ಒಂದು ಸಲ ಪುಟ್ಟ ಗಿಳಿಗೆ ತನ್ನ ಕೊಕ್ಕು ಯಾಕೆ ಕೆಂಪಿದೆ ಅಂತ ಕೇಳಿ ಅಮ್ಮನ ಹತ್ತಿರ ತಿಳಿದುಕೊಳ್ಳಬೇಕೆನಿಸಿತು. ಈಗ್ಯಾಕೆ ಈ ಪ್ರಶ್ನೆ ಬಂತು ಅಂದರೆ ಹೇಳಿಕೇಳಿ ಅದು ಕಾಡು, ಅಲ್ಲಿ ಬೇರೆ ಬೇರೆ ಪಕ್ಷಿಗಳು ಬಂದು ಹೋಗುತ್ತಿದ್ದವು. ಸ್ನೇಹಿತರೂ ಆಗುತ್ತಿದ್ದವು, ಅವುಗಳಲ್ಲಿ ಈ ಗಿಳಿಯೇ ತುಂಬ ಸುಂದರವಾಗಿ ಕಾಣುತ್ತಿತ್ತು, ಅದರ ಸೌಂದರ್ಯ ಕಂಡು ಕೆಲವರು ಖುಷಿ ಪಟ್ಟರೆ ಇನ್ನೂ ಕೆಲ ಪಕ್ಷಿಗಳು ಹೊಟ್ಟೆಕಿಚ್ಚು ತಾಳಲಾರದೇ “ಇದೇನಾಗಿದೆ ನಿನ್ನ ಕೊಕ್ಕಿಗೆ.. ಮೈಯೆಲ್ಲಾ ಹಸಿರು, ಕೊಕ್ಕು ಮಾತ್ರ ಯಾಕೆ ಕೆಂಪು. ಏನು ಮಾಡೋಕ್ಕೆ ಹೋಗಿ ಕೊಕ್ಕನ್ನ ರಕ್ತ ಮಾಡ್ಕೊಂಡ್ ಬಂದೆ.. ಯಾರು ಹೊಡೆದ್ರು’ ಅಂತೆಲ್ಲಾ ಹಂಗಿಸಿ ತಮಾಷೆ ಮಾಡ್ತಿದ್ದವು.
ಕಡೆಗೆ ಏನು ಮಾಡೋದು ಅಂತ ಗೊತ್ತಾಗೆªà ಅಳುತ್ತಾ ಬಂದು ತಾಯಿ ಗಿಣಿ ಹತ್ತಿರ ತನ್ನ ದುಃಖವನ್ನ ತೋಡ್ಕೊಳು¤ ಗಿಣಿ.
“ಅಮ್ಮ ಅಮ್ಮ, ಯಾಕಮ್ಮಾ ನಮ್ಮ ಕೊಕ್ಕು ಮಾತ್ರ ಕೆಂಪಗೆ.. ಉಳಿದವುಗಳ ಕೊಕ್ಕು ಹಿಂಗಿರಲ್ಲ?’
“ನೋಡು ಒಂದೊಂದು ಪಕ್ಷಿಗೆ ಒಂದೊಂದು ವಿಶೇಷತೆ ಇರತ್ತೆ. ನವಿಲಿಗೆ ಗರಿ, ಬಾತುಕೋಳಿಗೆ ಹಳದಿ ಕೊಕ್ಕು, ಗೂಬೆಗೆ ದೊಡ್ಡ ಕಣ್ಣು, ರಣಹದ್ದಿಗೆ ಕೊಕ್ಕೆಯಂಥ ಕೊಕ್ಕು.. ಅವವುಗಳಿಗೆ ಅಂಥಂಥ ವಿಶೇಷಗಳು. ಅದನ್ನ ಯಾರೂ ಆಡಿಕೋಬಾರ್ದು ಮಗೂ..’
“ಊಹೂಂ.. ನಂಗೊತ್ತಿಲ್ಲ, ಚೆನ್ನಾಗಿದೆ ಅಂತ ಹೇಳ್ಳೋರು ತುಂಬ ಕಮ್ಮಿ.. ಚೆನ್ನಾಗಿಲ್ಲ ಅನ್ನೋರೇ ಜಾಸ್ತಿ.. ತಮಾಷೆ ಮಾಡೋರ ಮಧ್ಯೆ ನಂಗೆ ಓಡಾಡೋಕ್ಕೆ ಕಷ್ಟ ಆಗ್ತಿದೆ.. ಇದ್ಯಾಕೆ ಹಿಂಗಿದೆ ಅಂತ ನೀನ್ ಹೇಳ್ಳಿಲ್ಲ ಅಂದ್ರೆ ನಾನು ಹೊರಗೇ ಹೋಗಲ್ಲ..’
ತಾಯಿ ಗಿಳಿಗೆ ಪೀಕಲಾಟಕ್ಕೆ ಬಂತು. ಚೆನ್ನಾಗಿರೋ ಕೊಕ್ಕನ್ನ ಕಂಡು ಹೆಮ್ಮೆಯಿಂದ ತಲೆ ಎತ್ತಿ ಓಡಾಡುತ್ತಿದ್ದ ನಮಗೆ ಇದೇನಪ್ಪಾ ಮನೆ ಒಳಗೆ ಕೂತುಕೊಳ್ಳೋ ಮರಿ ಹೆರೋ ಹಾಗಾಯ್ತು, ತಮಾಷೆ ಮಾಡೋರ ಬಾಯು¾ಚ್ಚಿಸೋದು ಹೇಗಪ್ಪಾ ಅಂತ ಚಿಂತೆ ಶುರುವಾಯ್ತು.
ಅದಕ್ಕೇನಾದ್ರೂ ಉಪಾಯ ಮಾಡಲೇಬೇಕೆಂದು ಗೊತ್ತಾಗದೇ ಬುದ್ಧಿವಂತನಾದ ಮೊಲದ ಹತ್ತಿರ ಹೋಯಿತು. ಅದೊಂದು ಉಪಾಯ ಹೇಳಿತು.
ಆ ಕಾಡಲ್ಲಿ ಇನ್ನೇನು ಎರಡು ದಿನಗಳಲ್ಲಿ ಒಂದು ಸ್ಪರ್ಧೆ ಇತ್ತು, ಅದೇನು ಂದರೆ ಬೇರೆ ಕಾಡಿಂದ ಬರೋ ಪ್ರಾಣಿಗಳೆಲ್ಲಾ ಈ ಊರಲ್ಲಿ ಒಂದು ಸ್ಪರ್ಧೆ ಮಾಡಿ, ಅದರಲ್ಲಿ ಅತ್ಯುತ್ತಮವಾಗಿ ಕಾಣೋರನ್ನ ಆಯ್ಕೆ ಮಾಡಬೇಕೆಂದುಕೊಂಡಿದ್ದವು.
ಆಗ ತನ್ನ ಮರಿ ಗಿಣಿಗೆ ಮುಖಕ್ಕೆ ಎಲೆ ಮುಚ್ಚಿಕೊಂಡು ಹೋಗುವಂತೆಯೂ, ತಾವೂ ಹಾಗೇ ಬರುವುದಾಗಿಯೂ ಹೇಳಿ ಕಳಿಸಿತು ಅಮ್ಮ. ಸುಂದರವಾದ ಕೊಕ್ಕನ್ನು ಮುಚ್ಚಿಕೊಂಡ ಗಿಣಿ ಕಾಡಿಗೆ ಹೋಯ್ತು. ಕಾಗೆ, ಗುಬ್ಬಿ, ಪಾರಿವಾಳ, ಬುಲ್‌ಬುಲ್, ಮರಕುಟಿಕ ಹೀಗೆ ಕಾಡಿನ ಹಕ್ಕಿಗಳೆಲ್ಲಾ ಹೋದವು. ಎಲ್ಲರನ್ನೂ ಸಾಲಾಗಿ ನಿಲ್ಲಿಸಲಾಯ್ತು. ಅವುಗಳಿಗೆಲ್ಲಾ ಒಂದಷ್ಟು ಬತ್ತವನ್ನ ಎಸೆದು, ತಿನ್ನುವಂತೆ ಹೇಳಲಾಯ್ತು. ಎಲ್ಲವೂ ತಿನ್ನುತ್ತಾ ಹೋದವು, ಪಕ್ಕದ ಕಾಡಿಂದ ಬಂದವರಿಗೆ ಇವ್ಯಾವುವೂ ಚಂದ ಕಾಣಲಿಲ್ಲ.
ಇದೀಗ ತಮ್ಮ ಕಾಡಿಗೇ ಮರ್ಯಾದೆ ಪ್ರಶ್ನೆ, ಕೊಕ್ಕನ್ನು ನೋಡಿಯೇ ಪಕ್ಷಿಗಳನ್ನ ಆಯ್ಕೆ ಮಾಡ್ತಾರಂತೆ, ನೀನು ಎಲೆ ತೆಗೆದು ನಿನ್ನ ಚೆನ್ನಾಗಿರೋ ಕೊಕ್ಕನ್ನು ತೋರಿಸುವ ಅಂತ ಮರಿ ಗಿಣಿಗೆ ಒತ್ತಾಯ ಮಾಡತೊಡಗಿದವು ಉಳಿದ ಪಕ್ಷಿಗಳು. ಆಶ್ಚರ್ಯಕರ ಸಂಗತಿಯೆಂದರೆ ಹಾಗೆ ಒತ್ತಾಯ ಮಾಡಿದವೆಲ್ಲಾ ಗಿಣಿಮರಿಯ ಕೊಕ್ಕನ್ನು ಆಡಿಕೊಂಡವೇ ಆಗಿದ್ದವು.
ಮರಿಗಿಣಿ ಸಂತೋಷದಿಂದ ಅಮ್ಮಗಿಣಿಯ ಕಡೆ ನೋಡಿತು. ಅಮ್ಮ ಗಿಣಿ ಮೊಲದ ಕಡೆ ನೋಡಿತು. ಮೊಲ ನಕ್ಕಿತು, ಅಮ್ಮ ಗಿಣಿಯೂ ಮಗುವಿನ ಕಡೆ ನೋಡಿ ನಕ್ಕಿತು.
ಮರಿಗಿಣಿ ಸಂತೋಷದಿಂದ ಎಲೆಯನ್ನು ಕೊಕ್ಕಿನಿಂದ ತೆರೆಯಿತು. ಪಕ್ಕದ ಕಾಡಿನಿಂದ ಬಂದ ಪಕ್ಷಿಗಳು ಗಿಣಿಯ ಸುಂದರ ಕೊಕ್ಕನ್ನ ಕಂಡು ಸಂತೋಷಗೊಂಡವು. ಅದನ್ನೇ ಆಯ್ಕೆ ಮಾಡಿದವು, ಈ ಕಾಡಿಗೆ ಇಂಥ ಗಿಳಿಯನ್ನ ಹೊಂದಿದ್ದಕ್ಕೆ ಕೃತಜ್ಞತೆ ಸಲ್ಲಿಸಿದವು. ಗಿಣಿಗಳಿಗೆ ಹೆಮ್ಮೆಯಾಯ್ತು.
ರಕ್ಷಿತ್ ರಾಮಸಮುದ್ರ
Read more at http://www.udayavani.com
ಶ್ರೇಯಾಂಕ
ಮತ ನೀಡಿ, ಬಲಪಡಿಸಿ ಮತ್ತು ಸಾಮಾಜಿಕ ಜಾಲ ತಾಣದಲ್ಲಿ ಹಂಚಿರಿ.