ಗೀತಾ ಬಾಲಸುಬ್ರಹ್ಮಣ್ಯಂ (೦೫.೦೫.೧೯೫೬): ಕೊಣನೂರಿನ ಸಂಗೀತ ಹಾಗೂ ಹರಿಕಥಾ ವಿದ್ವಾಂಸರ ಮನೆತನದಿಂದ ಬಂದ ಗೀತಾರವರು ಹುಟ್ಟಿದ್ದು ಹಾಸನ ಜಿಲ್ಲೆಯ ಅರಸೀಕೆರೆ. ತಂದೆ ಸಂಗೀತ ವಿದ್ವಾಂಸರಾದ ರಾಮಕೃಷ್ಣಶಾಸ್ತ್ರಿಗಳು, ತಾಯಿ ವಾಗೀಶ್ವರಿ ಶಾಸ್ತ್ರಿ, ಪ್ರಸಿದ್ಧ ಲೇಖಕಿ.
ಓದಿದ್ದು ಬಿ.ಎಸ್ಸಿ. ಸಂಗೀತಾಭಿರುಚಿಯಿಂದ ಪಡೆದದ್ದು ಪ್ರಥಮ ಶ್ರೇಣಿಯಲ್ಲಿ ಎಂ.ಎ. ಪದವಿ ಮತ್ತು ಸೀನಿಯರ್ ಗ್ರೇಡ್ ಸಂಗೀತ, ಶೇಷಾದ್ರಿಪುರಂ ಬಾಲಕಿಯರ ಪ್ರೌಢಶಾಲೆಯಲ್ಲಿ ಸಂಗೀತ ಶಿಕ್ಷಕಿಯಾಗಿ ಕಾರ್ಯ ನಿರ್ವಹಣೆ.
[sociallocker]ಶಾಲಾ ಕಾಲೇಜು ದಿನಗಳಿಂದಲೂ ಬೆಂಗಳೂರು ಮೈಸೂರು, ತಿಪಟೂರು, ಚಿತ್ರದುರ್ಗ ಹೀಗೆ ಹಲವಾರು ಕಡೆ ರಾಜ್ಯ ಮಟ್ಟದ ಶಾಸ್ತ್ರೀಯ ಸಂಗೀತ, ಭಾವಗೀತೆ, ಚಿತ್ರಗೀತೆಗಳ ಸ್ಪರ್ಧೆಯಲ್ಲಿ ಪಡೆದ ಪ್ರಥಮ ಬಹುಮಾನ. ಕುವೆಂಪುರವರ ರಾಮಾಯಣ ದರ್ಶನಂ ಕಾವ್ಯಗಾಯನಕ್ಕೆ ಸಂದ ಬೆಳ್ಳಿ ಪಾರಿತೋಷಕ.
ಬೆಂಗಳೂರಿನ ಗಾಯನ ಸಮಾಜದ ಸಂಗೀತ ಸ್ಪರ್ಧೆ, ರಾಗ ತಾನ ಪಲ್ಲವಿ ಹಾಡಿಗೆ ಪ್ರಥಮ ಬಹುಮಾನದೊಡನೆ ತಂಬೂರ ವಾದ್ಯ. ಕುವೆಂಪುರವರ ಜನ್ಮದಿನೋತ್ಸವ ಸಂದರ್ಭದಲ್ಲಿ ಕಾವ್ಯವಾಚನ ಸ್ಪರ್ಧೆಯಲ್ಲಿ ದೊರೆತ ಬಹುಮಾನ.
೧೯೮೭ರಿಂದ ಇದುವರೆಗೂ ಆಕಾಶವಾಣಿಯಲ್ಲಿ ಸತತವಾಗಿ ಸುಗಮ ಸಂಗೀತ ಕ್ಷೇತ್ರದಲ್ಲಿ ‘ಬಿ ಹೈ’ ಗ್ರೇಡ್ ಕಲಾವಿದೆಯಾಗಿ ನಡೆಸಿಕೊಟ್ಟ ಹಲವಾರು ಕಾರ್ಯಕ್ರಮಗಳು. ಆಕಾಶವಾಣಿಯ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಗಳಲ್ಲಿ ಮಕ್ಕಳಿಗಾಗಿ ವೃಂದಗಾಯನ ನಿರ್ದೇಶನ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಎಡೆಯೂರು, ಮಡಿಕೇರಿಯ ದಸರಾ ಉತ್ಸವ, ಮೈಸೂರಿನ ದಸರಾ ಉತ್ಸವ, ಉದ್ಯಾನವನದಲ್ಲಿ ಉದಯರಾಗ, ಸಂಧ್ಯಾರಾಗ ಕಾರ್ಯಕ್ರಮಗಳಲ್ಲಿ ಭಾಗಿ, ಶತಾವಧಾನಿ ಆರ್.ಗಣೇಶ್‌ರವರ ಸಂಸ್ಕೃತ ಅಷ್ಟಾವಧಾನ, ಕಟ್ಟಿನಾಲೆ ವಸಂತ ಭರಧ್ವಾಜ್ ರವರ ಕನ್ನಡ ಅಷ್ಟಾವಧಾನ ಕಲೆಯ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಕಾವ್ಯಗಾಯನ. ಚಲನಚಿತ್ರ ಸಂಗೀತ ನಿರ್ದೇಶಕರಾದ ವಿಜಯಭಾಸ್ಕರ್, ವಿ.ಮನೋಹರ್ ಸಂಗೀತ ನಿರ್ದೇಶನದಲ್ಲಿನ ಹಾಡುಗಾರ್ತಿ. ಎನ್.ಸಿ.ಇ.ಆರ್.ಟಿ. ನವದೆಹಲಿ ಯವರು ನಡೆಸಿದ ಸಮುದಾಯ ಗೀತೆ ಗಾಯನ ಶಿಬಿರಕ್ಕೆ ಕರ್ನಾಟಕದಿಂದ ಆಯ್ಕೆಯಾದ ಅಭ್ಯರ್ಥಿ. ALL INDIA TEACHERS CHOIR CAMP ನಿರ್ದೇಶಕರಾದ ಕಾನುಘೋಷ್, ಎಂ.ಬಿ. ಶ್ರೀನಿವಾಸ್, ವಿನಯಚಂದ್ರ, ಮೌದ್ಗಲ್ಯ ಮುಂತಾದವರಿಂದ ಪಡೆದ ತರಬೇತಿ. ಇದೀಗಲೂ ನೀಡುತ್ತಿರುವ ಹಲವಾರು ಸ್ಮರಣೀಯ ಕಾರ್ಯಕ್ರಮಗಳು. ರಾಗ ಸಂಯೋಜಿಸಿದ ಹಾಡುಗಾರಿಕೆಗೆ ಕನ್ನಡ ಕವಿಗಳಿಂದ ಪಡೆದ ಪ್ರೋತ್ಸಾಹ, ಮೆಚ್ಚುಗೆ.
ಲೇಖಕರು: ವೈ.ಎನ್. ಗುಂಡೂರಾವ್, ಕಣಜ[/sociallocker]
ಶ್ರೇಯಾಂಕ
ಕನ್ನಡ ಭೂಮಿಯನ್ನು ಚಿನ್ನದ ಭೂಮಿಯನ್ನಾಗಿ ಮಾಡಿದ ಧೀಮಂತ ವ್ಯಕ್ತಿಗಳಿಗೆ ನಮ್ಮ ನಮನಗಳು.