ಪ್ರತಿಯೊಬ್ಬ ವ್ಯಕ್ತಿಯೂ ಜೀವನದಲ್ಲಿ ಸಕ್ಸಸ್ ಆಗಬೇಕೆಂದುಕೊಳ್ಳುತ್ತಾನೆ. ಅದಕ್ಕಾಗಿ ಅನೇಕ ಮಾರ್ಗಗಳನ್ನು ಹುಡುಕುತ್ತಾ ಕಷ್ಟಪಡುತ್ತಿರುತ್ತಾನೆ. ಅದರಲ್ಲಿ ಕೆಲವುಗಳಲ್ಲಿ ಯಶಸ್ಸು ಸಿಕ್ಕರೆ, ಮತ್ತೆ ಕೆಲವುಗಳಲ್ಲಿ ಸೋಲು. ಆದರೆ ಈ ಹೋರಾಟದಲ್ಲಿ ಗೆದ್ದರೂ ಸೋತರೂ ಮನುಷ್ಯ ಎಷ್ಟೋ ವಿಷಯಗಳನ್ನು ಕಲಿತುಕೊಳ್ಳುತ್ತಾನೆ. ಗೆಲುವಿನಲ್ಲಿ ತನಗೆ ತಿಳಿದ ಸಂಗತಿಗಳ ಮೂಲಕ ಯಶಸ್ಸುಗಳಿಸುತ್ತಾನೆ. ಸೋಲಿನಲ್ಲಿ ತನಗೆ ತಿಳಿಯದ ಎಷ್ಟೋ ವಿಷಯಗಳನ್ನು ಕಲಿತುಕೊಳ್ಳುತ್ತಾನೆ. ತನ್ನ ಸುತ್ತಲೂ ಇರುವ ವ್ಯಕ್ತಿಗಳಿಂದ ಅಲ್ಲ ಪ್ರಾಣಿಗಳಿಂದಲ್ಲೂ ಸಹ ಎಷ್ಟೋ ವಿಷಯಗಳನ್ನು ಕಲಿಯಬಹುದು ಎಂದು ಚಾಣಕ್ಯ ಹೇಳಿದ್ದಾನೆ. ಆರು ಪ್ರಾಣಿಗಳಿಂದ ಈ ಆರು ಲಕ್ಷಣಗಳನ್ನು ಕಲಿತುಕೊಂಡರೆ ಸಕ್ಸಸ್ ಗ್ಯಾರಂಟಿ ಎಂದು ಹೇಳಿದ್ದಾನೆ. ಅವುಗಳೆಂದರೆ..
ಸಿಂಹ – ಕಠಿಣವಾದ ಕೆಲಸಗಳನ್ನು ಮಾಡುವುದು…
ಇದು ಕಷ್ಟ ಮಾಡಲು ಆಗುವುದಿಲ್ಲ ಎಂದು ನಿರಾಸೆ ಪಡಬೇಡಿ. ಎಷ್ಟೋ ಕಷ್ಟವಾದರೂ ನಮಗೆ ತಿಳಿದ ಕೆಲಸವಾಗಿದ್ದರೆ ಸಂಹದಂತೆ ಸಾಧಿಸಬೇಕು
ಕೊಕ್ಕರೆ – ಇಂದ್ರಿಯ ನಿಗ್ರಹ, ಕಾರ್ಯ ಸಾಧನೆ…
ನಿಗ್ರಹ ಎಂಬುದು ತುಂಬಾ ಅವಶ್ಯಕ. ಸಾಧನೆ ಮಾಡದೇ ಏನು ಪಡೆಯಲಾರೆವು.
ಕೋಳಿ – ಸಕಾಲದಲ್ಲಿ ಎಚ್ಚರಗೊಳ್ಳುವುದು, ಹೋರಾಟದಲ್ಲಿ ಅಚಲತೆ, ಸಹಪಾಠಿಗಳ ಜೊತೆಗೆ ಬೆರೆಯುವುದು…
ಟೈಮ್ ಡಿಸಿಪ್ಲೇನ್ ಎಂಬುದು ಕೋಳಿಯಿಂದ ಕಲಿಯಬಹುದು. ಹೋರಾಟ ಮಾಡಿ ನಮಗೆ ಬೇಕಾಗಿರುವುದನ್ನು ಸಾಧಿಸಬೇಕು. ನಮಗೆ ಇರುವುದರಲ್ಲೇ ಇತರರಿಗೆ ಗೌರವಿಸಬೇಕು.
ಕತ್ತೆ – ದಣಿದವಾದರೂ ಬಾರ ಹೊರುವುದು, ಗಾಳಿ, ಮಳೆ, ಬಿಸಿಲಿನ್ನು ಸಹಿಸಿಕೊಳ್ಳುವುದು, ಯಾವಾಗಲೂ ಖುಷಿಯಿಂದ ಇರುವುದು…
ಸಾಕಾಗಿದೆ ಎಂದು ಜವಾಬ್ದಾರಿಗಳನ್ನು ಮರೆಯಬಾರದು. ಈಗ ಬಿಸಿಲಿದೆ, ಮಳೆ ಬರುತ್ತಿದೆ ಎಂದು ಸುಮಾರಿಯಾಗಿ ನಿನ್ನ ಕಾಯಕವನ್ನು ನಿಲ್ಲಿಸಬೇಡ. ಎಷ್ಟು ಜವಾಬ್ದಾರಿಗಳನ್ನು ವಹಿಸಿಕೊಂಡಷ್ಟು ಅಷ್ಟು ಸಕ್ಸಸ್ ಫುಲ್ ಲೈಪ್ ಎಂದು ಖುಷಿಯಾಗಿರಬೇಕು.
ಕಾಗೆ – ಯಾವಾಗಲೂ ಎಚ್ಚರಿಕೆಯಿಂದಿರುವುದು, ನಿರಂತರವಾಗಿ ವಸ್ತು ಶೇಖರಣೆ, ಇತರರನ್ನು ಕುರುಡಾಗಿ ನಂಬದಿರುವುದು…
ಯಾವುದೇ ಕೆಲಸವನ್ನು ಮಾಡುವಾಗ ಎಚ್ಚರಿಕೆಯಿಂದ ಇರಬೇಕು. ಯಾವಾಗಲೂ ಯಾವುದಾದರೂ ಒಂದು ವಿಷಯವನ್ನು ತಿಳಿದುಕೊಳ್ಳುತ್ತಿರಬೇಕು, ಆ ಜ್ಞಾನ ನಮಗೆ ಉಪಯೋಗಕ್ಕೆ ಬರುತ್ತದೆ.
ನಾಯಿ – ಸಿಕ್ಕ ಆಹಾರದಲ್ಲೇ ತೃಪ್ತಿ ಪಡುವುದು, ನಿದ್ದೆ ಮಾಡುವ ಸಮಯದಲ್ಲಿ ಸಹ ಎಚ್ಚರಿಕೆಯಿಂದ ಇರುವುದು, ಯಜಮಾನನ ಮೇಲೆ ವಿಶ್ವಾಸ…
ನಮ್ಮ ಬಳಿ ಇರುವುದರ ಜೊತೆಗೆ ಅಲ್ಲ, ನಮಗೆ ಸಿಕ್ಕಿರುವುದರ ಜೊತೆಗೆ ಅಂದರೆ ಕಷ್ಟಪಟ್ಟು ಸಂಪಾದಿಸಿರುವುದರ ಜೊತೆಗೆ ತೃಪ್ತಿ ಪಡಬೇಕು. ನಿದ್ದೆಯಲ್ಲೂ ಸಹ ತನ್ನ ಕಾರ್ಯವನ್ನು ಮರೆಯಬಾರದು, ವಿಶ್ವಾಸ ಎಂಬುದು ನಿಮ್ಮ ಬಗೆಗಿನ ಗೌರವವನ್ನು ಹೆಚ್ಚಿಸುತ್ತದೆ.
ಚಾಣಕ್ಯ ಹೇಳಿದ ಈ 6 ಸಂಗತಿಗಳನ್ನು ಕಲಿತರೆ ಜೀವನದಲ್ಲಿ ಸಕ್ಸಸ್ ಗ್ಯಾರಂಟಿ…!
ಶ್ರೇಯಾಂಕ
ಮತ ನೀಡಿ, ಬಲಪಡಿಸಿ ಮತ್ತು ಸಾಮಾಜಿಕ ಜಾಲ ತಾಣದಲ್ಲಿ ಹಂಚಿರಿ.