ತುಳಸಿ

ತುಳಸಿ ಎಲೆಗಳ ಪ್ರಯೋಜನ

ತುಳಸಿ ಎಲೆಗಳನ್ನು ಹೀಗೆ ಮಾಡಿದರೆ ಏನಾಗುತ್ತದೆ ಗೊತ್ತಾ.

ಹಿರಿಯರು ನಿತ್ಯ ತುಳಸಿ ತೀರ್ಥ ಕುಡಿಯುತ್ತಾರೆ. ಇದರರ್ಥ ಮಡಿ, ನೇಮವೆಂದಲ್ಲ. ಅದರಲ್ಲಿರುವ ಔಷಧೀಯ ಗುಣಗಳಿಂದ ದೇಹಕ್ಕೆ ದೊರೆಯುವ ಲಾಭಕ್ಕಾಗಿ. ದಿನವೂ ಬೆಳಿಗ್ಗೆ ಒಂದೆರಡು ತುಳಸಿ ಎಲೆಗಳನ್ನು ಜಗಿದು ನುಂಗುವುದರಿಂದ ತುಳಸಿಯ ನೈಸರ್ಗಿಕ ಪೋಷಕಾಂಶಗಳಿಂದ ದೇಹದ ಶಕ್ತಿ ಹೆಚ್ಚಿ, ಆಂಟಿಆಕ್ಸಿಡಾಂಟುಗಳಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.

ತುಳಸಿ ಪ್ರಕೃತಿಯಿಂದ ನಮಗೆ ದೊರೆತ ದಿವ್ಯೌಷಧಿ. ಮಹಾಭಾರತ ಕಾಲದಲ್ಲಿ ಘಟೋತ್ಕಜ ಸಹ ಹೊರಲಾಗದ ಶ್ರೀ ಮಹಾ ವಿಷ್ಣುವನ್ನು ಒಂದು ತುಳಸಿ ದಳ ಎಬ್ಬಿಸಿತು. ಅಷ್ಟು ಶಕ್ತಿಯನ್ನು ಹೊಂದಿದೆ ಈ ತುಳಸಿ. ನಮ್ಮ ದೇಶದಲ್ಲಿ ಬಹಳಷ್ಟು ಜನರು ತುಳಸಿ ಗಿಡವನ್ನು ಪೂಜಿಸುತ್ತಾರೆ. ಪುರಾಣಗಳಲ್ಲಿ ಈ ಗಿಡಕ್ಕೆ ಒಂದು ಪ್ರತ್ಯೇಕವಾದ ಸ್ಥಾನವಿದೆ. ಇದು ನಮಗೆ ಸಿಕ್ಕಿರುವ ದಿವ್ಯೌಷಧ.

ತುಳಸಿ ಯಾವಾಗಲೂ ಮನೆಯಲ್ಲಿ ಸಿಗುವ ಔಷಧ.. ಈ ಗಿಡಕ್ಕೆ ಇರುವ ಪ್ರಾಧಾನ್ಯತೆ ಮತ್ತು ಅದರಲ್ಲಿರುವ ಔಷಧಿ ಗುಣಗಳು ಯಾವುವು, ಇದನ್ನು ಎಷ್ಟು ರೀತಿಯಲ್ಲಿ ಉಪಯೋಗಿಸಬಹುದು ಎಂದು ತಿಳಿದುಕೊಳ್ಳೋಣ.

ವಾಂತಿ: ತುಳಸಿ ಎಲೆಯ ರಸ 10 ಮಿಲಿ ತೆಗೆದುಕೊಳ್ಳಿ, 500 ಮಿ.ಗ್ರಾಂ ಏಲಕ್ಕಿ ಪುಡಿಯಲ್ಲಿ ಶುಂಠಿ ರಸವನ್ನು ಸಮಾನ ಪ್ರಮಾಣದಲ್ಲಿ ಸೇರಿಸಿ. ಇದರ ಸೇವನೆಯು ವಾಂತಿ ಸಮಸ್ಯೆಯನ್ನು ಪರಿಹಾರವಾಗುತ್ತದೆ.

ಬಾಯಿಯ ದುರ್ಕೆವಾಸನೆ: ಲವು ತುಳಸಿ ಎಲೆಗಳನ್ನು ರಾತ್ರಿ ನೀರಿನಲ್ಲಿ ನೆನೆಹಾಕಿ ಆ ನೀರಿನಿಂದ ಬೆಳಿಗ್ಗೆ ಹಲ್ಲುಜ್ಜಿದರೆ ಬಾಯಿಯ ದುರ್ವಾಸನೆ ಕಡಿಮೆ ಯಾಗುತ್ತದೆ.

ಮೂತ್ರ ಕಲ್ಲು: ತುಳಸಿ ನೀರು ಸೇವನೆಯಿಂದ ಮೂತ್ರಪಿಂಡದ ಕಲ್ಲುಗಳು ನಿಧಾನವಾಗಿ ಕರಗತೊಡಗುತ್ತವೆ. ಇದರಿಂದ ಮೂತ್ರಪಿಂಡದ ಕ್ಷಮತೆ ಹೆಚ್ಚಿ, ದೇಹದಲ್ಲಿರುವ ವಿಷಕಾರಿ ವಸ್ತುಗಳು ವಿಸರ್ಜನೆಗೊಂಡು ಆರೋಗ್ಯ ವೃದ್ಧಿಸುತ್ತದೆ.

ಕುಷ್ಠರೋಗ: ತುಳಸಿ ಎಲೆಯ ರಸದಿಂದ 10-20 ಮಿಲಿ ತೆಗೆದುಕೊಳ್ಳಿ ಮತ್ತು ಪ್ರತಿದಿನ ಬೆಳಿಗ್ಗೆ ಅದರ  ಸೇವನೆಯು ಕುಷ್ಠರೋಗವನ್ನು ಗುಣಪಡಿಸಲು ಸಹಾಯ ಮಾಡುತ್ತದೆ.

ಚರ್ಮರೋಗ: ಚರ್ಮರೋಗಗಳಿಗೆ, ಅದರಲ್ಲೂ ಅಲರ್ಜಿಗಳ ವಿರುದ್ಧ ಹೋರಾಡಬೇಕೆಂದರೆ ತುಳಸಿಗಿಂತ ಒಳ್ಳೆಯ ಔಷಧ ಸಿಗದು.

ಕಫ: ಬೆಳಿಗ್ಗೆ ತುಳಸಿ ಎಲೆಗಳನ್ನು ಸ್ವಲ್ಪ ರುಬ್ಬಿ ಕಷಾಯವಾಗಿ ಅಥವಾ ಅದರಲ್ಲಿ ಒಂದು ಚಮಚ ಜೇನುತುಪ್ಪವನ್ನು ಹಾಕಿಕೊಂಡು ಕುಡಿದರೆ ಕಫ ಕಡಿಮೆಯಾಗುತ್ತದೆ.

ನೆಗಡಿ ಕೆಮ್ಮು: ತುಳಸಿ ಎಲೆಗಳ ರಸದಲ್ಲಿ ಜೇನುತುಪ್ಪವನ್ನು ಹಾಕಿಕೊಂಡು ದಿನಕ್ಕೆ 2 ಬಾರಿ ಕುಡಿದರೆ ಕೆಮ್ಮು, ನೆಗಡಿ ಕಡಿಮೆಯಾಗುತ್ತದೆ. ಅಥವಾ ಒಂದು ಟೀ ಸ್ಪೂನ್ ಶುಂಠಿ, ಕಪ್ಪು ಮೆಣಸಿನ ಪುಡಿ, 5 ರಿಂದ 10 ತುಳಸಿ ಎಲೆಗಳನ್ನು ಹಾಕಿ ನೀರನ್ನು ಕುಡಿದರೆ ಒಳ್ಳೆಯ ಫಲಿತಾಂಶ ಸಿಗುತ್ತದೆ.

ಅಜೀರ್ಣ: ತುಳಸಿಯ 2 ಗ್ರಾಂ ಮಂಜರಿ ತೆಗೆದುಕೊಂಡು ಕಪ್ಪು ಉಪ್ಪಿನೊಂದಿಗೆ ಅದರ ಪೇಸ್ಟ್ ಮಾಡಿ ಮತ್ತು ದಿನಕ್ಕೆ ಮೂರರಿಂದ ನಾಲ್ಕು ಬಾರಿ ರೋಗಿಗೆ ಅದನ್ನು ಸೇವಿಸಲು ನೀಡಿದರೆ ಅಜೀರ್ಣಕ್ಕೆ ಇದು ತುಂಬಾ ಉಪಯುಕ್ತವಾಗಿದೆ.

ಕಣ್ಣಿನ ಉರಿ: ಕಣ್ಣಿನ ಉರಿ ಕಣ್ಣಿನಲ್ಲಿ ನೀರು ಬರುವುದು ಇಂತಹ ಸಮಸ್ಯೆಗಳಿಗೆ ತುಳಸಿ ರಸವನ್ನು ಹತ್ತಿಯಿಂದ ಕಣ್ಣಿನ ಮೇಲೆ ಓರೆಸಿ.( ಕಣ್ಣಿನಲ್ಲಿ ಬೀಳದಂಗೆ ನೋಡಿಕೊಳ್ಳಬೇಕು ).

ಶರೀರದ ಉಷ್ಣತೆ: ತುಳಸಿ ಎಲೆಯ ರಸವು ಶರೀರದ ಉಷ್ಣಾಂಶವನ್ನು ಸರಿದೂಗಿಸುತ್ತದೆ.

ತುಳಸಿ ಎಲೆ ಮತ್ತು ಪುದೀನ ಎಲೆಯನ್ನು ಕಷಾಯವಾಗಿ ಮಾಡಿ ಕುಡಿದರೆ ಜ್ವರ ಕಡಿಮೆಯಾಗುತ್ತದೆ.

ಗಂಟಲು ಸಮಸ್ಯೆ: ತುಳಸಿ ರಸವನ್ನು ಜೇನು ತುಪ್ಪದೊಂದಿಗೆ ಬೆರೆಸಿ ಒಂದು ಸ್ಪೂನ್ ಕುಡಿದರು ಗಂಟಲು ನೋವು, ಒಣಗಿದ ಗಂಟಲು ಸಮಸ್ಯೆ ಹೋಗುತ್ತದೆ. ತುಳಸಿ ಎಲೆಗಳನ್ನು ನೀರಿನಲ್ಲಿ ಹಾಕಿ ಚೆನ್ನಾಗಿ ಬೆರೆಸಿ ಆ ನೀರನ್ನು ಬಾಯಿಂದ ನೀರು ಪುಕ್ಕಳಿಸಿದರೆ ಗಂಟಲಿನ ನೋವು ಕಡಿಮೆಯಾಗುತ್ತದೆ.

ರಕ್ತ ಬೇಧಿ: ತುಳಸಿ ರಸ, ಈರುಳ್ಳಿಯ ರಸ, ಶುಂಠಿಯ ರಸ,ಜೇನುತುಪ್ಪ ಮಿಕ್ಸ್ ಮಾಡಿ 6 ಚಮಚ 2 ಹೊತ್ತು ಕುಡಿದರೆ ಭೇದಿ, ರಕ್ತ ಭೇದಿಯನ್ನು ಕಡಿಮೆ ಮಾಡುತ್ತದೆ.

ಕೊಬ್ಬು: ತುಳಸಿ ಶರೀರದಲ್ಲಿರುವ ಅಧಿಕ ಕೊಬ್ಬನ್ನು ನಿಯಂತ್ರಿಸುತ್ತದೆ.

ತೂಕ: ತುಳಸಿ ಎಲೆಯನ್ನು ಮಜ್ಜಿಗೆಯ ಜೊತೆಗೆ ಸೇವಿಸಿದರೆ ತೂಕ ಇಳಿಯುತ್ತದೆ.

ನಿದ್ರಾಹೀನತೆ: ಈ ಸಮಸ್ಯೆ ಇರುವವರಿಗೆ ಇದು ಒಳ್ಳೆಯ ಔಷಧಿ. ಕಾಡು ತುಳಸಿ ರಸವನ್ನು ಸಕ್ಕರೆಯಲ್ಲಿ ಬೆರೆಸಿ ಪ್ರತಿದಿನ ಮಲಗುವ ಮುಂಚೆ 2 ಚಮಚ ಕುಡಿದರೆ ಒಳ್ಳೆಯ ನಿದ್ದೆ ಬರುತ್ತದೆ.

ಹಾವಿನ ವಿಷ: ತುಳಸಿ ಎಲೆಗಳ 5-10 ಮಿಲಿಗಳನ್ನು ತೆಗೆದುಕೊಂಡು ಅದನ್ನು ರೋಗಿಗೆ ನೀಡಿ. ರೋಗಿಯ ಪ್ರಜ್ಞೆ ಇಲ್ಲದಿದ್ದರೆ, ನಂತರ ಮೂಗಿನ ಹೊಳ್ಳೆಗಳ ಮೂಲಕ ತುಳಸಿ ವಾಸನೆ ಹೋಗುವಂತೆ ಮಾಡಿ.

ಮಲೇರಿಯಾ ಜ್ವರ: ಮಲೇರಿಯಾ ಜ್ವರ ಬಂದರೆ  ಪ್ರತಿ ಮೂರು ಗಂಟೆಗೊಮ್ಮೆ ತುಳಸಿ ಮಿಶ್ರಿತ ಚಹಾ ಸೇವಸಿ.

ದುರ್ಬಲತೆ: ತುಳಸಿ ಬೀಜದ ಪುಡಿ ಮತ್ತು ಅದರ ಬೇರಿನ ಪುಡಿಯನ್ನು ಸಮಾನ ಪ್ರಮಾಣದಲ್ಲಿ ತೆಗೆದುಕೊಂಡು ಹಸುವಿನ ಹಾಲಿನೊಂದಿಗೆ ಒಂದರಿಂದ ಮೂರು ಗ್ರಾಂ ಮಿಶ್ರಣವನ್ನು ಸೇವಿಸಿದರೆ ದುರ್ಬಲತೆ ಕಡಿಮೆಯಾಗುತ್ತದೆ.

 

ಇವುಗಳೂ ನಿಮಗಿಷ್ಟವಾಗಬಹುದು

ಶಬರಿ ಕೇಳುತ್ತಾಳೆ

ರಾವಣನನ್ನು ಸಂಹಾರ ಮಾಡುವ ನೆಪದಿಂದಲಾದರೂ ನೀನು ಇಲ್ಲಿಗೆ ಬಂದೆಯಲ್ಲ, ಇಲ್ಲ ಅಂದರೆ ಎಲ್ಲಿ ಬರುತ್ತಿದ್ದೆ ಸ್ವಾಮಿ? ಶ್ರೀರಾಮ ಸ್ವಲ್ಪ ಗಂಭೀರ …

Leave a Reply

Your email address will not be published. Required fields are marked *