ಪಬ್, ಬಾರ್ ಗಳಲ್ಲಿ ನಾಟ್ಯ ಮಾಡುವ ಬಾರ್ ಗರ್ಲ್ಸ್ ಬಗ್ಗೆ ತಿಳಿದೇ ಇರುತ್ತದೆಯಲ್ಲವೆ. ಆದರೆ ನಿಜಕ್ಕೂ ಈ ಸಂಸ್ಕೃತಿ ಆಧುನಿಕ ಸಮಾಜದಲ್ಲಿ ಬಂದದ್ದಲ್ಲವಂತೆ. 400 ವರ್ಷಗಳ ಹಿಂದೆಯೇ ಇದು ಪ್ರಾರಂಭವಾಗಿದೆಯಂತೆ. ಆಗ ಮೊಘಲ್ ಚಕ್ರವರ್ತಿಗಳು, ಬ್ರಿಟೀಷರು ಭಾರತೀಯ ಯುವತಿಯರೊಂದಿಗೆ ನಾಟ್ಯವಾಡುತ್ತಿದ್ದರಂತೆ ಹಾಗೂ ಆ ಯುವತಿಯರ ನಾಟ್ಯಗಳನ್ನು ವೀಕ್ಷಿಸುತ್ತಿದ್ದರಂತೆ. ನಂತರದ ದಿನಗಳಲ್ಲಿ ಅವರ ಹೆಸರು ಬಾರ್ ಗರ್ಲ್ಸ್ ಆಗಿ ಬದಲಾಯಿತು. 15ನೇ ಶತಮಾನದಲ್ಲಿ ಖಾದೀ ಮೊಘ್ ಫಿಲ್ ಹೆಸರಿನಲ್ಲಿ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಿದ್ದರಂತೆ. ಯುವತಿಯರು ನಾಟ್ಯವಾಡುತ್ತಿದ್ದ ಆ ಕಾರ್ಯಕ್ರಮಗಳನ್ನು ವೀಕ್ಷಿಸಲು ಸಾಧಾರಣ ಪ್ರಜೆಗಳಿಗೆ ಅನುಮತಿ ನೀಡುತ್ತಿರಲಿಲ್ಲವಂತೆ. ರಾಜರು, ಶ್ರೀಮಂತರು, ಬ್ರಿಟೀಷರು ಮಾತ್ರ ಆ ಕಾರ್ಯಕ್ರಮಕ್ಕೆ ಹೋಗುತ್ತಿದ್ದರಂತೆ.
ಅಲ್ಲದೆ ಗ್ವಾಲಿಯರ್ ಸಂಗೀತ್ ಘರಾನಾಗೆ ಸೇರಿದ ಕೆ.ಕೆ.ರಸ್ತೋಗಿ ಎನ್ನುವವರ ಬಳಿ ಸುಮಾರು 400 ವರ್ಷಗಳ ಹಿಂದೆ ಕೆಲವರು ಕಳಾವಿದರು ಬರೆದ ಫೋಟೋಗಳು ಇವೆಯಂತೆ. ಇದರಿಂದ ನಮಗೆ 400 ವರ್ಷಗಳ ಹಿಂದೆಯೇ ಬಾರ್ ಗರ್ಲ್ಸ್ ಇದ್ದರೆಂಬುದು ಸ್ಪಷ್ಟವಾಗುತ್ತದೆ. ಈ ವರಸೆಯಲ್ಲಿ 19ನೇ ಶತಮಾನದಿಂದ ಈ ವೃತ್ತಿಯಲ್ಲಿ ತೊಡಗಿರುವವರು ಸಮಾಜಕ್ಕೆ ದೂರವಿರುವುದನ್ನು ಪ್ರಾರಂಭಿಸಿದರಂತೆ. ಇಂದಿಗೂ ಕೆಲವು ಪ್ರಾಂತ್ಯಗಳಲ್ಲಿ ಜಾರಿಯಲ್ಲಿದೆ.
1590ನೇ ವರ್ಷಕ್ಕೆ ಸೇರಿದ ಮೇಲಿನ ಚಿತ್ರದಲ್ಲಿ ಅಕ್ಬರ್ ನಾಟ್ಯವಾಡುತ್ತಿರುವುದನ್ನು ಗಮನಿಸಬಹುದು.
1785ನೇ ವರ್ಷಕ್ಕೆ ಸೇರಿದ ಮೇಲೆ ಕಾಣಿಸುವ ಚಿತ್ರದಲ್ಲಿ ಯುವತಿಯರು ಎಲ್ಲರ ಮುಂದೆ ನಾಟ್ಯವಾಡುತ್ತಿದ್ದಾರೇ ಹೊರತು, ಅವರ ಗುಂಪಿನ ಯುವತಿಯರ ಪಕ್ಕದಲ್ಲಿ ಅಲ್ಲದೆ ಯಾರ ಪಕ್ಕದಲ್ಲಾದರೂ ಕುಳಿತುಕೊಳ್ಳಬಹುದೆಂಬುದಕ್ಕೆ ಅನುಮತಿ ಇಲ್ಲವೆಂಬಂತೆ ಕಾಣುತ್ತದೆ.
ಬ್ರಿಟೀಷ್ ಕಾಲದ ಈ ಚಿತ್ರ 1825ನೇ ವರ್ಷಕ್ಕೆ ಸೇರಿದ್ದು. ಅದೇ ವರ್ಷದಲ್ಲಿ ಬಾರ್ ಗರ್ಲ್ಸ್ ನ್ನು ವೇಶ್ಯಾವೃತ್ತಿಯಲ್ಲಿ ತೊಡಿಗಿಸಿದರಂತೆ. ಬ್ರಿಟೀಷರು ಹಣ ನೀಡಿ ಯುವತಿಯರನ್ನು ಒಂದು ರಾತ್ರಿಗೆ ಅಥವಾ ಕೆಲವು ದಿನಗಳಿಗೆ ಸೀಮಿತವಾಗುವಂತೆ ತಮ್ಮೊಂದಿಗೆ ಕರೆದೊಯ್ಯುತ್ತದ್ದರಂತೆ.
1800ನೇ ವರ್ಷಕ್ಕೆ ಸೇರಿದ ಮೇಲೆ ಕಾಣಿಸುವ ಚಿತ್ರದಲ್ಲಿ ಬ್ರಿಟೀಷರು ಯುವತಿಯರು ನಾಟ್ಯವಾಡುತ್ತಿರುವುದನ್ನು ಗಮನಿಸಬಹುದು.
185ನೇ ವರ್ಷಕ್ಕೆ ಸೇರಿದ ಈ ಚಿತ್ರದಲ್ಲಿ ಅರ್ಧನಗ್ನವಾಗಿರುವ ಯುವತಿ ನಾಟ್ಯವಾಡುತ್ತಿರುವ ದೃಶ್ಯವನ್ನು ಕಾಣಬಹುದು.
1820ನೇ ವರ್ಷಕ್ಕೆ ಸೇರಿದ ಈ ಚಿತ್ರದಲ್ಲಿ ನಾಟ್ಯವಾಡುವ ಯುವತಿಯರ ಬಗ್ಗೆ ಎಲ್ಲೆಡಯೂ ಪ್ರಚಾರವಾಗಿ ಸಾಧಾರಣ ಜನರು ಕೂಡಾ ಆ ಕಾರ್ಯಕ್ರಮವನ್ನು ನೋಡಿ ಖುಷಿ ಪಡುವುದನ್ನು ಪ್ರಾರಂಭಿಸಿದರು.
ಅಂದು ಗೋವಾದಲ್ಲಿ ನಡೆಸಿದ ನೃತ್ಯ ಪ್ರದರ್ಶನದ ಚಿತ್ರವಿದು.
ಮೇಲಿನ ಚಿತ್ರದಲ್ಲಿ 1920ರ ಕಾಲದಲ್ಲಿ ಮಹಾರಾಷ್ಟ್ರದಲ್ಲಿ ನಾಟ್ಯವಾಡುವವರನ್ನು ಕಾಣಬಹುದು. ಈ ಪ್ರಾಂತ್ಯದಿಂದಲೇ ವೇಶ್ಯಾ ವೃತ್ತಿ ಮೆಲ್ಲಮೆಲ್ಲಗೆ ಪ್ರಾರಂಭಗೊಂಡಿತಂತೆ.
ರಾಜಸ್ಥಾನ್ ಪ್ರಾಂತ್ಯದಲ್ಲಿ ನಾಟ್ಯವಾಡುತ್ತಿರುವ ಯುವತಿಯರ ಚಿತ್ರವಿದು.
ಕೋಲ್ ಕತ್ತಾದಲ್ಲಿ ನಡೆದ ಒಂದು ನೃತ್ಯ ಪ್ರದರ್ಶನದ ಚಿತ್ರ ಇದು