Thursday , 13 June 2024

ಗ್ರಹಣಕಾಲದಲ್ಲಿ ಆಹಾರವನ್ನು ಏಕೆ ಸೇವಿಸಬಾರದು?

ಅ. ಆರೋಗ್ಯದ ದೃಷ್ಟಿಯಿಂದ: ಸೂರ್ಯ-ಚಂದ್ರರು ಅನ್ನರಸದ ಪೋಷಣೆಯನ್ನು ಮಾಡುವ ದೇವತೆಗಳಾಗಿದ್ದಾರೆ. ಗ್ರಹಣದ ಸಮಯದಲ್ಲಿ ಅವರ ಶಕ್ತಿಯು ಕಡಿಮೆಯಾಗಿರುವುದರಿಂದ ಭೋಜನವು ವರ್ಜ್ಯವಾಗಿದೆ.

[signinlocker]

ಆ. ಅಧ್ಯಾತ್ಮದ ದೃಷ್ಟಿಯಿಂದ: ಆಧುನಿಕ ವಿಜ್ಞಾನವು ಗ್ರಹಣದ ವಿಚಾರವನ್ನು ಕೇವಲ ಸ್ಥೂಲ, ಅಂದರೆ ಭೌಗೋಳಿಕ ದೃಷ್ಟಿಯಿಂದ ನೋಡುತ್ತದೆ; ಆದರೆ ನಮ್ಮ ಋಷಿಮುನಿಗಳು ಗ್ರಹಣದ ಸೂಕ್ಷ್ಮಪರಿಣಾಮ, ಅಂದರೆ ಆಧ್ಯಾತ್ಮಿಕ ಸ್ತರದಲ್ಲಾಗುವ ದುಷ್ಪರಿಣಾಮಗಳ ವಿಚಾರವನ್ನೂ ಮಾಡಿದ್ದಾರೆ. ಗ್ರಹಣಕಾಲದಲ್ಲಿ ವಾಯುಮಂಡಲವು ರಜತಮಾತ್ಮಕ (ತೊಂದರೆದಾಯಕ) ಲಹರಿಗಳಿಂದ ತುಂಬಿಕೊಂಡಿರುತ್ತದೆ. ಈ ಕಾಲದಲ್ಲಿ ಆಹಾರವನ್ನು ಸೇವಿಸುವುದು ನಿಷಿದ್ಧವಾಗಿದೆ. ರಜ-ತಮಾತ್ಮಕ ಲಹರಿಗಳಿಂದ ಕೂಡಿದ ವಾಯುಮಂಡಲದಿಂದ ಅನ್ನವು ದೂಷಿತವಾಗಿರುತ್ತದೆ. ಇಂತಹ ಅನ್ನವನ್ನು ಸೇವಿಸುವುದರಿಂದ ದೇಹಮಂಡಲವೂ ಅಶುದ್ಧವಾಗುತ್ತದೆ ಮತ್ತು ಇಂತಹ ದೇಹವು ಕಡಿಮೆ ಕಾಲಾವಧಿಯಲ್ಲಿಯೇ ಕೆಟ್ಟ ಶಕ್ತಿಗಳ ಅಧೀನವಾಗುವ ಸಾಧ್ಯತೆಯಿರುವುದರಿಂದ ಗ್ರಹಣಕಾಲದಲ್ಲಿ ಆಹಾರವನ್ನು ಸೇವಿಸಬಾರದು. ಇಂತಹ ಸಮಯದಲ್ಲಿ ವಾಯುಮಂಡಲದಲ್ಲಿ ರೋಗಾಣುಗಳು ಮತ್ತು ಕೆಟ್ಟ ಶಕ್ತಿಗಳ ಪ್ರಭಾವವೂ ಹೆಚ್ಚಾಗಿರುತ್ತದೆ. ಆದ್ದರಿಂದ ಯಾವುದೇ ರಜ-ತಮಾತ್ಮಕ ಕೃತಿಗಳನ್ನು ಮಾಡಿದರೆ, ಅದರ ಮೂಲಕ ನಮಗೆ ಕೆಟ್ಟ ಶಕ್ತಿಗಳಿಂದ ತೊಂದರೆಯಾಗಬಹುದು. ‘ಗ್ರಹಣಕಾಲದಲ್ಲಿ ಊಟವನ್ನು ಮಾಡಿದರೆ ಪಿತ್ತದ ತೊಂದರೆಯಾಗುತ್ತದೆ’ ಎಂದು ಧರ್ಮಶಾಸ್ತ್ರವು ಹೇಳುತ್ತದೆ.

ತದ್ವಿರುದ್ಧ ಗ್ರಹಣ ಕಾಲದಲ್ಲಿ ನಾಮಜಪ, ಸ್ತೋತ್ರಪಠಣ ಮುಂತಾದ ಕೃತಿಗಳನ್ನು ಅಂದರೆ ಸಾಧನೆಯನ್ನು ಮಾಡಿದರೆ, ನಮ್ಮ ಸುತ್ತಲೂ ರಕ್ಷಣಾಕವಚ ನಿರ್ಮಾಣವಾಗಿ ಗ್ರಹಣದ ಅನಿಷ್ಟ ಪ್ರಭಾವದಿಂದ ನಮ್ಮ ರಕ್ಷಣೆಯಾಗುತ್ತದೆ.

(ಆಧಾರ: ಸನಾತನ ಸಂಸ್ಥೆಯ ಗ್ರಂಥ ‘ಆಹಾರದ ನಿಯಮಗಳು ಮತ್ತು ಆಧುನಿಕ ಆಹಾರದ ಹಾನಿಗಳು’)

[/signinlocker]

ಶ್ರೇಯಾಂಕ

ಮತ ನೀಡಿ, ಬಲಪಡಿಸಿ ಮತ್ತು ಸಾಮಾಜಿಕ ಜಾಲ ತಾಣದಲ್ಲಿ ಹಂಚಿರಿ.

User Rating: 4.85 ( 1 votes)

ಇವುಗಳೂ ನಿಮಗಿಷ್ಟವಾಗಬಹುದು

ಶಬರಿ ಕೇಳುತ್ತಾಳೆ

ರಾವಣನನ್ನು ಸಂಹಾರ ಮಾಡುವ ನೆಪದಿಂದಲಾದರೂ ನೀನು ಇಲ್ಲಿಗೆ ಬಂದೆಯಲ್ಲ, ಇಲ್ಲ ಅಂದರೆ ಎಲ್ಲಿ ಬರುತ್ತಿದ್ದೆ ಸ್ವಾಮಿ? ಶ್ರೀರಾಮ ಸ್ವಲ್ಪ ಗಂಭೀರ …

Leave a Reply

Your email address will not be published. Required fields are marked *