‘ನಮಃ ಶಿವಾಯ |’ ಎಂಬ ಪಂಚಾಕ್ಷರಿ ಮಂತ್ರದ ಅರ್ಥ

shivalingam“ನಮಃ ಶಿವಾಯ|” ಇದು ಶಿವಪಂಚಾಕ್ಷರಿ ಮಂತ್ರವಾಗಿದೆ. ಯಜುರ್ವೇದದಲ್ಲಿನ ರುದ್ರಾಧ್ಯಾಯದಲ್ಲಿ “ನಮಃ ಶಿವಾಯ|” ಈ ಶಬ್ದದಿಂದ ಒಂದು ಅನುವಾಕ (ಒಂದು ಉಪಭಾಗ) ಪ್ರಾರಂಭವಾಗುತ್ತದೆ. ಈ ಮಂತ್ರವನ್ನು ಅಲ್ಲಿಂದಲೇ ತೆಗೆದುಕೊಳ್ಳಲಾಗಿದೆ. ಇದರ ಪ್ರಾರಂಭದಲ್ಲಿ ಪ್ರಣವವನ್ನು ಸೇರಿಸಿದರೆ ಅದು “ನಮಃ ಶಿವಾಯ|”ಎಂಬ ಷಡಕ್ಷರಿ ಮಂತ್ರವಾಗುತ್ತದೆ.

“ನಮಃ ಶಿವಾಯ|” ಮಂತ್ರದಲ್ಲಿನ ಪ್ರತಿಯೊಂದು ಅಕ್ಷರದ ಆಧ್ಯಾತ್ಮಿಕ ಅರ್ಥ

= ಸಮಸ್ತ ಲೋಕಗಳ ಆದಿದೇವ
ಮಃ = ಪರಮನವನ್ನು ಕೊಡುವವನು ಮತ್ತು ಮಹಾಪಾತಕಗಳನ್ನು ನಾಶಗೊಳಿಸುವವನು
ಶಿ = ಕಲ್ಯಾಣಕಾರಕ, ಶಾಂತ ಮತ್ತು ಶಿವನ ಅನುಗ್ರಹಕ್ಕೆ ಕಾರಣವಾದವನು
ವಾ = ವೃಷಭವಾಹನ, ವಾಸುಕಿ ಮತ್ತು ವಾಮಾಂಗಿ ಶಕ್ತಿಗಳ ಸೂಚಕ
= ಪರಮಾನಂದರೂಪ ಮತ್ತು ಶಿವನ ಶುಭ ನಿವಾಸಸ್ಥಾನ ಆದುದರಿಂದ ಈ ಐದು ಅಕ್ಷರಗಳಿಗೆ ನಮಸ್ಕಾರ.

ನಟರಾಜ ಶಿವನ ತಾಂಡವ ನೃತ್ಯದೊಂದಿಗಿರುವ ಮೇಲಿನ ಮಂತ್ರದಲ್ಲಿನ ಐದು ಅಕ್ಷರಗಳ ಸಂಬಂಧವು ಕೆಳಗಿನಂತಿದೆ.

= ಅಗ್ನಿಯಿರುವ ಕೈ
ಮಃ = ಮುಯಲಕ ದೈತ್ಯನನ್ನು ಮೆಟ್ಟುವ ಕಾಲು
ಶಿ = ಡಮರುಹಸ್ತ
ವಾ = ಪಸರಿಸಿರುವ ಹಸ್ತ
= ಅಭಯಹಸ್ತ

ಅನುಕ್ರಮವಾಗಿ ಈ ಐದು ಅಕ್ಷರಗಳ ಅರ್ಥವನ್ನು ಈಶ್ವರ, ಶಕ್ತಿ, ಆತ್ಮ, ಅಂತರ್ಧಾನ ಮತ್ತು ಪಾಪನಿವಾರಣೆ ಎಂದೂ ಹೇಳಲಾಗಿದೆ.

ಆಧಾರ: balsanskar

Review Overview

User Rating: 4.9 ( 1 votes)

ಇವುಗಳೂ ನಿಮಗಿಷ್ಟವಾಗಬಹುದು

ಶಬರಿ ಕೇಳುತ್ತಾಳೆ

ರಾವಣನನ್ನು ಸಂಹಾರ ಮಾಡುವ ನೆಪದಿಂದಲಾದರೂ ನೀನು ಇಲ್ಲಿಗೆ ಬಂದೆಯಲ್ಲ, ಇಲ್ಲ ಅಂದರೆ ಎಲ್ಲಿ ಬರುತ್ತಿದ್ದೆ ಸ್ವಾಮಿ? ಶ್ರೀರಾಮ ಸ್ವಲ್ಪ ಗಂಭೀರ …

Leave a Reply

Your email address will not be published. Required fields are marked *