Ranakahale

ನಮ್ಮ ಬಗ್ಗೆ | About Us

ನಮ್ಮ ನಾಡು ಸಂಸ್ಕೃತಿಯ ನೆಲೆವೀಡು. ಇದು ಸಾಧಕರ ಕರ್ಮಭೂಮಿ. ನಾಡು – ನುಡಿ – ಸಂಸ್ಕೃತಿಗಳಿಗಾಗಿ ಸರ್ವಸ್ವದೊಂದಿಗೆ ಜೀವವನ್ನೂ ತೆತ್ತವರ ಮಣ್ಣಿದು. ಶತಮಾನಗಳ ಹಿಂದೆ ಮದರಾಸು ಸರಕಾರದ ವ್ಯಾಪ್ತಿಯಲ್ಲಿದ್ದುದರಿಂದ ಅಲ್ಲಿನ ಪ್ರಭಾವ, ನಂತರ ಕರ್ನಾಟಕದ ಪ್ರೇರಣೆ, ಅಲ್ಲಿಂದ ನಂತರ ಕೇರಳಕ್ಕೆ ಸೇರಿಕೊಂಡ ಬಳಿಕ ಮಲೆಯಾಳಂ ಮನೆ-ಮನಗಳ ಆವರಣ. ಹೀಗೆ ಭೌಗೋಳಿಕವಾಗಿ ಇಲ್ಲಿನ ಸಾಂಸ್ಕೃತಿಕ ಶ್ರೀಮಂತಿಕೆಗೆ – ಕಲಾವಂತಿಕೆಗೆ ಹಲವು ಮಜಲುಗಳು – ಕವಲುಗಳು.

ಸುಸಂಸ್ಕೃತವಾದುದು, ಆರೋಗ್ಯಪೂರ್ಣವಾದುದು, ಸಕಾರಾತ್ಮಕವಾದುದು ಎಲ್ಲಿಂದ ಲಭಿಸಿದರೂ ನಮಗದು ಸ್ವೀಕೃತ. ಈ ಎಲ್ಲ ಅಂಶಗಳನ್ನು ಒಂದೇ ಕಡೆ ನೀಡುವ ನಮ್ಮ ಕನ್ನಡ ನಾಡು ಯತ್ನವಿದು. ಸೀಮಿತತೆಯ ನಡುವೆಯೂ ಸಂಸ್ಕೃತಿ-ಕಲೆಗಳ ಸುಗಂಧವನ್ನು ಬೀರುವ ವರಕರ್ಪೂರ ಕವಳದ ತಟ್ಟೆಯಿದು.

ನೀವೂ ಮೆಚ್ಚಿಕೊಂಡ ಕಲಾ-ಸಾಂಸ್ಕೃತಿಕ ವಿಚಾರಗಳ ಕುರಿತು ಈ ಪುಟದಲ್ಲಿ ಬರೆಯಬಹುದು. ಸುಂದರ ಫೊಟೋಗಳಿದ್ದರೆ ಚಂದದ ಬರಹಗಳಿಗೊಂದು ಬಂಗಾರದ ಆವರಣವಾದೀತು. ಹಾಗಾಗಿಯೇ ಚಂದದ ನುಡಿ, ಅಂದದ ಅಡಿ, ಇದು ನಮ್ಮ ಕನ್ನಡ ನಾಡು.

ನಮ್ಮೂರ ಹೆಸರೇ ಅಂದ‘ ಇದೊಂದು ವಿಶ್ಲೇಷಣಾತ್ಮಕ ಲೇಖಗಳಿಗಾಗಿ ಮೀಸಲಾದ್ದು ಇದರಲ್ಲಿ ಆಯಾ ಊರಿನ ಹೆಸರಿನ ಬಗ್ಗೆ ಪ್ರಚಲಿತ ಇರುವ ವಿಷಯಗಳು ಹಾಗೂ ಆ ಊರಿಗೆ ಆ ಹೆಸರು ಏಕೆ ಬಂತು ಎಂಬುದನ್ನು ಒಳಗೊಂಡಿರುತ್ತದೆ.

ನಮ್ಮೂರೇ ನಮಗೆ ಅಂದ – ಹೆಸರೇ ಸೂಚಿಸುವಂತೆ ಪ್ರತಿಯೊಬ್ಬರಲ್ಲಿ ತಮ್ಮ ಹುಟ್ಟೂರನ್ನು ನೆನೆಯುವಂತೆ ಮಾಡುವ ಪ್ರಯತ್ನ. ತಮ್ಮ ಹುಟ್ಟೂರಿನ ಪರಿಸರ ಅದರ ವೈಶಿಷ್ಟ್ಯ, ಸ್ಥಾನಮಾನಗಳನ್ನು ತಿಳಿಸಲು ಸಿದ್ಧವಾದ ವೇದಿಕೆ. ಅದಕ್ಕೆ ಹೊಂದಿಕೊಂಡತೆ ಇರುವ ‘ನಮ್ ಕೇರಿ ಆಟ’ ಗ್ರಾಮೀಣ ಪರಿಸರದಲ್ಲಿ ಆಡಲಾಗುವ ಒಳಾಂಗಣ- ಹೊರಾಂಗಣ ಆಟಗಳ ಪರಿಚಯಿಸುವ ವಿಭಾಗ ‘ನಮ್ ಮನೆಯಾಗೈತೆ… ನೋಡಿ’ – ಇದು ಹಳೆಯ ವಸ್ತುಗಳನ್ನು ಹುಡುಕುವ ಪ್ರಯತ್ನ ಉದಾ : ಮೇಟಿ, ಹಳೆ ಕಾಲದ ಕಪಾಟುಗಳು, ಅಡ ಕತ್ತರಿಗಳು, ಕಸೂತಿ ಕಲೆಯ ವಸ್ತುಗಳು.. ಇತ್ಯಾದಿ.

ನಮ್ಮೂರ ಹೆಸರೇ ಅಂದ‘ ಇದೊಂದು ವಿಶ್ಲೇಷಣಾತ್ಮಕ ಲೇಖಗಳಿಗಾಗಿ ಮೀಸಲಾದ್ದು ಇದರಲ್ಲಿ ಆಯಾ ಊರಿನ ಹೆಸರಿನ ಬಗ್ಗೆ ಪ್ರಚಲಿತ ಇರುವ ವಿಷಯಗಳು ಹಾಗೂ ಆ ಊರಿಗೆ ಆ ಹೆಸರು ಏಕೆ ಬಂತು ಎಂಬುದನ್ನು ಒಳಗೊಂಡಿರುತ್ತದೆ.

ಇನ್ನೂ ಅನೇಕ ಜನಪದ ಸಂಗ್ರಹಣೆಗಳು ಕಾಲದ ಅಡಿಯಲ್ಲಿ ಸಿಲುಕಿ ಅವುಗಳ ಬಳಕೆ ಕಮ್ಮಿಯಾಗಿದ್ದರೂ ಅದನ್ನು ಜನತೆಗೆ ಪರಿಚಯಿಸುವುದು ನಮ್ಮ ಉದ್ದೇಶ.

ಶ್ರೇಯಾಂಕ

ಮತ ನೀಡಿ, ಬಲಪಡಿಸಿ ಮತ್ತು ಸಾಮಾಜಿಕ ಜಾಲ ತಾಣದಲ್ಲಿ ಹಂಚಿರಿ.

User Rating: 4.59 ( 5 votes)

One comment

  1. Dear sir,

    i want your daily updates

Leave a Reply

Your email address will not be published. Required fields are marked *