ಕೃಷಿ ಎಂಬುದು ಬೇಸಾಯ ಮತ್ತು ಅರಣ್ಯಕಲೆಯ ಮೂಲಕ ಆಹಾರ ಮತ್ತು ಸರಕುಗಳನ್ನು ಉತ್ಪಾದಿಸುವ ಒಂದು ವಿಧಾನ. ಕೃಷಿಯು ಮಾನವ ನಾಗರಿಕತೆಯ ಉಗಮಕ್ಕೆ ಕಾರಣವಾದ ಪ್ರಮುಖ ಬೆಳವಣಿಗೆಯಾಗಿತ್ತು. ಅಷ್ಟೇ ಅಲ್ಲ, ಪಳಗಿಸಿದ ಪ್ರಾಣಿಗಳು ಮತ್ತು ಸಸ್ಯಗಳ (ಅಂದರೆ, ಬೆಳೆಗಳ) ಸಂಗೋಪನೆಯಿಂದಾಗಿ ಆಹಾರದ ಮಿಗುತಾಯಗಳು ಸೃಷ್ಟಿಯಾಗುವುದರಿಂದ ಅದು ಹೆಚ್ಚು ಜನಭರಿತವಾದ ಮತ್ತು ಶ್ರೇಣೀಕೃತವಾದ ಸಮಾಜಗಳ ಬೆಳವಣಿಗೆಗೆ ಕಾರಣವಾಯಿತು. ಕೃಷಿಯ ಅಧ್ಯಯನಕ್ಕೆ ಕೃಷಿ ವಿಜ್ಞಾನ ಎಂದು ಹೆಸರು. ವೈಶಿಷ್ಟ್ಯಗಳು ಮತ್ತು ಕೌಶಲಗಳ ವಿಸ್ತೃತ ವೈವಿಧ್ಯತೆಯನ್ನು ಕೃಷಿಯು ಒಳಗೊಳ್ಳುತ್ತದೆ. ನೀರಿನ-ಕಾಲುವೆಗಳನ್ನು ಮತ್ತು ನೀರಾವರಿಯ ಇತರ ಸ್ವರೂಪಗಳನ್ನು ಅಗೆಯುವ ಮೂಲಕ, ಸಸ್ಯವನ್ನು ಬೆಳೆಸಲು ಸೂಕ್ತವಾದ ಜಮೀನುಗಳನ್ನು ವಿಸ್ತರಿಸುವ ವಿಧಾನಗಳು ಇದರಲ್ಲಿ ಸೇರಿಕೊಂಡಿವೆ. ಕೃಷಿಯೋಗ್ಯ ಭೂಮಿಯ ಮೇಲಿನ ಬೆಳೆಗಳ ಸಾಗುವಳಿ ಮತ್ತು ಸೀಮೆಯ ಭೂಮಿಯ ಮೇಲಿನ ಜಾನುವಾರಿನ ಮಂದೆಗಳ ಕಾಯುವಿಕೆಯು ಕೃಷಿಯ ಬುನಾದಿಯಾಗಿ ಉಳಿದುಕೊಂಡು ಬಂದಿದೆ. ಕೃಷಿಯ ಹಲವಾರು ಸ್ವರೂಪಗಳನ್ನು ಗುರುತಿಸುವುದಕ್ಕೆ ಮತ್ತು ಪರಿಮಾಣವನ್ನು ನಿರ್ಧರಿಸುವುದಕ್ಕೆ ಸಂಬಂಧಿಸಿದಂತೆ ಹಿಂದಿನ ಶತಮಾನದಲ್ಲಿ ಕಾಳಜಿಯು ಹೆಚ್ಚುತ್ತಲೇ ಬಂದಿತ್ತು. ಅಭಿವೃದ್ಧಿ ಹೊಂದಿದ ಪ್ರಪಂಚದಲ್ಲಿ ಸಮರ್ಥನೀಯ ಕೃಷಿ (ಉದಾಹರಣೆಗೆ, ಶಾಶ್ವತಕೃಷಿ ಅಥವಾ ಸಾವಯವ ಕೃಷಿ) ಮತ್ತು ಸಾಂದ್ರೀಕೃತ ಬೇಸಾಯದ (ಉದಾಹರಣೆಗೆ ಕೈಗಾರಿಕಾ ಕೃಷಿ) ನಡುವೆ ಈ ಶ್ರೇಣಿಯು ಸಾಮಾನ್ಯವಾಗಿ ವಿಸ್ತರಿಸುತ್ತದೆ. ಆಧುನಿಕ ಬೆಳೆ ವಿಜ್ಞಾನ, ಸಸ್ಯದ ತಳಿ ಬೆಳೆಸುವಿಕೆ, ಕೀಟನಾಶಕಗಳು ಮತ್ತು ರಸಗೊಬ್ಬರಗಳು, ಹಾಗೂ ತಂತ್ರಜ್ಞಾನದಲ್ಲಿನ ಸುಧಾರಣೆಗಳು ಸಾಗುವಳಿಯಿಂದ ಬರುವ ಬೆಳೆಯ ಇಳುವರಿಯನ್ನು ತೀವ್ರವಾಗಿ ಹೆಚ್ಚಿಸಿವೆಯಾದರೂ, ಅದರ ಜೊತೆಗೇ, ಪರಿಸರಕ್ಕೆ ವ್ಯಾಪಕವಾದ ಹಾನಿಯನ್ನು ಹಾಗೂ ಮಾನವನ ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮವನ್ನೂ ಉಂಟುಮಾಡಿವೆ. ಸಾಂದ್ರೀಕೃತ ಹಂದಿ ಸಾಕಾಣಿಕೆಯಂಥ (ಮತ್ತು ಕೋಳಿಮರಿ ಸಾಕಾಣಿಕೆಗೂ ಅನ್ವಯಿಸುವ ಇದೇ ಥರದ ಅಭ್ಯಾಸಗಳು) ಪಶು ಸಂಗೋಪನೆಯಲ್ಲಿನ ಆಯ್ದ ತಳಿ ಬೆಳೆಸುವಿಕೆ ಮತ್ತು ಆಧುನಿಕ ಅಭ್ಯಾಸಗಳು ಇದೇ ರೀತಿಯಲ್ಲಿ ಮಾಂಸದ ಉತ್ಪಾದನೆಯನ್ನೂ ಹೆಚ್ಚಿಸಿವೆಯಾದರೂ, ಪ್ರಾಣಿ ಕಟುಕತನ ಮತ್ತು ಕೈಗಾರಿಕಾ ವಿಧಾನದಲ್ಲಿ ಮಾಂಸ ತಯಾರಿಸುವಾಗ ಸಾಮಾನ್ಯವಾಗಿ ಬಳಸಲಾಗುವ ಪ್ರತಿಜೀವಕಗಳು (ಆಂಟಿಬಯಾಟಿಕ್ಸ್), ಬೆಳವಣಿಗೆ ಹಾರ್ಮೋನುಗಳು, ಮತ್ತು ಇತರ ರಾಸಾಯನಿಕಗಳ ಆರೋಗ್ಯ ಸಂಬಂಧಿ ಪರಿಣಾಮಗಳ ಕುರಿತೂ ಕಳವಳ ಹುಟ್ಟಿಕೊಳ್ಳಲು ಕಾರಣವಾಗಿವೆ. ಪ್ರಮುಖ ವ್ಯಾವಸಾಯಿಕ ಉತ್ಪನ್ನಗಳನ್ನು ಈ ರೀತಿ ವರ್ಗೀಕರಿಸಬಹುದು: ಆಹಾರಗಳು, ನೂಲು ಪದಾರ್ಥಗಳು, ಇಂಧನಗಳು, ಕಚ್ಚಾ ಸಾಮಗ್ರಿಗಳು, ಔಷಧ ವಸ್ತುಗಳು ಮತ್ತು ಉತ್ತೇಜಕಗಳು, ಹಾಗೂ ಅಲಂಕಾರಿಕ ಅಥವಾ ವಿಲಕ್ಷಣ ಪ್ಯಾಂಗೆಟ್ ಉತ್ಪನ್ನಗಳ ಒಂದು ವರ್ಗೀಕೃತ ಗುಂಪು. 2000ದ ದಶಕದಲ್ಲಿ, ಜೈವಿಕ ಇಂಧನಗಳು, ಜೈವಿಕ ಔಷಧವಸ್ತುಗಳು, ಜೈವಿಕ ಪ್ಲಾಸ್ಟಿಕ್‌ಗಳು, ಮತ್ತು ಔಷಧ ವಸ್ತುಗಳನ್ನು ತಯಾರಿಸಲು ಸಸ್ಯಗಳನ್ನು ಬಳಸಿಕೊಳ್ಳಲಾಗಿದೆ. ವಿಶಿಷ್ಟ ಆಹಾರಗಳಲ್ಲಿ ಏಕದಳ ಧಾನ್ಯಗಳು, ತರಕಾರಿಗಳು, ಹಣ್ಣುಗಳು, ಮತ್ತು ಮಾಂಸ ಇವುಗಳು ಸೇರಿವೆ. ನೂಲು ಪದಾರ್ಥಗಳಲ್ಲಿ ಹತ್ತಿ, ಉಣ್ಣೆ, ಸೆಣಬು, ರೇಷ್ಮೆ ಮತ್ತು ಅಗಸೆ ನೂಲು ಇವೇ ಮೊದಲಾದವು ಸೇರಿವೆ. ಕಚ್ಚಾ ಸಾಮಗ್ರಿಗಳಲ್ಲಿ ಮರದ ದಿಮ್ಮಿ ಮತ್ತು ಬಿದಿರು ಸೇರಿವೆ. ಉತ್ತೇಜಕಗಳಲ್ಲಿ ತಂಬಾಕು, ಮದ್ಯಸಾರ, ಅಫೀಮು, ಕೊಕೇನು, ಮತ್ತು ಘಂಟಾಪುಷ್ಪಿ ಇವೇ ಮೊದಲಾದವು ಸೇರಿವೆ. ರಾಳಗಳಂತಹ ಇತರ ಉಪಯುಕ್ತ ಸಾಮಗ್ರಿಗಳು ಸಸ್ಯಗಳಿಂದ ತಯಾರಿಸಲ್ಪಡುತ್ತವೆ. ಜೈವಿಕ ಇಂಧನಗಳಲ್ಲಿ ಎಥನಾಲ್, ಜೈವಿಕ ಡೀಸೆಲ್, ಮತ್ತು ಜೀವರಾಶಿಯಿಂದ ಪಡೆದ ಮೀಥೇನ್ ಇವೇ ಮೊದಲಾದವು ಸೇರಿವೆ. ಕತ್ತರಿಸಿದ ಹೂವುಗಳು, ಸಸ್ಯೋದ್ಯಾನದ ಗಿಡಗಳು, ಸಾಕುಪ್ರಾಣಿಗಳ ಮಾರಾಟ ವಲಯಕ್ಕಾಗಿರುವ ಅಲಂಕಾರಿಕ ಮೀನು ಮತ್ತು ಪಕ್ಷಿಗಳು ಇವೇ ಮೊದಲಾದವು ಕೆಲವೊಂದು ಅಲಂಕಾರಿಕ ಉತ್ಪನ್ನಗಳಾಗಿವೆ. 2007ರಲ್ಲಿ, ಪ್ರಪಂಚದ ಸುಮಾರು ಮೂರನೇ ಒಂದು ಭಾಗದಷ್ಟು ಜನ ಕೃಷಿ ವಲಯದಲ್ಲಿ ತೊಡಗಿಸಿಕೊಂಡಿದ್ದರು. 2003ರಲ್ಲಿ ವ್ಯಾವಸಾಯಿಕ ಕೆಲಸಗಾರರ ಪ್ರಮಾಣ ಕಡಿಮೆಯಾಗಿತ್ತಾದರೂ, ಕೃಷಿಯ ಕುರಿತಾದ ಅರಿವು ಹೆಚ್ಚಿದ ಪರಿಣಾಮವಾಗಿ ಈ ಪ್ರಮಾಣವು 2008ರಲ್ಲಿ ತೀವ್ರವಾಗಿ ಹೆಚ್ಚಾಯಿತು– ವಿಶ್ವಾದ್ಯಂತದ ಬಹುತೇಕ ಜನರನ್ನು ಕೆಲಸಕ್ಕೆ ತೊಡಗಿಸುವ ನಿಟ್ಟಿನಲ್ಲಿ ಆರ್ಥಿಕ ವಲಯವು ತೊಡಗಿಕೊಂಡಿದ್ದರಿಂದ ಸೇವೆಗಳ ವಲಯವು ಕೃಷಿಗೆ ಸರಿಸಾಟಿಯಾಗಿ ನಿಂತಿತು. ವಿಶ್ವದ ಮೂರನೇ ಒಂದು ಭಾಗಕ್ಕಿಂತಲೂ ಹೆಚ್ಚು ಜನರು ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ ಎಂಬ ವಾಸ್ತವದ ಹೊರತಾಗಿಯೂ, ಕೃಷಿ ಉತ್ಪನ್ನವು ವಿಶ್ವದ ಒಟ್ಟಾರೆ ಉತ್ಪನ್ನದ (ಎಲ್ಲಾ ಒಟ್ಟಾರೆ ದೇಶೀಯ ಉತ್ಪನ್ನಗಳ ಒಂದು ಮೊತ್ತ) ಶೇಕಡ ಐದು ಭಾಗಕ್ಕಿಂತ ಕಡಿಮೆಯಿದೆ.
ವ್ಯುತ್ಪತ್ತಿ ಶಾಸ್ತ್ರ
ಕೃಷಿ ಎಂಬ ಪದದ ಆಂಗ್ಲರೂಪ ಅಗ್ರಿಕಲ್ಚರ‍್ . ಇದು ಲ್ಯಾಟಿನ್ ಭಾಷೆಯ ಅಗ್ರಿಕಲ್ಚುರ ಎಂಬ ಪದದ ಇಂಗ್ಲಿಷ್ ರೂಪಾಂತರ. ಅಗ್ರಿಕಲ್ಚುರ ಎಂಬ ಪದವು ವ್ಯುತ್ಪತ್ತಿಯಾಗಿರುವುದು ಹೀಗೆ: ಅಗರ‍್ ಎಂದರೆ “ಒಂದು ಹೊಲ” ಮತ್ತು ಕಲ್ಚುರ ಎಂದರೆ “ಸಾಗುವಳಿ”. ಒಟ್ಟಿನಲ್ಲಿ, ಕರಾರುವಾಕ್ಕಾಗಿ ಹೇಳುವುದಾದರೆ, ಅಗ್ರಿಕಲ್ಚುರ ಎಂದರೆ ಭೂಮಿಯ “ಉಳುವಿಕೆ ಎಂದರ್ಥ. ಈ ರೀತಿಯಾಗಿ ಪದದ ಅಕ್ಷರಶಃ ಓದುವಿಕೆಯು “ಹೊಲವೊಂದರ/ಹೊಲಗಳ ಉಳುವಿಕೆ” ಎಂಬ ಅರ್ಥವನ್ನು ಕೊಡುತ್ತದೆ….
ಗಣಿಯಿಂದ ತೆಗೆದ ರಾಕ್ ಫಾಸ್ಫೇಟ್, ಕೀಟನಾಶಕಗಳು ಮತ್ತು ಯಂತ್ರಗಳ ಬಳಕೆಯೊಡಗೂಡಿದ ಸಂಶ್ಲೇಷಿತ ಸಾರಜನಕ ಇವೇ ಮೊದಲಾದವು, 20ನೇ ಶತಮಾನದ ಆರಂಭದಲ್ಲಿ ಬೆಳೆಯ ಇಳುವರಿಗಳನ್ನು ಗಣನೀಯವಾಗಿ ಹೆಚ್ಚಿಸಿವೆ. ಅದೇ ರೀತಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿನ ಕಾಳುಗಳ ಸರಬರಾಜಿನಿಂದಾಗಿ ಜಾನುವಾರು ಸಾಕಣೆಯು ಅಗ್ಗವಾಗಿ ಪರಿಣಮಿಸಿದೆ. 20ನೇ ಶತಮಾನದ ನಂತರದ ಅವಧಿಯಲ್ಲಿ, ಜಾಗತಿಕ ಮಟ್ಟದಲ್ಲಿ ಇಳುವರಿಯ ಪ್ರಮಾಣದಲ್ಲಿನ ಹೆಚ್ಚಳವು ದಾಖಲಿಸಲ್ಪಟ್ಟಿತು. ಅಕ್ಕಿ, ಗೋಧಿ, ಮತ್ತು ಕಾಳಿನ (ಮೆಕ್ಕೆಜೋಳ) ಥರದ ಸಾಮಾನ್ಯ ಮುಖ್ಯವಾದ ಕಾಳುಗಳ ಉನ್ನತ-ಇಳುವರಿಯ ಪ್ರಬೇಧಗಳು ಹಸಿರು ಕ್ರಾಂತಿಯ ಒಂದು ಭಾಗವಾಗಿ ಪರಿಚಯಿಸಲ್ಪಟ್ಟಿದ್ದೇ ಇದಕ್ಕೆ ಮುಖ್ಯ ಕಾರಣ.ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ತಂತ್ರಜ್ಞಾನಗಳನ್ನು (ಕೀಟನಾಶಕಗಳು ಮತ್ತು ಸಂಶ್ಲೇಷಿತ ಸಾರಜನಕವೂ ಸೇರಿದಂತೆ) ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಹಸಿರು ಕ್ರಾಂತಿಯು ರಫ್ತುಮಾಡಿತು. ದಿನೇ ದಿನೇ ಬೆಳೆಯುತ್ತಿರುವ ತನ್ನಲ್ಲಿನ ಜನಸಂಖ್ಯೆಯನ್ನು ಬೆಂಬಲಿಸುವುದು ಭೂಮಿಗೆ ಸಾಧ್ಯವಾಗದಿರಬಹುದು, ಆದರೆ, ಹಸಿರು ಕ್ರಾಂತಿಯಂತಹ ತಂತ್ರಜ್ಞಾನಗಳು ಹೆಚ್ಚುವರಿ ಪ್ರಮಾಣದ ಅಥವಾ ಮಿಗುತಾಯದ ಆಹಾರವನ್ನು ಉತ್ಪಾದಿಸುವಲ್ಲಿ ಈ ಪ್ರಪಂಚಕ್ಕೆ ಅವಕಾಶಮಾಡಿಕೊಟ್ಟಿವೆ ಎಂದು ಥಾಮಸ್ ಮಾಲ್ಥಸ್ ಬಹಳ ಹಿಂದೆಯೇ ಭವಿಷ್ಯ ನುಡಿದಿದ್ದರು.
ಸಾಕಷ್ಟು ಪ್ರಮಾಣದ ಆಹಾರದ ಸರಬರಾಜನ್ನು ಖಾತ್ರಿಪಡಿಸುವ ದೃಷ್ಟಿಯಿಂದ ಅನೇಕ ಸರ್ಕಾರಗಳು ಕೃಷಿಗೆ ಸಹಾಯಧನ ಒದಗಿಸಿವೆ. ಈ ವ್ಯಾವಸಾಯಿಕ ಸಹಾಯಧನಗಳು ಗೋಧಿ, ಕಾಳು (ಮೆಕ್ಕೆ ಜೋಳ), ಅಕ್ಕಿ, ಸೋಯಾಬೀನ್‌ಗಳು, ಮತ್ತು ಹಾಲು ಈ ಥರದ ನಿರ್ದಿಷ್ಟ ಪದಾರ್ಥಗಳ ಉತ್ಪಾದನೆಯೊಂದಿಗೆ ಸಂಬಂಧ ಹೊಂದಿವೆ. ಈ ಸಹಾಯಧನಗಳು, ಅದರಲ್ಲೂ ವಿಶೇಷವಾಗಿ ಅಭಿವೃದ್ಧಿ ಹೊಂದಿದ ದೇಶಗಳಿಂದ ಸ್ಥಾಪಿಸಲ್ಪಟ್ಟವುಗಳು, ಆರ್ಥಿಕ ರಕ್ಷಣಾವಾದಿ, ಪರಿಣಾಮಕಾರಿಯಲ್ಲದವುಗಳಾಗಿದ್ದು, ಪರಿಸರೀಯವಾಗಿ ಹಾನಿಯುಂಟುಮಾಡುವಂಥವು ಎಂದು ಹೆಸರುವಾಸಿಯಾಗಿವೆ. ಏರಿಸಿದ ಉತ್ಪಾದಕತೆ, ಸಂಶ್ಲೇಷಿತ ರಸಗೊಬ್ಬರಗಳು ಮತ್ತು ಕೀಟನಾಶಕಗಳ ಬಳಕೆ, ಆಯ್ದ ತಳಿ ಬೆಳೆಸುವಿಕೆ, ಯಂತ್ರಗಳ ಬಳಕೆ, ಜಲಮಾಲಿನ್ಯ, ಮತ್ತು ತೋಟದ ಸಹಾಯಧನಗಳು ಇವೇ ಮೊದಲಾದ ಅಂಶಗಳು ಕಳೆದ ಶತಮಾನದಲ್ಲಿ ಕೃಷಿಗೆ ಒಂದು ವಿಶಿಷ್ಟ ಲಕ್ಷಣವನ್ನು ನೀಡಿವೆ. ಕೀಟನಾಶಕಗಳು ಮತ್ತು ಸಂಶ್ಲೇಷಿತ ರಸಗೊಬ್ಬರಗಳ ಮಿತಿಮೀರಿದ ಬಳಕೆಯಿಂದಾಗಿ ಮಣ್ಣಿನ ದೀರ್ಘ-ಕಾಲದ ಫಲವತ್ತತೆಯು ಹಾನಿಗೊಳಗಾಗುತ್ತದೆ ಎಂದು ಸರ‍್ ಆಲ್ಬರ್ಟ್ ಹೋವರ್ಡ್‌ರಂತಹ ಸಾವಯವ ಬೇಸಾಯದ ಪ್ರತಿಪಾದಕರು 1900ರ ದಶಕದ ಆರಂಭದಲ್ಲಿ ವಾದಿಸಿದರು. ಈ ಅಭಿಪ್ರಾಯವು ದಶಕಗಳವರೆಗೆ ಜಡಸ್ಥಿತಿಯಲ್ಲೇ ಇದ್ದಿತಾದರೂ, 2000ದ ದಶಕದಲ್ಲಿ ಪರಿಸರೀಯ ಅರಿವು ಹೆಚ್ಚಾದುದರಿಂದ, ಸಮರ್ಥನೀಯ ಕೃಷಿಯ ಕಡೆಗೆ ಕೆಲವೊಂದು ಕೃಷಿಕರು, ಬಳಕೆದಾರರು, ಮತ್ತು ಕಾರ್ಯನೀತಿ ರೂಪಿಸುವವರು ಸಾಗಿದ್ದು ಕಂಡುಬಂತು. ಇತ್ತೀಚಿನ ವರ್ಷಗಳಲ್ಲಿ, ಮುಖ್ಯವಾಹಿನಿ ಕೃಷಿಯ ಗ್ರಹಿಸಲ್ಪಟ್ಟ ಬಾಹ್ಯ ಪರಿಸರೀಯ ಪರಿಣಾಮಗಳಿಗೆ ಪ್ರತಿಯಾಗಿ ಹಿಂಬಡಿತ ಕಂಡುಬಂದಿದೆ. ಅದರಲ್ಲೂ ನಿರ್ದಿಷ್ಟವಾಗಿ ಜಲಮಾಲಿನ್ಯಕ್ಕೆ ಸಂಬಂಧಿಸಿ ಈ ಪ್ರತಿಕ್ರಿಯೆ ಕಂಡುಬಂದಿದ್ದು, ಇದರ ಪರಿಣಾಮವಾಗಿ ಸಾವಯವ ಆಂದೋಲನ ಉಂಟಾಗಿದೆ. ಈ ಆಂದೋಲನದ ಹಿಂದಿರುವ ಪ್ರಮುಖ ಶಕ್ತಿಗಳಲ್ಲಿ ಒಂದೆಂದರೆ ಐರೋಪ್ಯ ಒಕ್ಕೂಟ. ಇದು 1991ರಲ್ಲಿ ಮೊತ್ತಮೊದಲ ಬಾರಿಗೆ ಸಾವಯವ ಆಹಾರವನ್ನು ಪ್ರಮಾಣೀಕರಿಸಿದ್ದೇ ಅಲ್ಲದೇ, ತನ್ನ ಸಾಮಾನ್ಯ ವ್ಯಾವಸಾಯಿಕ ನೀತಿಯನ್ನು (ಕಾಮನ್ ಅಗ್ರಿಕಲ್ಚರಲ್ ಪಾಲಿಸಿ)(CAP) 2005ರಲ್ಲಿ ಸುಧಾರಣೆಗೆ ಒಳಪಡಿಸಲು ಪ್ರಾರಂಭಿಸಿತು. ಪದಾರ್ಥ-ಸಂಬಂಧಿತ ಬೇಸಾಯ ಸಹಾಯಧನಗಳನ್ನು ಕ್ರಮೇಣವಾಗಿ ತಪ್ಪಿಸುವ ಉದ್ದೇಶದ ಈ ನೀತಿಗೆ ಜೋಡಣೆ ಕಳಚುವಿಕೆ ಎಂದೂ ಹೆಸರಿದೆ. ಸಾವಯವ ಬೇಸಾಯದ ಬೆಳವಣಿಗೆಯು ಸಂಯೋಜಿತ ಕಳೆ ನಿರ್ವಹಣೆ ಮತ್ತು ಆಯ್ದ ತಳಿ ಬೆಳೆಸುವಿಕೆಯಂಥ ಪರ್ಯಾಯ ತಂತ್ರಜ್ಞಾನಗಳಲ್ಲಿನ ಸಂಶೋಧನೆಗೆ ಮತ್ತೆ ಜೀವಕೊಟ್ಟಿದೆ. ಇತ್ತೀಚಿನ ಮುಖ್ಯವಾಹಿನಿ ತಂತ್ರಜ್ಞಾನದ ಬೆಳವಣಿಗೆಗಳಲ್ಲಿ ತಳೀಯವಾಗಿ ಮಾರ್ಪಡಿಸಿದ ಆಹಾರವು ಸೇರಿದೆ. 2007ರ ಅಂತ್ಯದ ವೇಳೆಗೆ, ಸಾಕುಕೋಳಿಗಳು ಮತ್ತು ಹೈನು ಹಸುಗಳು ಹಾಗೂ ಇತರ ಪಶುಗಳಿಗೆ ತಿನ್ನಿಸಲು ಬಳಸುವ ಧಾನ್ಯದ ಬೆಲೆಯು ಹಲವಾರು ಅಂಶಗಳ ಕಾರಣದಿಂದಾಗಿ ಹೆಚ್ಚಾಯಿತು. ಇದರಿಂದಾಗಿ ಗೋಧಿ, ಸೋಯಾಬೀನ್, ಮತ್ತು ಮೆಕ್ಕೆಜೋಳದ ಬೆಲೆಗಳು ವರ್ಷಾನಂತರದಲ್ಲಿ ಕ್ರಮವಾಗಿ 58%, 32% ಮತ್ತು 11%ನಷ್ಟು ಪ್ರಮಾಣದಲ್ಲಿ ಹೆಚ್ಚಾದವು. ವಿಶ್ವಾದ್ಯಂತದ ಅನೇಕ ದೇಶಗಳಲ್ಲಿ ಆಹಾರಕ್ಕೆ ಸಂಬಂಧಿಸಿದ ಗೊಂದಲಗಳು ಇತ್ತೀಚೆಗೆ ಸಂಭವಿಸಿವೆ.Ug99 ಕುಲದಿಂದ ಗೋಧಿಯ ಮೇಲೆ ಉಂಟಾಗುವ ಕಾಂಡ ಶಿಲೀಂಧ್ರದ ಒಂದು ಸಾಂಕ್ರಾಮಿಕ ರೋಗವು ಈಗ ಆಫ್ರಿಕಾದಾದ್ಯಂತ ಹರಡುತ್ತಿರುವುದಲ್ಲದೆ, ಏಷ್ಯಾವನ್ನೂ ಪ್ರವೇಶಿಸಿರುವುದು ಈಗ ಪ್ರಮುಖ ಕಳವಳಕ್ಕೆ ಕಾರಣವಾಗಿದೆ. ವಿಶ್ವದ ಸರಿ ಸುಮಾರು 40%ನಷ್ಟು ಕೃಷಿ ಭೂಮಿಯ ಗುಣಮಟ್ಟವು ಗಂಭೀರಸ್ವರೂಪದಲ್ಲಿ ಕುಸಿದಿದೆ. ಒಂದು ವೇಳೆ ಆಫ್ರಿಕಾದಲ್ಲಿನ ಮಣ್ಣಿನ ಗುಣಮಟ್ಟ ಕುಸಿತಗೊಳ್ಳುವ ಅಥವಾ ಶಿಥಿಲೀಕರಣಗೊಳ್ಳುವ ಸದ್ಯದ ಪ್ರವೃತ್ತಿಯು ಮುಂದುವರಿದಲ್ಲಿ, 2025ರ ಹೊತ್ತಿಗೆ ತನ್ನ ಜನಸಂಖ್ಯೆಯ ಕೇವಲ 25%ನಷ್ಟು ಭಾಗಕ್ಕೆ ಮಾತ್ರವೇ ಸದರಿ ಖಂಡವು ಆಹಾರ ಒದಗಿಸಲು ಸಾಧ್ಯ ಎಂದು ಆಫ್ರಿಕಾದಲ್ಲಿನ UNUನ ಘಾನಾ-ಮೂಲದ ರಾಷ್ಟ್ರೀಯ ಸಂಪನ್ಮೂಲಗಳ ಸಂಸ್ಥೆಯು ಅಭಿಪ್ರಾಯಪಟ್ಟಿದೆ.
ಇತಿಹಾಸ

ಸರಿಸುಮಾರು 10,000 ವರ್ಷಗಳ ಹಿಂದೆ ಬೆಳವಣಿಗೆಯಾದಾಗಿನಿಂದ, ಭೌಗೋಳಿಕವಾಗಿ ಆವರಿಸುವಲ್ಲಿ ಹಾಗೂ ಇಳುವರಿಯನ್ನು ನೀಡುವಲ್ಲಿ ಕೃಷಿಯು ವ್ಯಾಪಕವಾಗಿ ವಿಸ್ತರಿಸಿದೆ. ಈ ವಿಸ್ತರಣೆಯಾದ್ಯಂತ ಹೊಸ ತಂತ್ರಜ್ಞಾನಗಳು ಹಾಗೂ ಹೊಸ ಬೆಳೆಗಳು ಸಂಯೋಜಿಸಲ್ಪಟ್ಟವು. ನೀರಾವರಿ, ಬೆಳೆಗಳ ಸರದಿ, ರಸಗೊಬ್ಬರಗಳು, ಮತ್ತು ಕೀಟನಾಶಕಗಳಂಥ ವ್ಯಾವಸಾಯಿಕ ಅಭ್ಯಾಸಗಳು ಅಥವಾ ಪರಿಪಾಠಗಳು ಬಹಳ ಹಿಂದೆಯೇ ಅಭಿವೃದ್ಧಿಯಾದರೂ, ಕಳೆದ ಶತಮಾನದಲ್ಲಷ್ಟೇ ಅತೀವವಾದ ಪ್ರಗತಿ ಸಾಧಿಸಲು ಅವಕ್ಕೆ ಸಾಧ್ಯವಾಯಿತು. ವಿಶ್ವಾದ್ಯಂತದ ಸಮಾಜೋ-ಆರ್ಥಿಕ ಬದಲಾವಣೆಯಲ್ಲಿ ವ್ಯಾವಸಾಯಿಕ ಪ್ರಗತಿಯು ಒಂದು ನಿರ್ಣಾಯಕ ಅಂಶವಾಗಿಯೇ ಬೆಳೆದುಕೊಂಡು ಬಂದಿದ್ದರಿಂದಾಗಿ, ಕೃಷಿಯ ಇತಿಹಾಸವು ಮಾನವ ಇತಿಹಾಸದಲ್ಲಿ ಒಂದು ಪ್ರಮುಖ ಪಾತ್ರವನ್ನೇ ವಹಿಸಿದೆ. ಬೇಟೆಗಾರ-ಸಂಗ್ರಹಕಾರ ಸಂಸ್ಕೃತಿಗಳಲ್ಲಿ ಅಪರೂಪವಾಗಿ ಕಾಣಿಸುವ ಸಂಪತ್ತು-ಕೇಂದ್ರೀಕರಣ ಮತ್ತು ಸೈನಿಕ ಪ್ರವೃತ್ತಿಯ ಅಥವಾ ಅತಿಯಾದ ಕಟ್ಟುನಿಟ್ಟಿನ ತಜ್ಞತೆಗಳು, ಕೃಷಿಯನ್ನು ಕಾರ್ಯರೂಪಕ್ಕೆ ತಂದಿರುವ ಅಥವಾ ಅಭ್ಯಾಸ ಮಾಡುವ ಸಮಾಜಗಳಲ್ಲಿ ಸವೇಸಾಮಾನ್ಯವಾಗಿವೆ. ಆದ್ದರಿಂದ, ಬೃಹತ್-ಸಾಹಿತ್ಯ ಹಾಗೂ ಸ್ಮಾರಕಗಳ ವಾಸ್ತುಶೈಲಿಗಳಂಥ ಕಲೆಗಳು, ಕ್ರೋಡೀಕೃತ ಕಾನೂನು ವ್ಯವಸ್ಥೆಗಳೂ ಸಹ ಇಂಥ ಸಮಾಜಗಳಲ್ಲಿ ಸರ್ವೇಸಾಮಾನ್ಯವಾಗಿವೆ. ತಮ್ಮದೇ ಕುಟುಂಬದ ಅಗತ್ಯಗಳನ್ನು ಪೂರೈಸಿ ಮಿಗುವಷ್ಟು ಆಹಾರ ಪದಾರ್ಥವನ್ನು ಉತ್ಪಾದಿಸಬಲ್ಲಷ್ಟು ರೈತರು ಸಮರ್ಥರಾದಾಗ, ಆಹಾರ ಸಂಗ್ರಹಣೆಯ ಕೆಲಸವನ್ನೂ ಮೀರಿದ ಇತರ ಯೋಜನೆಗಳೆಡೆಗೆ ತಮ್ಮನ್ನು ತೊಡಗಿಸಿಕೊಳ್ಳಲು ಅವರ ಸಮುದಾಯದಲ್ಲಿನ ಇತರರಿಗೆ ಮುಕ್ತ ಅವಕಾಶ ನೀಡಲಾಯಿತು. ಕೃಷಿಯ ಅಭಿವೃದ್ಧಿಯಿಂದಾಗಿಯೇ ನಾಗರಿಕತೆಗಳು ಕಾರ್ಯಸಾಧ್ಯವಾದವು ಎಂದು ಇತಿಹಾಸಕಾರರು ಹಾಗೂ ಮಾನವಶಾಸ್ತ್ರಜ್ಞರು ಬಹುಕಾಲದಿಂದ ವಾದಿಸಿದ್ದಾರೆ.
ಪ್ರಾಚೀನ ಮೂಲಗಳು

ಪಶ್ಚಿಮ ಏಷ್ಯಾ, ಈಜಿಪ್ಟ್, ಮತ್ತು ಭಾರತದ ಫಲವತ್ತಾದ ಅರ್ಧಚಂದ್ರಾಕಾರದ ಪ್ರದೇಶಗಳು, ಪ್ರಾಚೀನ ಕಾಲದ ಸಸ್ಯಗಳ ಯೋಜಿತ ಬಿತ್ತುವಿಕೆ ಹಾಗೂ ಫಸಲು ಸಂಗ್ರಹಣೆಯ ಪ್ರದೇಶಗಳಾಗಿದ್ದವು. ಈ ಸಸ್ಯಗಳನ್ನು ಇದಕ್ಕೂ ಮುಂಚಿತವಾಗಿ ಅರಣ್ಯದಲ್ಲಿ ಸಂಗ್ರಹಿಸಲಾಗಿತ್ತು. ಉತ್ತರ ಮತ್ತು ದಕ್ಷಿಣ ಚೀನಾ, ಆಫ್ರಿಕಾದ ಸಹೆಲ್, ನ್ಯೂ ಗಿನಿಯಾ ಮತ್ತು ಅಮೆರಿಕಗಳ ಹಲವಾರು ಪ್ರಾಂತ್ಯಗಳಲ್ಲಿ ಕೃಷಿಯ ಸ್ವತಂತ್ರ ಅಭಿವೃದ್ಧಿಯು ಕಂಡುಬಂತು. ಕೃಷಿಯ ನವಶಿಲಾಯುಗದ ಸಂಸ್ಥಾಪಕ ಬೆಳೆಗಳು ಎಂದು ಕರೆಯಲಾಗುವ ಎಂಟು ಬೆಳೆಗಳು ಈ ಕ್ರಮದಲ್ಲಿ ಕಾಣಿಸಿಕೊಂಡಿವೆ: ಮೊದಲು ಎಮರ‍್ ಗೋಧಿ ಮತ್ತು ಐನ್‌ಕಾರ್ನ್ ಗೋಧಿ, ನಂತರ ಸಿಪ್ಪೆಸುಲಿದ ಜವೆಗಿಡ (ಬಾರ್ಲಿ), ಬಟಾಣಿಗಳು, ಲೆಂಟಿಲ್‌ಗಳು, ಕಹಿ ವೆಚ್, ಕಡಲೆಗಳು ಮತ್ತು ಅಗಸೆ.7000 BCಯ ವೇಳೆಗೆ, ಸಣ್ಣ-ಮಟ್ಟದ ಕೃಷಿಯು ಈಜಿಪ್ಟ್‌ನ್ನು ತಲುಪಿತು. ಏನಿಲ್ಲವೆಂದರೂ 7000 BCಯಿಂದ ಭಾರತದ ಉಪಖಂಡವು ಗೋಧಿ ಮತ್ತು ಜವೆಯ ಬೇಸಾಯವನ್ನು ಕಂಡಿದೆ ಎಂಬುದನ್ನು ಬಲೂಚಿಸ್ತಾನ್‌ನ ಮೆಹ್ರ್‌ಗರ್ನಲ್ಲಿ ಕೈಗೊಳ್ಳಲಾದ ಪುರಾತತ್ವ ಶಾಸ್ತ್ರದ ಉತ್ಖನನವು ದೃಢೀಕರಿಸಿದೆ. 6000 BCಯ ಹೊತ್ತಿಗೆ, ಮಧ್ಯಮ-ಮಟ್ಟದ ಬೇಸಾಯವು ನೈಲ್ ನದಿಯ ದಡದ ಪ್ರದೇಶಗಳ ಮೇಲೆ ಭದ್ರವಾಗಿ ಬೇರೂರಿತು. ಸರಿ ಸುಮಾರು ಇದೇ ಸಮಯದಲ್ಲಿ, ಪೌರಸ್ತ್ಯ (ದೂರಪ್ರಾಚ್ಯ) ದೇಶಗಳಲ್ಲಿ ಕೃಷಿಯು ಸ್ವತಂತ್ರವಾಗಿ ಅಭಿವೃದ್ಧಿಯಾಗಿದ್ದೇ ಅಲ್ಲದೇ, ಗೋಧಿಯ ಬದಲಿಗೆ ಅಕ್ಕಿಯು ಪ್ರಧಾನ ಬೆಳೆಯಾಗಿ ರೂಪುಗೊಂಡಿತು. ಉದ್ದು, ಸೋಯಾ ಅವರೆ ಮತ್ತು ಅಝುಕಿ ಇವೇ ಮೊದಲಾದವುಗಳನ್ನು ಒಳಗೊಂಡಂತೆ ಕೆಸವು ಮತ್ತು ಹುರುಳಿಗಳ ತಳಿಗಳನ್ನು ಚೀನಾ ಮತ್ತು ಇಂಡೋನೇಷಿಯಾದ ಕೃಷಿಕರು ತಮ್ಮ ಅಧೀನಕ್ಕೆ ತರಲು ಪ್ರಾರಂಭಿಸಿದರು. ಶರ್ಕರಪಿಷ್ಟಗಳ ಈ ಹೊಸ ಮೂಲಗಳಿಗೆ ಪೂರಕವಾಗಿರಲು, ಈ ಪ್ರದೇಶಗಳಲ್ಲಿನ ನದಿಗಳು, ಸರೋವರಗಳು ಮತ್ತು ಕಡಲ ತೀರಗಳಲ್ಲಿ ಹುಟ್ಟಿಕೊಂಡ ಸುಸಂಘಟಿತವಾದ ಬಲೆ-ಮೀನುಗಾರಿಕೆಯು ಅತೀವ ಪ್ರಮಾಣದ ಅತ್ಯಾವಶ್ಯಕ ಪ್ರೊಟೀನುಗಳನ್ನು ಬಳಕೆಗೆ ತಂದಿತು. ಒಟ್ಟಾರೆಯಾಗಿ ಹೇಳುವುದಾದರೆ, ಬೇಸಾಯ ಮತ್ತು ಮೀನುಗಾರಿಕೆಯ ಈ ಹೊಸ ವಿಧಾನಗಳು ಮಾನವ ಸಮುದಾಯದ ಉತ್ಕರ್ಷವೊಂದನ್ನು ಹುಟ್ಟುಹಾಕಿದವು. ಈ ಉತ್ಕರ್ಷವು ಹಿಂದಿನ ಎಲ್ಲಾ ವಿಸ್ತರಣೆಗಳನ್ನೂ ಮೊಟುಕುಗೊಳಿಸಿದ್ದೇ ಅಲ್ಲದೇ, ಇಂದಿಗೂ ಮುಂದುವರಿಯುತ್ತಿದೆ. 5000 BCಯ ಹೊತ್ತಿಗೆ, ಸುಮೇರು ದೇಶದ ಜನರು ಸಾರಭೂತ ವ್ಯಾವಸಾಯಿಕ ಕೌಶಲಗಳನ್ನು ಅಭಿವೃದ್ಧಿಪಡಿಸಿದರು. ಜಮೀನಿನ ಬೃಹತ್ ಪ್ರಮಾಣದ ಸಾಂದ್ರೀಕೃತ ಸಾಗುವಳಿ, ಏಕ-ಬೆಳೆ ಬೆಳೆಯುವಿಕೆ, ಸುಸಂಘಟಿತ ನೀರಾವರಿ, ಮತ್ತು ಪರಿಣತಿ ಹೊಂದಿದ ಕೂಲಿ-ಕಾರ್ಮಿಕರ ಪಡೆಯ ಬಳಸುವಿಕೆ ಇವೇ ಮೊದಲಾದ ಕೌಶಲಗಳು ಇದರಲ್ಲಿ ಸೇರಿದ್ದವು. ಇನ್ನೂ ನಿರ್ದಿಷ್ಟವಾಗಿ ಹೇಳಬೇಕೆಂದರೆ, ಈಗ ಷತ್ ಅಲ್-ಅರಬ್ ಎಂದು ಹೆಸರಾಗಿರುವ ಜಲಮಾರ್ಗದ ಉದ್ದಕ್ಕೂ, ಅದರ ಪರ್ಷಿಯನ್ ಕೊಲ್ಲಿ ನದೀಮುಖಜಭೂಮಿಯಿಂದ ಟೈಗ್ರಿಸ್ ಮತ್ತು ಯೂಫ್ರಟಿಸ್ ನದಿಗಳ ಸಂಗಮಸ್ಥಾನದವರೆಗೆ ಈ ಪರಿಪಾಠ ಕಂಡುಬಂತು. ಕಾಡೆತ್ತು ಮತ್ತು ಕಾಡುಕುರಿಗಳನ್ನು ಕ್ರಮವಾಗಿ ದನ ಮತ್ತು ಕುರಿಗಳಂತೆ ಸಾಕುವ ಪರಿಪಾಠವು ಆಹಾರ/ನೂಲು ಪದಾರ್ಥಗಳಿಗಾಗಿ ಮತ್ತು ಹೊರೆಹೊರುವ ಕೆಲಸಕ್ಕೆಂದು ಬೃಹತ್-ಪ್ರಮಾಣದಲ್ಲಿ ಪ್ರಾಣಿಗಳನ್ನು ಬಳಸುವ ಪರಿಪಾಠಕ್ಕೆ ದಾರಿ ತೋರಿಸಿತು. ಕೃಷಿಕನ ಜೊತೆ ಸೇರಿಕೊಂಡ ಕುರಿ ಕಾಯುವವ, ವಲಸೆ ಹೋಗದ ಮತ್ತು ಅರೆ-ಅಲೆಮಾರಿ ಸಮಾಜಗಳ ಅತ್ಯಾವಶ್ಯಕ ಸರಬರಾಜುಗಾರನಾಗಿ ರೂಪುಗೊಂಡ. ಮೆಕ್ಕೆಜೋಳ, ಮರಗೆಣಸು, ಮತ್ತು ಕೂವೆಗಿಡ (ಅರಾರೂಟು) ಇವೇ ಮೊದಲಾದವುಗಳನ್ನು 5200 BCಯಷ್ಟು ಹಿಂದೆಯೇ ಅಮೆರಿಕಾಗಳಲ್ಲಿ ಮೊದಲಿಗೆ ವಶಮಾಡಿಕೊಳ್ಳಲಾಯಿತು ಅಥವಾ ಒಗ್ಗಿಸಿಕೊಳ್ಳಲಾಯಿತು. ಆಲೂಗಡ್ಡೆ, ಟೊಮ್ಯಾಟೊ, ಮೆಣಸು, ಕುಂಬಳ, ಹುರುಳಿಯ ಹಲವಾರು ಪ್ರಬೇಧಗಳು , ತಂಬಾಕು, ಮತ್ತು ಇತರ ಹಲವಾರು ಸಸ್ಯಗಳನ್ನೂ ಸಹ ಹೊಸ ಪ್ರಪಂಚದಲ್ಲಿ ಅಭಿವೃದ್ಧಿಪಡಿಸಲಾಯಿತು. ದಕ್ಷಿಣ ಅಮೆರಿಕದ ಆಂಡೀಸ್ ಪರ್ವತದ ಬಹುಪಾಲು ಭಾಗದಲ್ಲಿ ಕಡಿದಾದ ಪರ್ವತಪಾರ್ಶ್ವಗಳ ವಿಸ್ತರಣ ವ್ಯವಸಾಯದ ಮೆಟ್ಟಿಲುಪಾತಿ ಪ್ರದೇಶವು ಇದ್ದುದರಿಂದ ಇದು ಸಾಧ್ಯವಾಯಿತು. ಸುಮೇರಿಯನ್ನರ ಪಥನಿರ್ಮಾಣದ ಕೌಶಲಗಳ ಮೇಲೆ ಗ್ರೀಕರು ಮತ್ತು ರೋಮನ್ನರು ನಿರ್ಮಿಸಿದರಾದರೂ, ಮೂಲಭೂತವಾದ ಕೆಲವೊಂದು ಹೊಸ ಪ್ರಗತಿಗಳನ್ನು ಅವರು ಸಾಧಿಸಿದರು. ದಕ್ಷಿಣದ ಗ್ರೀಕರು ಅತಿ ದುರ್ಬಲವಾದ ಅಥವಾ ಫಲವತ್ತತೆಯಿಲ್ಲದ ಮಣ್ಣುಗಳೊಂದಿಗೆ ಹೆಣಗಾಡಬೇಕಾಗಿ ಬಂದರೂ, ಕೆಲವು ವರ್ಷಗಳವರೆಗೆ ಒಂದು ಪ್ರಬಲ ಸಮಾಜವಾಗಿ ಹೊರಹೊಮ್ಮುವಲ್ಲಿ ಯಶಸ್ವಿಯಾದರು. ವ್ಯಾಪಾರೋದ್ದೇಶದ ಬೆಳೆಗಳನ್ನು ಸಾಗುವಳಿ ಮಾಡುವ ಕಡೆಗೆ ಒತ್ತು ನೀಡುವಲ್ಲಿ ರೋಮನ್ನರು ಖ್ಯಾತಿ ಪಡೆದಿದ್ದರು.
ಪ್ರಾಚೀನ ಮೂಲಗಳು
ಪಶ್ಚಿಮ ಏಷ್ಯಾ, ಈಜಿಪ್ಟ್, ಮತ್ತು ಭಾರತದ ಫಲವತ್ತಾದ ಅರ್ಧಚಂದ್ರಾಕಾರದ ಪ್ರದೇಶಗಳು, ಪ್ರಾಚೀನ ಕಾಲದ ಸಸ್ಯಗಳ ಯೋಜಿತ ಬಿತ್ತುವಿಕೆ ಹಾಗೂ ಫಸಲು ಸಂಗ್ರಹಣೆಯ ಪ್ರದೇಶಗಳಾಗಿದ್ದವು. ಈ ಸಸ್ಯಗಳನ್ನು ಇದಕ್ಕೂ ಮುಂಚಿತವಾಗಿ ಅರಣ್ಯದಲ್ಲಿ ಸಂಗ್ರಹಿಸಲಾಗಿತ್ತು. ಉತ್ತರ ಮತ್ತು ದಕ್ಷಿಣ ಚೀನಾ, ಆಫ್ರಿಕಾದ ಸಹೆಲ್, ನ್ಯೂ ಗಿನಿಯಾ ಮತ್ತು ಅಮೆರಿಕಗಳ ಹಲವಾರು ಪ್ರಾಂತ್ಯಗಳಲ್ಲಿ ಕೃಷಿಯ ಸ್ವತಂತ್ರ ಅಭಿವೃದ್ಧಿಯು ಕಂಡುಬಂತು. ಕೃಷಿಯ ನವಶಿಲಾಯುಗದ ಸಂಸ್ಥಾಪಕ ಬೆಳೆಗಳು ಎಂದು ಕರೆಯಲಾಗುವ ಎಂಟು ಬೆಳೆಗಳು ಈ ಕ್ರಮದಲ್ಲಿ ಕಾಣಿಸಿಕೊಂಡಿವೆ: ಮೊದಲು ಎಮರ‍್ ಗೋಧಿ ಮತ್ತು ಐನ್‌ಕಾರ್ನ್ ಗೋಧಿ, ನಂತರ ಸಿಪ್ಪೆಸುಲಿದ ಜವೆಗಿಡ (ಬಾರ್ಲಿ), ಬಟಾಣಿಗಳು, ಲೆಂಟಿಲ್‌ಗಳು, ಕಹಿ ವೆಚ್, ಕಡಲೆಗಳು ಮತ್ತು ಅಗಸೆ.7000 BCಯ ವೇಳೆಗೆ, ಸಣ್ಣ-ಮಟ್ಟದ ಕೃಷಿಯು ಈಜಿಪ್ಟ್‌ನ್ನು ತಲುಪಿತು. ಏನಿಲ್ಲವೆಂದರೂ 7000 BCಯಿಂದ ಭಾರತದ ಉಪಖಂಡವು ಗೋಧಿ ಮತ್ತು ಜವೆಯ ಬೇಸಾಯವನ್ನು ಕಂಡಿದೆ ಎಂಬುದನ್ನು ಬಲೂಚಿಸ್ತಾನ್‌ನ ಮೆಹ್ರ್‌ಗರ್ನಲ್ಲಿ ಕೈಗೊಳ್ಳಲಾದ ಪುರಾತತ್ವ ಶಾಸ್ತ್ರದ ಉತ್ಖನನವು ದೃಢೀಕರಿಸಿದೆ. 6000 BCಯ ಹೊತ್ತಿಗೆ, ಮಧ್ಯಮ-ಮಟ್ಟದ ಬೇಸಾಯವು ನೈಲ್ ನದಿಯ ದಡದ ಪ್ರದೇಶಗಳ ಮೇಲೆ ಭದ್ರವಾಗಿ ಬೇರೂರಿತು. ಸರಿ ಸುಮಾರು ಇದೇ ಸಮಯದಲ್ಲಿ, ಪೌರಸ್ತ್ಯ (ದೂರಪ್ರಾಚ್ಯ) ದೇಶಗಳಲ್ಲಿ ಕೃಷಿಯು ಸ್ವತಂತ್ರವಾಗಿ ಅಭಿವೃದ್ಧಿಯಾಗಿದ್ದೇ ಅಲ್ಲದೇ, ಗೋಧಿಯ ಬದಲಿಗೆ ಅಕ್ಕಿಯು ಪ್ರಧಾನ ಬೆಳೆಯಾಗಿ ರೂಪುಗೊಂಡಿತು. ಉದ್ದು, ಸೋಯಾ ಅವರೆ ಮತ್ತು ಅಝುಕಿ ಇವೇ ಮೊದಲಾದವುಗಳನ್ನು ಒಳಗೊಂಡಂತೆ ಕೆಸವು ಮತ್ತು ಹುರುಳಿಗಳ ತಳಿಗಳನ್ನು ಚೀನಾ ಮತ್ತು ಇಂಡೋನೇಷಿಯಾದ ಕೃಷಿಕರು ತಮ್ಮ ಅಧೀನಕ್ಕೆ ತರಲು ಪ್ರಾರಂಭಿಸಿದರು. ಶರ್ಕರಪಿಷ್ಟಗಳ ಈ ಹೊಸ ಮೂಲಗಳಿಗೆ ಪೂರಕವಾಗಿರಲು, ಈ ಪ್ರದೇಶಗಳಲ್ಲಿನ ನದಿಗಳು, ಸರೋವರಗಳು ಮತ್ತು ಕಡಲ ತೀರಗಳಲ್ಲಿ ಹುಟ್ಟಿಕೊಂಡ ಸುಸಂಘಟಿತವಾದ ಬಲೆ-ಮೀನುಗಾರಿಕೆಯು ಅತೀವ ಪ್ರಮಾಣದ ಅತ್ಯಾವಶ್ಯಕ ಪ್ರೊಟೀನುಗಳನ್ನು ಬಳಕೆಗೆ ತಂದಿತು. ಒಟ್ಟಾರೆಯಾಗಿ ಹೇಳುವುದಾದರೆ, ಬೇಸಾಯ ಮತ್ತು ಮೀನುಗಾರಿಕೆಯ ಈ ಹೊಸ ವಿಧಾನಗಳು ಮಾನವ ಸಮುದಾಯದ ಉತ್ಕರ್ಷವೊಂದನ್ನು ಹುಟ್ಟುಹಾಕಿದವು. ಈ ಉತ್ಕರ್ಷವು ಹಿಂದಿನ ಎಲ್ಲಾ ವಿಸ್ತರಣೆಗಳನ್ನೂ ಮೊಟುಕುಗೊಳಿಸಿದ್ದೇ ಅಲ್ಲದೇ, ಇಂದಿಗೂ ಮುಂದುವರಿಯುತ್ತಿದೆ. 5000 BCಯ ಹೊತ್ತಿಗೆ, ಸುಮೇರು ದೇಶದ ಜನರು ಸಾರಭೂತ ವ್ಯಾವಸಾಯಿಕ ಕೌಶಲಗಳನ್ನು ಅಭಿವೃದ್ಧಿಪಡಿಸಿದರು. ಜಮೀನಿನ ಬೃಹತ್ ಪ್ರಮಾಣದ ಸಾಂದ್ರೀಕೃತ ಸಾಗುವಳಿ, ಏಕ-ಬೆಳೆ ಬೆಳೆಯುವಿಕೆ, ಸುಸಂಘಟಿತ ನೀರಾವರಿ, ಮತ್ತು ಪರಿಣತಿ ಹೊಂದಿದ ಕೂಲಿ-ಕಾರ್ಮಿಕರ ಪಡೆಯ ಬಳಸುವಿಕೆ ಇವೇ ಮೊದಲಾದ ಕೌಶಲಗಳು ಇದರಲ್ಲಿ ಸೇರಿದ್ದವು. ಇನ್ನೂ ನಿರ್ದಿಷ್ಟವಾಗಿ ಹೇಳಬೇಕೆಂದರೆ, ಈಗ ಷತ್ ಅಲ್-ಅರಬ್ ಎಂದು ಹೆಸರಾಗಿರುವ ಜಲಮಾರ್ಗದ ಉದ್ದಕ್ಕೂ, ಅದರ ಪರ್ಷಿಯನ್ ಕೊಲ್ಲಿ ನದೀಮುಖಜಭೂಮಿಯಿಂದ ಟೈಗ್ರಿಸ್ ಮತ್ತು ಯೂಫ್ರಟಿಸ್ ನದಿಗಳ ಸಂಗಮಸ್ಥಾನದವರೆಗೆ ಈ ಪರಿಪಾಠ ಕಂಡುಬಂತು. ಕಾಡೆತ್ತು ಮತ್ತು ಕಾಡುಕುರಿಗಳನ್ನು ಕ್ರಮವಾಗಿ ದನ ಮತ್ತು ಕುರಿಗಳಂತೆ ಸಾಕುವ ಪರಿಪಾಠವು ಆಹಾರ/ನೂಲು ಪದಾರ್ಥಗಳಿಗಾಗಿ ಮತ್ತು ಹೊರೆಹೊರುವ ಕೆಲಸಕ್ಕೆಂದು ಬೃಹತ್-ಪ್ರಮಾಣದಲ್ಲಿ ಪ್ರಾಣಿಗಳನ್ನು ಬಳಸುವ ಪರಿಪಾಠಕ್ಕೆ ದಾರಿ ತೋರಿಸಿತು. ಕೃಷಿಕನ ಜೊತೆ ಸೇರಿಕೊಂಡ ಕುರಿ ಕಾಯುವವ, ವಲಸೆ ಹೋಗದ ಮತ್ತು ಅರೆ-ಅಲೆಮಾರಿ ಸಮಾಜಗಳ ಅತ್ಯಾವಶ್ಯಕ ಸರಬರಾಜುಗಾರನಾಗಿ ರೂಪುಗೊಂಡ. ಮೆಕ್ಕೆಜೋಳ, ಮರಗೆಣಸು, ಮತ್ತು ಕೂವೆಗಿಡ (ಅರಾರೂಟು) ಇವೇ ಮೊದಲಾದವುಗಳನ್ನು 5200 BCಯಷ್ಟು ಹಿಂದೆಯೇ ಅಮೆರಿಕಾಗಳಲ್ಲಿ ಮೊದಲಿಗೆ ವಶಮಾಡಿಕೊಳ್ಳಲಾಯಿತು ಅಥವಾ ಒಗ್ಗಿಸಿಕೊಳ್ಳಲಾಯಿತು. ಆಲೂಗಡ್ಡೆ, ಟೊಮ್ಯಾಟೊ, ಮೆಣಸು, ಕುಂಬಳ, ಹುರುಳಿಯ ಹಲವಾರು ಪ್ರಬೇಧಗಳು , ತಂಬಾಕು, ಮತ್ತು ಇತರ ಹಲವಾರು ಸಸ್ಯಗಳನ್ನೂ ಸಹ ಹೊಸ ಪ್ರಪಂಚದಲ್ಲಿ ಅಭಿವೃದ್ಧಿಪಡಿಸಲಾಯಿತು. ದಕ್ಷಿಣ ಅಮೆರಿಕದ ಆಂಡೀಸ್ ಪರ್ವತದ ಬಹುಪಾಲು ಭಾಗದಲ್ಲಿ ಕಡಿದಾದ ಪರ್ವತಪಾರ್ಶ್ವಗಳ ವಿಸ್ತರಣ ವ್ಯವಸಾಯದ ಮೆಟ್ಟಿಲುಪಾತಿ ಪ್ರದೇಶವು ಇದ್ದುದರಿಂದ ಇದು ಸಾಧ್ಯವಾಯಿತು. ಸುಮೇರಿಯನ್ನರ ಪಥನಿರ್ಮಾಣದ ಕೌಶಲಗಳ ಮೇಲೆ ಗ್ರೀಕರು ಮತ್ತು ರೋಮನ್ನರು ನಿರ್ಮಿಸಿದರಾದರೂ, ಮೂಲಭೂತವಾದ ಕೆಲವೊಂದು ಹೊಸ ಪ್ರಗತಿಗಳನ್ನು ಅವರು ಸಾಧಿಸಿದರು. ದಕ್ಷಿಣದ ಗ್ರೀಕರು ಅತಿ ದುರ್ಬಲವಾದ ಅಥವಾ ಫಲವತ್ತತೆಯಿಲ್ಲದ ಮಣ್ಣುಗಳೊಂದಿಗೆ ಹೆಣಗಾಡಬೇಕಾಗಿ ಬಂದರೂ, ಕೆಲವು ವರ್ಷಗಳವರೆಗೆ ಒಂದು ಪ್ರಬಲ ಸಮಾಜವಾಗಿ ಹೊರಹೊಮ್ಮುವಲ್ಲಿ ಯಶಸ್ವಿಯಾದರು. ವ್ಯಾಪಾರೋದ್ದೇಶದ ಬೆಳೆಗಳನ್ನು ಸಾಗುವಳಿ ಮಾಡುವ ಕಡೆಗೆ ಒತ್ತು ನೀಡುವಲ್ಲಿ ರೋಮನ್ನರು ಖ್ಯಾತಿ ಪಡೆದಿದ್ದರು.
ಮಧ್ಯಕಾಲೀನ ಯುಗ
ಮಧ್ಯಕಾಲೀನ ಯುಗದ ಅವಧಿಯಲ್ಲಿ, ಉತ್ತರ ಆಫ್ರಿಕಾ, ಸಮೀಪ ಪ್ರಾಚ್ಯ, ಮತ್ತು ಯುರೋಪ್‌ನ ಕೃಷಿಕರು ವ್ಯಾವಸಾಯಿಕ ತಂತ್ರಜ್ಞಾನಗಳ ಬಳಕೆಯನ್ನು ಕಾರ್ಯರೂಪಕ್ಕೆ ತರಲು ಆರಂಭಿಸಿದರು. ದ್ರವಚಾಲಿತ (ಹೈಡ್ರಾಲಿಕ್) ಮತ್ತು ದ್ರವಸ್ಥಿತಿಶಾಸ್ತ್ರೀಯ (ಹೈಡ್ರೋಸ್ಟಾಟಿಕ್) ತತ್ವಗಳನ್ನು ಆಧರಿಸಿದ ನೀರಾವರಿ ವ್ಯವಸ್ಥೆಗಳು, ನೋರಿಯಾಸ್‌ಗಳು, ನೀರೆತ್ತುವ ಯಂತ್ರಗಳಂಥ ಯಂತ್ರವ್ಯವಸ್ಥೆಗಳು, ಅಣೆಕಟ್ಟೆಗಳು, ಮತ್ತು ಜಲಾಶಯಗಳು ಈ ತಂತ್ರಜ್ಞಾನಗಳಲ್ಲಿ ಸೇರಿದ್ದವು. ಬೆಳೆಗಳ ಸರದಿಯ ಒಂದು ಮೂರು-ಕ್ಷೇತ್ರದ ವ್ಯವಸ್ಥೆ ಮತ್ತು ಮೋಲ್ಡ್‌ಬೋರ್ಡ್ ನೇಗಿಲು ಇವುಗಳ ನೂತನ ಸೃಷ್ಟಿಯೊಂದಿಗೆ ಈ ತಂತ್ರಜ್ಞಾನಗಳೂ ಸೇರಿಕೊಂಡು ವ್ಯಾವಸಾಯಿಕ ದಕ್ಷತೆಯನ್ನು ಮಹತ್ತರವಾಗಿ ಸುಧಾರಿಸಿದವು.
ಆಧುನಿಕ ಯುಗ
1492ರ ನಂತರ, ಈ ಮುಂಚೆ ಸ್ಥಳೀಯವಾಗಿದ್ದ ಬೆಳೆಗಳು ಹಾಗೂ ಜಾನುವಾರು ತಳಿಗಳ ಜಾಗತಿಕ ವಿನಿಮಯವೊಂದು ಕಂಡುಬಂತು. ಈ ವಿನಿಮಯದಲ್ಲಿ ಸೇರಿದ್ದ ಪ್ರಮುಖ ಬೆಳೆಗಳ ಪೈಕಿ ಟೊಮ್ಯಾಟೊ, ಮೆಕ್ಕೆಜೋಳ, ಆಲೂಗಡ್ಡೆ, ಮರಗೆಣಸು, ಕೋಕೋ ಮತ್ತು ತಂಬಾಕು ಮೊದಲಾದವು ಹೊಸ ಪ್ರಪಂಚದಿಂದ ಹಳೆಯದಕ್ಕೆ ಹೋದರೆ, ಹಲವಾರು ಪ್ರಬೇಧಗಳ ಗೋಧಿ, ಮಸಾಲೆ ಪದಾರ್ಥಗಳು, ಕಾಫಿ, ಮತ್ತು ಕಬ್ಬು ಮೊದಲಾದವು ಹಳೆಯ ಪ್ರಪಂಚದಿಂದ ಹೊಸದಕ್ಕೆ ಪ್ರವೇಶಿಸಿದವು. ಹಳೆಯ ಪ್ರಪಂಚದಿಂದ ಹೊಸದಕ್ಕೆ ರಫ್ತಾದ ಅತಿಮುಖ್ಯವಾದ ಪ್ರಾಣಿಗಳಲ್ಲಿ ಕುದುರೆ ಮತ್ತು ನಾಯಿ (ಕೊಲಂಬಸ್-ಪೂರ್ವ ಅಮೆರಿಕಾಗಳಲ್ಲಿ ನಾಯಿಗಳ ಅಸ್ತಿತ್ವವಾಗಲೇ ಇತ್ತಾದರೂ, ಕೃಷಿಯ ಕೆಲಸಗಳಿಗೆ ಸೂಕ್ತವಾಗುವ ಸಂಖ್ಯೆಗಳು ಹಾಗೂ ತಳಿಗಳ ಸ್ವರೂಪದಲ್ಲಿ ಅವು ಇರಲಿಲ್ಲ) ಸೇರಿದ್ದವು. ಸಾಮಾನ್ಯವಾಗಿ ಆಹಾರಕ್ಕಾಗಿ ಬಳಸುವ ಪ್ರಾಣಿಗಳಲ್ಲವಾದರೂ, ಕುದುರೆ (ಕತ್ತೆಗಳು ಮತ್ತು ಸಣ್ಣ ತಳಿಯ ಕುದುರೆಗಳನ್ನು ಒಳಗೊಂಡಂತೆ) ಮತ್ತು ನಾಯಿಗಳು ಪಶ್ಚಿಮಾರ್ಧ-ಗೋಳದ ಕೃಷಿಭೂಮಿಗಳಲ್ಲಿನ ಉತ್ಪಾದನಾ ಪಾತ್ರಗಳ ಅವಶ್ಯಕತೆಗಳನ್ನು ಶೀಘ್ರವಾಗಿ ತುಂಬಿದವು.
ಆಲೂಗಡ್ಡೆಯು ಉತ್ತರ ಯುರೋಪ್‌ನಲ್ಲಿ ಒಂದು ಅತಿಮುಖ್ಯವಾದ ಪ್ರಧಾನ ಬೆಳೆಯಾಗಿ ಮಾರ್ಪಟ್ಟಿತು. 16ನೇ ಶತಮಾನದಲ್ಲಿ ಪೋರ್ಚುಗೀಸರಿಂದ ಪರಿಚಯಿಸಲ್ಪಟ್ಟಾಗಿನಿಂದ, ಮೆಕ್ಕೆಜೋಳ ಮತ್ತು ಮರಗೆಣಸು ಆಫ್ರಿಕಾದ ಸಾಂಪ್ರದಾಯಿಕ ಬೆಳೆಗಳನ್ನು ಸ್ಥಾನಪಲ್ಲಟಗೊಳಿಸಿ, ಖಂಡದ ಅತಿ ಮುಖ್ಯವಾದ ಪ್ರಧಾನ ಆಹಾರ ಬೆಳೆಗಳಾಗಿ ಸ್ಥಾನ ಕಂಡುಕೊಂಡಿವೆ. 1800ರ ದಶಕದ ಆರಂಭದ ವೇಳೆಗೆ, ವ್ಯಾವಸಾಯಿಕ ಕೌಶಲಗಳು, ಸಲಕರಣೆಗಳು, ಬೀಜದ ದಾಸ್ತಾನುಗಳು ಮತ್ತು [[ಬೆಳೆಸಲಾದ ಗಿಡಗಳ ಅಲಂಕಾರಿಕ ಅಥವಾ ಪ್ರಯೋಜನಕಾರಿ ಗುಣಲಕ್ಷಣಗಳ ಕಾರಣದಿಂದಾಗಿ ಅವುಗಳನ್ನು ಆಯ್ಕೆ ಮಾಡಿ, ಒಂದು ಅನನ್ಯ ಹೆಸರನ್ನು ನೀಡಲಾಯಿತು]]. ಇದು ಎಷ್ಟರಮಟ್ಟಿಗೆ ಸುಧಾರಣೆ ಕಂಡಿತೆಂದರೆ, ಪ್ರತಿ ಜಮೀನಿನ ತಲಾ ಇಳುವರಿಯು ಮಧ್ಯಕಾಲೀನ ಯುಗದಲ್ಲಿ ಕಂಡಿದ್ದಕ್ಕಿಂತ ಅನೇಕ ಪಟ್ಟು ಹೆಚ್ಚಿನ ಪ್ರಮಾಣದಲ್ಲಿತ್ತು. 19ನೇ ಮತ್ತು 20ನೇ ಶತಮಾನಗಳ ಅಂತ್ಯದ ವೇಳೆಗೆ ಯಂತ್ರಗಳ ಬಳಕೆಯಲ್ಲಿ, ಅದರಲ್ಲೂ ನಿರ್ದಿಷ್ಟವಾಗಿ ಟ್ರಾಕ್ಟರ್‌ನ ಬಳಕೆಯ ಸ್ವರೂಪದಲ್ಲಿ ತೀವ್ರ ಹೆಚ್ಚಳ ಕಂಡುಬರುವುದರೊಂದಿಗೆ, ಬೇಸಾಯದ ಚಟುವಟಿಕೆಗಳನ್ನು ವೇಗವಾಗಿ ಮತ್ತು ಹಿಂದೆ ಅಸಾಧ್ಯವಾಗಿದ್ದ ಪ್ರಮಾಣದಲ್ಲಿ ಕೈಗೊಳ್ಳುವುದು ಕಾರ್ಯಸಾಧ್ಯವಾಯಿತು. ಈ ಪ್ರಗತಿಗಳಿಂದಾಗಿ ಅಮೆರಿಕ ಸಂಯುಕ್ತ ಸಂಸ್ಥಾನಗಳು, ಅರ್ಜೆಂಟೈನಾ, ಇಸ್ರೇಲ್, ಜರ್ಮನಿ, ಮತ್ತು ಇನ್ನು ಕೆಲವು ಇತರ ರಾಷ್ಟ್ರಗಳಲ್ಲಿನ ನಿರ್ದಿಷ್ಟ ಆಧುನಿಕ ಕೃಷಿಜಮೀನುಗಳಿಗೆ ಸಾಮರ್ಥ್ಯ ಮೆರೆಯಲು ಅವಕಾಶವಾದಂತಾಯಿತು, ಮತ್ತು ತಲಾ ಜಮೀನಿಗೆ ಕಾರ್ಯಸಾಧ್ಯವೆಂದು ಹೇಳಬಹುದಾದ ಉನ್ನತ-ಗುಣಮಟ್ಟದ ಉತ್ಪನ್ನಗಳ ಪ್ರಮಾಣಗಳನ್ನು ಉತ್ಪಾದಿಸುವಲ್ಲಿ ಆ ರಾಷ್ಟ್ರಗಳಿಗೆ ಸಾಧ್ಯವಾಯಿತು. ಅಮೋನಿಯಂ ನೈಟ್ರೇಟ್ ಸಂಶ್ಲೇಷಿಸುವುದಕ್ಕಾಗಿರುವ ಹೇಬರ‍್-ಬೋಷ್ ವಿಧಾನವು ಒಂದು ಪ್ರಮುಖ ಅದ್ಭುತ ಪ್ರಗತಿಯನ್ನು ಪ್ರತಿನಿಧಿಸಿದ್ದಲ್ಲದೇ, ಹಿಂದಿದ್ದ ನಿರ್ಬಂಧಗಳನ್ನು ದಾಟಿಬರಲು ಬೆಳೆಯ ಇಳುವರಿಗಳಿಗೆ ಅವಕಾಶಮಾಡಿಕೊಟ್ಟಿತು. ಹೆಚ್ಚಳಗೊಂಡ ಉತ್ಪಾದಕತೆ, ಸಂಶ್ಲೇಷಿತ ರಸಗೊಬ್ಬರಗಳು ಮತ್ತು ಕೀಟನಾಶಕಗಳ ಬದಲಿಗೆ ಕಾರ್ಮಿಕರ ಬಳಕೆ, ಜಲಮಾಲಿನ್ಯ, ಹಾಗೂ ಕೃಷಿ ಅನುದಾನಗಳು- ಇವು ಕಳೆದ ಶತಮಾನದಲ್ಲಿನ ಕೃಷಿಯ ಗುಣಲಕ್ಷಣಗಳಾಗಿದ್ದವು. ಇತ್ತೀಚಿನ ವರ್ಷಗಳಲ್ಲಿ, ಸಾಂಪ್ರದಾಯಿಕ ಕೃಷಿಯ ಬಾಹ್ಯ ಪರಿಸರೀಯ ಪರಿಣಾಮಗಳಿಗೆ ಪ್ರತಿಯಾಗಿ ಹಿಂಬಡಿತ ಕಂಡುಬಂದಿದ್ದು, ಇದರ ಪರಿಣಾಮವಾಗಿ ಸಾವಯವ ಆಂದೋಲನ ಉಂಟಾಗಿದೆ. ಏಕದಳ ಧಾನ್ಯಗಳಾದ ಅಕ್ಕಿ, ಮೆಕ್ಕೆಜೋಳ, ಮತ್ತು ಗೋಧಿ ಮೊದಲಾದವು ಮಾನವನ ಆಹಾರ ಸರಬರಾಜಿಗೆ 60%ರಷ್ಟು ಪಾಲನ್ನು ನೀಡುತ್ತವೆ. 1700 ಮತ್ತು 1980ರ ದಶಕದ ನಡುವೆ, “ವಿಶ್ವಾದ್ಯಂತದ ಸಾಗುವಳಿಗೊಳಗಾದ ಜಮೀನಿನ ಒಟ್ಟು ವಿಸ್ತೀರ್ಣವು 466%ನಷ್ಟು ಹೆಚ್ಚಿತು ಮತ್ತು ಇಳುವರಿಗಳು ಗಮನಸೆಳೆಯುವ ರೀತಿಯಲ್ಲಿ ಹೆಚ್ಚಿದವು. ಆಯ್ದ-ತಳಿಯ ಉನ್ನತ ಇಳುವರಿಯ ಪ್ರಬೇಧಗಳು, ರಸಗೊಬ್ಬರಗಳು, ಕೀಟನಾಶಕಗಳು, ನೀರಾವರಿ, ಮತ್ತು ಯಂತ್ರೋಪಕರಣಗಳೇ ಈ ಸಾಧನೆಗೆ ಕಾರಣವಾದವು. ಉದಾಹರಣೆಗೆ, ನೀರಾವರಿಯ ಕಾರಣದಿಂದಾಗಿ ಪೂರ್ವ ಕೊಲೊರೆಡೋದಲ್ಲಿನ ಮೆಕ್ಕೆಜೋಳದ ಇಳುವರಿಯು ಗಣನೀಯವಾಗಿ ಹೆಚ್ಚಿತು. ಅಂದರೆ, 1940ರಿಂದ 1997ರವರೆಗಿನ ಇಳುವರಿಯು 400ರಿಂದ 500%ನಷ್ಟು ಪ್ರಮಾಣಕ್ಕೆ ಏರಿತು. ಆದರೂ, ಸಾಂದ್ರೀಕೃತ ಕೃಷಿಯ ಸಮರ್ಥನೀಯತೆಯ ಕುರಿತಾಗಿ ಕಳವಳಗಳು ಹುಟ್ಟಿಕೊಳ್ಳುತ್ತಲೇ ಬಂದಿವೆ. ಭಾರತ ಮತ್ತು ಏಷ್ಯಾದಲ್ಲಿ ಸಾಂದ್ರೀಕೃತ ಕೃಷಿಯು ಕಡಿಮೆಯಾಗುತ್ತಿರುವ ಗುಣಮಟ್ಟದ ಮಣ್ಣಿನೊಂದಿಗೆ ಸಂಬಂಧಹೊಂದಿದೆ, ಮತ್ತು ರಸಗೊಬ್ಬರಗಳು ಹಾಗೂ ಕೀಟನಾಶಕಗಳ ಬಳಕೆಯಿಂದಾಗಿ ಪರಿಸರದ ಮೇಲಾಗುವ ಪ್ರಭಾವಗಳ ಕುರಿತೂ ಕಳವಳಗಳು ಹೆಚ್ಚುತ್ತಿವೆ. ಅದರಲ್ಲೂ ನಿರ್ದಿಷ್ಟವಾಗಿ, ಜನಸಂಖ್ಯೆಯು ಹೆಚ್ಚಾದಂತೆ ಆಹಾರದ ಬೇಡಿಕೆಯ ಪ್ರಮಾಣವೂ ವಿಸ್ತರಿಸುವುದರಿಂದ ಈ ಕಳವಳದ ಪ್ರಮಾಣ ಹೆಚ್ಚು ಎನ್ನಲೇಬೇಕು. ಸಾಂದ್ರೀಕೃತ ಕೃಷಿಯಲ್ಲಿ ವಿಶಿಷ್ಟವಾಗಿ ಬಳಸಲಾಗಿರುವ ಏಕಫಸಲಿನ ಕೃಷಿಗಳು ಕೀಟಗಳ ಸಂಖ್ಯೆಯನ್ನು ಹೆಚ್ಚಿಸುವ ಸ್ವರೂಪದ್ದಾಗಿದ್ದು, ಈ ಕೀಟಗಳನ್ನು ಕೀಟನಾಶಕಗಳ ಮೂಲಕ ನಿಯಂತ್ರಿಸಲಾಗುತ್ತದೆ. “ದಶಕಗಳಿಂದಲೂ ಉತ್ತೇಜಿಸಲ್ಪಡುತ್ತಲೇ ಇರುವ ಹಾಗೂ ಗಮನಾರ್ಹ ಪ್ರಮಾಣದ ಯಶಸ್ಸನ್ನೂ ಹೊಂದಿರುವ” ಸಂಯೋಜಿತ ಕೀಟ ನಿರ್ವಹಣೆಯು (ಇಂಟಿಗ್ರೇಟೆಡ್ ಪೆಸ್ಟ್ ಮ್ಯಾನೇಜ್‌ಮೆಂಟ್-IPM), ಕೀಟನಾಶಕಗಳ ಬಳಕೆಯ ಮೇಲೆ ಯಾವುದೇ ಗಮನಾರ್ಹವಾದ ಪರಿಣಾಮವನ್ನೂ ಬೀರಿಲ್ಲ. ಕೀಟನಾಶಕಗಳ ಬಳಕೆಯನ್ನು ಕಾರ್ಯನೀತಿಗಳು ಪ್ರೋತ್ಸಾಹಿಸುವುದು ಮತ್ತು IPM ಎಂಬುದು ಜ್ಞಾನ-ಕೇಂದ್ರಿತವಾಗಿರುವುದೇ ಇದಕ್ಕೆ ಕಾರಣವೆನ್ನಬಹುದು. ಏಷ್ಯಾದಲ್ಲಿನ ಅಕ್ಕಿಯ ಇಳುವರಿಯನ್ನು “ಹಸಿರು ಕ್ರಾಂತಿ”ಯು ಗಣನೀಯವಾಗಿ ಹೆಚ್ಚಿಸಿದೆಯಾದರೂ, ಕಳೆದ 15–20 ವರ್ಷಗಳಲ್ಲಿ ಇಳುವರಿಯಲ್ಲಿ ಹೆಚ್ಚಳ ಕಂಡಬಂದಿಲ್ಲ ಎಂಬುದು ಗಮನಾರ್ಹ. ತಳೀಯ “ಇಳುವರಿ ಸಾಮರ್ಥ್ಯ”ವು ಗೋಧಿಗೆ ಸಂಬಂಧಿಸಿದಂತೆ ಹೆಚ್ಚಿಸಲ್ಪಟ್ಟಿದೆ. ಆದರೆ ಅಕ್ಕಿಗೆ ಸಂಬಂಧಿಸಿದ ಇಳುವರಿ ಸಾಮರ್ಥ್ಯವು 1966ರಿಂದಲೂ ಹೆಚ್ಚಾಗಿಲ್ಲ, ಮತ್ತು ಮೆಕ್ಕೆಜೋಳಕ್ಕೆ ಸಂಬಂಧಿಸಿದ ಇಳುವರಿ ಸಾಮರ್ಥ್ಯವು “35 ವರ್ಷಗಳಲ್ಲಿ ಎಷ್ಟು ಬೇಕೋ ಅಷ್ಟು ಹೆಚ್ಚಳವಾಗಿದೆ”. ಕಳೆನಾಶಕ-ನಿರೋಧಕ ಕಳೆಗಳು ಹೊರಹೊಮ್ಮಲು ಒಂದು ಅಥವಾ ಎರಡು ದಶಕಗಳು ಆಗಬಹುದು ಹಾಗೂ, ಕೀಟನಾಶಕಗಳಿಗೆ ಕೀಟಗಳು ಪ್ರತಿರೋಧವನ್ನು ಒಡ್ಡುವಂತಾಗಲು ಸುಮಾರು ಒಂದು ದಶಕದೊಳಗಿನ ಅವಧಿಯು ಸಾಕಾಗಬಹುದು. ಬೆಳೆಗಳ ಸರದಿಯ ಪರಿಪಾಠವು ಪ್ರತಿರೋಧಕತೆಗಳನ್ನು ತಡೆಯುವಲ್ಲಿ ಸಹಾಯಮಾಡುತ್ತದೆ. ಕಳೆದ ಹತ್ತೊಂಬತ್ತನೇ ಶತಮಾನದಿಂದೀಚೆಗಿನ ವ್ಯಾವಸಾಯಿಕ ಪರಿಶೋಧನಾ ಸಾಹಸಕಾರ್ಯಗಳು, ವಿಶ್ವದ ವಿವಿಧ ಪ್ರದೇಶಗಳಲ್ಲಿನ ಹೊಸ ಜಾತಿಗಳು ಮತ್ತು ಹೊಸ ವ್ಯಾವಸಾಯಿಕ ಅಭ್ಯಾಸಗಳು ಅಥವಾ ಪರಿಪಾಠಗಳನ್ನು ಕಂಡುಕೊಳ್ಳುವುದಕ್ಕಾಗಿ ಕೈಗೊಳ್ಳಲ್ಪಟ್ಟಿವೆ. ಫ್ರಾಂಕ್ ಎನ್. ಮೇಯೆರ‍್ ಎಂಬುವವ ಹಣ್ಣು- ಮತ್ತು ಕಾಯಿಯನ್ನು ಸಂಗ್ರಹಿಸುವುದಕ್ಕಾಗಿ 1916ರಿಂದ 1918ರವರೆಗೆ ಕೈಗೊಂಡ ಚೀನಾ ಮತ್ತು ಜಪಾನ್‌ನ ಯಾತ್ರೆಯು ಇಂಥ ಎರಡು ಆರಂಭಿಕ ಸಾಹಸಕಾರ್ಯಗಳಲ್ಲಿ ಸೇರಿವೆ. ಮತ್ತು ಚೀನಾ, ಜಪಾನ್, ಹಾಗೂ ಕೊರಿಯಾ ದೇಶಗಳಿಗೆ 1929ರಿಂದ 1931ರವರೆಗೆ ಡಾರ್ಸೆಟ್-ಮೋರ್ಸ್ ಕೈಗೊಂಡ ಪೌರಸ್ತ್ಯ ವ್ಯಾವಸಾಯಿಕ ಪರಿಶೋಧನಾ ಸಾಹಸಕಾರ್ಯವು ಕೂಡಾ ಇದಕ್ಕೆ ಮತ್ತೊಂದು ಉದಾಹರಣೆ. ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ ಕಂಡುಬಂದಿದ್ದ ಸೋಯಾ-ಅವರೆ ಕೃಷಿಯಲ್ಲಿನ ಪ್ರಗತಿಯನ್ನು ಬೆಂಬಲಿಸುವುದಕ್ಕೋಸ್ಕರ ಸೋಯಾ-ಅವರೆಯ ಜನನ ದ್ರವ್ಯವನ್ನು ಸಂಗ್ರಹಿಸಲು ಆತ ಈ ಯಾತ್ರೆಯನ್ನು ಕೈಗೊಂಡಿದ್ದ. 2005ರಲ್ಲಿ, ಚೀನಾದ ವ್ಯಾವಸಾಯಿಕ ಉತ್ಪನ್ನವು ವಿಶ್ವದಲ್ಲೇ ಅತಿ ಹೆಚ್ಚಿನ ಪ್ರಮಾಣದ್ದಾಗಿದ್ದು, ಅದು ವಿಶ್ವದ ಪಾಲಿನ ಸರಿಸುಮಾರು ಆರನೇ-ಒಂದು ಭಾಗದಷ್ಟಿತ್ತು. ಇದನ್ನನುಸರಿಸಿದ ಸ್ಥಾನಗಳಲ್ಲಿ EU, ಭಾರತ ಮತ್ತು USA ಇದ್ದವು ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿಯು ಮಾಹಿತಿ ನೀಡಿದೆ.[ಸಾಕ್ಷ್ಯಾಧಾರ ಬೇಕಾಗಿದೆ] ಕೃಷಿಯ ಸಮಗ್ರ ಅಂಶದ ಉತ್ಪಾದಕತೆಯನ್ನು ಅರ್ಥಶಾಸ್ತ್ರಜ್ಞರು ಅಳೆಯುತ್ತಾರೆ. ಇದರ ನೆರವಿನಿಂದ ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿನ ಕೃಷಿಯು 1948ರಲ್ಲಿ ಇದ್ದುದಕ್ಕಿಂತ ಸರಿಸುಮಾರು 2.6 ಪಟ್ಟು ಹೆಚ್ಚು ಉತ್ಪಾದನಾಶೀಲವಾಗಿದೆ ಎಂಬುದು ತಿಳಿದುಬಂದಿದೆ. US, ಕೆನಡಾ, ಫ್ರಾನ್ಸ್, ಆಸ್ಟ್ರೇಲಿಯಾ, ಅರ್ಜೆಂಟೈನಾ ಮತ್ತು ಥೈಲೆಂಡ್ – ಈ ಆರು ದೇಶಗಳು ಧಾನ್ಯದ ರಫ್ತುಗಳ 90%ನಷ್ಟು ಭಾಗವನ್ನು ಸರಬರಾಜು ಮಾಡುತ್ತವೆ. ಆಲ್ಜೀರಿಯಾ, ಇರಾನ್, ಈಜಿಪ್ಟ್, ಮತ್ತು ಮೆಕ್ಸಿಕೊ, ಸೇರಿದಂತೆ ಅಸಂಖ್ಯಾತ ಮಧ್ಯಮ-ಗಾತ್ರದ ದೇಶಗಳಲ್ಲಿ ಈಗಾಗಲೇ ಬೃಹತ್ ಪ್ರಮಾಣದ ಧಾನ್ಯದ ಆಮದುಗಳೆಡೆಗೆ ಉತ್ತೇಜಿಸುತ್ತಿರುವ ಜಲ ಕೊರತೆಗಳು, ಅತಿ ಶೀಘ್ರದಲ್ಲಿಯೇ ಅದೇ ಸ್ಥಿತಿಯನ್ನು ಚೀನಾ ಅಥವಾ ಭಾರತದಂಥ ಬೃಹತ್ ರಾಷ್ಟ್ರಗಳಲ್ಲೂ ಉಂಟುಮಾಡಬಹುದು.
ಆಧಾರ: wikipedia