ಡಾ.ಬಿ.ಆರ್.ಮಂಜುನಾಥ್

Dr. Manjunath
‘ಡಾ.ಬಿ.ಆರ್.ಮಂಜುನಾಥ್’ ಸನ್ಮಾನಿಸಲ್ಪಟ್ಟರು’

‘ಡಾ.ಬಿ.ಆರ್.ಮಂಜುನಾಥ್’ ರವರು, ಸುಮಾರು ೪ ದಶಕಗಳಿಗಿಂತ ಹೆಚ್ಚು ಸಮಯ ಮುಂಬೈನಗರದಲ್ಲಿ ಮಾಡಿದ ವೃತ್ತಿಜೀವನದಲ್ಲಿ ಕನ್ನಡ ನಾಟಕ, ಸಂಗೀತ, ನೃತ್ಯಗಳ ಬಗ್ಗೆ ಬಹಳ ಕಾಳಜಿವಹಿಸಿದ್ದಾರೆ. ಅವರ ಪ್ರಮುಖ ಆಸಕ್ತಿಗಳಲ್ಲೊಂದಾದ, ಕನ್ನಡ ರಂಗಭೂಮಿಯನ್ನು ಉತ್ತು, ಹಸನಾದ-ಗಟ್ಟಿ ಬೀಜಗಳನ್ನು ಬಿತ್ತಿ,’ಬಿತ್ತಿ ಬೆಳೆದವರು’ ಎಂಬ ಅನ್ವರ್ಥನಾಮದ ‘ಕನ್ನಡ ನಾಟಕ’ವನ್ನೂ ಬರೆದು ನಿರ್ದೇಶಿಸಿದ ‘ಅಪ್ರತಿಮ ಕನ್ನಡ ಪ್ರೇಮಿಗಳು.

 

 

ಬರೆದು ನಿರ್ದೇಶಿಸಿದ ನಾಟಕಗಳು

 • ಬೆಳ್ಳಿಬಯಲು,
 • ಬೆಂದಕಾಳೂರು,
 • ಬಿಸಿಲ್ಗುದುರೆ,
 • ಹೀರಾ,
 • ಹೂಗಿಡದಲ್ಲಿ ಹೂ ಅರಳಿಹುದು,
 • ನಾ ದ್ಯಾವ್ರನ್ನ್ ಕಾಣ್ಬೇಕು,
 • ಸಾಕಾರ

ಮೊದಲಾದ ನಾಟಕಗಳನ್ನು ರಚಿಸಿ,ಇವರದೇ ನಿರ್ದೇಶನದಲ್ಲಿ ಪ್ರಯೋಗ ಮಾಡಿ ಯಶಸ್ವಿಯಾಗಿದ್ದಾರೆ.

ಪ್ರಯೋಗಕಂಡ ನಾಟಕಗಳು

 • ಆ ರಾತ್ರಿ,
 • ಆ ಮನಿ,
 • ಜಾತ್ರೆ,
 • ಕತ್ತಲೆ-ಬೆಳಕು,
 • ಹಯವದನ,
 • ನಾಗಮಂಡಲ,

ಮೊದಲಾದ ಈಗಾಗಲೇ ಮಂಚೂಣಿಯಲ್ಲಿರುವ ಪ್ರಮುಖ ನಾಟಕಕೃತಿಗಳನ್ನು ತಮ್ಮದೇ ಆದ ದೃಷ್ಟಿಕೋನದಲ್ಲಿ ನಿರೂಪಿಸಿ,ನಿರ್ದೇಶಿಸಿ ಹೆಸರುಗಳಿಸಿದ್ದಾರೆ.

‘ವೃತ್ತಿಯಲ್ಲಿ ’ಬಾಂಬೆ ಟೆಕ್ಸ್ ಟೈಲ್ ರಿಸರ್ಚ್ ಅಸೋಸಿಯೇಷನ್’(BTRA) ನಲ್ಲಿ ವಿಜ್ಞಾನಿಯಾಗಿದ್ದರು. ನಂತರ ಖಾಸಗಿ ಸಂಸ್ಥೆಯ ನಿರ್ದೇಶಕರಾಗಿ ದುಡಿದು, ನಿವೃತ್ತರಾಗಿದ್ದಾರೆ. ಆದರೂ, ಕನ್ನಡ ಪರ ಚಟುವಟಿಕೆಗಳೆಂದರೆ ಅವರಿಗೆ ಎಲ್ಲಿಲ್ಲದ ಕಳಕಳಿ ; ಆಸಕ್ತಿ.’ಮೈಸೂರ್ ಅಸೋಸಿಯೇಷನ್’ ಸಂಸ್ಥೆಯ ಕನ್ನಡ ವಿಭಾಗದ ಹಲವು ದಿಗ್ಗಜರಾದ, ‘ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತ’, ವಿ.ಕೆ.ಮೂರ್ತಿ, ಮತ್ತು ದಿವಂಗತ,’ಆರ್.ನಾಗೇಂದ್ರರಾವ್’ ರಂತಹ ‘ಮುತ್ಸದ್ಧಿ’ಗಳಿಂದ ಪ್ರಭಾವಿತರಾಗಿ, ತಾವೂ ತಮ್ಮದೇ ರೀತಿಯಲ್ಲಿ, ಸಮರ್ಥವಾಗಿ ಯೋಗದಾನ ಮಾಡುತ್ತಿರುವ ‘ಮಂಜುನಾಥ’ರ ಕೊಡುಗೆಗಳು ಅಮೂಲ್ಯವಾದವುಗಳು.

ಪ್ರಶಸ್ತಿ ಪುರಸ್ಕಾರಗಳು

 • ಸನ್. ೧೯೯೪ ರಲ್ಲಿ, ನಾಟಕ ಅಕ್ಯಾಡೆಮಿ ಪ್ರಶಸ್ತಿಗೆ ಪಾತ್ರರಾದರು.

ಸಾಧನ ಶಿಖರ ಪ್ರಶಸ್ತಿ: ವರ್ಷ ೨೦೧೨ ರ, ಮಾರ್ಚ್ ತಿಂಗಳ ೨೪ ಶನಿವಾರ ಮತ್ತು ೨೫ ರ ಭಾನುವಾರ ‘ಮುಂಬೈನ ಕರ್ನಾಟಕ ಸಂಘದ ಡಾ.ವಿಶ್ವೇಶ್ವರಯ್ಯ ಸಭಾಂಗಣ’ದಲ್ಲಿ ಮೂರು ಜನ ಸಾಧಕರಿಗೆ ‘ಸಾಧನ ಶಿಖರ ಪ್ರಶಸ್ತಿಯನ್ನು ಪ್ರದಾನಮಾಡಿ ಗೌರವ ಸೂಚಿಸಲಾಯಿತು. ಡಾ.ಬಿ.ಆರ್.ಮಂಜುನಾಥ್ ರ ಜೊತೆ, ಇದೇ ಪ್ರಶಸ್ತಿ ಪಡೆದವರು, ಡಾ. ಸಂಜೀವ ಶೆಟ್ಟಿ, ಮತ್ತು ವಿದುಷಿ ಉಮಾ ನಾಗಭೂಷಣ. ಪ್ರಶಸ್ತಿ ವಿಜೇತರಿಗೆ, ಶಾಲುಹೊದಿಸಿ,ಫಲ ಪುಷ್ಪಗಳನ್ನು ಅರ್ಪಿಸಿ,ಜೊತೆಯಲ್ಲಿ ಸ್ಮರಣಿಕೆ, ಪ್ರಶಸ್ತಿಪತ್ರ, ಹಾಗೂ ೧೦ ಸಾವಿರ ರೂಪಾಯಿಗಳ ನಗದು ಹಣವನ್ನು ಕೊಡಲಾಯಿತು. ಈ ಸಮಾರಂಭದಲ್ಲಿ ಉಪಸ್ಥಿತರಿದ್ದ ಗಣ್ಯರು, ಡಾ.ಜಿ.ಡಿ.ಜೋಶಿ, ಶ್ರೀ.ಬಿ.ಎ.ಸನದಿ, ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ,ಡಾ.ಭರತ್ ಕುಮಾರ್ ಪೊಲಿಪು, ಶ್ರೀ.ಓಂದಾಸ ಕಣ್ಣಂಗಾರ್, ಮೊದಲಾವರು.

Dr. B.RM
‘ಡಾ.ಎಚ್ಛೆಸ್ವಿಯವರು ಮೈಸೂರ್ ಅಸೋಸಿಯೇಷನ್ ನಲ್ಲಿ ಶ್ರೀ.ಕೆ.ಮಂಜುನಾಥಯ್ಯ,ಡಾ.ಬಿ.ಆರ್.ಮಂಜುನಾಥ್’ಮೊದಲಾದ ಗಣ್ಯರ ಜೊತೆಯಲ್ಲಿ'(೨೦೧೩)

ಮುಂಬೈ ಮೈಸೂರ್ ಅಸೋಸಿಯೇಷನ್ ನಾಟಕ ತಂಡದವರು ಬೆಂಗಳೂರಿನಲ್ಲಿ: ಸನ್.೨೦೧೩ ರಲ್ಲಿ, ’ಬೆಂಗಳೂರು ಕಲಾಪ್ರೇಮಿ ಫೌಂಡೇಶನ್’ ಹಾಗೂ ’ಮುಂಬೈನ ಮೈಸೂರ್ ಅಸೋಸಿಯೇಷನ್’ ಹಮ್ಮಿಕೊಂಡ ’೩ ದಿನಗಳ ಕನ್ನಡ ನಾಟಕೋತ್ಸವ ಕಾರ್ಯಕ್ರಮ’ ಬೆಂಗಳೂರಿನ ರಸಿಕರನ್ನು ರಂಜಿಸಿತು. (ಜೂನ್,೧,೨,೩) ಜೂನ್ ೧ ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ’ಬೆಳ್ಳಿಬೈಲು ನಾಟಕ ಪ್ರದರ್ಶನ ನಡೆಯಿತು.’ ಹಣವಂತವ್ಯಕ್ತಿಯೊಬ್ಬ ತಾನೊಬ್ಬ ಪ್ರತಿಷ್ಠಿತವ್ಯಕ್ತಿಯೆಂದು ಸೋಗುಹಾಕಿಕೊಂಡು ಸಮಾಜದಲ್ಲಿ ತನ್ನ ಪ್ರಯೋಜನಕ್ಕಾಗಿ ಬಡಜನರ ಪ್ರಾಣತೆಗೆಯಲೂ ಹೇಸದ ವ್ಯಕ್ತಿಯೊಬ್ಬ ಜೀವನಚಿತ್ರಣವಾಗಿತ್ತು. ಜೂನ್ ೨ ರಂದು, ‘ಮಲ್ಲೇಶ್ವರದ ಸೇವಾಸದನ ಸಭಾಂಗಣ’ದಲ್ಲಿ ’ಸಾಕಾರ’ ವೆಂಬ ಸಂಗೀತ ನಾಟಕ ಪ್ರದರ್ಶನ ನಡೆಯಿತು. ಇಬ್ಬರು ಗೆಳೆಯರು; ಒಬ್ಬ ಬಡವ, ಮತ್ತೊಬ್ಬ ಶ್ರೀಮಂತ. ಪಂಢರಾಪುರಕ್ಕೆ ವಿಠಲನ ದರ್ಶಕಾಂಕ್ಷಿಗಳಾಗಿ ಹೋಗುತ್ತಾರೆ. ದೇವರು ಎಲ್ಲರ ಹೃದಯದಲ್ಲಿ ನೆಲೆಸಿದ್ದಾನೆ. ನಮ್ಮೊಳಗೆ ಕೆದಕಿ ನೋಡಿದಾಗ ಅದು ಅರಿವಾಗುವುದು; ಬೇರೆಲ್ಲಿಯೂ ಅರಸುತ್ತಾ ಹೋಗುವ ಅವಶ್ಯಕತೆ ಇಲ್ಲ.ಎನ್ನುವ ಸಂದೇಶ ಸಿಗುವ ನಾಟಕಕ್ಕೆ ಸಮಯೋಚಿತವಾಗಿ ಅಳವಡಿಸಿದ್ದ ದಾಸರ ಕೀರ್ತನೆಗಳು ನಾಟಕಕ್ಕೆ ಮೆರುಗನ್ನು ಕೊಟ್ಟಿತ್ತು.ನಾಟಕದ ಬಳಿಕ, ಹೆಸರಾಂತ ನಾಟಕ ವಿಮರ್ಶಕ, ವೈ.ವಿ. ಗುಂಡೂರಾವ್ ರವರಿಂದ ನವಿರಾದ ಹಾಸ್ಯ ಕಾರ್ಯಕ್ರಮವಿತ್ತು. ಜೂನ್ ೩ ರಂದು ‘ಎಚ್.ಎನ್.ಕಲಾಕ್ಷೇತ್ರ’ದಲ್ಲಿ ‘ಅಂತರಂಗ ಏರ್ಪಡಿಸಿದ್ದ ವ್ಯವಸ್ಥೆಯಲ್ಲಿ ‘ಬೆಳ್ಳಿಬೈಲು ನಾಟಕವನ್ನು ಮತ್ತೊಮ್ಮೆ ಪ್ರದರ್ಶಿಸಲಾಯಿತು. ಈಗ ತಿಳಿಸಿದ ೩ ಪ್ರಾಯೋಗಿಕ ನಾಟಕಗಳನ್ನು ‘ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ’ ಪ್ರಾಯೋಜಿಸಿತ್ತು. ಈ ನಾಟಕಗಳನ್ನು ರಚಿಸಿ,ನಿರ್ದೇಶಿಸಿ,ರಂಗಸಜ್ಜಿಕೆ, ಬೆಳಕು,ನೇಪಥ್ಯದ ನೆರವುಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದವರು,ಡಾ.ಬಿ.ಆರ್.ಮಂಜುನಾಥ್.

manjunath rangabhomi
‘ಡಾ.ಮಂಜುನಾಥರಿಗೆ, ಸಾಧನ ಶಿಖರ ಪ್ರಶಸ್ತಿ ಪ್ರದಾನಮಾಡಲಾಯಿತು.’

ಫೋಟೋ ಪ್ರದರ್ಶನ: ಮುಂಬೈನ ಮೈಸೂರ್ ಅಸೋಸಿಯೇಶನ್ ಕನ್ನಡ ಕಲಾತಂಡ ತನ್ನ ಅಸ್ತಿತ್ವದಲ್ಲಿ ೭ ದಶಕಗಳ ಕಾಲ,ಅರ್ಪಿಸಿದ ‘ನಾಟಕಗಳ ಪಕ್ಷಿನೋಟ’ವನ್ನು ಛಾಯಾ ಚಿತ್ರಗಳ ಮೂಲಕ ತೋರಿಸಲಾಯಿತು.

wikipedia

ಇವುಗಳೂ ನಿಮಗಿಷ್ಟವಾಗಬಹುದು

A V Prakasha

ಎ.ವಿ. ಪ್ರಕಾಶ್‌

ಎ.ವಿ. ಪ್ರಕಾಶ್‌ (೧೫.೧೦.೧೯೪೫): ಪ್ರಖ್ಯಾತ ಕೊಳಲುವಾದಕರಾದ ಎ.ವಿ. ಪ್ರಕಾಶ್‌ರವರು ಹುಟ್ಟಿದ್ದು ಬೆಂಗಳೂರು. ತಂದೆ ಪ್ರಖ್ಯಾತ ಪಿಟೀಲು ವಿದ್ವಾಂಸರಾದ ಎ.ಕೆ. ವೆಂಕಟನಾರಾಯಣ, …

Leave a Reply

Your email address will not be published. Required fields are marked *