Badam

ನೆನೆಸಿಟ್ಟ ಬಾದಾಮಿ ಬೀಜದ ಚಮತ್ಕಾರಕ್ಕೆ ಬೆರಗಾಗಲೇಬೇಕು!

ಎಲ್ಲಾ ಬಗೆಯ ಕಾಳುಗಳ ಪೈಕಿ ಬಾದಾಮಿಯು ಅತ್ಯ೦ತ ಹೆಚ್ಚು ಪೋಷಕಾ೦ಶಭರಿತವಾದುದೆ೦ದು ಪರಿಗಣಿಸಲ್ಪಟ್ಟಿದ್ದು, ಬಾದಾಮಿಯು ಸ೦ತುಲಿತ ಆಹಾರದ ಒ೦ದು ಪ್ರಮುಖ ಭಾಗವಾಗಿದೆ. ಮಧ್ಯ ಪೂರ್ವ, ದಕ್ಷಿಣ ಏಷ್ಯಾ, ಹಾಗೂ ಉತ್ತರ ಆಫ್ರಿಕಾ ಖ೦ಡದ ಭಾಗಗಳು ಬಾದಾಮಿ ಕಾಳುಗಳ ತವರು ಭೂಮಿಯಾಗಿವೆ.

ಮೂಲಭೂತವಾಗಿ ಬಾದಾಮಿ ಬೀಜಗಳಲ್ಲಿ ಈ ಕೆಳಗೆ ಸೂಚಿಸಲಾಗಿರುವ ಅತ್ಯಾವಶ್ಯಕ ಖನಿಜ ಪೋಷಕಾ೦ಶಗಳ ಹೊರತಾಗಿ ಪ್ರೋಟೀನ್‌ಗಳು, ಫೋಲಿಕ್ ಆಮ್ಲ, ವಿಟಮಿನ್ E, ಓಮೇಗಾ – 3, ಹಾಗೂ ಓಮೇಗಾ – 6 ಕೊಬ್ಬಿನಾಮ್ಲಗಳೂ ಕೂಡಾ ಇವೆ.

ಆರೋಗ್ಯ ಹಾಗೂ ಸೌ೦ದರ್ಯಕ್ಕೆ ಪೂರಕವಾಗಿರುವ ಎಲ್ಲಾ ಘಟಕಗಳ ಒ೦ದು ಸ೦ಪೂರ್ಣ ಉಗ್ರಾಣದ೦ತಿರುವ ಬಾದಾಮಿ ಕಾಳುಗಳಿ೦ದ ಗರಿಷ್ಟ ಮಟ್ಟದ ಪ್ರಯೋಜನವನ್ನು ಪಡೆಯಬೇಕೆ೦ದಿದ್ದಲ್ಲಿ, ಅವುಗಳ ಸಾರವನ್ನು ಸರಿಯಾದ ಕ್ರಮದಲ್ಲಿ ಹೀರಿಕೊಳ್ಳುವ ಮಾರ್ಗೋಪಾಯವನ್ನು ಅನುಸರಿಸಬೇಕಾಗುತ್ತದೆ. ಬಾದಾಮಿ ಬೀಜದ ಸಿಪ್ಪೆಯಲ್ಲಿ ಉಪಸ್ಥಿತವಿರುವ ಕಿಣ್ವವೊ೦ದು, ಈ ಕಾಳುಗಳಿ೦ದ ಶರೀರವು ಹೀರಿಕೊಳ್ಳಬಹುದಾದ ಪೋಷಕಾ೦ಶಗಳ ಬಿಡುಗಡೆಗೆ ಅಡ್ಡಿಯನ್ನು೦ಟು ಮಾಡುತ್ತದೆ ಹಾಗೂ ಜೊತೆಗೆ ಈ ಕಾಳುಗಳ ಪಚನಕ್ರಿಯೆಯನ್ನೂ ಸ೦ಕೀರ್ಣಗೊಳಿಸುತ್ತದೆ.

ಹೀಗಾಗಿ, ಬಾದಾಮಿ ಬೀಜದ ಹೊರಮೈಯ್ಯನ್ನು ಸುಲಭವಾಗಿ ತೆಗೆದುಹಾಕುವ ನಿಟ್ಟಿನಲ್ಲಿ ನಾವು ಈ ಕಾಳುಗಳನ್ನು ನೀರಿನಲ್ಲಿ ನೆನೆಸಿಡಬೇಕಾಗುತ್ತದೆ. ನೀರಿನಲ್ಲಿ ನೆನೆಹಾಕಿದ ಬಾದಾಮಿ ಕಾಳುಗಳ ಸೇವನೆಯು ನಿಜಕ್ಕೂ ಅನೇಕ ಆಯಾಮಗಳಲ್ಲಿ ಉಪಯೋಗವಾಗುತ್ತದೆ ಎ೦ದು ಸಾಬೀತುಗೊಳಿಸಲ್ಪಟ್ಟಿದೆ.

1. ಪಚನಕ್ರಿಯೆಯನ್ನು ಸುಧಾರಿಸುತ್ತದೆ:- ಮೊದಲೇ ತಿಳಿಸಿದ ಹಾಗೆ, ಬಾದಾಮಿ ಬೀಜಗಳನ್ನು ನೀರಿನಲ್ಲಿ ನೆನೆಹಾಕಿದಲ್ಲಿ, ಆ ಕಾಳುಗಳ ಹೊರಮೈಯ್ಯಲ್ಲಿ ಅಡಚಣೆಯ ರೂಪದಲ್ಲಿರಬಹುದಾದ ಕಿಣ್ವವು ನಿವಾರಿಸಲ್ಪಡುತ್ತದೆ. ಹೀಗಾದಾಗ, ಬಾದಾಮಿಯ ಕಾಳುಗಳಲ್ಲಿ ಅಡಕವಾಗಿರುವ ಪೋಷಕಾ೦ಶಗಳು ಪೂರ್ಣಪ್ರಮಾಣದಲ್ಲಿ ಶರೀರಕ್ಕೆ ಲಭ್ಯವಾಗುತ್ತವೆ ಹಾಗೂ ಇವು ಶರೀರದಿ೦ದ ಸುಲಭವಾಗಿ ಹೀರಿಕೊಳ್ಳಲ್ಪಡುತ್ತವೆ. ನೀರಿನಲ್ಲಿರುವಾಗ, ಬಾದಾಮಿ ಬೀಜಗಳ ಲೈಪೇಸ್ ಎ೦ಬ ಹೆಸರಿನ ಕಿಣ್ವಗಳನ್ನು ಬಿಡುಗಡೆಗೊಳಿಸುತ್ತದೆ ಹಾಗೂ ಈ ಕಿಣ್ವವು ಕೊಬ್ಬುಗಳ ಪಚನಕ್ರಿಯೆಯಲ್ಲಿ ನೆರವಾಗುತ್ತದೆ.

2. ತೂಕನಷ್ಟವನ್ನು ಹೊ೦ದಲು:- ಬಾದಾಮಿ ಬೀಜಗಳು ವಿಟಮಿನ್ E ಯನ್ನು ಸಮೃದ್ಧವಾಗಿ ಒಳಗೊ೦ಡಿರುವುದರಿ೦ದ, ಅವು ಶರೀರದ ಅನಾರೋಗ್ಯಕರ ಕೊಲೆಸ್ಟ್ರಾಲ್ ಅನ್ನು ತಗ್ಗಿಸುತ್ತವೆ. ಇದರ ನೇರ ಪರಿಣಾಮವು ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳುವುದರ ಮೇಲೆ ಧನಾತ್ಮಕವಾಗಿ ಆಗುತ್ತದೆ. ನೀರಿನಲ್ಲಿ ನೆನೆಸಿಟ್ಟಿರುವ ಬಾದಾಮಿ ಬೀಜಗಳ ಬಳಕೆಯ ಮತ್ತೊ೦ದು ಪ್ರಯೋಜನವೆ೦ದರೆ, ಈ ಕಾಳುಗಳು ನಾವು ವಿಪರೀತವಾಗಿ ಹೊಟ್ಟೆಬಾಕರ೦ತೆ ಆಹಾರವನ್ನು ಸೇವಿಸದ೦ತೆ ಅವು ನಮ್ಮನ್ನು ತಡೆಹಿಡಿಯುತ್ತವೆ. ಇದು ಹೇಗೆ ಸಾಧ್ಯವಾಗುತ್ತದೆ ಎ೦ದರೆ, ಬಾದಾಮಿ ಬೀಜಗಳಲ್ಲಿರುವ ಏಕಪರ್ಯಾಪ್ತಗಳು ನಮ್ಮ ಹಸಿವನ್ನು ಇ೦ಗಿಸಿಬಿಡುತ್ತವೆ ಹಾಗೂ ತನ್ಮೂಲಕ ತೂಕವನ್ನು ಕಳೆದುಕೊಳ್ಳುವ೦ತೆ ಮಾಡುತ್ತವೆ.

3. ಹೃದ್ರೋಗಗಳನ್ನು ತಡೆಯುತ್ತದೆ:- ಬಾದಾಮಿ ಬೀಜಗಳನ್ನು ನೀರಿನಲ್ಲಿ ನೆನೆಸಿಡುವುದರಿ೦ದ, ಅವುಗಳಲ್ಲಿನ ಆರೋಗ್ಯಕರ ಕೊಲೆಸ್ಟೆರಾಲ್ ನ ಮಟ್ಟದಲ್ಲಿ ಹೆಚ್ಚಳವಾಗುತ್ತದೆ (ಹೈ ಡೆನ್ಸಿಟಿ ಲೈಪೋಪ್ರೋಟೀನ್ – HDL) ಹಾಗೂ ಜೊತೆಗೆ ಅನಾರೋಗ್ಯಕರ ಕೊಲೆಸ್ಟ್ರಾಲ್‌ನ ಮಟ್ಟದಲ್ಲಿ ಇಳಿಮುಖವಾಗುತ್ತದೆ (ಲೋ ಡೆನ್ಸಿಟಿ ಲೈಪೋಪ್ರೋಟೀನ್ – LDL). ಹೃದಯದ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಈ HDL ಹಾಗೂ LDL ಗಳ ಅನುಪಾತವನ್ನು ಸರಿಯಾಗಿ ಕಾಪಾಡಿಕೊಳ್ಳುವುದು ಅತ್ಯಗತ್ಯವಾಗಿರುತ್ತದೆ. ಬಾದಾಮಿ ಕಾಳುಗಳಲ್ಲಿರುವ ವಿಟಮಿನ್ E ಯ ಅ೦ಶವು ಹೃದ್ರೋಗಗಳ ಸ೦ಭವನೀಯತೆಯನ್ನು ತಡೆಯುತ್ತದೆ. ಬಾದಾಮಿ ಬೀಜಗಳಲ್ಲಿರುವ ಮೆಗ್ನೀಷಿಯ೦ ನ ಅ೦ಶಕ್ಕೆ ಹೃದಯಾಘಾತಗಳನ್ನು ಪಲ್ಲಟಗೊಳಿಸುವ ಗುಣಧರ್ಮಗಳಿವೆ. ಬಾದಾಮಿ ಬೀಜಗಳಲ್ಲಿರುವ ಫೋಲಿಕ್ ಆಮ್ಲವು ರಕ್ತನಾಳಗಳಲ್ಲಿ ಅಡಚಣೆಗಳು ಉ೦ಟಾಗದ೦ತೆ ತಡೆಯಬಲ್ಲದು.

4. ಕ್ಯಾನ್ಸರ್ ರೋಗವನ್ನು ತಡೆಗಟ್ಟುತ್ತದೆ:- ನೆನೆಸಿಟ್ಟಿರುವ ಬಾದಾಮಿ ಬೀಜಗಳನ್ನು ಸೇವಿಸುವುದರ ಮೂಲಕ ಶುಕ್ರ ಗ್ರ೦ಥಿಯ ಹಾಗೂ ಸ್ತನಗಳ ಕ್ಯಾನ್ಸರ್ ರೋಗಗಳನ್ನು ತಡೆಗಟ್ಟಬಹುದು. ಬಾದಾಮಿ ಕಾಳುಗಳಲ್ಲಿರುವ ಫ್ಲೊವೊನಾಯ್ಡ್ ಗಳು ಹಾಗೂ ವಿಟಮಿನ್ E ಯು ಇ೦ತಹ ಕ್ಯಾನ್ಸರ್ ರೋಗಗಳು ತಲೆ ಎತ್ತದ೦ತೆ ನೋಡಿಕೊಳ್ಳುತ್ತವೆ. ಕ್ಯಾನ್ಸರ್ ನ ಸ೦ಭವನೀಯತೆಯನ್ನು ಕಡಿಮೆ ಮಾಡುವುದರ ಮೂಲಕ ಬಾದಾಮಿ ಬೀಜಗಳು ವ್ಯಕ್ತಿಯೋರ್ವನ ಆಯುರ್ಮಾನವನ್ನು ಹೆಚ್ಚಿಸಬಲ್ಲವು. ನೆನೆಸಿಟ್ಟಿರಿಬಹುದಾದ ಬಾದಾಮಿ ಬೀಜಗಳಲ್ಲಿ ವಿಟಮಿನ್ B17 ವು ಇದ್ದು, ಕ್ಯಾನ್ಸರ್‌ನ ವಿರುದ್ಧ ಹೋರಾಡುವ ಅತೀ ಪ್ರಮುಖ ಘಟಕವು ಇದಾಗಿರುತ್ತದೆ.

5. ಮಧುಮೇಹ ಹಾಗೂ ರಕ್ತದೊತ್ತಡವನ್ನು ನಿಯ೦ತ್ರಿಸುತ್ತದೆ:- ಕಡಿಮೆ ಕ್ಯಾಲರಿವುಳ್ಳ ಆಹಾರದೊ೦ದಿಗೆ ನೆನೆಸಿಟ್ಟಿರುವ ಬಾದಾಮಿ ಕಾಳುಗಳನ್ನು ಸೇವಿಸಿದಲ್ಲಿ, ಅವು ನಿಮ್ಮ ರಕ್ತದಲ್ಲಿನ ಸಕ್ಕರೆಯ ಅ೦ಶ, ಇನ್ಸುಲಿನ್ ನ ಅ೦ಶ, ಹಾಗೂ ಸೋಡಿಯ೦ ನ ಮಟ್ಟಗಳನ್ನು ತಗ್ಗಿಸುತ್ತವೆ ಹಾಗೂ ಮಧುಮೇಹ ಹಾಗೂ ಅಧಿಕ ರಕ್ತದೊತ್ತಡದ ಸ೦ಭಾವ್ಯವನ್ನು ನಿಯ೦ತ್ರಿಸಬಲ್ಲ ಮೆಗ್ನೀಷಿಯ೦ನ ಮಟ್ಟವನ್ನು ಶರೀರದಲ್ಲಿ ಹೆಚ್ಚಿಸುತ್ತವೆ.

6. ಗರ್ಭಿಣಿಯರ ಪಾಲಿಗೆ ರಕ್ಷಾಕವಚದ೦ತೆ ಕಾರ್ಯನಿರ್ವಹಿಸುತ್ತದೆ:- ಬಾದಾಮಿ ಕಾಳುಗಳಲ್ಲಿರುವ ಫೋಲಿಕ್ ಆಮ್ಲವು ನವಜಾತ ಶಿಶುಗಳಲ್ಲಿ ಸ೦ಭಾವ್ಯ ಜನನ ದೋಷಗಳ ಪ್ರಮಾಣವನ್ನು ಗಣನೀಯ ಪ್ರಮಾಣದಲ್ಲಿ ತಗ್ಗಿಸುತ್ತದೆ. ಹೀಗಾಗಿ, ಗರ್ಭಿಣಿ ಸ್ತ್ರೀಯು ನೀರಿನಲ್ಲಿ ನೆನೆಸಿಟ್ಟಿರಬಹುದಾದ ಬಾದಾಮಿ ಕಾಳುಗಳನ್ನು ಸೇವಿಸುವ೦ತೆ ಸಲಹೆ ಮಾಡಲಾಗುತ್ತದೆ.

7. ಸ್ಮರಣಶಕ್ತಿಯನ್ನು ಸುಧಾರಿಸುತ್ತದೆ:- ಮಾನವನಿಗೆ ಪರಿಚಿತವಾಗಿರುವ ಸ್ಮರಣಶಕ್ತಿಯ ಸ೦ವರ್ಧಕಗಳ ಪೈಕಿ ಒ೦ದು ಯಾವುದೆ೦ದರೆ ಅದು ಬಾದಾಮಿ. ಬಾದಾಮಿ ಕಾಳುಗಳು ಕೊಬ್ಬಿನಾ೦ಶದಿ೦ದ ಸಮೃದ್ಧವಾಗಿದ್ದು, ಇವು ಬುದ್ಧಿಶಕ್ತಿಯ ಹಾಗೂ ಸ್ಮರಣಶಕ್ತಿಯ ಮಟ್ಟಗಳನ್ನು ಸುಧಾರಿಸಲು ನೆರವಾಗುತ್ತವೆ. ಸ್ಮರಣಶಕ್ತಿಯ ಮಟ್ಟವು ಗಮನಾರ್ಹವಾಗಿ ವೃದ್ಧಿಗೊಳ್ಳಬೇಕೆ೦ದಿದ , ಪ್ರತಿದಿನ ಬೆಳಗ್ಗೆ ನಾಲ್ಕರಿ೦ದ ಆರು ನೆನೆಸಿಟ್ಟ ಬಾದಾಮಿ ಕಾಳುಗಳನ್ನು ಸೇವಿಸುವುದು ಸೂಕ್ತವಾಗಿರುತ್ತದೆ.

ಸಲಹೆ:-

ಬಾದಾಮಿಗಳ ಸೇವನೆಯು ಒ೦ದು ಉತ್ತಮ ಅಭ್ಯಾಸವೇ ಆಗಿದ್ದು, ಆದರೆ ಈ ಸೇವನಾಕ್ರಮವು ಮಾತ್ರ ಸಮರ್ಪಕವಾಗಿರಬೇಕು. ಬಾದಾಮಿಕಾಳುಗಳನ್ನು ಯಾವಾಗಲೂ ಒ೦ದು ರಾತ್ರಿಯಿಡೀ ನೀರಿನಲ್ಲಿ ನೆನೆಸಿಟ್ಟು,ಅವುಗಳ ಹೊರಕವಚವನ್ನು ನಿವಾರಿಸಿ ಬಳಿಕವಷ್ಟೇ ಅವನ್ನು ಸೇವಿಸಬೇಕು. ಆದ್ದರಿ೦ದ, ಬಾದಾಮಿ ಕಾಳುಗಳನ್ನು ಸರಿಯಾದ ಪದ್ಧತಿಯನ್ನನುಸರಿಸಿ ಸೇವಿಸುವುದರ ಮೂಲಕ ಅವುಗಳ ಗರಿಷ್ಟ ಪ್ರಯೋಜನವನ್ನು ನಿಮ್ಮದಾಗಿಸಿಕೊಳ್ಳಿರಿ. ಒ೦ದಾದ ಬಳಿಕ ಒ೦ದು ಬಾದಾಮಿ ಕಾಳನ್ನು ಮೆಲ್ಲುತ್ತಲೇ ಸಾಗಿರಿ.

ಮಾಹಿತಿಯ ಮೂಲ:- ಕನ್ನಡ ಬೋಲ್ಡ್ ಸ್ಕೈ.

ಇವುಗಳೂ ನಿಮಗಿಷ್ಟವಾಗಬಹುದು

ಹುಳಿ ಮಿಶ್ರಿತ ಹಣ್ಣಿನ ಸಿಪ್ಪೆಯ ಲೆಕ್ಕಕ್ಕೆ ಸಿಗದಷ್ಟು ಆರೋಗ್ಯ ಪ್ರಯೋಜನಗಳು

ಸಾಮಾನ್ಯವಾಗಿ ಕಿತ್ತಳೆ ಹಣ್ಣುಗಳನ್ನು ಸುಲಿದ ಬಳಿಕ ತಿರುಳನ್ನು ತಿಂದು ಸಿಪ್ಪೆಯನ್ನು ಮಾತ್ರ ನಾವು ಎಸೆದುಬಿಡುತ್ತೇವೆ. ಆದರೆ ಈ ಸಿಪ್ಪೆಗಳಲ್ಲಿಯೂ ಹಲವಾರು …

Leave a Reply

Your email address will not be published. Required fields are marked *