
‘ಕಿಂಗ್ಸ್ ಫೊರ್ಡ್’ ಎಂಬ ಬ್ರಿಟೀಷ್ ನ್ಯಾಯಧೀಶ ಕಲ್ಕತ್ತಾದಲ್ಲಿ ಸ್ವಾತಂತ್ರ್ಯ ಹೋರಾಟಗಾರರಿಗೆ ಘೋರಾತಿಘೋರ ಶಿಕ್ಷೆಗಳನ್ನು ಕೊಡುತ್ತಾ ವಿಕೃತ ಆನಂದವನ್ನು ಅನುಭವಿಸುತ್ತಿರುತ್ತಾನೆ. ಬಿಳಿ ಚರ್ಮದ ನಾಯಿಗೆ ಸರಿಯಾದ ಪಾಠ ಕಲಿಸಬೇಕೆಂದು ನಿಶ್ಚಯಿಸಿದ ಅಂದಿನ ಕ್ರಾಂತಿಕಾರಿಗಳು ಅವನನ್ನು ಕೊಲ್ಲಲು ನಿರ್ಧರಿಸುತ್ತಾರೆ. ಆದರೆ ಇದರ ಸುಳಿವು ಪಡೆದ ಬ್ರಿಟೀಷ್ ಸರ್ಕಾರ ಕಿಂಗ್ಸ್ ಫೊರ್ಡ್ ನನ್ನು ಮುಜಾಫರಪುರಕ್ಕೆ ವರ್ಗಾಯಿಸುತ್ತದೆ.
ಕಿಂಗ್ಸ್ ಫೊರ್ಡನ ರಕ್ತದಾಹದಿಂದ ಬೇಸತ್ತಿದ್ದ ಕ್ರಾಂತಿಕಾರರಿಗೆ ವರ್ಗಾವಣೆಯ ಸುದ್ದಿ ಅಡ್ದಿಯಾಗಲಿಲ್ಲ. ಅವನನ್ನು ಕೊಲ್ಲುವ ಅವಕಾಶವನ್ನು ಹದಿನೆಂಟು ವರ್ಷದ ಸಿಡಿಲ ಮರಿಗೆ ವಹಿಸಲಾಯಿತು. ಆಜ್ಞೆಯಂತೆ ತೆರಳಿದ ಈ ಕ್ರಾಂತಿಕಾರಿ ಕಿಂಗ್ಸ್ ಫೋರ್ಡನ ಚಲನವಲನಗಳನ್ನು ಗಮನಿಸತೊಡಗಿದ. ಕಿಂಗ್ಸ್ ಫೋರ್ಡನು ಸಂಜೆ ಕ್ಲಬ್ಬಿನಿಂದ ಮನೆಗೆ ಬರುವ ದಾರಿಯಲ್ಲಿ ಕಾರಿನ ಮೇಲೆ ಬಾಂಬ್ ಹಾಕಲಾಯಿತು. ಕಿಂಗ್ಸ್ ಫೊರ್ಡನ ಅದೃಷ್ಟ ಚೆನ್ನಾಗಿತ್ತು, ಅವನು ಆ ಕಾರಿನಲ್ಲಿ ಇರಲಿಲ್ಲವಾದ ಕಾರಣ ಬದುಕುಳಿದಿದ್ದ. ಆದರೆ ಮೊದಲ ಬಾರಿಗೆ ಇಡೀ ಬ್ರಟೀಷ್ ಸಾಮ್ರಾಜ್ಯದ ನರನಾಡಿಗಳಲ್ಲಿ ಭಯ ಆವರಿಸಿತು, ಅಲ್ಲಿಯವರೆಗು ಉನ್ಮತ್ತರಾಗಿದ್ದ ಬ್ರಿಟೀಷ್ ಅಧಿಕಾರಿಗಳಿಗೆ ಭಾರತದ ಕ್ರಾಂತಿಕಾರಿಗಳ ವಿಶ್ವರೂಪದರ್ಶನವಾಯಿತು.
ನಮ್ಮ ಸ್ವಾತಂತ್ರ್ಯ ಹೋರಾಟದಲ್ಲಿ ಈ ಘಟನೆಯ ಪರಿಣಾಮ ಮಹತ್ತರವಾದದ್ದು. ಬ್ರಿಟಿಷ್ ಸಾಮ್ರಾಜ್ಯದ ದರ್ಪವನ್ನು ನುಚ್ಚುನೂರು ಮಾಡಿದ ಈ ಕೆಲಸದ ರೂವಾರಿ ಹದಿನೆಂಟರ ಹುಡುಗ “ಖುದಿರಾಮ್ ಭೋಸ್“. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಮೊದಲ ಬಾರಿಗೆ ಬಾಂಬ್ ಬಳಸಿದ್ದು ಕೂಡ ಇದೇ ಖುದಿರಾಮ್ ಭೋಸ್! ಖುದಿರಾಮ್ ಭೋಸರನ್ನು ಸೆರೆಹಿಡಿದು 11 ಆಗಸ್ಟ್ 1908ರಂದು(117yrs back) ಗಲ್ಲಿಗೇರಿಸುತ್ತಾರೆ. ದರಿಧ್ರದ ಸಂಗತಿ ಏನೆಂದರೆ ಇಂದಿನ ಅನೇಕ ಯುವಕರಿಗೆ ಖುದಿರಾಮರ ಬಲಿದಾನ ಗೊತ್ತೇ ಇಲ್ಲ.
ಶ್ರೇಯಾಂಕ
ಮತ ನೀಡಿ ಬಲಪಡಿಸಿ ಮತ್ತು ಸಾಮಾಜಿಕ ಜಾಲ ತಾಣದಲ್ಲಿ ಹಂಚಿರಿ.