್ತಾರೆ.
ಸ್ವರ್ಗಾರೋಹಣ
ಈ ಮಾರ್ಗದ ಮೂಲಕವಾಗಿಯೇ ಪಾಂಡವರು ತಮ್ಮ ಸ್ವರ್ಗಾರೋಹಣವನ್ನು ಪ್ರಾರಂಭ ಮಾಡಿದರು. ಆಶ್ಚರ್ಯ ಏನಪ್ಪ ಎಂದರೆ ಈ ಸ್ವರ್ಗಕ್ಕೆ ಹೋಗುವ ದಾರಿಯಲ್ಲಿ ಒಂದು ನಾಯಿಯನ್ನು ಕೂಡ ಅವರ ಜೊತೆಗೆ ಕರೆದುಕೊಂಡು ಹೋದರಂತೆ.
ಪಂಚ ಪಾಂಡವರು
ಹೀಗೆ ನಡೆದುಕೊಂಡು ಹೋಗುವ ಸಮಯದಲ್ಲಿ ಪಂಚ ಪಾಂಡವರಲ್ಲಿ ಒಬ್ಬೊಬ್ಬರಾಗಿಯೇ ಪ್ರಾಣವನ್ನು ಬಿಟ್ಟರಂತೆ. ಕೊನೆಯಲ್ಲಿ ಸ್ವರ್ಗಕ್ಕೆ ತಲುಪಿದ್ದು ಮಾತ್ರ ಧರ್ಮರಾಯ ಒಬ್ಬನೇ. ಸಾಮಾನ್ಯವಾಗಿ ಇಂದಿನ ಯುವಕರಿಗೆ ಟ್ರೆಕ್‍ಗಳೆಂದರೆ ಬಹಳ ಇಷ್ಟ.
ಸ್ವರ್ಗ ಪ್ರಾಪ್ತಿ
ಸಾತೋಪಂಥ್ ಟ್ರೆಕ್ ಅನ್ನು ಧಾರ್ಮಿಕತೆಯಲ್ಲಿ ನಂಬಿಕೆ ಹಾಗು ಭಕ್ತಿ ಒಳ್ಳವರು ಭೇಟಿ ಟ್ರೆಕ್ ಮಾಡುತ್ತಾರೆ. ಪಂಚ ಪಾಂಡವರು ಮಾಡಿದ ಚಾರಣವನ್ನು ನಾವು ಕೂಡ ಮಾಡಿದರೆ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಭಕ್ತರದ್ದು. ಹಾಗಾಗಿಯೇ ಇದನ್ನು ಸ್ವರ್ಗಾರೋಹಿಣಿ ಎಂದೂ ಕೂಡ ಕರೆಯುತ್ತಾರೆ.
ಅತ್ಯಂತ ಕಷ್ಟಕರ
ಆದರೆ ಈ ಪವಿತ್ರವಾದ ಯಾತ್ರೆ ಮಾಡಬೇಕು ಎಂದರೆ ಮೊದಲು ಅನುಮತಿ ಪಡೆಯಬೇಕು. ಈ ಚಾರಣ ಅಷ್ಟು ಸುಲಭವಾಗಿರುತ್ತದೆ ಎಂದು ಅಂದುಕೊಳ್ಳಬೇಡಿ. ಈ ಚಾರಣ ಅತ್ಯಂತ ಕಷ್ಟಕರವಾಗಿರುತ್ತದೆ. ಅಂತಹ ಪಾಂಡವರಲ್ಲಿಯೇ 4 ಜನರು ತಲುಪಲಿಲ್ಲ ಅಂದರೆ ನೀವೆ ಭಾವಿಸಿ ಇನ್ನೆಷ್ಟು ಕಠಿಣವಾದ ಮಾರ್ಗ ಇಲ್ಲಿ ಇರಬಹುದು ಎಂದು.
ಸಾತೋಪಂಥ್ ಸರೋವರ
ಈ ಟ್ರೆಕ್ ಮಾಡಲು ಕೇವಲ ದೈಹಿಕವಾದ ಸಾಮಥ್ರ್ಯ ಇದ್ದರೆ ಸಾಲದು ಬದಲಾಗಿ ಮಾನಸಿಕವಾದ ಸಾಮಥ್ರ್ಯವೂ ಕೂಡ ಅತಿ ಮುಖ್ಯವಾದುದು. ಇದು ಬದರಿನಾಥದಿಂದ ಸುಮಾರು 25 ಕಿ.ಮೀ ದೂರದಲ್ಲಿ ಸಾತೋಪಂಥ್ ಸರೋವರವಿದೆ. ಇಲ್ಲಿಂದ ಸುಮಾರು 3 ದಿನಗಳಷ್ಟು ಟ್ರೆಕ್ ಮಾಡಬೇಕಾಗುತ್ತದೆ.
ವ್ಯವಸ್ಥೆಗಳಿಲ್ಲ
ಈ ಟ್ರೆಕ್ ಮಾಡುವ ಮೊದಲು ಅನುಮತಿ ಪಡೆಯಬೇಕು. ಹಾಗೆಯೇ ಪರಿಣಿತ ಚಾರಣಿಗ ಮಾರ್ಗದರ್ಶನವಿಲ್ಲದೇ ಈ ಟ್ರೆಕ್ ತೆರಳಲು ಸಾಧ್ಯವೇ ಇಲ್ಲ. ಮುಖ್ಯವಾಗಿ ಇಲ್ಲಿ ಯಾವುದೇ ತಂಗಲು ವ್ಯವಸ್ಥೆಗಳಿಲ್ಲ. ಅಂದರೆ ಆಹಾರ ಮಾಡಿಕೊಳ್ಳಬೇಕಾದರೂ ನೀವೆ ತೆಗೆದುಕೊಂಡು ಹೋಗಬೇಕು. ಅಲ್ಲಿ ಆಹಾರಕ್ಕೂ ಕೂಡ ಯಾವುದೇ ವ್ಯವಸ್ಥೆಗಳು ಇಲ್ಲ
ವಸುಧಾರಾ ಜಲಪಾತ
ಪುಣ್ಯಕ್ಷೇತ್ರ ಬದರಿನಾಥದಿಂದ ಸುಮಾರು 3 ಕಿ.ಮೀ ದೂರದಲ್ಲಿರುವ ಮಾನಾದಿಂದ ಈ ಟ್ರೆಕ್ ಪ್ರಾರಂಭವಾಗುತ್ತದೆ. ಇಲ್ಲಿಂದ ನದಿಯೊಂದನ್ನು ದಾಟಿದರೆ ಅಲ್ಲಿ ವಸುಧಾರಾ ಜಲಪಾತ ದೊರೆಯುತ್ತದೆ. ಇಲ್ಲಿಂದ ನಿರ್ಧಿಷ್ಟವಾಗಿ ಟ್ರೆಕ್ ಆರಂಭ ಮಾಡಬೇಕಾಗುತ್ತದೆ.
ಅಲಕಾನಂದ ನದಿ
ವಿಶೇಷ ಏನೆಂದರೆ ಪವಿತ್ರವಾದ ಅಲಕಾನಂದ ನದಿಯ ಒಂದು ದಂಡೆಯಿಂದ ವಸುಧಾರಾ ಜಲಪಾತವನ್ನು ನೋಡಬಹುದಾಗಿದೆ. ವಸುಧಾರಾ ಜಲಪಾತ ಅತ್ಯಂತ ಮನೋಹರವಾಗಿದೆ. ಇಲ್ಲಿನ ಸೌಂದರ್ಯಕ್ಕೆ ಯಾರೇ ಆಗಲಿ ಮರಳು ಆಗಲೇ ಬೇಕು.
ಲಕ್ಷ್ಮೀವನ
ವಸುಧಾರಾದಿಂದ ಸುಮಾರು 5 ಕಿ.ಮೀ ದೂರದಲ್ಲಿ ಲಕ್ಷ್ಮೀವನವಿದೆ. ಅಲ್ಲಿಗೆ ತಲುಪಬೇಕು ಆದರೆ ಧಾನೋ ಎಂಬ ಹಿಮನದಿಯ ಮೂಲಕ ದಾಟಬೇಕಾಗಿರುತ್ತದೆ. ಈ ಮಾರ್ಗ ಅತ್ಯಂತ ಪಾಯಕಾರಿಯಾಗಿದ್ದು, ಜಾಗರೂಕತೆಯಿಂದ ಟ್ರೆಕ್ ಮಾಡಬೇಕಾಗಿರುತ್ತದೆ. ಇದನ್ನು ದಾಟಿದ ನಂತರ ದೊರೆಯುವುದೇ ಲಕ್ಷ್ಮೀವನ.
ಪ್ರಾಣವನ್ನು ಕಳೆದುಕೊಂಡರು
ಪಾಂಡವರಲ್ಲಿ ಧರ್ಮರಾಯನನ್ನು ಹೊರತು ಪಡಿಸಿ ಉಳಿದರೆಲ್ಲಾರು ಈ ಮಾರ್ಗ ಮಧ್ಯೆಯೇ ತಮ್ಮ ಪ್ರಾಣವನ್ನು ಕಳೆದುಕೊಂಡರು. ಹಾಗಾದರೆ ಯಾವ ಮಾರ್ಗದಲ್ಲಿ ಪಾಂಡವರು ತಮ್ಮ ಪ್ರಾಣವನ್ನು ತ್ಯಾಗ ಮಾಡಿದರು ಎಂಬುದನ್ನು ಒಮ್ಮೆ ನೋಡುಣ ಬನ್ನಿ.
ನಕುಲ-ಸಹದೇವ ಪ್ರಾಣ ಬಿಟ್ಟ ಸ್ಥಳ
ಪುರಾಣಗಳ ಪ್ರಕಾರ ನಕುಲ, ಸಹದೇವರು ಇಲ್ಲಿಯೇ ತಮ್ಮ ಪ್ರಾಣವನ್ನು ತ್ಯಜಿಸಿದರು ಎಂದು ಹೇಳಲಾಗುತ್ತದೆ. ಮೊದ ಮೊದಲು ಟ್ರೆಕ್ ಪ್ರಾರಂಭಿಸಿದಾಗ ಎಲ್ಲೆಡೆ ಸುಂದರವಾದ ವಾತಾವರಣದಿಂದ ಕಂಗೊಳಿಸುತ್ತಿರುತ್ತದೆ. ಎಲ್ಲಿ ನೋಡಿದರು ಹಚ್ಚ ಹಸಿರಿನ ಸಿರಿ ವನಗಳು.
ಅರ್ಜುನ ಪ್ರಾಣ ಬಿಟ್ಟ ಸ್ಥಳ
ನಂತರ ಲಕ್ಷ್ಮೀವನದಿಂದ ಸುಮಾರು 5 ಕಿ.ಮೀ ದೂರದಲ್ಲಿ ಚಕ್ರತೀರ್ಥವಿದೆ. ಅಲ್ಲಿಗೆ ತಲುಪಬೇಕು. ದಂತ ಕಥೆಯ ಪ್ರಕಾರ ಚಕ್ರತೀರ್ಥದಲ್ಲಿಯೇ ಪಾಂವರಲ್ಲಿನ ಅರ್ಜುನನು ತನ್ನ ಪ್ರಾಣವನ್ನು ತ್ಯಾಗ ಮಾಡಿದ ಸ್ಥಳ ಇದಾಗಿದೆ ಎಂದು ಕೆಲವರು ಹೇಳುತ್ತಾರೆ.
ಭೀಮ ಪ್ರಾಣ ಬಿಟ್ಟ ಸ್ಥಳ
ಹೀಗೆ ಚಕ್ರತೀರ್ಥ ತಲುಪಿ ಸ್ವಲ್ಪ ವಿಶ್ರಾಂತಿ ಪಡೆದು ಮತ್ತೆ ಚಾರಣವನ್ನು ಸಹಸ್ರಧಾರಾದೆಡೆಗೆ ಪ್ರಾರಂಭಿಸಿದರು. ಸಹಸ್ರಧಾರಾದಲ್ಲಿಯೇ ಪಾಂಡವರಲ್ಲಿ ಅತ್ಯಂತ ಬಲಶಾಲಿಯಾದ ಭೀಮ ತನ್ನ ಪ್ರಾಣ ತ್ಯಜಿಸಿದ ಎಂದು ಪ್ರತೀತಿ ಇದೆ.
ಸ್ವರ್ಗಕ್ಕೆ ಹೋದ ಸ್ಥಳ
ಹೀಗೆ ಸಹಸ್ರಧಾರಾದ ನಂತರ ಟ್ರೆಕ್ ಮುಂದುವರೆಸಿದರೆ ಕೊನೆಯದಾಗಿ ತಲುಪುವ ತಾಣವೇ ಸಾತೋಪಂಥ್ ಸರೋವರವಾಗಿದೆ. ಇದನ್ನು “ಸತ್ಯಪಂಥ” ಎಂತಲೂ ಕರೆಯುತ್ತಾರೆ. ಇದೊಂದು ಅದ್ಭುತವಾದ ಸರೋವರವಾಗಿದೆ. ಸತ್ಯಕ್ಕೆ ಕನ್ನಡಿ ಈ ಸರೋವರ ಎಂದು ಬಣ್ಣಿಸಲಾಗುತ್ತದೆ. ಇಲ್ಲಿಯೇ ಇಂದ್ರನು ತನ್ನ ರಥದ ಸಮೇತ ಧರ್ಮರಾಯನ ಮುಂದೆ ಬಂದು ಸ್ವರ್ಗಕ್ಕೆ ಕರೆದು ಕೊಂಡು ಹೋದನು ಎಂಬ ನಂಬಿಕೆ ಇದೆ.
ತ್ರಿಮೂರ್ತಿಗಳು
ಈ ತ್ರಿಕೋನಾಕಾರದ ಸರೋವರ ಎಷ್ಟೊಂದು ಪವಿತ್ರವಾಗಿದೆ ಎಂದರೆ ಏಕಾದಶಿಗಳಂದು ಸ್ವತಃ ಬ್ರಹ್ಮ, ವಿಷ್ಣು ಹಾಗು ಮಹೇಶ್ವರರೇ ಈ ಸರೋವರದಲ್ಲಿ ನೆಲೆಸುತ್ತಾರಂತೆ. ಹಾಗೆಯೇ ಈ ಪವಿತ್ರವಾದ ಜಲದಲ್ಲಿ ಸ್ನಾನ ಮಾಡುತ್ತಾರಂತೆ.
ಗಂಧರ್ವರು
ಗಂಧರ್ವರು ಪಕ್ಷಿಗಳ ರೂಪದಲ್ಲಿ ಈ ಸ್ಥಳದಲ್ಲಿ ಕಾಯುತ್ತಿದ್ದು, ಇಲ್ಲಿ ಒಂದು ಕಡ್ಡಿಯೂ ಸಹ ಬೀಳದಂತೆ ನೋಡಿಕೊಳ್ಳುತ್ತಾರೆ ಎನ್ನಲಾಗಿದೆ. ಇಲ್ಲಿಗೆ ಈ ಟ್ರೆಕ್ ಮುಕ್ತಾಯವಾಗುತ್ತದೆ.
ಕುತೂಹಲ
ಈ ಸರೋವರಕ್ಕೆ ಬಂದಾಗ ಪಂಚ ಪಾಂಡವರಲ್ಲಿ ಕೇವಲ ಧರ್ಮರಾಯ ಹಾಗು ನಾಯಿ ಮಾತ್ರ ಉಳಿಯುತ್ತದೆ. ಆಗ ಇಂದ್ರನು ತನ್ನ ರಥದ ಸಮೇತವಾಗಿ ಪ್ರತ್ಯಕ್ಷವಾಗಿ ಧರ್ಮರಾಯನೊಬ್ಬನಿಗೆ ಮಾತ್ರ ರಥದಲ್ಲಿ ಕೂರಲು ಹೇಳುತ್ತಾನೆ.
ನಾಯಿಯನ್ನು ಬಿಟ್ಟು ಬರುವುದಿಲ್ಲ
ಅದಕ್ಕೆ ಧರ್ಮರಾಯನು ತನ್ನ ಜೊತೆಯಲ್ಲಿಯೇ ದಾರಿಯಲ್ಲಿ ಕಷ್ಟಗಳಿಗೆ ಜೊತೆಯಾಗಿ, ಸ್ನೇಹಿತನಾಗಿ ನಾಯಿ ಬಂದಿರುವುದರಿಂದ ಅದನ್ನು ಸಹ ಕೂರಲು ಅನುಮತಿಸಬೇಕು ಎಂದು ಕೇಳಿಕೊಳ್ಳುತ್ತಾನೆ. ಇಲ್ಲದೇ ಹೋದರೆ ನಾಯಿಯನ್ನು ಬಿಟ್ಟು ನಾನು ಬರುವುದಿಲ್ಲ ಅದು ಧರ್ಮವಲ್ಲ ಎಂದು ಹೇಳುತ್ತಾನೆ.
ನಾಯಿಯ ರೂಪದಲ್ಲಿ ಧರ್ಮ ದೇವತೆ
ಇದನ್ನು ಮೆಚ್ಚಿದ ಇಂದ್ರನು ಆತನ ನಾಯಿಯೊಂದಿಗೆ ಧರ್ಮರಾಯನನ್ನು ರಥದಲ್ಲಿ ಕರೆದುಕೊಂಡು ಹೋಗುತ್ತಾನೆ. ನಿಜ ಹೇಳಬೇಕೆಂದರೆ ಆ ಧರ್ಮ ದೇವತೆಯೇ ಪಾಂಡವರನ್ನು ಪರೀಕ್ಷಿಸಲು ನಾಯಿ ರೂಪದಲ್ಲಿ ಅವರಲ್ಲಿ ಒಂದಾಗಿ ಸೇರುತ್ತದೆ.
Read more at: https://kannada.nativeplanet.com/travel-guide/satopanth-trek-himalaya/articlecontent-pf24895-001795.html
[sg_popup id=2]