ಜನಪದ ನಂಬಿಕೆಗಳು ಜನಜೀವನದಲ್ಲಿ ನಡೆದಾಡುವ ನಾಣ್ಯಗಳಿದ್ದಂತೆ. ಅವು ಜನತೆಯ ಜೀವನಾನುಭವದ ಮೂಸೆಯಿಂದ ಮೂಡಿ ಬಂದು, ಬದುಕಿನಲ್ಲಿ ಬೆರೆತು ಪರಿಣಾಮಕಾರಿಯಾಗಿ ಪ್ರಭಾವಬೀರಿ ಜೀವಂತವಾಗಿವೆ. ಜನತಾಭಾವದ ಅಭಿವ್ಯಕ್ತಿಗಳಾದ ಜನಪದ ನಂಬಿಕೆಗಳು, ಜನತೆಯ ಪರಂಪರಾಗತ ಜ್ಞಾನಸುಧೆ, ಸುಸಂಸ್ಕೃತ ಹೃದಯದ ಪರಿಪಕ್ವ ಅನುಭವದ ಸಾರವೆಂದು ಹೇಳಬಹುದು. ಹೀಗಾಗಿ ಇವು ಜನಜೀವನದಲ್ಲಿ ಹಾಸುಹೊಕ್ಕಾಗಿ ಸೆರಿ, ಅವರ ಬದುಕನ್ನೇ ನಿಯಂತ್ರಿಸಿ ನಿರ್ದೇಶಿಸುವ ಪ್ರಮುಖ ಶಕ್ತಿಯಾಗಿ ಪರಿಣಾಮಿಸಿ, ಜನಪದ ಬದುಕಿಗೆ ವಜ್ರಕವಚವಾಗಿದೆ.
ಈ ಹಿನ್ನೆಲೆಯಲ್ಲಿ ಜನಪದ ನಂಬಿಕೆಗಳ ಒಂದು ಪ್ರಮುಖ ಅಂಗವಾದ ‘ಮಾನವ ಸಂಬಂಧಿ ನಂಬಿಕೆ’ ಗಳನ್ನು ಕುರಿತು ಇನ್ನು ನೋಡಬಹುದು. ಸಮಾಜಶಾಸ್ತ್ರ, ಮಾನವಶಾಸ್ತ್ರ, ಮನಶ್ಶಾಸ್ತ್ರ ಹಾಗೂ ಜಾನಪದ ವಿಜ್ಞಾನ ಮುಂತಾದ ಶಾಖೆಗಳ ಮಾನವನ ಸಂಬಂಧನಿಷ್ಠ, ಗುಣನಿಷ್ಠ, ಮನೋನಿಷ್ಠ ಹಾಗೂ ಆಚರಣೆನಿಷ್ಠ ಸರ್ವ ಸಂಗತಿಗಳು ಈ ಪ್ರಬಂಧದ ನೀಲನಕ್ಷೆಗೆ ಆಹಾರ ಒದಗಿಸುತ್ತವೆ. ಮನುಷ್ಯನ ವಿವಿಧ ಅವಸ್ಥೆ -ಆಚರಣೆಗಳಿಗೆ ಸಂಬಂಧಿಸಿದ ಭಾವ ಪ್ರಧಾನ ಹಾಗೂ ಕಲ್ಪನಾಪ್ರಧಾನ ಅಂಶಗಳೆಲ್ಲವೂ ಇದರಲ್ಲಿ ಸೇರುತ್ತವೆ. ಕಾಯುವ ದೇವರು, ಕಾಡುವ ದೆವ್ವ, ಉಪಕರಿಸುವ ಪ್ರಾಣಿ -ಪಕ್ಷಿ ಹಾಗೂ ಆಯುರಾರೋಗ್ಯ ನೀಡುವ ಸಸ್ಯ ಸಂಪತ್ತು ಮುಂತಾದವುಗಳ ನಿಕಟ ಸಂಪರ್ಕವು ಮಾನವನಿಗಿದೆಯಾದವರೂ, ಆ ಬಗ್ಗೆ ಪ್ರತ್ಯೇಕ ಪ್ರಬಂಧಗಳಿರುವದರಿಂದ ಅವನ್ನು ಹೊರತುಪಡಿಸಿ, ಕೇವಲ ಮಾನವನ ಆಂಗಿಕ ಆಚರಾಣಾತ್ಮಕ ಅಂಶಗಳಿಗೆ ಮಾತ್ರ ಪ್ರಬಂಧದ ವಿಷಯವನ್ನು ಸೀಮಿತಗೊಳಿಸಿಕೊಳ್ಳಲಾಗಿದೆ.
[sociallocker]ಹುಟ್ಟು ಸಾವುಗಳ ಮಾರ್ಗಮಧ್ಯದ ವೈವಿಧ್ಯಮಯವಾದ ಈ ಸಂಸಾರಯಾತ್ರೆಯಲ್ಲಿ ಲೆಕ್ಕವಿಡಲು ಬೇಸರಪಡುವಷ್ಟು ನಂಬಿಕೆಗಳು ಮನುಷ್ಯನ ಬಾಳಿನಲ್ಲಿ ಸೇರಿಕೊಂಡಿವೆಯಾದರೂ, ಆ ಎಲ್ಲ ನಂಬಿಕೆಗಳ ಮಹಾಂಬುಧಿಯನ್ನು ಈಜುವ ಸಾಹಸಕ್ಕೆ ತೊಡಗದೇ ಆಚಾರ-ವಿಚಾರ, ಕ್ರಿಯೆ-ಕಲ್ಪನೆಗಳಿಗೆ ಸಂಬಂಧಿಸಿದಂತೆ, ಮಾನವನು ಅಳವಡಿಸಿಕೊಂಡ ಆಂತರಿಕ ಮತ್ತು ಬಾಹ್ಯವ್ಯಕ್ತಿತ್ವದ ವಿಚಾರಗಳಿಗೆ ಮಾತ್ರ ಇಲ್ಲಿ ಒತ್ತು ಕೊಡಲಾಗಿದೆ. ನಿತ್ಯ ಜೀವನದಲ್ಲಿ ಅನ್ಯ ವ್ಯಕ್ತಿಯೊಂದಿಗೆ ಸಮೂಹದೊಂದಿಗೆ ಆತ ಇರಿಸಿಕೊಂಡ ನಿಕಟ ಸಂಪರ್ಕದಲ್ಲಿ ಬಂಗಾರದ ಎಳೆಯಂತೆ ಮಿಂಚುವ ವಿಧಿ ನಿಷೇಧಾತ್ಮಕ ನಂಬಿಕೆಗಳ ಸಂಗ್ರಹ ಹಾಗೂ ವಿಶ್ಲೇಷಣೆ ಪ್ರಬಂಧದ ಪ್ರಮುಖ ಉದ್ದೇಶವಾಗಿದೆ.
ಮದುವೆ, ಗೃಹಜೀವನ, ಗರ್ಭಿಣಿ, ಕೂಸು, ಉಡುಗೆ -ತೊಡುಗೆ, ಹಬ್ಬ -ಹರಿದಿನ, ವಾರ -ನಕ್ಷತ್ರ, ಊಟ, ಯಾತ್ರೆ, ಪೂಜೆ, ನಿದ್ರೆ, ಕನಸು, ಆವಯವ, ರೋಗ, ಸುಳಿ ಶುಭಾ- ಶುಭಗಳ ಕಲ್ಪನೆ, ಶಕುನ ಹಾಗೂ ಶವ ಇವೇ ಮುಂತಾದ ವಿಷಯಗಳನ್ನೊಳಗೊಂಡ ಭಾವನಾತ್ಮಕ ಮಾನವ ಸಂಬಂಧಿ ನಂಬಿಕೆಗಳ ವಿಶ್ಲೇಷಣೆಯನ್ನು ಪ್ರಬಂಧದ ವ್ಯಾಪ್ತಿಯಲ್ಲಿ ಅಳವಡಿಸಿಕೊಂಡಿರುವೆನು.
ಪ್ರಾಚೀನ ಕಾಡುಮಾನವನಿಂದ ಇತ್ತೀಚಿನ ನಾಡು ಮಾನವನವರೆಗೆ ಆಯಾ ಕಾಲಘಟ್ಟದ ಪರಿಜ್ಞಾನಕ್ಕೆ ತಕ್ಕಂತೆ ನಿತ್ಯ ಜೀವನದ ಆಚರಣೆಯ ಸತ್ಯ ಸಂಗತಿಗಳಾಗಿ ಮಾನವ ನಿಷ್ಠ ನಂಬಿಕೆಗಳು ಜನ್ಮ ತಾಳುತ್ತಲೇ ಬಂದಿವೆ. ನಂಬಿಕೆಯ ಬೆಸುಗೆಯಿಂದಲೇ ಪರಸ್ಪರ ಮಾನವ ಸಂಬಂಧದ ಕೊಂಡಿ ಗಟ್ಟಿಗೊಳ್ಳುತ್ತಲಿದೆಯೆಂಬುದಕ್ಕೆ ಮಾನವನ ನಿತ್ಯ ಜೀವನವೇ ಸಾಕ್ಷಿಯಾಗಿದೆ. ಪ್ರಬುದ್ಧ ಧರ್ಮಗಳು ಬೆಳಕಿಗೆ ಬರುವ ಮುನ್ನ ನೈಸರ್ಗಿಕ ಧರ್ಮ ಮಾನವನನ್ನು ನಿಯಂತ್ರಿಸುತ್ತ ಬಂದ ಸಂಗತಿ ಇತಿಹಾಸದಿಂದ ತಿಳಿದುಬರುತ್ತದೆ. ಈ ನೈಸರ್ಗಿಕ ಶಕ್ತಿಯ ಪ್ರಭಾವದಿಂದ ಅತಿಮಾನುಷ ಶಕ್ತಿಯ ಭಯಕ್ಕೊಳಗಾದ ಗತಕಾಲದ ಮಾನವ ಸಿಡಿಲು, ಮಿಂಚು, ಗಾಳಿ, ಬೆಂಕಿ ಮುಂತಾದ ನೈಸರ್ಗಿಕ ಶಕ್ತಿಗಳಿಂದ ಭಯಗೊಂಡು, ಅವುಗಳನ್ನು ದೈವತ್ವಕ್ಕೇರಿಸಿ ಪೂಜಿಸಲು ಪ್ರಾರಂಭಿಸಿದನೆಂದು ಕಾಣಿಸುತ್ತದೆ. ಈ ನೈಸರ್ಗಿಕ ನಂಬಿಕೆಗಳೇ ಶಕುನ ರೂಪದಲ್ಲಿ ಧಾರ್ಮಿಕ ನಿಯಮಗಳನ್ನು ಅಳವಡಿಸಿಕೊಂಡು, ಶಿಷ್ಟ ಸಂಪ್ರದಾಯಕ್ಕೆ ತಿರುಗಿ ಜ್ಯೋತಿಷ್ಯ ಸೃಷ್ಟಿಯಾಗಿರಬೇಕು. ಜ್ಯೋತಿಷ್ಯ ಮಾನವನ ಶ್ರೇಯೋಭಿವೃದ್ಧಿಗೆ ಪೂರಕ ಹಾಗೂ ಮಾರಕವಾದ ಮಾಹಿತಿಯನ್ನು ಒದಗಿಸುವ ಮಾನವ ಸಂಬಂಧಿ ನಂಬಿಕೆಗಳ ವಿಶ್ವಕೋಶವೆಂದೇ ಹೇಳಬೇಕು. ಈ ಹಿನ್ನೆಲೆಯಲ್ಲಿ ಶಿಷ್ಟರ ಜೋತಿಷ್ಯ, ಸಾಮಾನ್ಯರ ಶಕುನ ಹಾಗೂ ಜಾನಪದೀಯರ ಶಾಸ್ತ್ರ ಇವೇ ಮುಂತಾದವುಗಳ ಸಂಪರ್ಕ ಪಡೆದು ಮಾನವ ಸಂಬಂಧಿ ನಂಬಿಕೆಗಳು ವೈವಿಧ್ಯಮಯ ಸಂಸ್ಕಾರಕ್ಕನುಗುಣವಾಗಿ ಸಾಮೂಹಿಕ ಬೆಳವಣಿಗೆ ಪಡೆದು, ರಾಶಿರಾಶಿಯಾಗಿ ನಿತ್ಯಜೀವನದಲ್ಲಿ ಹಾಸುಹೊಕ್ಕಾಗಿವೆ. ಮಾನವ ಸಂಬಂಧಿ ನಂಬಿಕೆಗಳು ಬುದ್ಧಿಪೂರ್ವಕವಾಗಿ ಆಲೋಚನಾ ಹಂತಗಳನ್ನೇರಿ ಹೃದಯದಿಂದ ಮೂಡಿಬಂದ ಮಾನವ ಜೀವನದ ನಿತ್ಯನೇಮಗಳಾಗಿವೆ. ವೈಜ್ಞಾನಿಕ ಸತ್ಯ ಹಾಗೂ ಸಾಮಾನ್ಯ ತಿಳುವಳಿಕೆಗಳಿಂದ ಮಾನವನ ಅಂಧಶೃದ್ಧೆಯನ್ನು ತಿದ್ದುವದರೊಂದಿಗೆ, ಇವು ಅವರ ಚಿತ್ರಮಯ ಬದುಕಿಗೆ ಬರೆದಿಟ್ಟ ಸಚಿತ್ರ ಶಾಸನಗಳಾಗಿವೆ. ತಟ್ಟಿದರೆ ಶಿಕ್ಷೆ ಎನ್ನುವ ರೀತಿಯಲ್ಲಿ ಸಮಾಜದ ಬಹುಪಾಲು ಜನರು ಮುಚ್ಚುಮರೆಯಿಲ್ಲದೆ ಬಹು ಎಚ್ಚರಿಕೆಯಿಂದ ಇವುಗಳನ್ನು ಪಾಲಿಸುತ್ತ ಬಂದಿರುವರು.
ಮಾನವ ಸಂಬಂಧಿ ನಂಬಿಕೆಗಳು ವರ್ಗೀಕರಣ: ಜನಪದ ನಂಬಿಕೆಗಳ ವ್ಯವಸ್ಥಿತ ಅಧ್ಯಯನಕ್ಕೆ ವಿಷಯಾನುಕ್ರಮ ವರ್ಗೀಕರಣ ಅಗತ್ಯ. ಪಾಶ್ಚಾತ್ಯ ಹಾಗೂ ಭಾರತೀಯ ವಿದ್ವಾಂಸರು ಜನಪದ ನಂಬಿಕೆಗಳನ್ನು ಕ್ರಮಬದ್ಧವಾಗಿ ವರ್ಗೀಕರಿಸಲು ಪ್ರಯತ್ನಿಸಿರುವರು.ಗಂಡಿನ ಬಲಗಣ್ಣು ಹಾಗೂ ಬಲಭುಜ ಅದಿರಿದರೆ ಶುಭವಾಗುವದು”
“ಹೆಣ್ಣಿಗೆ ಎಡಗಣ್ಣು ಅದಿರಿದರೆ ಶುಭವಾಗುವದು”
ಉಪ್ಪು ತುಳಿದರೆ ಕಣ್ಣು ಕುರುಡಾಗುವವು ಇಂಥ ಕೆಲ ನಂಬಿಕೆಗಳು ಉಪಯುಕ್ತವೆಂದೇ ಹೇಳಬೇಕು. ಉಪ್ಪಿನಲ್ಲಿ ಅನ್ನದ ಸಾರವನ್ನು ಹೆಚ್ಚಿಸುವ ಗುಣವಿದೆ. ಅದಕ್ಕಾಗಿ ‘ಉಪ್ಪಿಗಿಂತ ರುಚಿಯಿಲ್ಲ, ಎಂಬ ಮಾತು ಜನಭರಿತವಾಗಿದೆ. ಅನ್ನದ ಬಗ್ಗೆ ಇರುವ ಭಕ್ತಿ ಉಪ್ಪಿನ ಮೇಲೆಯೂ ಇರಬೇಕೆಂಬ ಬೋಧನೆ ಮಾಡುವಾಗ ಕಣ್ಣು ಕುರುಡಾಗುವವು’ ಎಂಬ ಬೆದರಿಕೆ ಹಾಕಿರಬೇಕು. ಅನ್ನದೇವರೆಂಬಂತೆ ಉಪ್ಪಿನ ಬಗ್ಗೆಯೂ ದೈವೀಕಲ್ಪನೆ ಕುದುರಿಸುವದಕ್ಕಾಗಿ ಈ ಹಿತೋಕ್ತಿ ನಂಬಿಕೆಯ ರೂಪಧರಿಸಿ ಬಳಕೆಗೆ ಬಂದಿರಬೇಕು.
ಕಣ್ಣನ್ನು ಕುರಿತ ಕೆಲ ಮೂಢನಂಬಿಕೆಗಳನ್ನು ಈ ಕೆಳಗಿನಂತೆ ಉದಾಹರಿಸಬಹುದು.
‘ಹುಬ್ಬಿನ ಕೂದಲು ಕೂಡಿದರೆ ನಪೂಂಸಕರಾಗುವರು” ‘ಮೆಳ್ಳಗಣ್ಣಿನ ಸೊಸೆ ಇದ್ದರೆ ಮನೆ ಏರುತ್ತದೆ’ “ಕರಿಕಣ್ಣಿನ ಹೆಣ್ಣನ್ನು ಮದುವೆಯಾದರೆ ಮಸಣ ಸಮೀಪ” ಇವೆಲ್ಲ ಕಣ್ಣನ್ನು ಕುರಿತ ರೂಢಿಯಲ್ಲಿರುವ ಅರ್ಥವಿಲ್ಲದ ನಂಬಿಕೆಗಳು.
ಕಾಯಕ ಮಾಡುವ ಕೈಗಳ ಬಗ್ಗೆ ಜನಪದೀಯರಲ್ಲಿ ಎಲ್ಲಿಲ್ಲದ ಅಭಿಮಾನ. ಸಮರ್ಥ ರೀತಿಯಲ್ಲಿ ಚಿಕಿತ್ಸೆ ನೀಡುವ ವೈದ್ಯರನ್ನು ಅವರ ಚಿಕಿತ್ಸೆಯ ರೀತಿಯನ್ನು ಗಮನಿಸದೇ ‘ಕೈಗುಣ ಒಳ್ಳೆಯದು’ ಎಂದು, ಕೊಟ್ಟ ದುಡ್ಡು ಮರಳಿ ಬರದಾದಾಗ ‘ಕೈಗುಣ್ಣ ಕೆಟ್ಟದ್ದು’ ಎಂದು ತೀರ್ಮಾನಿಸುವಲ್ಲಿ ‘ಕೈ’ ಮೊದಲ ಮಾತಾಗಿ ಬರುತ್ತದೆ ಈ ಅಂಗವನ್ನು ಕುರಿತು ಸಾಕಷ್ಟು ನಂಬಿಕೆಗಳು ರೂಢಿಯಲ್ಲಿವೆ.
“ತಲೆಯ ಮೇಲೆ ಕೈಹೊತ್ತು ಕುಳಿತರೆ ಬಡತನ ಬರುತ್ತದೆ” ‘ಕೈಕಟ್ಟಿ ಕುಳಿತಕೊಂಡರೆ ದಾರಿರ್ದ್ಯ ಅಪ್ಪಳಿಸುತ್ತದೆ’ ಎಂಬ ನಂಬಿಕೆಗಳು ಚಿಂತೆ ಹಾಗೂ ದಾರಿರ್ದ್ಯದ ಹಿನ್ನೆಲೆಯಲ್ಲಿ ಹುಟ್ಟಿಕೊಂಡಿದ್ದು, ಕೆಲಸ ಮಾಡುವ ಕೈಗಳನ್ನು ಬಂಧಿಸಿ ಕೂಡುವುದು ಒಳ್ಳೆಯದಲ್ಲ. ಕಾರ್ಯಶೀಲನಾಗು, ಕ್ರಿಯಾಶೀಲತೆಯಿಂದ ಏನೆಲ್ಲವನ್ನೂ ಪಡೆಯಲು ಸಾಧ್ಯವೆಂಬ ಪರೋಕ್ಷ ಬೋಧನೆ ಇಂಥ ನಂಬಿಕೆಗಳಿಗೆ ಹಿನ್ನೆಲೆಯಾಗಿದೆ. ‘ಕೈಕೆಸರಾದರೆ ಬಾಯಿ ಮೊಸರು’ ಎಂಬ ನಾಣ್ಣುಡಿ ಇಂಥ ನಂಬಿಕೆಗಳಿಗೆ ಪೋಷಣೆ ನೀಡುವದು.
‘ಆಕಳಿಸುವಾಗ ಕೈಬೆರಳ ಚಟಕಿ ಹೊಡೆಯಬಾರದು’ ಆಕಳಿಕೆ ನಿದ್ರೆಯ ಸೂಚನೆಯನ್ನು ನೀಡುವದಾಗಿದೆ. ಬಾಯಿಗೆ ಅಂಗೈ ಮುಚ್ಚಿ ಆಕಳಿಸುವದು ಆರೋಗ್ಯದಾಯಕ ಲಕ್ಷಣ. ಆಕಳಿಸುವಾಗ ಏದುಸಿರನ್ನು ಒಳಗೆ ಎಳೆದುಕೊಂಡು ಹೊರಗೆ ಬಿಡುವ ಕ್ರಿಯೆ ನಡೆಯುವದು. ಆಕಳಿಸುವ ವ್ಯಕ್ತಿ ರೋಗದಿಂದ ಬಳಲುವವನಾಗಿದ್ದರೆ, ಆತನ ಅಂತರಾಳದಿಂದ ಬರುವ ಬಿರುಸಿನ ಬಿಸಿಯುಸಿರು ಎದುರಿಗೆ ಕುಳಿತವರಿಗೆ ಬಡಿಯದಿರಲೆಂದು, ‘ಅಂಗೈಯಿಂದ ಬಾಯಿ ಮುಚ್ಚಿ ಆಕಳಿಸುವದು ಆರೋಗ್ಯದಾಯಕ’ ಎಂಬ ನಂಬಿಕೆ ರೂಢಿಯಲ್ಲಿ ಬಂದಿರಬೇಕು.
“ಆರು ಬಟ್ಟಿನ ಕೂಸು ಹುಟ್ಟಿದರೆ ಅನ್ನ ಹೆಚ್ಚುವದು.”
“ಮುತ್ತೈದೆಯರು ಮುಂಗೈಗೆ ಹಸಿರು ಬಳೆ ಧರಿಸಬೇಕು.”
ಎರಡೂ ಕೈಗಳಿಂದ ತಲೆ ತುರಿಸಬಾರದು ಇವೆಲ್ಲ ‘ಕೈ’ಯನ್ನು ಕುರಿತ ಆರೋಗ್ಯದಾಯಕ ನಂಬಿಕೆಗಳಾದರೆ, ಅರ್ಥವಿಲ್ಲದ ಕೆಲ ನಂಬಿಕೆಗಳನ್ನು ಈ ಕೆಳಕಂಡಂತೆ ಗುರುತಿಸಬಹುದು.
ಉದಾ. “ಅಂಗೈ ತುರಿಸಿದರೆ ರೊಕ್ಕ ಖರ್ಚಾಗುವವು”
“ಹೆಣ್ಣು ಮಕ್ಕಳ ಕೈಮೇಲೆ ಕೂದಲು ಇದ್ದರೆ ಬೇಗನೆ ಅಮಂಗಲೆಯರಾಗುವರು.”
ಇಂಥ ನಂಬಿಕೆಗಳಿಗೆ ಅರ್ಥ ಹುಡುಕುವದು ಕಷ್ಟದ ಕೆಲಸವೆಂದೇ ಹೇಳಬೇಕು.
‘ಮೂಗು’, ಮುಖಕ್ಕೆ ಮೆರಗು ತರುವ ಪ್ರಮುಖ ಅಂಗ. ಅದು ನೀಟಾಗಿರಬೇಕೆಂಬುದೇ ಸರ್ವರ ಅಭಿಲಾಷೆ. ಸೌಂದರ್ಯವರ್ಣನೆಯ ಸಂದರ್ಭದಲ್ಲಿ ಮೂಗನ್ನು ಸಂಪಿಗೆ ಎಸಳಿಗೆ ಹೋಲಿಸಿ ಹೇಳುವ ಸನ್ನಿವೇಶಗಳು ಸಾಹಿತ್ಯದಲ್ಲಿ ವಿಪುಲವಾಗಿ ಬೆಳೆದು ಬಂದಿವೆ. ‘ಬಟ್ಟನ್ನು ಮುಖಕ್ಕೆ ನೆಟ್ಟನ್ನು ಮೂಗು’ ಎಂದು ಜನಪದ ಗೀತೆಗಳಲ್ಲಿ ವರ್ಣಿಸಲಾಗಿದೆ. ಅದಕ್ಕಾಗಿ ಎದ್ದು ಕಾಣುವ ಮೂಗು ಸೌಂದರ್ಯದ ಹೆಚ್ಚಳಕ್ಕೆ ಪೂರಕವೆಂಬ ಕಲ್ಪನೆಯಿಂದ ‘ಮೂಗು ಉದ್ದ ಇದ್ದವರು ಪುಣ್ಯವಂತರು’ ಎಂಬ ನಂಬಿಕೆ ಹುಟ್ಟಿಕೊಂಡಿದೆ. ಮೂಗಿಗೂ ಪುಣ್ಯವಂತರಾಗುವದಕ್ಕೂ ಯಾವುದೇ ಸಂಬಂಧವಿಲ್ಲದೇ ಹೋದರೂ ಸಹ, ಚಪ್ಪಟೆ ಮೂಗು ಸೌಂದರ್ಯವರ್ಧಕ ಅಲ್ಲವೆಂಬ ಬೋಧನೆಯನ್ನು ನಾವಿಲ್ಲಿ ಅರಿಯುತ್ತೇವೆ.ಹೆಚ್ಚಿನ ಓದಿಗಾಗಿ :ಪುಸ್ತಕ: ಜನಪದ ನಂಬಿಕೆಗಳು
https://kannadavesatya glucophage xr koupit.wordpress.com/2012/04/01/ravi-kolar-16/[/sociallocker]
ಶ್ರೇಯಾಂಕ
ಮತ ನೀಡಿ, ಬಲಪಡಿಸಿ ಮತ್ತು ಸಾಮಾಜಿಕ ಜಾಲ ತಾಣದಲ್ಲಿ ಹಂಚಿರಿ.