ನೆಲ್ಲಿಕಾಯಿಯೊಳಗೆ ಹಲವು ಪೌಷ್ಟಿಕಾಂಶಗಳು ನೆಲೆಯಾಗಿವೆ. ವಿಟಮಿನ್ ‘ಸಿ’ ಯಥೇಚ್ಛವಾಗಿದೆ. ಹಾಗಾಗಿ ಇದನ್ನು ಆಯುರ್ವೇದಿಕ್ ಔಷಧಿ, ಶಾಂಪೂ, ಜ್ಯೂಸ್, ಉಪ್ಪಿನಕಾಯಿ, ವೈನ್ ಹೀಗೆ ಹಲವು ಬಗೆಯ ಉತ್ಪನ್ನಗಳ ತಯಾರಿಕೆಯಲ್ಲಿ ಬಳಸುತ್ತಾರೆ. ಕಡಿಮೆ ಮಳೆಯಾಗವ ಪ್ರದೇಶದಲ್ಲೂ ಚೆನ್ನಾಗಿ ಬೆಳೆಯುವ ಗುಣವನ್ನು ನೆಲ್ಲಿ ಹೊಂದಿದೆ. ಇದನ್ನು ಜಮೀನಿನ ಬದು ಅಥವಾ ಪಾಳು ಜಮೀನು, ಹಿತ್ತಿಲು, ಖಾಲಿ ನಿವೇಶನದಲ್ಲೂ ಬೆಳೆದು ಲಾಭ ಗಳಿಸಬಹುದು. Embelica officinalis ಇದರ ವೈಜ್ಞಾನಿಕ ಹೆಸರು.
ಬೆಳೆಯುವ ವಿಧಾನ:
ನೆಲ್ಲಿ ಗಿಡವನ್ನು ಸಸ್ಯಾಭಿವೃದ್ದಿ ಅಥವಾ ನರ್ಸರಿಯಿಂದ ಗಿಡ ತಂದು ನಾಟಿ ಮಾಡಬಹುದು. ಸಸ್ಯಾಭಿವೃದ್ಧಿ ಮಾಡುವುದಾದರೆ ಬೀಜವನ್ನು ಬಿಸಿಲಲ್ಲಿ ಚೆನ್ನಾಗಿ ಒಣಗಿಸಿ ಬಳಿಕ ಅದನ್ನು ನಾಟಿ ಮಾಡಿ ಗಿಡ ಬೆಳೆಸಬೇಕು.
30×30 ಅಡಿ ಅಂತರದಲ್ಲಿ 2 ಅಡಿ ಆಳದ ಗುಂಡಿ ತೋಡಬೇಕು. ಅದಕ್ಕೆ ಕೆಂಪು ಮಣ್ಣು, ತಿಪ್ಪೆ ಗೊಬ್ಬರ, ಬೇವು ಮತ್ತು ಹೊಂಗೆ ಹಿಂಡಿಯನ್ನು ಹಾಕಬೇಕು. ಬಳಿಕ ಗಿಡ ನೆಡಬೇಕು. ಮಳೆಯಾಗದಿದ್ದರೆ ಅವಶ್ಯಕ್ಕೆ ತಕ್ಕಷ್ಟು ನೀರು ಕೊಡಬೇಕು impotenzastop.it. ಇದಕ್ಕೆ ರೋಗದ ಹಾವಳಿ ತೀರಾ ಕಮ್ಮಿ. ಗಿಡ ನೆಟ್ಟು 7-8 ವರ್ಷಕ್ಕೆ ನೆಲ್ಲಿಕಾಯಿ ಫಸಲು ನೀಡಲು ಪ್ರಾರಂಭಿಸುತ್ತದೆ. ಸುಧಾರಿತ ತಳಿಗಳಾದರೆ ಮೂರನೇ ವರ್ಷಕ್ಕೆ ಫಸಲು ಕೊಡುತ್ತದೆ.
ಜೂನ್ ತಿಂಗಳು ಗಿಡಿ ನಾಟಿಗೆ ಪ್ರಶಸ್ತ. ಚೆನ್ನಾಗಿ ನಿರ್ವಹಣೆ ಮಾಡಿದರೆ ಒಂದು ಗಿಡದಿಂದ ವರ್ಷಕ್ಕೆ 200 ಕೆಜಿ ನೆಲ್ಲಿಕಾಯಿ ಪಡೆಯಬಹುದು. ಒಮ್ಮೆ ಗಿಡ ನೆಟ್ಟರೆ 70 ವರ್ಷ ಇಳುವರಿ ಕೊಡುತ್ತದೆ.
ತಳಿಗಳ:
ಸಾಮಾನ್ಯವಾಗಿ ಬೆಟ್ಟದ ನೆಲ್ಲಿಕಾಯಿ ಎಲ್ಲೆಡೆ ಕಂಡುಬರುತ್ತದೆ. ಇತ್ತೀಚೆಗೆ ಸುಧಾರಿತ ತಳಿಗಳಾದ ಬನಾರಸಿ, ಫ್ರಾನ್ಸಿಸ್, ಆನಂದ್ 1,2,3, ಬಿಎಸ್‌ಆರ್-1 ಮೊದಲಾದ ತಳಿಗಳು ಬಳಕೆಯಲ್ಲಿವೆ.
ಮಣ್ಣು:
ಕಪ್ಪು ಮಣ್ಣು, ಕೆಂಪು ಮಣ್ಣು ಮತ್ತು ಮರಳು ಮಿಶ್ರಿತ ಕೆಂಪು ಮಣ್ಣಿನಲ್ಲಿ ನೆಲ್ಲಿಕಾಯಿ ಗಿಡಿ ಚೆನ್ನಾಗಿ ಬೆಳೆಯುತ್ತದೆ. ಇದು ಉಷ್ಣವಲಯದ ಬೆಳೆಯಾಗಿರುವುದರಿಂದ 46 ಸೆಲ್ಸಿಯಸ್‌ವರೆಗೂ ಉಷ್ಣಾಂಶ ತಾಳಿಕೊಳ್ಳುವ ಶಕ್ತಿ ಹೊಂದಿದೆ. ಮಡಿಕೇರಿ ತಾಲೂಕಿನ ಚೆಂಬು ಗ್ರಾಮದ ರೈತ ಹೊಸೂರು ಚಂದ್ರಶೇಖರ್ ಅವರ ಜಮೀನಿನಲ್ಲಿ ವರ್ಷಪೂರ್ತಿ ನೆಲ್ಲಿಕಾಯಿ ಕೊಡುವ ಅಪರೂಪದ ಮರವಿದೆ. ಮಾಹಿತೆಗೆ (ಮೊ.9741131401) ಅವರನ್ನು ಸಂಪರ್ಕಿಸಬಹುದು.