ಕವಿತೆ ಹಾಗೂ ಗದ್ಯದಲ್ಲಿ ಮೂಲತಃ ಭಾರತೀಯ ಪ್ರಾಣಿಗಳ ಕಥೆಗಳ ಮೇಲೆ ಆಧಾರಿತ ಒಂದು ಸಂಗ್ರಹವೇ, ಪಂಚತಂತ್ರ ಸಂಸ್ಕೃತ:पञ्चतन्त्र(IAST: ಪಂಚತಂತ್ರ, ‘ಐದು ಮೂಲತತ್ವಗಳು’) ಕ್ರಿಸ್ತ ಪೂರ್ವ 3 ರನೇ ಶತಮಾನದಲ್ಲಿ ರಚಿಸಲ್ಪಟ್ಟಿದೆಯೆಂದು ಕೆಲವು ವಿದ್ವಾಂಸರು ನಂಬುವ, ಮೂಲ ಸಂಸ್ಕೃತ ಗ್ರಂಥ, ವಿಷ್ಣು ಶರ್ಮರಿಗೆ ಆ ಕೀರ್ತಿಯು ಸಲ್ಲುತ್ತದೆ. ಆದಾಗ್ಯೂ, “ನಾವು ಊಹಿಸಲೂ ಸಾಧ್ಯವಾದಷ್ಟು ಹಳೆಯದಾದ ಪ್ರಾಣಿಗಳ ಸಣ್ಣ ನೀತಿಯ ಕಥೆಗಳನ್ನು” ಒಳಗೊಂಡಿರುವ, ಪುರಾತನ ಮೌಖಿಕ ಪರಂಪರೆಗಳ ಮೇಲೆ ಅದು ಆಧರಿಸಲ್ಪಟ್ಟಿದೆ. ಅದು “ಖಂಡಿತವಾಗಿಯೂ ಭಾರತದ ಅತ್ಯಂತ ಹೆಚ್ಚು ಬಾರಿ ಮತ್ತೆ ಮತ್ತೆ ಭಾಷಾಂತರಿಸಲ್ಪಟ್ಟಿರುವ ಸಾಹಿತ್ಯಿಕ ಉತ್ಪನ್ನ” ಹಾಗೂ ಹೇಳಬೇಕೆಂದರೆ ಇವುಗಳು ವಿಶ್ವದಲ್ಲೇ ಅತ್ಯಂತ ಹೆಚ್ಚು ವಿಶಾಲವಾಗಿ ತಿಳಿದಿರುವ ಕಥೆಯ ಸಂಗ್ರಹಗಳಲ್ಲೊಂದು. ಉದ್ಧರಿಸಬೇಕೆಂದರೆ Edgerton (1924)

ಅದು ಹೀಗೆ ಅನೇಕ ಸಂಸ್ಕೃತಿಗಳಲ್ಲಿ ಹಲವಾರು ಹೆಸರುಗಳನ್ನು ಹೊಂದಿದೆ. ಭಾರತದಲ್ಲಿಯೇ, ಸಂಸ್ಕೃತದ ತಂತ್ರಖ್ಯಾಯಿಕ ಸಂಸ್ಕೃತ:तन्त्राख्यायिकाವನ್ನು ಒಳಗೊಂಡಂತೆ, ಅದು ಕಡೇಪಕ್ಷ 25 ಪರಿಷ್ಕೃತ ಗ್ರಂಥಗಳನ್ನು ಹೊಂದಿದೆ ಹಾಗೂ ಹಿತೋಪದೇಶಕ್ಕೆ ಸ್ಪೂರ್ತಿಯಾಯಿತು. ಅದು ಕ್ರಿಸ್ತ ಶಕ 570 ರಲ್ಲಿ ಬೋರ್ಜುಯಾ ರಿಂದ ಪಹಲ್ವಿ ಗೆ ಬಾಷಾಂತರಿಸಲ್ಪಟ್ಟಿತು. ಇದು ಸಿರಿಯಾಕ್ ಭಾಷೆಯ ಅನುವಾದಕ್ಕೆ ಕಲಿಲಾಗ್ ಮತ್ತು ದಮ್ನಾಗ್ ಎಂದು ಮೂಲವಾಯಿತು ಹಾಗೂ ಕ್ರಿಸ್ತ ಶಕ 750 ರಲ್ಲಿ ಪರ್ಷಿಯಾದ ವಿದ್ವಾಂಸ ಅಬ್ದುಲ್ಲಾ ಇಬ್ನ್ ಅಲ್-ಮುಕ್ವಫಾ ರಿಂದ ಕಲಿಲಾಹ್ ವ ದಿಮ್ನಾಹ್ ಅರೇಬಿಕ್: كليلة و دمنةಎಂದು ಅರಬ್ಬೀ ಭಾಷೆಗೆ ತರ್ಜುಮೆಗೊಂಡಿತು. ಒಂದು ಪರ್ಷಿಯನ್ ಆವೃತ್ತಿಯು 12 ನೇ ಶತಮಾನದಿಂದ ಕಲಿಲ ಮತ್ತು ದಿಮ್ನ ಎಂದು ಹೆಸರಾಗಿದೆಪರ್ಷಿಯನ್:کلیله و دمنه. ಕಲಿಲೆಹ್ ಒ ದೆನ್ಮೆಹ್ ಅಥವಾ ಅನ್ವರ್-ಇ ಸೊಹೆಯ್ಲಿ ಪರ್ಷಿಯನ್:انوار سهیلیಎಂಬ ಇತರ ಹೆಸರುಗಳೂ ಸೇರಿವೆ, (‘ದಿ ಲೈಟ್ಸ್ ಆಫ್ ಕ್ಯನೊಪಸ್’) ಅಥವಾ ದಿ ಫೇಬಲ್ಸ್ ಆಫ್ ಬಿದ್ಪಯ್ (ಅಥವಾ ವಿವಿಧ ಯುರೋಪಿಯನ್ ಭಾಷೆಗಳಲ್ಲಿ ಪಿಲ್ಪಯ್) ಅಥವಾ ದಿ ಮಾರಲ್ ಫಿಲಾಸೊಫಿ ಆಫ್ ದೊನಿ (ಇಂಗ್ಲೀಷ್ 1570).
ಹುರುಳು

ಪಂಚತಂತ್ರವು ಬಣ್ಣಬಣ್ಣದ ಸಣ್ಣ ನೀತಿ ಕಥೆಗಳ ಒಂದು ಅನ್ಯೊನ್ಯವಾಗಿ ಹೆಣೆಯಲ್ಪಟ್ಟ ಸರಣಿಯಾಗಿದೆ, ಅವುಗಳಲ್ಲಿ ಅನೇಕ ಕಥೆಗಳು ಪ್ರಾಣಿಗಳು ಪ್ರದರ್ಶಿಸುತ್ತಿರುವ ಒಂದೇ ಪಡಿಯಚ್ಚಿನ ಪ್ರಾಣಿಗಳನ್ನು ಒಳಗೊಂಡಿವೆ. ಅದರದ್ದೇ ಮೂಲ ವೃತ್ತಾಂತದ ಪ್ರಕಾರ, ಮೂರು ಮುಗ್ಧ ರಾಜಕುಮಾರರ ಪ್ರಯೋಜನಕ್ಕಾಗಿ, ನೀತಿಯ ಕೇಂದ್ರ ಹಿಂದೂ ಮೂಲ ತತ್ವವನ್ನು ಅದು ವಿವರಿಸುತ್ತದೆ. ಯಾವಾಗಲೂ ನೀತಿ ಯನ್ನು ಅನುವಾದಿಸಲು ಕಠಿಣವಾದರೆ, ಅದು ಹೆಚ್ಚು ಕಡಿಮೆ ದೂರದೃಷ್ಟಿಯ ಪ್ರಾಪಂಚಿಕ ನಡವಳಿಕೆ, ಅಥವಾ “ಜೀವನದ ಪರಿಜ್ಞಾನದ ವರ್ತನೆ” ಎಂದಾಗುತ್ತದೆ.
ಒಂದು ಚಿಕ್ಕ ಪರಿಚಯವೂ ಅಲ್ಲದೆ ಜೊತೆಗೆ, ರಾಜಕುಮಾರರಿಗೆ ಗ್ರಂಥದ ಉಳಿದ ಕಥನಗಳನ್ನು ವಿವರಿಸಿ ತಿಳಿಸುತ್ತಿರುವಂತೆ, ಲೇಖಕರಾದ, ವಿಷ್ಣು ಶರ್ಮರನ್ನು ಪರಿಚಯಿಸಲಾಗಿದೆ – ಅದು ಐದು ಭಾಗಗಳನ್ನು ಒಳಗೊಂಡಿದೆ. ಪ್ರತಿ ಭಾಗವು ಕಥೆಯ ಚೌಕಟ್ಟೆಂದು ಕರೆಯಲ್ಪಡುವ, ಮುಖ್ಯ ಕಥೆಯನ್ನು ಹೊಂದಿದೆ, ಒಂದು ಪಾತ್ರವು ಮತ್ತೊಂದಕ್ಕೆ ಕಥನವನ್ನು ತಿಳಿಸುತ್ತಿರುವಂತೆ, ಅದರಲ್ಲಿ ಮುಂದುವರಿಯುವ ಬೇರೆ ಅನೇಕ ಕಥೆಗಳನ್ನು ಕ್ರಮೇಣವಾಗಿ ಹೊಂದಿದೆ. ಸಾಮಾನ್ಯವಾಗಿ ಈ ಕಥನಗಳು ಮುಂದುವರಿದು ಒಳಗೊಂಡಂತಹ ಕಥೆಗಳನ್ನು ಹೊಂದಿವೆ. ಈ ರೀತಿಯಾಗಿ ವೃತ್ತಾಂತಗಳು, ಕೆಲವು ವೇಳೆ ಆಳವಾದ ಮೂರು ಅಥವಾ ನಾಲ್ಕು ಕಥನಗಳು, ಒಂದು ವೃತ್ತಾಂತವು ಮತ್ತೊಂದರಲ್ಲಿ ಪ್ರಾರಂಭವಾಗುತ್ತಾ, ಅನುಕ್ರಮವಾದ ರಷಿಯಾದ ಗೊಂಬೆಗಳಂತೆ ಕಾರ್ಯನಿರ್ವಹಿಸುತ್ತವೆ. ಈ ಕಥೆಗಳೂ ಅಲ್ಲದೆ, ತಮ್ಮ ಉದ್ದೇಶವನ್ನು ಮನದಟ್ಟು ಮಾಡಿಸಲು ಪಾತ್ರಗಳೂ ಸಹ ವಿವಿಧ ಸಂಕ್ಷೇಪೋಕ್ತಿಯ ಪದ್ಯಗಳನ್ನು ಉದ್ಧರಿಸುತ್ತವೆ.
ಆ ಐದು ಪುಸ್ತಕಗಳನ್ನು ಈ ರೀತಿ ಕರೆಯಲಾಗಿದೆ:
- ಮಿತ್ರ-ಭೇದ : ಮಿತ್ರರ ಅಗಲಿಕೆ (ಸಿಂಹ ಹಾಗೂ ಕೋಣ)
- ಮಿತ್ರ-ಲಾಭ ಅಥವಾ ಮಿತ್ರ-ಸಂಪ್ರಾಪ್ತಿ : ಮಿತ್ರರನ್ನು ಸಂಪಾದಿಸುವುದು (ಪಾರಿವಾಳ, ಕಾಗೆ, ಇಲಿ, ಆಮೆ ಮತ್ತು ಜಿಂಕೆ)
- ಕಾಕೊಲುಕೀಯಮ್ : ಕಾಗೆಗಳ ಹಾಗೂ ಗೂಬೆಗಳ (ಯುದ್ಧ ಹಾಗೂ ಶಾಂತಿ)
- ಲಬ್ಧಪ್ರಣಾಶನಮ್ : ಲಾಭದ ನಷ್ಟ (ಕೋತಿ ಮತ್ತು ಮೊಸಳೆ)
- ಅಪರೀಕ್ಷಿತಕಾರಕಮ್ : ಸರಿಯಾಗಿ-ಆಲೋಚಿಸದ ಕೆಲಸ / ದುಡುಕಿನ ಕೃತ್ಯಗಳು (ಬ್ರಾಹ್ಮಣ ಹಾಗೂ ಮುಂಗಸಿ)
ಭಾರತೀಯ ಆವೃತ್ತಿ
ಮಿತ್ರ-ಭೇದ, ಮಿತ್ರರ ಅಗಲಿಕೆ
ಮೊದಲನೆಯ ಪುಸ್ತಕದಲ್ಲಿ, ಕಾಡಿನ ರಾಜನಾದ, ಸಿಂಹ ಪಿಂಗಳಕ ಹಾಗೂ ಒಂದು ಕೋಣ, ಸಂಜೀವಕರ ಮಧ್ಯೆ ಗೆಳೆತನವು ಬೆಳೆಯುತ್ತದೆ. ಸಿಂಹ ರಾಜನನ್ನು ಹಿಂಬಾಲಿಸಿಕೊಂಡಿರುವಂತಹ ಎರಡು ನರಿಗಳು ಕರಟಕ (‘ಭಯಂಕರವಾಗಿ ಕೂಗುವ’) ಮತ್ತು ದಮನಕ (‘ವಿಜೇತ’)ರು. ದಮನಕನು ಹೊಟ್ಟೆಕಿಚ್ಚಿನಿಂದ, ಕರಟಕನ ಬುದ್ಧಿವಾದದ ವಿರುದ್ಧವಾಗಿ, ಸಿಂಹ ಹಾಗೂ ಕೋಣಗಳ ಮಧ್ಯದ ಗೆಳೆತನವನ್ನು ಮುರಿಯುತ್ತದೆ. ಅದು ಸುಮಾರು ಮೂವತ್ತು ಕಥೆಗಳನ್ನು ಹೊಂದಿದ್ದು, ಸಾಮಾನ್ಯವಾಗಿ ಎಲ್ಲವೂ ಎರಡು ನರಿಗಳಿಂದ ಹೇಳಲ್ಪಟ್ಟಿವೆ ಮತ್ತು ಗ್ರಂಥದ ಗಾತ್ರದ ಹೆಚ್ಚು ಕಡಿಮೆ ಶೇಕಡಾ 45 ರಷ್ಟು ಭಾಗವನ್ನು ಹೊಂದಿದ್ದು, ಐದು ಪುಸ್ತಕಗಳಲ್ಲಿ ಅತ್ಯಂತ ದೊಡ್ಡದಾಗಿದೆ.
“ಮಿತ್ರ-ಸಂಪ್ರಾಪ್ತಿ”, ಮಿತ್ರರ ಸಂಪಾದನೆ
ಕಪೋತ (ಅಥವಾ ಪಾರಿವಾಳ) ಮತ್ತು ಅದರ ಸ್ನೇಹಿತರನ್ನು ಮುಕ್ತಗೊಳಿಸಲು ಇಲಿಯು ಮಾಡಿದ ಉಪಕಾರವನ್ನು ನೋಡಿದ ಮೇಲೆ, ಅದರ ಮೂಲ ಆಕ್ಷೇಪಣೆಗಳಿದ್ದಾಗ್ಯೂ ಇಲಿಯ ಸ್ನೇಹ ಬೆಳೆಸಲು ನಿರ್ಧರಿಸಿದ ಕಾಗೆಯ ಕಥೆಯನ್ನು ಇದು ತಿಳಿಸುತ್ತದೆ. ಆಮೆ ಹಾಗೂ ಜಿಂಕೆಯ ಮರಿಯನ್ನು ಸೇರಿಸಿಕೊಳ್ಳಲು ಈ ಸ್ನೇಹತನವು ಬೆಳೆಯುತ್ತಾ ಹೋದಂತೆ ಕಥಾವಸ್ತುವು ವಿಸ್ತರಿಸುತ್ತದೆ. ಅವುಗಳು ಅದು ಬಲೆಗೆ ಬಿದ್ದಾಗ ಜಿಂಕೆಯ ಮರಿಯನ್ನು ಉಳಿಸಲು ಎಲ್ಲರೂ ಸೇರಿ ಕೆಲಸ ಮಾಡುತ್ತವೆ ಹಾಗೂ ನಂತರ ತನಗೆ ತಾನೇ ಬಲೆಯಲ್ಲಿ ಬಿದ್ದ ಆಮೆಯನ್ನು ಉಳಿಸಲು ಅವು ಒಟ್ಟಾಗಿ ಕೆಲಸ ಮಾಡುತ್ತವೆ. ಇದು ಒಟ್ಟು ಪೂರ್ಣ ಗಾತ್ರದ ಸುಮಾರು ಶೇಕಡಾ 22 ರಷ್ಟು ಆಗುತ್ತದೆ.
“ಕಾಕೋಲುಕಿಯಮ್”, ಕಾಗೆಗಳು ಮತ್ತು ಗೂಬೆಗಳ

ಕಾಗೆಗಳು ಮತ್ತು ಗೂಬೆಗಳ ನಡುವಿನ ಒಂದು ಕದನವನ್ನು ತಿಳಿಸುತ್ತದೆ. ಶತೃಗಳಾದ ಗೂಬೆಯ ಗುಂಪಿಗೆ ಪ್ರವೇಶ ಪಡೆಯಲು ತನ್ನ ಸ್ವಂತ ತಂಡದಿಂದಲೇ ಬಹಿಷ್ಕೃತನಾದಂತೆ ಕಾಗೆಗಳಲ್ಲೊಂದು ಸೋಗುಹಾಕುತ್ತದೆ ಮತ್ತು ಆ ರೀತಿ ಮಾಡಿ ಪ್ರವೇಶ ಪಡೆದು ಅವರ ಗುಟ್ಟುಗಳು ಹಾಗೂ ಅವರ ಭೇದ್ಯತೆಗಳನ್ನು ಕಲಿಯುತ್ತದೆ ಗೂಬೆಗಳು ವಾಸವಾಗಿದ್ದ ಗುಹೆಗೆ ಎಲ್ಲಾ ಒಳಹೋಗುವ ಮಾರ್ಗಗಳಲ್ಲಿ ಬೆಂಕಿಹಚ್ಚುವಂತೆ ತನ್ನ ಕಾಗೆಗಳ ಗುಂಪಿಗೆ ಅದು ನಂತರ ಆಜ್ಞಾಪಿಸಿ ಅವುಗಳು ಉಸಿರುಕಟ್ಟಿ ಸಾಯುವಂತೆ ಮಾಡುತ್ತದೆ. ಇದು ಒಟ್ಟು ಗಾತ್ರದ ಸುಮಾರು ಶೇಕಡಾ 26 ರಷ್ಟಿದೆ.
“ಲಬ್ಧಪ್ರಣಾಶಮ್”, ಲಾಭಗಳ ನಷ್ಟ
ಈ ಕಥೆಯು ಕೋತಿ ಹಾಗೂ ಮೊಸಳೆಯ ಮಧ್ಯದ ಕೃತ್ರಿಮವಾಗಿ ರಚಿಸಿದ ಒಟ್ಟಿಗೆ

ಜೀವಿಸುವ ಸಂಬಂಧದ ಜೊತೆ ನಡೆಯುತ್ತದೆ. ತನ್ನ ಪತ್ನಿಯನ್ನು ಗುಣಪಡಿಸಲು ಕೋತಿಯ ಹೃದಯವನ್ನು ಪಡೆಯಲು ಪಿತೂರಿ ಮಾಡಿ ಮೊಸಳೆಯು ಆ ಸಂಬಂಧವನ್ನು ಅಪಾಯಕ್ಕೆ ಗುರಿಮಾಡುತ್ತದೆ; ಕೋತಿಯು ಇದರ ಬಗ್ಗೆ ತಿಳಿದು ಆ ಕಠೋರ ಅದೃಷ್ಟವನ್ನು ನಿವಾರಿಸಿಕೊಳ್ಳುತ್ತದೆ.
“ಅಪರೀಕ್ಷಿತಕಾರಕಮ್”, ದುಡುಕಿನ ಕೆಲಸ
ಒಬ್ಬ ಬ್ರಾಹ್ಮಣನು ತನ್ನ ಸ್ನೇಹಿತನಾದ ಒಂದು ಮುಂಗುಸಿಯ ಹತ್ತಿರ ತನ್ನ ಮಗುವನ್ನು ಬಿಟ್ಟು ಹೋಗುತ್ತಾನೆ, ಮತ್ತು ಹಿಂದಿರುಗಿದ ಮೇಲೆ ಮುಂಗುಸಿಯ ಬಾಯಿಯಲ್ಲಿ ರಕ್ತವನ್ನು ನೋಡಿದವನೇ, ಅದನ್ನು ಕೊಲ್ಲುತ್ತಾನೆ. ಅವನು ನಂತರ ನಿಜವಾಗಿಯೂ ಒಂದು ಹಾವಿನಿಂದ ತನ್ನ ಮಗುವನ್ನು ಮುಂಗುಸಿಯು ರಕ್ಷಿಸಿರುವುದನ್ನು ನೋಡುತ್ತಾನೆ.
ಅರಬ್ಬೀ ಅವತರಣಿಕೆಗಳು
ಇಬ್ನ್ ಅಲ್-ಮುಕ್ವಫನು ಪಂಚತಂತ್ರ ವನ್ನು ಮಧ್ಯ ಪರ್ಷಿಯಾದಿಂದ ಕಲಿಲ ವ ದಿಮ್ನ ಎಂದು ಅನುವಾದಿಸಿದರು ಹಾಗೂ ಇದು “ಅರಬ್ಬಿ ಸಾಹಿತ್ಯಕ ಗದ್ಯದ ಮೊದಲ ಅತ್ಯುತ್ತಮ ಕೃತಿ ಎಂದು ಪರಿಗಣಿತವಾಗಿದೆ”. ಸಂಸ್ಕೃತದ ಅವತರಣಿಕೆಯು ಅರಬ್ಬಿ ಭಾಷೆಗೆ ಪಹ್ಲವಿ ಮುಖಾಂತರ ನೂರಾರು ವರ್ಷಗಳು ವಲಸೆ ಹೋಗುವ ವೇಳೆಗೆ, ಕೆಲವು ಮುಖ್ಯವಾದ ವ್ಯತ್ಯಾಸಗಳು ಉದ್ಭವಿಸಿದವು.
ಮೊದಲ ಪುಸ್ತಕದ ಪರಿಚಯ ಹಾಗೂ ಕಥೆಯ ಚೌಕಟ್ಟು ಬದಲಾಯಿಸಿತು.
ಎರಡೂ ನರಿಗಳ ಹೆಸರುಗಳು ಕಲಿಲ ಮತ್ತು ದಿಮ್ನ ಎಂದು ಮಾಂತ್ರಿಕವಾಗಿ ರೂಪಾಂತರಿಸಲ್ಪಟ್ಟವು. ಹಾಗಯೇ, ಬಹುಶಃ ಮೊದಲ ವಿಭಾಗದ ಗಾತ್ರದ ಕಾರಣ, ಅಥವಾ ಸಂಸ್ಕೃತ ಪದ ‘ಪಂಚತಂತ್ರ’ವು ಹಿಂದು ಕಲ್ಪನೆಯಾಗಿ ಜೋರಾಷ್ಟ್ರಿಯನ್ ಪಹ್ಲವಿಯಲ್ಲಿ ಸುಲಭವಾದ ಸಮಾನಾರ್ಥವುಳ್ಳದ್ದು ಸಿಗದ ಕಾರಣ, ಅವರ ಹೆಸರುಗಳು (ಕಲಿಲ ಮತ್ತು ದಿಮ್ನ) ಸಂಪೂರ್ಣ ಗ್ರಂಥಕ್ಕೆ ವೈಶಿಷ್ಟ್ಯಪೂರ್ಣ ಉತ್ಕೃಷ್ಟ ಹೆಸರಾಯಿತು.
ಮೊದಲ ಪರಿಚ್ಛೇದದ ನಂತರ ಇಬ್ನ್ ಅಲ್-ಮುಕ್ವಫರಿಂದ ಒಂದು ಹೊಸ ಅಧ್ಯಾಯವು ಒಳಸೇರಿಸಲ್ಪಟ್ಟಿತು, ಹಾಗೂ ಮೊದಲ ಅಧ್ಯಾಯದ ನಂತರ ಹಾಗೂ ಮೊದಲ ಅಧ್ಯಾಯದಲ್ಲಿ ಪ್ರಸ್ತಾಪಿಸಲ್ಪಟ್ಟ “ಷಾನಜೆಬೆಹ್” ಕೋಣದ ಸಾವಿಗೆ ಉದ್ದೇಶಪೂರ್ವಕವಾಗಿ ಕಾರಣವಾಯಿತೆಂದು ಅದು ಸಂಶಯಕ್ಕೊಳಪಟ್ಟ ನಂತರ ನರಿ ದಿಮ್ನನ ನ್ಯಾಯವಿಚಾರಣೆಯನ್ನು ತಿಳಿಸುತ್ತದೆ. ಹುಲಿ ಮತ್ತು ಚಿರತೆಯು ಮುಂದೆ ಬಂದು ದಿಮ್ನನನ್ನು ಆಪಾದಿಸುವವರೆಗೂ ವಿಚಾರಣೆಯು ಲಾಭವಿಲ್ಲದೆ 2 ದಿನಗಳ ವರೆಗೆ ನಡೆಯುತ್ತದೆ. ಅದು ಆನಂತರ ವಿಶ್ರಾಂತಿ ಪಡೆಯಿತು.
ಕೆಲವು ಪ್ರಾಣಿಗಳ ಹೆಸರನ್ನು ಬದಲಾಯಿಸಲಾಗಿದೆ. ನಾಲ್ಕನೆಯ ಅಧ್ಯಾಯದಲ್ಲಿ ಮೊಸಳೆಯ ಹೆಸರನ್ನು ಅಲ್ಘಲಿಮ್ ಎಂದೂ, ಮುಂಗುಸಿಯನ್ನು ವಿಯಸೆಲ್ ಎಂದೂ ಹಾಗೂ ಬ್ರಾಹ್ಮಣನು “ಸನ್ಯಾಸಿ”ಯಾಗಿ ಬದಲಾಗುತ್ತಾರೆ.
ಪ್ರತಿ ಪರಿಚ್ಛೇದಕ್ಕೂ ನೀತಿ ಕಥೆಗಳನ್ನು ಸೇರಿಸಲಾಗಿದೆ:
- ಯಾರೊಬ್ಬರೂ ಬೇರೆಯವರನ್ನು ಸುಳ್ಳಾಗಿ ಆಪಾದಿಸಬಾರದು ಮತ್ತು ಗೆಳೆತನವನ್ನು ಸಂರಕ್ಷಿಸಲು ಹೋರಾಡಬೇಕು.
- (ಸೇರಿಸಲ್ಪಟ್ಟ ಅಧ್ಯಾಯ) ಇಂದಲ್ಲ ನಾಳೆಯಾದರೂ ಸತ್ಯವು ಹೊರಬರಲೇ ಬೇಕು.
- ಗೆಳೆಯರು ಜೀವನದ ಒಂದು ಅವಿಭಾಜ್ಯ ಅಂಗ.
- ಪಶುತರಹದ ಶಕ್ತಿಗಿಂತ ಮಾನಸಿಕ ದೃಢತೆ ಹಾಗೂ ಮೋಸಮಾಡದೇ ಇರುವುದು ಶ್ರೇಷ್ಠ ತರಹ.
- ಯಾರೊಬ್ಬರೂ ಮಿತ್ರರನ್ನು ವಂಚಿಸಬಾರದು ಮತ್ತು ಎಲ್ಲಾ ಸಮಯದಲ್ಲೂ ಜಾಗರೂಕರಾಗಿ ನಿಂತಿರಬೇಕು.
- ಯಾರೂ ನ್ಯಾಯ ತೀರ್ಮಾನ ತೆಗೆದುಕೊಳ್ಳುವಾಗ ಆತುರರಾಗಿರಭಾರದು.
ಬೇರೆ ನೀತಿಕಥೆಗಳ ಜೊತೆ ಸಂಬಂಧ
ಪಂಚತಂತ್ರ ಮತ್ತು ಇಸೋಪನ ನೀತಿ ಕಥೆಗಳಲ್ಲಿ ಅನೇಕ ಚಿಕ್ಕ ಕಥೆಗಳ ನಡುವೆ ಒಂದು ಭದ್ರವಾದ ಹೋಲಿಕೆ ಕಾಣಿಸುತ್ತದೆ. ‘ಚಿರತೆಯ ಚರ್ಮದಲ್ಲಿ ಕತ್ತೆ’ ಹಾಗೂ ‘ಹೃದಯ ಮತ್ತು ಕಿವಿಗಳಿಲ್ಲದ ಕತ್ತೆ’ ಉದಾಹರಣೆಗಳಾಗಿವೆ. ‘ಮುರಿದ ಕೊಡ’ವು ಇಸೊಪನ ಹಾಲು ಮಾರುವಳು ಹಾಗೂ ಅವಳ ಬಕೇಟು ಇದಕ್ಕೆ ಸಮನಾಗಿದೆ ಹಾಗೂ ಬಂಗಾರ ಕೊಡುವ ಹಾವು ಇಸೊಪನ ಮನುಷ್ಯ ಮತ್ತು ಹಾವಿನ ಕಥೆಗೆ ಸಾದೃಷ್ಯವಾಗಿದೆ. ಆಮೆ ಮತ್ತು ಬಾತು ಕೋಳಿಗಳು ಹಾಗೂ ಹುಲಿ, ಬ್ರಾಹ್ಮಣ ಮತ್ತು ನರಿಗಳು, ಇವುಗಳು ಇತರೆ ಪ್ರಖ್ಯಾತವಾದ ಕಥೆಗಳು. ಇದೇ ರೀತಿಯ ಪ್ರಾಣಿಗಳನ್ನೊಳಗೊಂಡ ನೀತಿ ಕಥೆಗಳು ವಿಶ್ವದ ಬಹುತೇಕ ಸಂಸ್ಕೃತಿಗಳಲ್ಲಿ ದೊರಕುತ್ತವೆ, ಆದರೆ ಕೆಲವು ಪ್ರಾಚೀನ ಕಥೆಗಾರರು ಭಾರತವನ್ನು ಪ್ರಧಾನ ಆಕರವೆಂದು ನೋಡುತ್ತಾರೆ. “ವಿಶ್ವದ ನೀತಿ ಕಥೆಗಳ ಸಾಹಿತ್ಯದ ಮುಖ್ಯ ಮೂಲವೆಂದೂ” ಸಹ ಅದು ಪರಿಗಣಿತವಾಗಿದೆ.
ತನ್ನ ಎರಡನೆಯ ಅದ್ಭುತ ನೀತಿ ಕಥೆಗಳಿಗೆ ಪರಿಚಯದಲ್ಲಿ ಕೃತಿಗೆ ತನ್ನ ಉಪಕೃತ್ಯತೆಯನ್ನು ಫ್ರೆಂಚ್ ನೀತಿ ಕಥೆಗಾರ ಜೀನ್ ಡೆ ಲ ಫಾಂಟೈನ್ ಪ್ರಖ್ಯಾತವಾಗಿ ಒಪ್ಪಿಕೊಂಡಿದ್ದಾರೆ:
“ಸಾರ್ವಜನಿಕರಿಗೆ ನಾನು ಪ್ರಸ್ತುತ ಪಡಿಸುತ್ತಿರುವ ನೀತಿ ಕಥೆಗಳ ಎರಡನೆಯ ಪುಸ್ತಕವಿದು … ಒಬ್ಬ ಭಾರತೀಯ ಸನ್ಯಾಸಿ ಪಿಲ್ಪೆ ಯಿಂದ ಅತ್ಯಂತ ಹೆಚ್ಚು ಭಾಗವು ಪ್ರಚೋದಿಸಲ್ಪಟ್ಟಿದ್ದೇನೆ ಎಂದು ನಾನು ಒಪ್ಪಿಕೊಳ್ಳಲೇಬೇಕು”ಅದು ಅರೇಬಿಯನ್ ನೈಟ್ಸ್, ಸಿಂದ್ ಬಾದ್ ಮತ್ತು ಅನೇಕ ಪಾಶ್ಚಿಮಾತ್ಯ ವಿಹಾರದ ಮಕ್ಕಳ ಶಿಶುಗೀತೆಗಳು ಹಾಗೂ ಜಾನಪದ ಹಾಡುಗಳಲ್ಲಿನ ಅನೇಕ ಕಥೆಗಳಿಗೂ ಸಹ ಆಕರವಾಗಿದೆ.
ಆಕರಗಳು ಹಾಗೂ ಕೆಲಸ

ಭಾರತೀಯ ಪರಂಪರೆಯಲ್ಲಿ, ಪಂಚತಂತ್ರವು ಒಂದು nītiśāstra ಆಗಿದೆ. ನೀತಿ ಯನ್ನು ಸುಮಾರಾಗಿ “ಜೀವನದ ಜ್ಞಾನಪ್ರದ ವರ್ತನೆಯೆಂದು” ಅನುವಾದಿಸಬಹುದು ಹಾಗೂ ಒಂದು ಶಾಸ್ತ್ರ ವು ತಾಂತ್ರಿಕ ಅಥವ ವೈಜ್ಞಾನಿಕ ಮೀಮಾಂಸೆ ಎಂದಾಗುತ್ತದೆ; ಹೀಗೆ ಅದು ರಾಜಕೀಯ ವಿಜ್ಞಾನ ಮತ್ತು ಮನವೀಯ ವರ್ತನೆಯ ಮೇಲಿನ ಒಂದು ಪ್ರಬಂಧ ಗ್ರಂಥ. ಅದರ ಸಾಹಿತ್ಯಕ ಆಕರಗಳು ಹೀಗಿವೆ “ವಿಶೇಷ ಅನುಭವ ಹೊಂದಿರುವ ಕಥೆ ಹೇಳುವ ರಾಜಕೀಯ ವಿಜ್ಞಾನ ಹಾಗೂ ಜಾನಪದ ಮತ್ತು ಸಾಹಿತ್ಯಕ ಪರಂಪರೆಯ ಪ್ರಬುದ್ಧ ನಂಬಿಕೆ”. ಅವುಗಳನ್ನು ವ್ಯಾಪಕವಾಗಿ ಉಲ್ಲೇಖಿಸುತ್ತಾ, ಹೆಚ್ಚಿನದನ್ನು ಧರ್ಮ ಮತ್ತು ಅರ್ಥ ಶಾಸ್ತ್ರ ಗಳಿಂದ ಆರಿಸಲಾಗಿದೆ. “ಪುರುಷರ ಪ್ರಪಂಚದಲ್ಲಿ ಜೀವನದಿಂದ ಸಾಧ್ಯವಾದಷ್ಟು ಅತ್ಯಂತ ಉನ್ನತ ಸಂತೋಷವನ್ನು ಹೇಗೆ ಜಯಿಸುವುದೆಂಬ ಆಗ್ರಹದ ಪ್ರಶ್ನೆಯ ಉತ್ತರಕ್ಕೆ ನೀತಿ ಯು” ಒಂದು ಶ್ಲಾಘನೀಯ ಪ್ರಯತ್ನವನ್ನು ಪ್ರತಿನಿಧಿಸುತ್ತದೆ ಎಂದು ಗ್ರಂಥದಿಂದ ಅವುಗಳನ್ನು ವ್ಯಾಪಕವಾಗಿ ಉಲ್ಲೇಖಿಸುತ್ತಲೂ ಸಹ ವಿವರಿಸಲ್ಪಟ್ಟಿದೆ ಹಾಗೂ “ಸುರಕ್ಷತೆ, ಅಭ್ಯುದಯ, ದೃಢ ಸಂಕಲ್ಪದ ಕಾರ್ಯ, ಗೆಳೆತನ ಹಾಗೂ ಶ್ರೇಷ್ಠ ಅಧ್ಯಯನವು ಸಂತೋಷವನ್ನು ಉತ್ಪನ್ನ ಮಾಡಲು ಹೇಗೆ ಸೇರಿಸಲ್ಪಟ್ಟಿದೆಯೆಂದರೆ ಅದರಲ್ಲಿ ಒಂದು ಜೀವನವು, ಮಾನವನ ಶಕ್ತಿಗಳ ಸಾಮರಸ್ಯವಾದ ಬೆಳವಣಿಗೆಯೇ ನೀತಿ ಯಾಗಿದೆ”
ಕ್ರಿಸ್ತ ಪೂರ್ವ 400 ರ ಸುಮಾರಿಗೆ ಅವರು ನಿರ್ವಾಣ ಹೊಂದುವ ಮೊದಲು ಐತಿಹಾಸಿಕ ಬುದ್ಧರಿಂದ ಖಚಿತವಾಗಿ ಪ್ರಸ್ತಾಪಿಸಲ್ಪಟ್ಟ ಬುದ್ಧನ ಜಾತಕ ಕಥೆಗಳ ಜೊತೆ ಅನೇಕ ಕಥೆಗಳು ಸಾಮಾನ್ಯವಾಗಿ ಪಂಚತಂತ್ರವು ಹಂಚಿಕೊಳ್ಳುತ್ತದೆ, ಆದರೆ “ಬುದ್ಧರು ಕಥನಗಳನ್ನು ಕಂಡು ಹಿಡಿಯಲಿಲ್ಲವೆಂಬುದು ಸ್ಪಷ್ಟವಾಗಿದೆ. […] ಪಂಚತಂತ್ರದ ಲೇಖಕರು ಜಾತಕ ಕಥೆಗಳು ಅಥವಾ ಮಹಾಭಾರತ ದಿಂದ ಆಖ್ಯಾಯಿಕೆಗಳನ್ನು ಎರವಲು ಪಡೆದರೆ ಇಲ್ಲವೇ ಪುರಾತನ ಭಾರತದ, ಮೌಖಿಕ ಮತ್ತು ಸಹಿತ್ಯಕವೆರಡನ್ನೂ, ಕಥೆಗಳ ಸಾಮಾನ್ಯ ಭಂಡಾರಗಳಿಗೆ ಅವರು ಮೆಲ್ಲನೆ ತಟ್ಟುತ್ತಿದ್ದರೆ ಅಥವಾ ಇಲ್ಲವೆ ಎಂಬುದು ಸ್ವಲ್ಪ ಸಂದಿಗ್ಧವಾಗಿದೆ.” ನಿರ್ಧಾರಾತ್ಮಕ ಪುರಾವೆಯಿಲ್ಲದಿದ್ದಾಗ್ಯೂ, ಪುರಾತನ ಜಾನಪದ ಪರಂಪರೆಗಳ ಮೇಲೆ ಅವು ಆಧಾರಿತವಾಗಿವೆ ಎಂದು ಅನೇಕ ವಿದ್ವಾಂಸರು ನಂಬುತ್ತಾರೆ. ಡಬ್ಲು. ನಾರ್ಮನ್ ಬ್ರೌನ್ ಈ ಸಂಗತಿಯನ್ನು ಚರ್ಚಿಸಿದರು ಹಾಗೂ ಆಧುನಿಕ ಭಾರತದಲ್ಲಿ, ಅನೇಕ ಜಾನಪದ ಕಥೆಗಳು ಸಾಹಿತ್ಯಕ ಆಕರಗಳಿಂದ ಅನುಕರಣ ಮಾಡಲ್ಪಟ್ಟಿವೆಯೆಂದು ತಿಳಿದರು ಮತ್ತು ಅವು ತದ್ವಿರುದ್ಧವಾಗಲ್ಲ.
ಪಂಚತಂತ್ರದ ಬಗ್ಗೆ ಮೊಟ್ಟ ಮೊದಲ ಪಾಶ್ಚಿಮಾತ್ಯ ವಿದ್ವಾಂಸರಲ್ಲೊಬ್ಬರಾದ ಡಾ. ಜೋಹನ್ನೆಸ್ ಹೆರ್ಟೆಲ್ ರವರು, ಈ ಗ್ರಂಥವನ್ನು ಒಂದು ಮ್ಯಚಿಯವೆಲ್ಲಿಯನ್ ಪಾತ್ರವನ್ನು ಹೊಂದಿರುವಂತೆ ಅವಲೋಕಿಸಿದರು. ಹಾಗೆಯೇ, “ಕಥೆಗಳ ಹಾಗೆಂದು ಕರೆಯಲಾಗುವ ‘ನೀತಿಗಳು’ ನೈತಿಕತೆಯ ಮೇಲೆ ಯಾವುದೇ ಪರಣಾಮ ಹೊಂದಿಲ್ಲವೆಂದು ಎಡ್ಗರ್ಟನ್ ಗಮನಿಸಿದರು; ಅವು ಅನೀತಿಯ ಮತ್ತು ಕೆಲವು ವೇಳೆ ನೀತಿಗೆಟ್ಟವುಗಳು. ಜೀವನದ ಕಾರ್ಯಗಳಲ್ಲಿ ಹಾಗೂ ವಿಶೇಷವಾಗಿ ರಾಜಕೀಯದ, ಸರ್ಕಾರದ, ವ್ಯವಹಾರ ಕುಶಲತೆ ಮತ್ತು ವ್ಯಾವಹಾರಿಕ ಬುದ್ಧಿವಂತಿಕೆಯನ್ನು ಅವು ವೈಭವೀಕರಿಸುತ್ತವೆ.” ಇತರೆ ವಿದ್ವಾಂಸರು ಇದು ಏಕಪಕ್ಷೀಯವೆಂದು ಈ ಸಲಹೆಯನ್ನು ತಳ್ಳಿಹಾಕುತ್ತಾರೆ ಮತ್ತು ಕಲಿಸಲು dharma ಅಥವಾ ಸರಿಯಾದ ನೀತಿ ವರ್ತನೆ ಎಂದೂ ಸಹ ಈ ಕಥೆಗಳನ್ನು ಅವಲೋಕಿಸುತ್ತಾರೆ. ಹಾಗೆಯೇ
On the surface, the Pañcatantra presents stories and sayings which favor the outwitting of roguery, and practical intelligence rather than virtue. However, [..] From this viewpoint the tales of the Pañcatantra are eminently ethical. […] the prevailing mood promotes an earthy, moral, rational, and unsentimental ability to learn from repeated experience[.]
ಒಲಿವೆಲ್ಲೆ ಗಮನಿಸಿದಂತೆ:
Indeed, the current scholarly debate regarding the intent and purpose of the Pañcatantra — whether it supports unscrupulous Machiavellian politics or demands ethical conduct from those holding high office — underscores the rich ambiguity of the text.
ಉದಾಹರಣೆಗೆ, ಮೊದಲ ಚೌಕಟ್ಟಿನ ಕಥೆಯಲ್ಲಿ, ಜಯಶಾಲಿಯಾಗಿದ್ದು ದುಷ್ಟ ದಮನಕ (‘ಗೆದ್ದವನು’) ಮತ್ತು ಅದರ ಒಳ್ಳೆಯ ಸಹೋದರ ಕರಟಕನಲ್ಲ. ವಾಸ್ತವವಾಗಿ, ಅದರ ದೃಢವಾದ ಪಶ್ಚಿಮದ ಕಡೆಗೆ ವಲಸೆಯು ಕಲಿಲ ಮತ್ತು ದಿಮ್ನ ಭಾಗ ಒಂದರಲ್ಲಿ ಕೆಟ್ಟ-ಜಯಶೀಲತೆಯ ಕೆಲಸ ಸಾಧಿಸುವ ವಿಷಯ, ಮತ್ತೆ ಮತ್ತೆ ಜ್ಯೂಗಳು, ಕ್ರಿಶ್ಚಿಯನ್ನರು ಹಾಗೂ ಮುಸ್ಲಿಮ್ ಧಾರ್ಮಿಕ ಮುಖಂಡರನ್ನು ಕೋಪಗೊಳಿಸಿತು – ನಿಶ್ಚಯವಾಗಿಯೂ, ಕೊನೆಗೆ ಇಬ್ನ್ ಅಲ್-ಮುಕ್ವಫ ಎಚ್ಚರಿಕೆಯಿಂದ ತನ್ನ ಉತ್ಕೃಷ್ಟ ಕೃತಿಯ ಭಾಗ ಒಂದರ ಕೊನೆಯಲ್ಲಿ ಒಂದು ಸಂಪೂರ್ಣ ಹೆಚ್ಚುವರಿ ಅಧ್ಯಾಯವನ್ನು ಒಳಸೇರಿಸಿದನು (ತನ್ನ ಸ್ವಂತ ಪ್ರಕ್ಷುಬ್ಧ ಕಾಲದಲ್ಲಿ ಶಕ್ತಿಶಾಲಿ ಧಾರ್ಮಿಕ ಮತಾಂಧರನ್ನು ಸಮಾಧಾನಗೊಳಿಸಲು ನಿಸ್ಸಂದೇಹವಾಗಿ ಆಶಿಸುತ್ತಾ) ದಿಮ್ನನನ್ನು ಜೈಲಿನಲ್ಲಿ ನ್ಯಾಯವಿಚಾರಣೆಗೆ ಒಳಪಡಿಸಿ ಮತ್ತು ಕೊನೆಗೆ ಮರಣದಂಡನೆ ವಿಧಿಸಿದರು.
ಮೊದಲ-ಇಸ್ಲಾಂ ಧರ್ಮದ ಮೂಲದ, ಪಂಚತಂತ್ರ ವು ಅಂತಹ ಯಾವುದೇ ಸ್ವಮತಾಭಿಮಾನದ ನೀತಿಯನ್ನು ಉಪದೇಶಿಸುವುದನ್ನು ಹೊಂದಿಲ್ಲ. 1888 ರಲ್ಲಿ ಜೋಸೆಫ್ ಜೇಕಬ್ ರವರು ಗಮನಿಸಿದಂತೆ, “… ಒಬ್ಬರು ಅದರ ಬಗ್ಗೆ ಯೋಚಿಸಿದಾಗ ಅದನ್ನು ಪ್ರಸ್ತಾಪಿಸದಂತೆಯೇ ಅದರ ನೀತಿಯನ್ನು ಸಣ್ಣ ನೀತಿ ಕಥೆಯು ಅದೇ ಇರುವ ಕಾರಣವನ್ನು ಸೂಚಿಸುವುದಾಗಿದೆ.
ಅಡ್ಡ-ಸಾಂಸ್ಕೃತಿಕ ವಲಸೆಗಳು
ಆರನೆಯ ಶತಮಾನದಿಂದ ವರ್ತಮಾನದವರೆಗೆ ಈ ಗ್ರಂಥವು ಅನೇಕ ಬೇರೆ ಬೇರೆ ಅವತರಣಿಕೆಗಳು ಹಾಗೂ ಅನುವಾದಗಳಿಗೆ ಒಳಪಟ್ಟು ಬದಲಾವಣೆಗೊಂಡಿದೆ. 570 ರಲ್ಲಿ ಬೋರ್ಜುಯಾ ರಿಂದ ಪರದೇಶದ ಭಾಷೆಗೆ ಮೂಲ ಭಾರತೀಯ ಅವತರಣಿಕೆಯು ಮೊದಲು ಅನುವಾದಿಸಲ್ಪಟ್ಟಿತು, ನಂತರ 750 ರಲ್ಲಿ ಅರಬ್ಬಿ ಭಾಷೆಗೆ, ಹಾಗೂ ಇದು ಇತರ ಎಲ್ಲಾ ಯುರೋಪಿಯನ್ ಭಾಷೆಯ ಅವತರಣಿಕೆಗೆ ಆಕರವಾಯಿತು.
ಮೊದಲಿನ ಮಿಶ್ರ-ಸಾಂಸ್ಕೃತಿಕ ವಲಸೆಗಳು
ಸುಮಾರು ಕ್ರಿಸ್ತ ಪೂರ್ವ 200 ರ ಸುತ್ತ ಮುತ್ತ ಮೂಲವಾಗಿ ಬರೆಯಲ್ಪಟ್ಟಿದ್ದರೂ, ಕ್ರಿಸ್ತ poova 1 ನೆಯ ಶತಮಾನದೊಳಗೆ ಪಂಚತಂತ್ರ ವು ತನ್ನ ಪ್ರಚಲಿತ ಸಾಹಿತ್ಯಕ ರೂಪವೆಂದು ಅಂದಾಜುಮಾಡಲ್ಪಟ್ಟಿದೆ. ಕ್ರಿಸ್ತ ಶಕ 1000 ವರ್ಷದ ಮುಂಚಿನ ಯಾವುದೇ ಸಂಸ್ಕೃತ ಗ್ರಂಥಗಳು ಜೀವಂತವಾಗಿ ಉಳಿದಿಲ್ಲ. ಭಾರತೀಯ ಪರಂಪರೆಯ ಪ್ರಕಾರ, ಒಬ್ಬ ಸನ್ಯಾಸಿ, ಪಂಡಿತ ವಿಷ್ಣು ಶರ್ಮ ರಿಂದ ಅದು ಬರೆಯಲ್ಪಟ್ಟಿತು. ವಿಶ್ವ ಸಾಹಿತ್ಯಕ್ಕೆ ಅತ್ಯಂತ ಪ್ರಭಾವಶಾಲಿ ಸಂಸ್ಕೃತದ ಕೊಡುಗೆಗಳಲ್ಲಿ ಒಂದಾದ ಇದು ತೀರ್ಥಯಾತ್ರೆಯಲ್ಲಿದ್ದ ಬೌದ್ಧ ಸನ್ಯಾಸಿಗಳಿಂದ, ಅದು (ಬಹುಶಃ ಮೌಖಿಕ ಮತ್ತು ಸಾಹಿತ್ಯಕ ಆಕಾರಗಳೆರಡರಲ್ಲೂ) ಉತ್ತರದಿಂದ ಟಿಬೆಟ್ ಹಾಗೂ ಚೀನಾಕ್ಕೆ ಮತ್ತು ಪೂರ್ವದಿಂದ ಆಗ್ನೇಯ ಏಷಿಯಾಕ್ಕೆ ರಫ್ತಾಯಿತು. ಟಿಬೆಟಿಯನ್ನರ, ಚೈನಾದವರ, ಮಂಗೋಲಿಯನ್ನರ, ಜಾವಾ ಹಾಗೂ ಲಾವೋ ದವರ ಉತ್ಪನ್ನಗಳನ್ನು ಒಳಗೊಂಡು, ಇವುಗಳು ಎಲ್ಲಾ ಆಗ್ನೇಯ ದೇಶಗಳಲ್ಲಿನ ಭಾಷಾಂತರಗಳಿಗೆ ದಾರಿ ಮಾಡಿಕೊಟ್ಟಿತು.
ಭಾರತದಿಂದ ಈ ಗ್ರಂಥವನ್ನು ಬೋರ್ಜುಯ್ ಹೇಗೆ ತಂದರು
ಕರಿರಕ್ ಉದ್ ದಮನಕ್ ಅಥವಾ ಕಲಿಲೆ ವ ದೆಮ್ನೆ ಎಂದು ಸಾಹಿತ್ಯಕವಾಗಿ ಅನುವಾದವಾಗಿ, ಮಧ್ಯ ಪರ್ಷಿಯಾ ಭಾಷೆಗೆ ಸಂಸ್ಕೃತದಿಂದ ಅದನ್ನು ಅವೆರ ಪ್ರಸಿದ್ಧ ವೈದ್ಯನಾದ ಬೋರ್ಜುಯ್ ಅನುವಾದಿಸಿದಾಗ, ಕ್ರಿಸ್ತ ಶಕ 570 ರ ಸುತ್ತಮುತ್ತ ಖುಸ್ರು I ಅನುಶಿರವನ್ ರ ಸಸ್ಸಾನಿಡ್ ಪ್ರಾಂತದ ಆಳ್ವಿಕೆಯ ಅವಧಿಯಲ್ಲಿ, ಪಂಚತಂತ್ರ ವು ಪಶ್ಚಿಮಾಭಿಮುಖವಾಗಿಯೂ ಸಹ ವಲಸೆ ಹೋಯಿತು.
ಶಾಹ ನಾಮಾ ದಲ್ಲಿ ಹೇಳಿದ ಒಂದು ಕಥನದ ಪ್ರಕಾರ, (ರಾಜರುಗಳ ಗ್ರಂಥ , ಪರ್ಷಿಯಾ ದಲ್ಲಿ ಹತ್ತನೆಯ ಶತಮಾನದ ಕೊನೆಯ ಹೊತ್ತಿಗೆ ಫಿರೊಡೌಸಿಯಿಂದ ಬರೆಯಲ್ಪಟ್ಟ ರಾಷ್ಟ್ರೀಯ ಪುರಾಣ) “ಒಂದು ಮಿಶ್ರಣಕ್ಕೆ ಬೆರೆಸಿ ಹಾಗೂ ಒಂದು ಶವದ ಮೇಲೆ ಪ್ರೋಕ್ಷಿಸಿದಾಗ ಅದು ತಕ್ಷಣವೇ ಪುನಃ ಜೀವ ಪಡೆಯುತ್ತದೆ” ಎಂದು ತಾನು ಒಂದು ಪರ್ವತೀಯ ಔಷಧೀಯ ಸಸ್ಯದ ಬಗ್ಗೆ ಓದಿದ್ದನ್ನು ಹುಡುಕಿಕೊಂಡು ಹಿಂದೂಸ್ತಾನಕ್ಕೆ ಒಂದು ಚಿಕ್ಕ ಪ್ರವಾಸ ಮಾಡಲು ಬೋರ್ಜುಯ್ ತನ್ನ ರಾಜರ ಅಪ್ಪಣೆಯನ್ನು ಕೋರಿದರು. ಅವರು ಅಲ್ಲಿಗೆ ತಲುಪಿದಾಗ, ಅವರು ಆ ಸಸ್ಯವನ್ನು ಕಾಣಲಿಲ್ಲ, ಮತ್ತು ಬದಲಿಗೆ ಒಬ್ಬ ಬುದ್ಧಿವಂತ ಸನ್ಯಾಸಿಯಿಂದ “ಒಂದು ವಿಭಿನ್ನ ಅರ್ಥ ವಿವರಣೆ ತಿಳಿಸಲ್ಪಟ್ಟರು. ಆ ಸಸ್ಯವೇ ವಿಜ್ಞಾನಿ; ವಿಜ್ಞಾನವೇ ಪರ್ವತ, ಶಾಶ್ವತವಾಗಿ ಜನಸ್ತೋಮದಿಂದ ಬಹು ದೂರವಾಗಿ ಸಿಗುವಂತಹದಲ್ಲ. ಜ್ಞಾನವಿಲ್ಲದ ಮನುಷ್ಯನೇ ಶವ, ಏಕೆಂದರೆ ಶಿಕ್ಷಣ ಪಡೆಯದಂತಹ ವ್ಯಕ್ತಿಯು ಎಲ್ಲೆಲ್ಲಿಯೂ ಶವದಂತೆ. ಜ್ಞಾನದ ಮುಖಾಂತರ ವ್ಯಕ್ತಿಯು ಪುನಃ ಜೀವಕಳೆ ಪಡೆಯುತ್ತಾನೆ.” ಆ ಸನ್ಯಾಸಿಯು ಕಲಿಲ ಗ್ರಂಥವನ್ನು ಸೂಚಿಸುತ್ತಾರೆ, ಹಾಗೂ ಕೆಲವು ಪಂಡಿತರ ಸಹಾಯದಿಂದ ಆ ಪುಸ್ತಕವನ್ನು ಓದಿ ಅನುವಾದಿಸಲು ಅವರು ತಮ್ಮ ರಾಜರ ಒಪ್ಪಿಗೆಯನ್ನು ಪಡೆದರು.
ಇಬ್ನ್ ಅಲ್-ಮುಕ್ವಫ ರಿಂದ ಬರೆಯಲ್ಪಟ್ಟ ಅರಬ್ಬಿ ಉತ್ಕೃಷ್ಟ ಗ್ರಂಥ
750 ರ ಸುತ್ತಮುತ್ತ ಇಬ್ನ್ ಅಲ್-ಮುಕ್ವಫ ರಿಂದ ಅರೆಬಿಕ್ ಭಾಷೆಗೆ ಸುಮಾರು ಎರಡು ಶತಮಾನಗಳ ನಂತರ ಭಾಷಾಂತರವಾಯಿತು. ಪರ್ಷಿಯಾದ ಮೇಲೆ ಮುಸ್ಲಿಂ ಆಕ್ರಮಣದ ನಂತರ (ಇರಾನ್), ಇಬ್ನ್ ಅಲ್-ಮುಕ್ವಫ ರ ಅವತರಣಿಕೆಯು (ಈಗ ಇಸ್ಲಾಂ ಪೂರ್ವದ ಸಂಸ್ಕೃತ ಮೂಲದಿಂದ ಎರಡೂ ಭಾಷೆಗಳನ್ನು ತೆಗೆಯಲಾಗಿದೆ) ವಿಶ್ವ ಸಾಹಿತ್ಯವನ್ನು ಸಮೃದ್ಧಗೊಳಿಸುತ್ತಿರುವ ತಿರುಗುಗೂಟದಂತೆ ಜೀವದಿಂದುಳಿದಿರುವ ಗ್ರಂಥವಾಗಿ ಹೊರಹೊಮ್ಮಿದೆ. ಇಬ್ನ್ ಅಲ್-ಮುಕ್ವಫ ರ ಕೃತಿಯನ್ನು ಅತ್ಯಂತ ಶ್ರೇಷ್ಠ ಅರೇಬಿಕ್ ಗದ್ಯ ಶೈಲಿಯ ಒಂದು ಮಾದರಿಯಾಗಿ ಪರಿಗಣಿತವಾಗಿದೆ ಹಾಗೂ “ಅರೆಬಿಕ್ ಸಾಹಿತ್ಯದ ಗದ್ಯದ ಮೊದಲನೆಯ ಅನುಪಮ ಗ್ರಂಥವೆಂದು ಎಣಿಸಲ್ಪಟ್ಟಿದೆ.”
ಇಬ್ನ್ ಅಲ್-ಮುಕ್ವಫ ರ ಎರಡನೆಯ ವಿಭಾಗದ ಅನುವಾದವು ಮಿತ್ರ ಲಾಭ ದ (ಗೆಳೆಯರ ಲಾಭ) ಸಂಸ್ಕೃತ ತತ್ವದ ವಿವರಣೆಯು ಬ್ರದರೆನ್ ಆಫ್ ಪ್ಯೂರಿಟಿ (ಇಖ್ವಾನ್ ಅಲ್-ಸಫ )ಗೆ ಒಂದು ಗೂಡಿಸುವ ಆಧಾರವಾಯಿತೆಂದು ಕೆಲವು ವಿದ್ವಾಂಸರು ನಂಬುತ್ತಾರೆ – ಅಸಾಧಾರಣ ಸಾಹಿತ್ಯಕ ಪ್ರಯತ್ನ, ಎನಸೈಕ್ಲೊಪಿಡಿಯಾ ಆಫ್ ದಿ ಬ್ರದರೆನ್ ಆಫ್ ಸಿನ್ಸೆರಿಟಿ ಯು ಭಾರತೀಯ, ಪರ್ಷಿಯಾ ಹಾಗೂ ಗ್ರೀಕ್ ಜ್ಞಾನವನ್ನು ಹೆಸರಿಲ್ಲದ ಕ್ರಿಸ್ತ ಶಕ ಒಂಬತ್ತನೆ ಶತಮಾನದ ಅರಬ್ ವಿಶ್ವಕೋಶ ಲೇಖಕರು ನಿಯಮಕ್ಕೊಳಪಡಿಸಿದರು. ಗೋಲ್ಡಜಿಹೆರ್ ರಿಂದ ಮಾಡಲ್ಪಟ್ಟ ಸಲಹೆ, ಫಿಲಿಪ್ ಕೆ. ಹಿಟ್ಟಿಯವರಿಂದ ನಂತರ ಬರೆಯಲ್ಪಟ್ಟ ಹಿಸ್ಟರಿ ಆಫ್ ದಿ ಅರಬ್ಸ್ ನಲ್ಲಿ “ಬಹುಶಃ ಕಲಿಲಹ್ ವ-ದಿಮ್ನಹ್ ನಲ್ಲಿ ಮರಕುಟಿಕದಂತಹ ಪರಿವಾಳದ ಕಥೆಯಿಂದ ಇರಬಹುದೆಂದು ಭಾವಿಸಿ ಆರಿಸಲ್ಪಟ್ಟಿದೆ, ಅದರಲ್ಲಿ ಬೇಟೆಗಾರನ ಬಲೆಗಳಿಂದ ಪರಸ್ಪರ ಪ್ರಾಮಾಣಿಕ ಗೆಳೆಯರಂತೆ ನಟಿಸಿ (ಇಖ್ವಾನ್ ಅಲ್-ಸಫ ) ಪ್ರಾಣಿಗಳ ಒಂದು ಗುಂಪು ತಪ್ಪಿಸಿಕೊಂಡ ರೀತಿಗೆ ಸಂಬಂಧಿಸಿದಂತೆ” ಪ್ರಸ್ತಾಪಿಸಲಾಗಿದೆ. ಈ ಕಥೆಯು ಒಂದು ಉದಾಹರಣೆಯಾಗಿ ಪ್ರಸ್ತಾಪಿಸಲ್ಪಟ್ಟು, ನೀತಿ ಶಾಸ್ತ್ರದ ಅವರ ವ್ಯವಸ್ಥೆಯ ಒಂದು ನಿರ್ಣಾಯಕ ಭಾಗವಾದ ರಿಸಾಲಾ (ಮೀಮಾಂಸೆ) ದಲ್ಲಿ ಪರಸ್ಪರ ಸಹಾಯದ ಬಗ್ಗೆ ಸಹೋದರರು ಮಾತನಾಡಿದಾಗ ಒಂದು ಆದರ್ಶದಂತೆ ಈ ಕಥೆಯು ತಿಳಿಸಲ್ಪಟ್ಟಿದೆ.
ಯುರೋಪಿನ ಉಳಿದ ಭಾಗಗಳಿಗೆ ಹರಡುವಿಕೆ
ಪಂಚತಂತ್ರದ ಸುಮಾರು ಎಲ್ಲಾ ಪೂರ್ವ-ಆಧುನಿಕ ಯುರೋಪಿಯನ್ ಅನುವಾದಗಳು ಈ ಅರೇಬಿಕ್ ಅವತರಣಿಕೆಯಿಂದಲೇ ಉದ್ಭವಿಸಿದವು. ಅರೆಬಿಕ್ ನಿಂದ ಅದು 10 ನೆಯ ಅಥವಾ 11 ನೆಯ ಶತಮಾನದಲ್ಲಿ ಸಿರಿಯಾ ಭಾಷೆಗೆ, 1080 ರಲ್ಲಿ ಗ್ರೀಕ್ ಗೆ, 1121 ರಲ್ಲಿ ಅಬುಲ್ ಮಾ’ಅಲಿ ನಸ್ರ್ ಅಲ್ಲಾಹ್ ಮುಂಶಿ ಯಿಂದ ‘ಆಧುನಿಕ’ ಪರ್ಷಿಯಾಕ್ಕೆ ಮತ್ತು 1252 ರಲ್ಲಿ ಸ್ಪೇನ್ ಭಾಷೆಗೆ (ಹಳೆಯ ಕ್ಯಾಸ್ಟಿಲಿಯನ್, ಕಲೈಲ ಇ ದಿಮ್ನ ) ಪುನಃ ಭಾಷಾಂತರಿಸಲ್ಪಟ್ಟಿತು.
ಬಹುಶಃ ಅತ್ಯಂತ ಪ್ರಮುಖವಾಗಿ, 12 ನೆಯ ಶತಮಾನದಲ್ಲಿ ರಬ್ಬಿ ಜೊಯ್ಲ್ ರಿಂದ ಹಿಬ್ರೂ ಭಾಷೆಗೆ ಅದು ಅನುವಾದಿಸಲ್ಪಟ್ಟಿತು. ಈ ಹಿಬ್ರೂ ಅವತರಣಿಕೆಯು ಡೈರೆಕ್ಟೋರಿಯಮ್ ಹ್ಯೂಮನ್ ವಿಟೇಯ್ ಅಥವಾ “ಡೈರೆಕ್ಟರಿ ಆಫ್ ಹ್ಯೂಮನ್ ಲೈಫ್” ಎಂದು ಜಾನ್ ಆಫ್ ಕಪುವ ರಿಂದ ಲ್ಯಾಟಿನ್ ಭಾಷೆಗೆ ಭಾಷಾಂತರವಾಗಿ, 1480 ರಲ್ಲಿ ಮುದ್ರಿಸಲ್ಪಟ್ಟಿತು, ಹಾಗೂ ಅತ್ಯಂತ ಹೆಚ್ಚು ಯುರೋಪಿಯನ್ ಭಾಷಾ ಅವತರಣಿಕೆಗಳಿಗೆ ಆಕರವಾಯಿತು ಪಂಚತಂತ್ರದ ಜರ್ಮನ್ ಭಾಷಾಂತರ, ದಸ್ ಡೆರ್ ಬುಚ್ ಬೆಯ್ಸೆಪೈಲೆ 1483 ರಲ್ಲಿ ಮುದ್ರಿತವಾಯಿತು, ಬೈಬಲ್ ನಂತರ ಗ್ಯುಟೆನ್ಬರಗ್ ರ ಮುದ್ರಣಾಲಯದಿಂದ ಮುದ್ರಿಸಲ್ಪಟ್ಟ ಅತ್ಯಂತ ಮೊದಲಿನ ಗ್ರಂಥಗಳಲ್ಲೊಂದಾಗಿ ಪರಿಗಣಿತವಾಯಿತು.
ಲ್ಯಾಟಿನ್ ಅವತರಣಿಕೆಯು 1552 ರಲ್ಲಿ ಆಂಟೊನಿಯೊ ಫ್ರಾನ್ಸಿಸ್ಕೊ ದೊನಿ ಯಿಂದ ಇಟಾಲಿಯನ್ ಭಾಷೆಗೆ ಅನುವಾದಿಸಲ್ಪಟ್ಟಿತು. ಈ ಅನುವಾದವು 1570 ರಲ್ಲಿ, ಮೊದಲನೆಯ ಇಂಗ್ಲೀಷ್ ಭಾಷಾಂತರಕ್ಕೆ ಆಧಾರವಾಯಿತು: ಸರ್ ಥಾಮಸ್ ನಾರ್ಥ ರಿಂದ ದಿ ಫೇಬಲ್ಸ್ ಆಫ್ ಬಿಡ್ಪಾಯ್ ಎಂದು ಎಲಿಜಬತ್ ಕಾಲದ ಇಂಗ್ಲೀಷ್ ಗೆ ಅನುವಾದಿಸಿದರು: ದಿ ಮಾರಲ್ ಫಿಲಾಸಫಿ ಆಫ್ ದೊನಿ (1888 ರಲ್ಲಿ ಜೋಸೆಫ್ ಜೆಕಬ್ಸ್ ರಿಂದ ಪುನಃ ಮುದ್ರಣವಾಯಿತು). “ಭಾರತೀಯ ಸನ್ಯಾಸಿ ಪಿಲ್ಪೆ” ಆಧಾರದ ಮೇಲೆ, 1679 ರಲ್ಲಿ ಲ ಫಾಂಟೈನ್ ರು ದಿ ಫೇಬಲ್ಸ್ ಆಫ್ ಬಿಡ್ಪಾಯ್ ಪ್ರಕಟಿಸಿದರು.
ಆಧುನಿಕ ಯುಗ
ತುಲನಾತ್ಮಕ ಸಾಹಿತ್ಯದ ಕ್ಷೇತ್ರದಲ್ಲಿ ಮೂಲ ಪ್ರವರ್ತಕನಾದ, ಥಿಯಡೊರ್ ಬೆನ್ಫಿ ಯ ಅಧ್ಯಯನಗಳಿಗೆ ಪಂಚತಂತ್ರವು ಆಧಾರವಾಗಿ ಸೇವೆ ಸಲ್ಲಿಸಿತು. ಹರ್ಟೆಲ್ ರ ಗ್ರಂಥದಲ್ಲಿ Hertel 1908, Hertel 1912, Hertel 1915, ಮತ್ತು Edgerton (1924) ಅತ್ಯುನ್ನತ ಸ್ಥಿತಿಗೇರುತ್ತಾ ಪಂಚತಂತ್ರದ ಇತಿಹಾಸವನ್ನು ಸುತ್ತುವರಿದಂತಹ ಕೆಲವು ಗೊಂದಲಗಳನ್ನು ಅವರ ಪ್ರಯತ್ನಗಳು ಸ್ಪಷ್ಟಪಡಿಸಲಾರಂಭಿಸಿದವು. ಹರ್ಟೆಲ್ ಭಾರತದಲ್ಲಿ ಅನೇಕ ಪರಿಷ್ಕೃತ ಗ್ರಂಥಗಳನ್ನು, ಅದರಲ್ಲೂ ವಿಶೇಷವಾಗಿ ದೊರಕಿರುವ ಅತ್ಯಂತ ಹಳೆಯ ಸಂಸ್ಕೃತ ಪರಿಷ್ಕೃತ ಗ್ರಂಥ ತಂತ್ರಖ್ಯಾಯಿಕ ವನ್ನು ಕ್ರಿಸ್ತ ಶಕ 1199 ರಲ್ಲಿ ಜೈನ ಸನ್ಯಾಸಿ ಪೂರ್ಣಭದ್ರರಿಂದ ಹಾಗೆಂದು ಕರೆಯಲಾಗುವ ಉತ್ತರ ಪಶ್ಚಿಮದ ಕೌಟುಂಬಿಕ ಸಂಸ್ಕೃತ ಕೃತಿಯನ್ನು ಕಡೆಯ ಪಕ್ಷ ಮೂರು ಹೆಚ್ಚು ಮೊದಲನೆಯದಾದ ಅವತರಣಿಕೆಗಳನ್ನು ಸೇರಿಸಿ ಮತ್ತೆ ಕ್ರಮಪಡಿಸಿದರು. “ಅವೆಲ್ಲವೂ ಹಿಂದಿರುಗಿ ಹೋದವು ಎಂದು ಊಹಿಸಿಕೊಳ್ಳಲೇ ಬೇಕಾದಂತಹ ಕಳೆದುಹೋದ ಸಂಸ್ಕೃತ ಗ್ರಂಥಕ್ಕೆ ಉಪಯೋಗಕರವಾದ ಸಾಕ್ಷಿಯನ್ನು ಒದಗಿಸಲು” ಕಂಡಂತಹ ಎಲ್ಲಾ ಗ್ರಂಥಗಳ ಒಂದು ಸೂಕ್ಷ್ಮ ಅಧ್ಯಯನವನ್ನು ಎಡ್ಗರ್ಟನ್ ಕೈಗೊಂಡರು ಮತ್ತು ತಾನು ಮೂಲ ಸಂಸ್ಕೃತ ಪಂಚತಂತ್ರವನ್ನು ಪುನರ್ರಚಿಸಿದೆನೆಂದು ನಂಬಿದರು; ಈ ಅವತರಣಿಕೆಯು ದಕ್ಷಿಣದ ಕೌಟುಂಬಿಕ ಗ್ರಂಥವೆಂದು ತಿಳಿಯಲಾಗಿದೆ.
ಆಧುನಿಕ ಅನುವಾದಗಳೊಳಗೆ ಗದ್ಯಕ್ಕೆ ಗದ್ಯ ಹಾಗೂ ಶಿಶು ಗೀತೆಗಳಿಗೆ ಪದ್ಯವಾಗಿ ಭಾಷಾಂತರಿಸಿದRyder 1925, ಆರ್ಥರ್ ಡಬ್ಲು. ರೈಡರ್ ರ ಅನುವಾದವು, ಜನಪ್ರಿಯವಾಗಿ ಉಳಿದಿವೆ. ಚಂದ್ರ ರಾಜನ್ ರ ಅನುವಾದ (ವಾಯುವ್ಯದ ಗ್ರಂಥವನ್ನು ಆಧರಿಸಿದ) ಪೆಂಗ್ವಿನ್ ನಿಂದ (1993), ಮತ್ತು ಆಕ್ಸಫರ್ಡ್ ಯೂನಿವರ್ಸಿಟಿ ಪ್ರೆಸ್ (1997) ರಿಂದ ಪ್ಯಾಟ್ರಿಕ್ ಓಲಿವಿಲ್ಲೆಯ ಅನುವಾದವು (ದಕ್ಷಿಣದ ಗ್ರಂಥವನ್ನು ಆಧರಿಸಿದ) 1990 ರ ದಶಕದಲ್ಲಿ ಪಂಚತಂತ್ರದ ಎರಡು ಇಂಗ್ಲೀಷ್ ಅವತರಣಿಕೆಗಳು ಪ್ರಕಟಿಸಲ್ಪಟ್ಟವು. ಓಲಿವಿಲ್ಲೆಯ ಭಾಷಾಂತರವು 2006 ರಲ್ಲಿ ಕ್ಲೆ ಸಂಸ್ಕೃತ ಲೈಬ್ರರಿಯಿಂದ ಪುನಪ್ರಕಟಿಸಲ್ಪಟ್ಟಿತು.
ಉಮ್ಯಾಡ್ ನ ರಾಜವಂಶವನ್ನು ಪರಾಭವಗೊಳಿಸಿದ ರಕ್ತಪಿಪಾಸು ಅಬ್ಬಾಸಿಡ್ ರ ಕಾಲದಲ್ಲಿ ಬಾಗ್ದಾದಿನಲ್ಲಿ ತಮ್ಮ ಅನುಪಮ ಕೃತಿಯನ್ನು ರಚಿಸುವಾಗ ಇಬ್ನ್ ಅಲ್-ಮುಕ್ವಫರ ಸ್ವತಃ ಐತಿಹಾಸಿಕ ವಾತಾವರಣವು ಇತ್ತೀಚೆಗೆ, ಬಹುಸಂಸ್ಕೃತಿಯ ಕುವೈತ್ ನ ನಾಟಕಕಾರ ಸುಲೈಮಾನ್ ಅಲ್-ಬಾಸ್ಸಮ್ ರಿಂದ ಸಹನೆಯುಳ್ಳ ಶೇಕ್ಸಪಿಯರ್ ಗೆ ಸಂಬಂಧಿಸಿದ ನಾಟಕದ ವಿಷಯವಾಯಿತು (ಸುಮಾರು ಗೊಂದಲಮಯವಾಗಿ, ಶಿರೋನಾಮೆಯೂ ಸಹ). ಇಬ್ನ್ ಅಲ್-ಮುಕ್ವಫ ರ ಜೀವನ ಚರಿತ್ರೆಯ ಹಿನ್ನಲೆಯು ಇರಾಕಿನಲ್ಲಿ ಇಂದಿನ ಏರುತ್ತಿರುವ ರಕ್ತಪಿಪಾಸುತನದ ವಿವರಣಾತ್ಮಕ ಲಕ್ಷಣರೂಪಕವಾಗಿ ಉಪಯೋಗವಾಗುತ್ತಿದೆ – ಸ್ಪಷ್ಟವಾದ ಗುಡ್ಡಗಾಡು, ಧಾರ್ಮಿಕ ಹಾಗೂ ರಾಜಕೀಯ ಸಮಾಂನಾತರಗಳನ್ನೊಳಗೊಂಡ, ಸಮಾನತೆಗಳ ವೈವಿಧ್ಯದ ಮೇಲೆ ನಾಗರೀಕತೆಗಳಿಗೆ ಮತ್ತೊಮ್ಮೆ ಒಂದು ಐತಿಹಾಸಿಕ ಸುಳಿಯಾಯಿತು.
ಐದು ಪಂಚತಂತ್ರ ಕೃತಿಗಳ ಮೊದಲೆರಡರ “ಮತ್ತೆ ಹೇಳುವ” 1980 ರ ರ್ಯಾಮ್ಸೆ ವುಡ್ ರಿಗೆ ಅವರ ಪರಿಚಯದಲ್ಲಿ ಕಾದಂಬರಿಗಾರ್ತಿ ಡೋರಿಸ್ ಲೆಸ್ಸಿಂಗ್ ಬರೆಯುತ್ತಾರೆ.
ಕೃಪೆ: wikipedia