ನೀರು ಸೇವಿಸಿದರೆ ಎಷ್ಟು ಕಾಯಿಲೆಗಳು ನಮ್ಮಿಂದ ದೂರವಾಗುತ್ತವೆಯೋ ಸೇವಿಸದಿದ್ದರೆ ಅಷ್ಟೇ ಕಾಯಿಲೆಗಳು ನಮ್ಮ ಬಳಿ ಸುಳಿಯುತ್ತವೆ. ಮನುಷ್ಯನ ದೇಹಕ್ಕೆ ಆಮ್ಲಜನಕ ಬಿಟ್ಟರೆ ಅತಿ ಅವಶ್ಯಕವಾದದ್ದು ನೀರು. ಶರೀರದಲ್ಲಿ ನೀರು ಕಡಿಮೆಯಾದರೆ ಕಾಯಿಲೆಗಳಿಗೆ ಆಹ್ವಾನವಿತ್ತಂತೆ. ಇನ್ನು ಮುಂದೆಯಾದರು ನೀರಿನ ಮಹತ್ವವನ್ನು ಅರಿತರೆ ಕಾಯಿಲೆಗಳು ನಮ್ಮಿಂದ ಶಾಶ್ವತವಾಗಿ ದೂರ ಉಳಿಯುತ್ತವೆ.
ಕಾಯಿಲೆಗಳು-ಉಪಶಮನ
ತಲೆನೋವು: ನಿರ್ಜಲೀಕರಣ ತಲೆನೋವಿಗೆ ಕಾರಣವಾಗುತ್ತದೆ. ತಲೆನೋವು ಆಗಾಗ ಕಾಡುತ್ತಿದ್ದರೆ ಹೆಚ್ಚು ನೀರನ್ನು ಕುಡಿಯಲು ಆರಂಭಿಸಿ. ಇದು ಬೇಗನೆ ಕೆಲಸ ಮಾಡುತ್ತದೆ.
ಮೂತ್ರಕೋಶದ ಸೋಂಕು: ಹೆಚ್ಚಾಗಿ ನೀರು ಕುಡಿದಷ್ಟು ಮೂತ್ರ ವಿಸರ್ಜಿಸಬಹುದು. ಹೀಗೆ ಮೂತ್ರಕೋಶದ ಸೋಂಕು ತಂದಿರುವ ಏಕಾಣುಜೀವಿಗಳನ್ನು ನೀರು ಹೊರಹಾಕುತ್ತದೆ ಎಂದು ತಜ್ಞರೇ ಹೇಳುತ್ತಾರೆ.
ಜ್ವರ: ಜ್ವರ ಕಡಿಮೆಯಾಗುತ್ತದೆ. ದೇಹದಲ್ಲಿರುವ ಶಾಖ ಮೂತ್ರದ ಮೂಲಕ ಹೊರಹಾಕಲು ಸಹಾಯ ಮಾಡುತ್ತದೆ.
ಉಷ್ಣತೆ ವಿರುದ್ಧ: ಕೆಲಸ ಮಾಡುವಾಗ ಮಾಂಸಖಂಡಗಳಿಂದ ಉತ್ಪತ್ತಿಯಾಗುವ ಉಷ್ಣತೆ ನಿಯಂತ್ರಿಸಲು ಸಹಕಾರಿಯಾಗುತ್ತದೆ.
ಕಫ ವಿರೋಧಿ: ನೀರನ್ನು ಹೆಚ್ಚಾಗಿ ಸೇವಿಸಿದಷ್ಟು ಗಂಟಲಲ್ಲಿರುವ ಕಫ ಹೊರ ಬರುತ್ತದೆ.
ಎದೆಯುರಿಗೆ: ನೀರಿನೊಂದಿಗೆ ಬಾಳೆಹಣ್ಣು ಸೇವಿಸುವುದರಿಂದ ಅಸಿಡಿಟಿ ಕಡಿಮೆಯಾಗುತ್ತದೆ.
ಶಕ್ತಿಯುತ್ಪತ್ತಿಗೆ: ದೇಹದೊಳಗೆ ನೀರು ಹೆಚ್ಚು ಹೋದಂತೆ ರಕ್ತಚಲನೆ ಹೆಚ್ಚಾಗಿ ದೇಹವನ್ನು ಸಕ್ರಿಯವಾಗಿರಿಸುತ್ತದೆ.
ತೂಕ ಇಳಿಕೆ:ಊಟಕ್ಕೆ ಒಂದು ಗಂಟೆ ಮೊದಲು ಎರಡು ಲೋಟ ನೀರು ಕುಡಿಯಬೇಕು. ಆಗ ದೇಹಕ್ಕೆ ಎಷ್ಟು ಬೇಕೋ ಅಷ್ಟು ಆಹಾರ ಹಿಡಿಸುತ್ತದೆ.
ಆರೋಗ್ಯಕರ ಚರ್ಮಕ್ಕೆ: ಮುಖದಲ್ಲಿ ಸುಕ್ಕುಗಳು ಮೂಡುವುದಿಲ್ಲ. ಕಾಂತಿಯುತವಾಗುತ್ತದೆ.
- ಯಾವಾಗ-ಎಷ್ಟು?
- ನೀರು ಅಮೃತಕ್ಕೆ ಸಮಾನ. ಪ್ರತಿದಿನ 12 ಲೋಟ ನೀರು ಕುಡಿಯಿರಿ. ಒಂದೇ ಬಾರಿಗೆ ಕುಡಿಯಬಾರದು. ಆಗಾಗ ಸೇವಿಸಿ.
- ದಿನಕ್ಕೆ ಕನಿಷ್ಠ 12 ಲೋಟ, ಗರಿಷ್ಠ 16 ಲೋಟ ಮೀರದಂತೆ ಕುಡಿಯಬೇಕು.
- ಬೆಳಗ್ಗೆ ಎದ್ದ ಕೂಡಲೇ 2 ಲೋಟ, ಮಲಗುವ ಮುನ್ನ 2 ಲೋಟ ನೀರು ಕುಡಿಯಬೇಕು.
- ಹೆಚ್ಚು ಬಾಯಾರಿಸುವ ಮುನ್ನವೇ ನೀರನ್ನು ಕುಡಿದರೆ ಒಳ್ಳೆಯದು.
- ಊಟದ ಮಧ್ಯೆ ಆಗಾಗ ನೀರು ಕುಡಿಯಬೇಡಿ.
- ಮಲಬದ್ಧತೆಯಿಂದ ನರಳುತ್ತಿರುವವರು ನೀರನ್ನು ಹೆಚ್ಚಾಗಿ ಸೇವಿಸಿ. ಸ್ವಲ್ಪ ಹೊತ್ತು ವಾಕ್ ಮಾಡಿ.
ಶ್ರೇಯಾಂಕ