ಅ. ‘ಯಾವುದಾದರೊಂದು ಜೀವದ ರಜ-ತಮಾತ್ಮಕ ಇಚ್ಛೆಯು, ಇನ್ನೊಂದು ಜೀವದ ಮೇಲೆ ದುಷ್ಪರಿಣಾಮವನ್ನು ಮಾಡುವುದಕ್ಕೆ ದೃಷ್ಟಿ ತಗಲುವುದು ಎನ್ನುತ್ತಾರೆ.’
ಇದರ ಒಂದು ಉದಾಹರಣೆಯೆಂದರೆ, ಮಗುವಿಗೆ ದೃಷ್ಟಿ ತಗಲುವುದು. ನಗುವ ಅಥವಾ ಮುದ್ದಾದ ಮಗುವನ್ನು ನೋಡಿ ಕೆಲವು ಜನರ ಮನಸ್ಸಿನಲ್ಲಿ ಅವರಿಗೆ ಅರಿವಾಗದೇ, ಒಂದು ರೀತಿಯ ಆಸಕ್ತಿಯುಕ್ತ ವಿಚಾರಗಳು ಬರುತ್ತವೆ. ಆಸಕ್ತಿಯುಕ್ತ ವಿಚಾರಗಳು ಯಾವಾಗಲೂ ರಜ-ತಮಾತ್ಮಕವಾಗಿರುತ್ತವೆ. ಮಗುವಿನ ಸೂಕ್ಷ್ಮದೇಹವು ಅತ್ಯಂತ ಸಂವೇದನಾಶೀಲವಾಗಿರುವುದರಿಂದ, ಈ ರಜ-ತಮಾತ್ಮಕ ಸ್ಪಂದನಗಳಿಂದ ಅದರ ಮೇಲೆ ಕೆಟ್ಟ ಪರಿಣಾಮವಾಗುತ್ತದೆ; ಅಂದರೆ ಮಗುವಿಗೆ ದೃಷ್ಟಿ ತಗಲುತ್ತದೆ.
ಆ. ಕೆಲವೊಮ್ಮೆ ಯಾವುದಾದರೊಬ್ಬ ವ್ಯಕ್ತಿ, ಪ್ರಾಣಿ ಅಥವಾ ವಸ್ತುವಿನ ಬಗ್ಗೆ ಯಾವುದಾದರೊಬ್ಬ ವ್ಯಕ್ತಿ ಅಥವಾ ಕೆಟ್ಟ ಶಕ್ತಿಯ ಮನಸ್ಸಿನಲ್ಲಿ ಕೆಟ್ಟ ವಿಚಾರಗಳು ಬರುತ್ತವೆ ಅಥವಾ ಅವರಿಗೆ ಒಳಿತಾಗುವುದನ್ನು ಆ ವ್ಯಕ್ತಿಗೆ ಅಥವಾ ಕೆಟ್ಟ ಶಕ್ತಿಗೆ ಸಹಿಸಲಾಗುವುದಿಲ್ಲ. ಇದರಿಂದ ನಿರ್ಮಾಣವಾಗುವ ಕೆಟ್ಟ ಸ್ಪಂದನಗಳು ಆ ವ್ಯಕ್ತಿ, ಪ್ರಾಣಿ ಅಥವಾ ವಸ್ತುವಿನ ಮೇಲೆ ಪರಿಣಾಮವನ್ನು ಬೀರುವುದಕ್ಕೆ ‘ದೃಷ್ಟಿ ತಗಲುವುದು’ ಎನ್ನುತ್ತಾರೆ.
‘ಯಾವುದಾದರೊಂದು ಜೀವದ ಮನಸ್ಸಿನಲ್ಲಿ, ಇನ್ನೊಂದು ಜೀವದ ಬಗ್ಗೆ ತೀವ್ರ ಮತ್ಸರ ಅಥವಾ ದ್ವೇಷಯುಕ್ತ ವಿಚಾರಗಳ ಪ್ರಮಾಣವು ಶೇ. ೩೦ ಕ್ಕಿಂತ ಹೆಚ್ಚಿಗಿದ್ದರೆ, ಆ ಜೀವದ ದೃಷ್ಟಿಯು ಇನ್ನೊಂದು ಜೀವಕ್ಕೆ ತೀವ್ರವಾಗಿ ತಗಲಬಹುದು. ಈ ರೀತಿಯ ದೃಷ್ಟಿ ತಗಲಿದಾಗ ದೃಷ್ಟಿ ತಗಲಿದ ಜೀವಕ್ಕೆ ಶಾರೀರಿಕಕ್ಕಿಂತ ಮಾನಸಿಕ ತೊಂದರೆಗಳಾಗುವ ಪ್ರಮಾಣ ಹೆಚ್ಚಿರುತ್ತದೆ. ಇದಕ್ಕೆ ‘ಸೂಕ್ಷ್ಮ-ಸ್ತರದಲ್ಲಿ ತೀವ್ರ ದೃಷ್ಟಿ ತಗಲುವುದು’ ಎನ್ನುತ್ತಾರೆ.’
ಇ. ಅಘೋರಿ ವಿಧಿಗಳನ್ನು ಮಾಡುವವರಿಂದ ಯಾವುದಾದರೊಬ್ಬ ವ್ಯಕ್ತಿಯ ಮೇಲೆ ಮಾಟದಂತಹ ವಿಧಿಗಳನ್ನು ಮಾಡಿಸಿಕೊಂಡಿದ್ದರೂ ಆ ವ್ಯಕ್ತಿಗೆ ದೃಷ್ಟಿ ತಗಲುತ್ತದೆ.
ಇ೧. ಮಾಟದ ವೈಶಿಷ್ಟ್ಯಗಳು
ಇ೧ಆ. ದೃಷ್ಟಿ ತಗಲಬೇಕಾದರೆ ಯಾವುದಾದರೊಂದು ಜೀವದ ಕಪಟ ವಾಸನೆಯು ಶೇ.೩೦ರಷ್ಟಿರಬೇಕಾಗುತ್ತದೆ, ಆದರೆ ಮಾಟ ತಗಲಬೇಕಾದರೆ ಈ ಕಪಟ ವಾಸನೆಯು ಶೇ.೩೦ ಕ್ಕಿಂತಲೂ ಹೆಚ್ಚು ತೀವ್ರ, ಅಂದರೆ ಉಗ್ರರೂಪವನ್ನು ತಾಳಬೇಕಾಗುತ್ತದೆ.
ಇ೧ಇ. ದೃಷ್ಟಿಯ ಸ್ಪಂದನಗಳು ಶೇ.೩೦ಕ್ಕಿಂತ ಹೆಚ್ಚು ಪ್ರಮಾಣದಲ್ಲಿ ತ್ರಾಸದಾಯಕವಾದರೆ, ಅದು ಮಾಟದಲ್ಲಿ ರೂಪಾಂತರವಾಗುತ್ತದೆ.’
(ಮಾಟದ ಬಗೆಗಿನ ವಿವರವಾದ ಶಾಸ್ತ್ರೀಯ ಜ್ಞಾನವನ್ನು ಇನ್ನೊಂದು ಗ್ರಂಥದಲ್ಲಿ ಪ್ರಕಟಿಸಲಾಗುವುದು.)
ಈ. ಕೆಟ್ಟ ಶಕ್ತಿಗಳು ಹರಡುವ ಕಪ್ಪು ಶಕ್ತಿಯಿಂದ ಯಾವುದಾದರೊಂದು ಜೀವಕ್ಕೆ ತೊಂದರೆಯಾಗುವುದಕ್ಕೂ ‘ಜೀವಕ್ಕೆ ಆ ಕೆಟ್ಟ ಶಕ್ತಿಯ ದೃಷ್ಟಿ ತಗಲಿತು’, ಎನ್ನುತ್ತಾರೆ.
(ಹೆಚ್ಚಿನ ಮಾಹಿತಿಗಾಗಿ ಮತ್ತು ಪರಿಹಾರೋಪಾಯಕ್ಕಾಗಿ ಓದಿ ಸನಾತನದ ಗ್ರಂಥ: ದೃಷ್ಟಿ ತಗಲುವುದು ಮತ್ತು ತೆಗೆಯುವುದು ಇವುಗಳ ಹಿಂದಿನ ಅಧ್ಯಾತ್ಮಶಾಸ್ತ್ರ)
Sanatan Sanstha
ಶ್ರೇಯಾಂಕ
ಮತ ನೀಡಿ ಬಲಪಡಿಸಿ ಮತ್ತು ಸಾಮಾಜಿಕ ಜಾಲ ತಾಣದಲ್ಲಿ ಹಂಚಿರಿ.