ಭಾರತದಲ್ಲಿ ಪ್ರತೀವರ್ಷ 2 ಲಕ್ಷ ಜನರು ಕಿಡ್ನಿ ಸಮಸ್ಯೆಯಿಂದ ಸಾವನ್ನಪ್ಪುತ್ತಿದ್ದಾರೆ. ಅದರಲ್ಲಿ ಸುಮಾರು 40% ಮಹಿಳೆಯರು. ಭಾರತದಲ್ಲಿರುವ ಕಿಡ್ನಿ ರೋಗಿಗಳಲ್ಲಿ ಶೇ. 90ರಷ್ಟು ಜನರು ತಮ್ಮ ಕಾಯಿಲೆಯನ್ನು ಗುಣಪಡಿಸಲು ವೆಚ್ಚ ಭರಿಸಲು ಶಕ್ತಿ ಇಲ್ಲದವರು!
ಕಿಡ್ನಿ ಸಮಸ್ಯೆ ಹೆಚ್ಚಾಗಿ ಮಧುಮೇಹಿಗಳಲ್ಲಿ ಕಂಡು ಬರುತ್ತದೆ. ಭಾರತ ಮಧುಮೇಹಿಗಳ ದೇಶವೆಂದೇ ಗುರುತಿಸಲ್ಪಟ್ಟಿದೆ. ಆದ್ದರಿಂದಲೇ ಕಿಡ್ನಿ ಸಮಸ್ಯೆಯೂ ಹೆಚ್ಚಾಗುತ್ತಿದೆ. ಹೃದಯಾಘಾತ, ಅಧಿಕ ರಕ್ತದೊತ್ತಡ, ಮನೆಯಲ್ಲಿ ಯಾರಾದೂ ಕಿಡ್ನಿ ಸಮಸ್ಯೆಗೆ ಒಳಗಾಗಿದ್ದರೆ, 60 ವರ್ಷದ ಮೇಲ್ಪಟ್ಟವರಲ್ಲಿ ಕಿಡ್ನಿ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತದೆ. ಅದಲ್ಲದೆ ಒಬೆಸಿಟಿ, ಕೊಲೆಸ್ಟ್ರಾಲ್, ಮೂತ್ರ ವಿಸರ್ಜನೆಗೆ ತೊಂದರೆ ಈ ರೀತಿಯ ಸಮಸ್ಯೆಗಳಿಂದ ಕೂಡ ಕಿಡ್ನಿ ಹಾಳಾಗುತ್ತದೆ.
ಕಿಡ್ನಿಯ ಆರೋಗ್ಯಕ್ಕೆ ಈ ಕೆಳಗಿನ 10 ಕಾರ್ಯಗಳನ್ನು ಮಾಡುವುದು ಒಳ್ಳೆಯದು:
ದಿನಾ ವ್ಯಾಯಾಮ ಮಾಡಿ: ವ್ಯಾಯಾಮ ಸಾಕಷ್ಟು ಕಾಯಿಲೆಗಳಿಗೆ ಮದ್ದಾಗಿರುವಾಗ ದಿನದಲ್ಲಿ 30 ನಿಮಿಷವನ್ನು ವ್ಯಾಯಾಮಕ್ಕಾಗಿ ಮೀಸಲಿಡುವುದು ಒಳ್ಳೆಯದಲ್ಲವೇ?
ನೋವು ನಿವಾರಕ ಮಾತ್ರೆಗಳು: ಮೈಕೈ ನೋವು ಎಂದು ಹೆಚ್ಚು ನೋವು ನಿವಾರಕ ಮಾತ್ರೆಗಳನ್ನು ನುಂಗಬಾರದು. ಇದನ್ನು ಅತೀಯಾಗಿ ತಿನ್ನುವುದರಿಂದ ಕಿಡ್ನಿಯ ಆರೋಗ್ಯ ಹಾಳಾಗುತ್ತದೆ.
[sociallocker]ತೂಕ: ದೇಹದ ತೂಕ ಹೆಚ್ಚಾಗುತ್ತಿದ್ದರೆ ಅದರತ್ತ ಗಮನ ಕೊಡುವುದು ಒಳ್ಳೆಯದು. ದೇಹದ ತೂಕ ಹೆಚ್ಚಾದರೆ ಕಿಡ್ನಿ ಸಮಸ್ಯೆ ಮಾತ್ರವಲ್ಲ ಮತ್ತಿತರ ಅನೇಕ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.ಆಹಾರಕ್ರಮ: ಕಿಡ್ನಿ ಆರೋಗ್ಯಕ್ಕೆ ಆಹಾರಕ್ರಮ ಹೇಗಿರಬೇಕೆಂದು ಹೇಳಿದ್ದೇವೆ, ಅದನ್ನು ಪಾಲಿಸಿ (ಕ್ಲಿಕ್ ಮಾಡಿ). ದಿನಾ 8-10 ಗ್ಲಾಸ್ ನೀರು ಕುಡಿಯಿರಿ.
ಮನೆಯಲ್ಲಿ ಯಾರಿಗಾದರೂ ಇದೆಯೇ?: ಮನೆಯಲ್ಲಿ ಅಪ್ಪ-ಅಮ್ಮ, ಅಜ್ಜ ಹೀಗೆ ಯಾರಿಗಾದರೂ ಕಿಡ್ನಿ ಸಮಸ್ಯೆ ಇದ್ದರೆ ನೀವು ಕೂಡ ಒಮ್ಮೆ ಪರೀಕ್ಷೆ ಮಾಡಿಸಿಕೊಳ್ಳುವುದು ಒಳ್ಳೆಯದು.
ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿಡಿ: ಕೊಲೆಸ್ಟ್ರಾಲ್ ಹೆಚ್ಚಾದರೆ ಕಿಡ್ನಿ ಸಮಸ್ಯೆ ಉಂಟಾಗುವುದು. ನಿಯಮಿತ ವ್ಯಾಯಾಮ, ಉತ್ತಮವಾದ ಆಹಾರಕ್ರಮ ಪಾಲಿಸುವವರಿಗೆ ಕೊಲೆಸ್ಟ್ರಾಲ್ ಉಂಟಾಗುವುದಿಲ್ಲ.
ಕಿಡ್ನಿ ಕಾಯಿಲೆ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಿ: ಕಿಡ್ನಿ ಕಾಯಿಲೆ ಏಕೆ ಬರುತ್ತದೆ, ಬರದಂತೆ ತಡೆಯಲು ಏನು ಮಾಡಬೇಕು ಎಂಬುದನ್ನು ತಿಳಿದುಕೊಂಡರೆ ಕಿಡ್ನಿ ಕಾಯಿಲೆ ಬರುವುದನ್ನು 90% ತಡೆಯಬಹುದು.
ಮದ್ಯಪಾನ ಗುಡ್ ಬೈ: ಮದ್ಯಪಾನದಿಂದ ಕಿಡ್ನಿ ಬೇಗನೆ ಹಾಳಾಗುವುದು. ಕಿಡ್ನಿ ಸಮಸ್ಯೆ ಇರುವವರು ಸಿಗರೇಟ್ ಎಳೆಯುವುದು, ಮದ್ಯ ಕುಡಿಯುವುದು ಮಾಡಿದರೆ ಪ್ರಾಣಕ್ಕೆ ಅಪಾಯ.
ವರ್ಷಕ್ಕೊಮ್ಮೆ ಪರೀಕ್ಷೆ ಮಾಡಿಸಿ: ಮಧ್ಯ ವಯಸ್ಸು ದಾಟಿದವರು ವರ್ಷಕ್ಕೊಮ್ಮೆ ವೈದ್ಯರ ಬಳಿ ಕಿಡ್ನಿ ಆರೋಗ್ಯದ ಬಗ್ಗೆ ತಪಾಸಣೆ ಮಾಡಿಸಿ ತಿಳಿದುಕೊಳ್ಳುವುದು ಒಳ್ಳೆಯದು.
http://kannada.boldsky.com/health/wellness/2013/ways-keep-kidneys-healthy-004997.html#slide2276[/sociallocker]
ಶ್ರೇಯಾಂಕ
ಮತ ನೀಡಿ ಬಲಪಡಿಸಿ ಮತ್ತು ಸಾಮಾಜಿಕ ಜಾಲ ತಾಣದಲ್ಲಿ ಹಂಚಿರಿ.