ನೇಗಿಲ ಯೋಗಿಯ ಈ ಹಾಡು ನಮ್ಮ ರೈತರಿಗೆ ದೊರೆತ ಬಹು ದೊಡ್ಡ ಸನ್ಮಾನವೆಂದು ನನಗನಿಸುತ್ತದೆ. ಅಂತ ಒಂದು ಸನ್ಮಾನ ವಿಶ್ವಮಾನವ ಕುವೆಂಪು‘ರವರಿಂದ ದೊರಕಿರುವುದು ಸಂತೋಷವನ್ನು ಇಮ್ಮಡಿಗೊಳಿಸುತ್ತದೆ. ಕಾಮನಬಿಲ್ಲು ಚಿತ್ರವನ್ನು ನಾನಿನ್ನೂ ವೀಕ್ಷಿಸಿಲ್ಲ, ಹಾಡನ್ನೂ ಕೂಡ. ಆದರೆ ಈ ಹಾಡು ನಮ್ಮ ಕವಿಗಳ ಕಡೆಯಿಂದ ರೈತರಿಗೆ ಸರ್ವಕಾಲಿಕ ಕೊಡುಗೆ. ಅದೇ ಕಾರಣಕ್ಕೇನೋ ಈ ಹಾಡು ನಮ್ಮ ರಾಜ್ಯದ ರೈತರ ಹಾಡಾಗಿ ಸ್ವೀಕರಿಸಲಾಗಿದೆ.
ಈ ಹಾಡಿನಲ್ಲಿ ಯಾವದೇ ಕೊರತೆಗಳಿಲ್ಲ. ಆರಂಭದಿಂದ ಅಂತ್ಯದವರೆಗೂ ನಮ್ಮನ್ನು ಮಗ್ನಗೊಳಿಸುತ್ತದೆ. ಸರಿಯಾಗಿ ಆಲಿಸಿದ್ದೆ ಆದಲ್ಲಿ, ರೋಮಾಂಚನಗೊಳ್ಳುವುದರಲ್ಲಿ ಸಂಶಯವೇ ಇಲ್ಲ.
ಈ ಹಾಡಿನಲ್ಲಿ ಇರುವ ಮೂರೂ ಚರಣಗಳು ಅಧ್ಭುತ ಸಾಲುಗಳಿಂದ ಅನ್ತ್ಯಗೊಲ್ಲುತವೆ ಈ ಮೂರೂ ಸಾಲುಗಳು ಈ ಹಾಡಿನ ಜೀವ ತಂತಿಗಳು.
ಆ ಮೂರೂ ಸಾಲುಗಳು ಮತ್ತೊಮ್ಮೆ ನಾನಿಲ್ಲಿ ನಮೂದಿಸುತ್ತಿದ್ದೇನೆ.
ಕಷ್ಟದೊಳನ್ನವ ದುಡಿವನೆ ತ್ಯಾಗಿ, ಸೃಷ್ಟಿನಿಯಮದೊಳಗವನೆ ಭೋಗಿ.
ಮುತ್ತಿಗೆ ಹಾಕಲಿ ಸೈನಿಕರೆಲ್ಲ, ಬಿತ್ತುಳುವುದನವ ಬಿಡುವುದೇ ಇಲ್ಲ
ನೇಗಿಲ ಕುಲದೊಳಗಡಗಿದೆ ಕರ್ಮ, ನೇಗಿಲ ಮೇಲೆಯೇ ನಿಂತಿದೆ ಧರ್ಮ
ಕುವೆಂಪು’ರವರ ಅಮೋಘ ರಚನಾ ಕಲೆಯ ನಿದರ್ಶನಕ್ಕೆ ಈ ಮೂರೇ ಸಾಲುಗಳು ಸಾಕು.
ಉಪೇಂದ್ರ ಕುಮಾರ್’ರವರ ಕಾರ್ಯ ವೈಖರಿಯನ್ನು ನನಗೆ ಪರಿಚಯಿಸಿದ ಹಾಡಿದು.
ಸಿ.ಅಶ್ವಥ್’ರನ್ನು ಬಿಟ್ಟು ಇನ್ಯಾರೂ ಈ ಹಾಡನ್ನು ಸಮರ್ಥವಾಗಿ ನಿಭಾಯಿಸಲಿರಕ್ಕಾಗುತ್ತಿರಲ್ಲಿಲ್ಲ ಎಂಬಂತೆ ಭಾಸವಾಗುತ್ತದೆ.
ಇದು ಸಿ.ಅಶ್ವಥ್’ರ ಮೊದಲ ಅತ್ತ್ಯುತ್ತಮ ೫ ಹಾಡುಗಳಲ್ಲಿ ಒಂದು.
ಚಿತ್ರ : ಕಾಮನಬಿಲ್ಲು
ರಚನೆ : ಕುವೆಂಪು
ಗಾಯನ : ಸಿ.ಅಶ್ವಥ್
ಸಂಗೀತ : ಉಪೇಂದ್ರ ಕುಮಾರ್
ನಿರ್ದೇಶನ : ಚಿ .ದತ್ತರಾಜ್.
ನೇಗಿಲ ಹಿಡಿದ
ಹೊಲದೊಳು ಹಾಡುತ
ಉಳುವ ಯೋಗಿಯ ನೋಡಲ್ಲಿ.
ನೇಗಿಲ ಹಿಡಿದ
ಹೊಲದೊಳು ಹಾಡುತ
ಉಳುವ ಯೋಗಿಯ ನೋಡಲ್ಲಿ.
ಫಲವನ್ನು ಬಯಸದೆ
ಸೇವೆಯೇ ಪೂಜೆಯು
ಕರ್ಮವೇ ಇಹಪರ ಸಾಧನವು
ಕಷ್ಟದೊಳನ್ನವ ದುಡಿವನೆ ತ್ಯಾಗಿ
ಸೃಷ್ಟಿನಿಯಮದೊಳಗವನೆ ಭೋಗಿ
ಉಳುವ ಯೋಗಿಯ ನೋಡಲ್ಲಿ
ಉಳುವ ಯೋಗಿಯ ನೋಡಲ್ಲಿ.
ಲೋಕದೊಳೇನೆ ನಡೆಯುತಲಿರಲಿ
ತನ್ನಿ ಕಾರ್ಯಾವ ಬಿಡನೆಂದು
ರಾಜ್ಯಗಳುದಿಸಲಿ ರಾಜ್ಯಗಳಲಿಯಲಿ
ಹಾರಲಿ ಗದ್ದುಗೆ ಮುಕುಟಗಳು
ಮುತ್ತಿಗೆ ಹಾಕಲಿ ಸೈನಿಕರೆಲ್ಲ
ಬಿತ್ತುಳುವುದನವ ಬಿಡುವುದೇ ಇಲ್ಲ
ಉಳುವ ಯೋಗಿಯ ನೋಡಲ್ಲಿ
ಉಳುವ ಯೋಗಿಯ ನೋಡಲ್ಲಿ
ಯಾರು ಅರಿಯದ
ನೇಗಿಲ ಯೋಗಿಯೇ
ಲೋಕಕೆ ಅನ್ನವನೀಯುವನು
ಹೆಸರನು ಬಯಸದೆ
ಅತಿಸುಖ ಕೆಲಸದೆ
ದುಡಿವನು ಗೌರವಕಾಶಿಸದೆ
ನೇಗಿಲ ಕುಲದೊಳಗಡಗಿದೆ ಕರ್ಮ
ನೇಗಿಲ ಮೇಲೆಯೇ ನಿಂತಿದೆ ಧರ್ಮ
ಉಳುವ ಯೋಗಿಯ ನೋಡಲ್ಲಿ
ಉಳುವ ಯೋಗಿಯ ನೋಡಲ್ಲಿ
ಶ್ರೇಯಾಂಕ
ಮತ ನೀಡಿ, ಬಲಪಡಿಸಿ ಮತ್ತು ಸಾಮಾಜಿಕ ಜಾಲ ತಾಣದಲ್ಲಿ ಹಂಚಿರಿ.