ಚಿನ್ನವೆಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಅದರಲ್ಲೂ ಮಹಿಳೆಯರಿಗೆ ಚಿನ್ನವೆಂದರೆ ಬಲು ಪ್ರಿಯ. ಚಿನ್ನದ ಬೆಲೆ ಸಹ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಕೆಲವರು ಚಿನ್ನವನ್ನು ಧರಿಸಲು ತೆಗೆದುಕೊಳ್ಳುತ್ತಾರೆ. ಆದರೆ ಇನ್ನೂ ಕೆಲವರು ಚಿನ್ನವು ಕಷ್ಟದ ಸಮಯದಲ್ಲಿ ಸಹಾಯವಾಗುತ್ತದೆ ಎಂದು ದುಡ್ಡು ಇರುವ ಸಮಯದಲ್ಲಿ ಚಿನ್ನವನ್ನು ತೆಗೆದುಕೊಳ್ಳುತ್ತಾರೆ. ಆದರೆ ಈ ಚಿನ್ನದಲ್ಲೂ ಸಹ ನಾವು ಮೋಸ ಹೋಗುತ್ತೇವೆ. ಪಳ ಪಳ ಹೊಳೆಯುತ್ತಿದೆ. ಇದು ಚಿನ್ನ ಎಂದು ತೆಗೆದುಕೊಂಡರೆ ನಾವು ಮೂರ್ಖರೆ. ಹಾಗಾಗಿ ನಮಗೆ ಶುದ್ಧ ಚಿನ್ನ ಸಿಗಬೇಕು ಎಂದರೆ ಚಿನ್ನದ ಅಂಗಡಿಗೆ ಚಿನ್ನವನ್ನು ಖರೀದಿಸಲು ಹೋದಾಗ ಆ ಚಿನ್ನದ ಅಂಗಡಿಯಲ್ಲಿ ಮೊದಲು ಕೆಲವು ಮಾಹಿತಿಗಳನ್ನು ತಿಳಿದುಕೊಳ್ಳಬೇಕು.
ಆ ಮಾಹಿತಿಗಳು ಯಾವುವು ಎಂದು ತಿಳಿಯೋಣ ಬನ್ನಿ.
ನೀವು ಚಿನ್ನ ತೆಗೆದುಕೊಳ್ಳುತ್ತಿರುವ ಅಂಗಡಿ ಬಿಐಎಸ್ ಹಾಲ್ಮಾರ್ಕ್ (BIS HALLMARK) ಮಾನ್ಯತೆ ಪಡೆದಿದಿಯೇ? ಎಷ್ಟು? ಭಾರತದ ಅಂಗಡಿಗಳಲ್ಲಿ ತಯಾರಾಗುವ ಚಿನ್ನದ ಗುಣಮಟ್ಟ ಪರಿಸಿಲಿಸಲು ಒಟ್ಟು 436 ಸರ್ಕಾರದಿಂದ ಮಾನ್ಯತೆ ಪಡೆದ ಕೇಂದ್ರಗಳಿವೆ. ಭಾರತದಲ್ಲಿ ಒಟ್ಟು 13,700 ಬಿಐಎಸ್-ಹಾಲ್ಮಾರ್ಕ್ ಆಭರಣದ ಅಂಗಡಿಗಳು ಮಾತ್ರ ಮಾನ್ಯತೆ ಪಡೆದಿವೆ.
ಭಾರತದಲ್ಲಿ ತಯಾರಾಗಿರುವ ಅಥವಾ ತಯಾರಾಗುತ್ತಿರುವ ಒಟ್ಟು ಚಿನ್ನದಲ್ಲಿ ಇದುವರೆಗೆ ಸುಮಾರು 30% ಚಿನ್ನದ ಆಭರಣಗಳು ಮಾತ್ರ BIS ಎಂದು ಮಾನ್ಯತೆ ಪಡೆದಿವೆ ಹಾಗು ಆ 30% ನಲ್ಲಿ , 80 ಭಾಗ ಚಿನ್ನ ಹೆಚ್ಚು ಮೌಲ್ಯ ಬಳಸಿ ಮಾಡಲಾಗಿದೆ ಮತ್ತು ಉಳಿದ 20 ಭಾಗ ಕಳಪೆ ಮೌಲ್ಯದ ವಸ್ತುಗಳನ್ನು ತಯಾರಿಸಿ ಮಾಡಲಾಗಿದೆ ಎಂದು BIS (ಇಂಡಿಯನ್ ಸ್ಟ್ಯಾಂಡರ್ಡ್ಸ್ ಬ್ಯೂರೊ) ವರದಿ ಮಾಡಿದೆ. ಇದರಿಂದ , ನೀವು ಖರೀದಿಸುವ ಚಿನ್ನವು ಬಿಐಎಸ್ (ಇಂಡಿಯನ್ ಸ್ಟ್ಯಾಂಡರ್ಡ್ಸ್ ಬ್ಯೂರೊ) ಹಾಲ್ಮಾರ್ಕ್ಡ್ ಮಾನ್ಯತೆ ಪಡೆದಿದಿಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಲುವುದು ಕಡ್ಡಾಯ.
ಬಿಐಎಸ್-ಹಾಲ್ಮಾರ್ಕ್-ಪ್ರಮಾಣ ಪತ್ರ ಹೊಂದಿರುವ ಆಭರಣಗಳ ಮಳಿಗೆಗಳಲ್ಲಿ ಮಾತ್ರ ಚಿನ್ನವನ್ನು ಖರೀದಿಸಿ.
ಪ್ರತಿ ಗ್ರಾಂ’ಗೆ ಚಿನ್ನದ ನಿಖರವಾದ ಬೆಲೆ ಎಷ್ಟು ಎಂದು ಪರಿಶೀಲಿಸಿ– ಹೇಗೆ?
ಚಿನ್ನ ಖರೀದಿಗೂ ಮುಂಚೆ ಚಿನ್ನದ ಪ್ರತಿ ಗ್ರಾಂ ಬೆಲೆ ಯಾವಾಗಲೂ ಪರಿಶೀಲಿಸಬೇಕು. ಎಲ್ಲರಿಗೂ ತಿಳಿದಿರುವಂತೆ ಚಿನ್ನದ ಬೆಲೆ ನಗರದಿಂದ ನಗರಕ್ಕೆ ಬದಲಾಗುತ್ತದೆ ಮತ್ತು ಭಾರತದಲ್ಲಿ ಚಿನ್ನದ ಆಭರಣಗಳ ಬೆಲೆಯನ್ನು ವಿವಿಧ ಸಂಘಗಳು ನಿರ್ಧರಿಸುತ್ತವೆ. ಚಿನ್ನದ ಪ್ರತಿ ಗ್ರಾಂ ಬೆಲೆ ಸರಿಯಾಗಿದೆ ಎಂದು ಖಚಿತಪಡಿಸಿಕೊಳ್ಳುವ ಒಂದು ಮಾರ್ಗವೆಂದರೆ ಒಂದಕ್ಕಿಂತ ಹೆಚ್ಚು ಪ್ರಸಿದ್ಧ ಶೋ ರೂಂನಲ್ಲಿ ಪರೀಕ್ಷಿಸುವುದರ ಮೂಲಕ ಅಥವಾ ವಿಶ್ವಾಸಾರ್ಹ ವೆಬ್ಸೈಟ್ಗಳಲ್ಲಿ ಖರೀದಿಗೆ ಬೇಟಿ ಕೊಟ್ಟು ನೀವು ದರಗಳನ್ನು ಪರಿಶೀಲಿಸಬಹುದು.
ನಿಮ್ಮದೇ ಆದ ಒಂದು ಟಿಪ್ಪಣಿ ಮಾಡಿಕೊಳ್ಳಿ – ಯಾವುದು ? ಎಲ್ಲಿ ? ಎಷ್ಟು? ಇತ್ಯಾದಿ…
ಅತಿದೊಡ್ಡ ಆಭರಣಗಳು ಯಾವಾಗಲೂ ಒಂದೇ ದರದಲ್ಲಿ ಮಾರಾಟ ಹಾಗುತ್ತವೆ ಅಥವಾ ದೊಡ್ಡ ಆಭರಣಗಳ ಬೆಲೆಗಳಲ್ಲಿ ಅಂತಹ ವ್ಯತ್ಯಾಸವೇನು ಕಂಡು ಬರುವುದಿಲ್ಲ. ನೀವು ಖರೀದಿಸುತ್ತಿರುವ ನಿಖರವಾದ ಚಿನ್ನದ ಮೊತ್ತವನ್ನು ಪರಿಶೀಲಿಸಿ. ನೀವು ಆಯ್ಕೆ ಮಾಡಿದ ಆಭರಣದ ಒಟ್ಟು ಬೆಲೆಯನ್ನು ಪರಿಶಿಲಿಸಿಕೊಳ್ಳಿ,
ಪ್ರತಿ 1 ಗ್ರಾಂ’ಗೆ ಎಷ್ಟು ಬೆಲೆ , ವೇಸ್ಟ (wastage)ಎಷ್ಟು ಇದೆ? ಚಿನ್ನದ ತಯಾರಿಕೆ ಶುಲ್ಕಗಳು ? ತೆರಿಗೆ ಎಷ್ಟು ? ಈಗೆ ಸಂಪೂರ್ಣ ಬೆಲೆ ಮಾಹಿತಿಯನ್ನು BIS ಹೊಂದಿರುವ 4 ಅಥವಾ 5 ಅಂಗಡಿಗಳಿಂದ ಪಡೆದುಕೊಳ್ಳಬೇಕು. ಇದರಿಂದ ನಿಮಗೂ ಉಪಾಯ ದೊರೆಯುತ್ತದೆ ಹಾಗು ಮೋಸ ಹೋಗುವ ಸಂದರ್ಭ ಬರುವುದಿಲ್ಲ.
ಚಿನ್ನ ತೆಗೆದುಕೊಂಡ ಅಂಗಡಿಯವರಿಗೆ ಪುನಃ ಚಿನ್ನವನ್ನು ಹಿಂದಿರುಗಿಸಿದರೆ ಎಷ್ಟು ಬೆಲೆ?
ಸ್ವಲ್ಪ ದಿನಗಳ ನಂತರ ಅಥವಾ ನಂತರದ ದಿನದಲ್ಲಿ ನೀವು ಚಿನ್ನದ ಆಭರಣವನ್ನು ಹಿಂದಿರುಗಿಸದರೆ ಅಥವಾ ಚಿನ್ನವನ್ನು ಸಮಕಾಲೀನ ವಿನ್ಯಾಸಕ್ಕಾಗಿ ವಿನಿಮಯ ಮಾಡಲು ಬಯಸಿದರೆ ನೀವು ಚಿನ್ನ ತೆಗೆದುಕೊಳ್ಳುವ ಆಭರಣದ ಅಂಗಡಿಯವರು ನಿಮ್ಮ ಚಿನ್ನಕ್ಕೆ ಎಷ್ಟು ಬೆಲೆ ನೀಡಲು ಸಿದ್ಧವಿದ್ದಾರೆ ಎಂದು ಪರಿಶೀಲಿಸಿ ಹಾಗು ಅದಕ್ಕೆ ಸಂಭಂಧ ಪಟ್ಟ ಅವಧಿ, ಬೆಲೆ ಹೀಗೆ ಸಂಬಂಧ ಪಟ್ಟ ರಸೀಧಿ ಕೇಳಿ ಪಡೆದುಕೊಳ್ಳಿ.
ಚಿನ್ನ ಖರೀದಿಸಿದಕ್ಕೆ ಸರಿಯಾದ ಬಿಲ್? ನೀವು ಖರೀದಿಸುತ್ತಿರುವ ಚಿನ್ನಕ್ಕೆ ಸರ್ಕಾರಿ ನಿಯಮಗಳಿಗೆ ಅನುಗುಣವಾಗಿ ಬಿಲ್ ಕೊಡುತಿದ್ದಾರೆಯೇ ಎಂಬುದನ್ನು ಖಾತ್ರಿ ಮಾಡಿಕೊಳ್ಳಬೇಕು.
ನೀವು ಮೌಲ್ಯವರ್ಧಿತ ತೆರಿಗೆಯನ್ನು ಪಾವತಿಸಬೇಕಾಗಬಹುದು ಹಾಗು ನಿಮ್ಮ ಚಿನ್ನ ಖರೀದಿಯು ರೂ 50,000 ಕ್ಕಿಂತ ಹೆಚ್ಚು ಇದ್ದರೆ ನಿಮ್ಮ ಪಾನ್ ಕಾರ್ಡ್ ವಿವರಗಳನ್ನು ಹಂಚಿಕೊಳ್ಳಬೇಕಾಗುತ್ತದೆ.
ಮುಂದೆ ಚಿನ್ನದ ಗುಣಮಟ್ಟದ ವಿಷಯವಾಗಿ ತೊಂದರೆ ಬಂದರೆ ಅಥವಾ ನೀವು ಗ್ರಾಹಕರ ನ್ಯಾಯಾಲಯದಲ್ಲಿ ದೂರು ಕೊಡಲು ಬಯಸಿದರೆ ಮೇಲಿನ ಎಲ್ಲಾ ಷರತ್ತುಗಳು ಅನ್ವಯವಾಗುತ್ತದೆ. ಹಾಗಾಗಿ ಚಿನ್ನವನ್ನು ಖರೀದಿಸುವ ಮುಂಚೆ ಈ ಎಲ್ಲ ಮಾಹಿತಿಗಳನ್ನು ತಪ್ಪದೆ ತಿಳಿದುಕೊಂಡು. ಚಿನ್ನವನ್ನು ಖರೀದಿಸುವುದು ಒಳ್ಳೆಯದು.