Kaalappa Pattara

ಕಾಳಪ್ಪ ಪತ್ತಾರ

ಕಾಳಪ್ಪ ಪತ್ತಾರ (೨೮-೦೩-೧೯೧೬ – ೦೫-೦೮-೧೯೭೧): ಸಂಗೀತ, ಚಿತ್ರಕಲೆ, ರಂಗಭೂಮಿ ಮುಂತಾದ ಹಲವಾರು ಪ್ರಕಾರಗಳಲ್ಲಿ ಪರಿಣತಿ ಪಡೆದಿದ್ದ ಕಾಳಪ್ಪ ಪತ್ತಾರ ರವರು ಹುಟ್ಟಿದ್ದು ರಾಯಚೂರು ಜಿಲ್ಲೆಯ ತಳಕಲ್ಲಿನ ಬಡ ವಿಶ್ವಕರ್ಮ ಕುಟುಂಬದಲ್ಲಿ.

ಶಾಲಾ ಕಾಲೇಜಿನ ನಾಲ್ಕು ಗೋಡೆಗಳ ಮಧ್ಯೆ ಕುಳಿತು ಕಲಿತದ್ದಕ್ಕಿಂತ ವಿಶಾಲ ಪ್ರಪಂಚದಲ್ಲಿ ತಿರುಗಾಟದ ಅನುಭವದಿಂದ ಕಲಿತದ್ದೇ ಅಪಾರ.
೧೯೩೪ರಲ್ಲಿ ಗಾಂಧೀಜಿಯವರು ಕರ್ನಾಟಕ ಪ್ರವಾಸ ಕೈಗೊಂಡು ಬಳ್ಳಾರಿಯಿಂದ ರೈಲಿನಲ್ಲಿ ಗದಗಿಗೆ ಪ್ರಯಾಣಿಸುವಾಗ ಭಾನಾಪುರ ರೈಲು ನಿಲ್ದಾಣದಲ್ಲಿ ತಂಗಿದ್ದಾಗ ಗಾಂಧೀಜಿಯವರ ಚಿತ್ರವನ್ನು ಅಲ್ಲೇ ಬರೆದು ಅರ್ಪಿಸಿದರಂತೆ. ಕಲಾಭಿಜ್ಞತೆಗೆ ಮಾರುಹೋಗಿ ತಮ್ಮ ಭಾವಚಿತ್ರವನ್ನು ಹರಾಜು ಹಾಕಿ ಬಂದ ಹಣವನ್ನು ಹರಿಜನ ನಿಧಿಗೆ ಸೇರಿಸಿದರಂತೆ.

ಬಾಲ್ಯದ ನೆನಪಿನಿಂದಲೇ ಆಗಿಹೋಗಿದ್ದ ಸಂತ ಅಜ್ಜಾರಾಮರ ಚಿತ್ರ ಬರೆದು ಮಠಕ್ಕೆ ಕೊಟ್ಟಿದ್ದು, ಹೈದರಾಬಾದ್ ನಿಜಾಮ ಸಂಬಂಧಿ ಸಾಲಾರಜಂಗರಿಂದಲೂ ದೊರೆತ ಪ್ರಶಂಸೆ. ಸಂತ, ಮಹಾತ್ಮ, ಮಹಾರಾಜರೆನ್ನದೆ ಸಾಮಾನ್ಯರ ಚಿತ್ರಗಳನ್ನೂ ಬಿಡದೆ ರಚನೆ.

ಶೃಂಗೇರಿ ಮಠಕ್ಕಾಗಿ ಲಕ್ಷ್ಮೀ, ಶಾರದೆ, ಕೃಷ್ಣರ ಬಂಗಾರದ ಮೂರ್ತಿ, ಪೂಜಾ ಸಾಮಗ್ರಿಗಳ ಸಂಪುಟ, ಮಣ್ಣು, ಹಿತ್ತಾಳೆ, ಬೆಳ್ಳಿ ಮುಂತಾದುವುಗಳಿಂದಲೂ ಕೃತಿ ರಚನೆ.

ರಂಗಭೂಮಿ ಪ್ರೀತಿಯ ಮತ್ತೊಂದು ಕ್ಷೇತ್ರ. ಯಲಬುರ್ಗಿ, ಕೊಪ್ಪಳ, ಗಂಗಾವತಿ ತಂಡಗಳು ಅಭಿನಯಿಸುತ್ತಿ‌ದ್ದ ನಾಟಕಗಳಿಗೆ ನೀಡಿದ ಸಂಗೀತ. ತಳಕಲ್ಲಿನ ಪ್ರಸಿದ್ಧ ರೆಡ್ಡಿ ಕಂಪನಿ, ಹಮ್ಮಿಗಿ ನೀಲಕಂಠಪ್ಪನವರ ಭುವನೇಶ್ವರಿ ನಾಟ್ಯ ಸಂಘ ಮುಂತಾದುವುಗಳಲ್ಲಿ ನಾರದ, ಕೃಷ್ಣನ ಪಾತ್ರ.

ತಬಲ ವಾದಕರಾಗಿ ತೋರಿದ ಅಪ್ರತಿಮ ಪ್ರತಿಭೆ, ಹಿಂದೂಸ್ತಾನಿ ಗಾಯಕರಾದ ಮಲ್ಲಿಕಾರ್ಜುನ ಮನಸೂರರ, ಹೇಮರೆಡ್ಡಿ ನಾಟಕಕ್ಕೆ ತಬಲವಾದನ, ಭೀಮಸೇನ ಜೋಶಿ, ಗಂಗೂಬಾಯಿ ಹಾನಗಲ್, ಕುಮಾರ ಗಂಧರ್ವ ಮೊದಲಾದವರಿಗೆ ನೀಡಿದ ತಬಲ ಸಾಥಿ. ಪ್ರಸಿದ್ಧರ ನಡುವೆ ಇದ್ದರೂ ಪ್ರಚಾರ ಬಯಸದೆ ನೇಪಥ್ಯದಲ್ಲೆ ಸರಿದು ಹೋದ ವ್ಯಕ್ತಿ.
ಲೇಖಕರು: ವೈ.ಎನ್. ಗುಂಡೂರಾವ್‌
ಕಣಜ

ಶ್ರೇಯಾಂಕ

ಕನ್ನಡ ಭೂಮಿಯನ್ನು ಚಿನ್ನದ ಭೂಮಿಯನ್ನಾಗಿ ಮಾಡಿದ ಧೀಮಂತ ವ್ಯಕ್ತಿಗಳಿಗೆ ನಮ್ಮ ನಮನಗಳು.

User Rating: 4.9 ( 1 votes)

ಇವುಗಳೂ ನಿಮಗಿಷ್ಟವಾಗಬಹುದು

A V Prakasha

ಎ.ವಿ. ಪ್ರಕಾಶ್‌

ಎ.ವಿ. ಪ್ರಕಾಶ್‌ (೧೫.೧೦.೧೯೪೫): ಪ್ರಖ್ಯಾತ ಕೊಳಲುವಾದಕರಾದ ಎ.ವಿ. ಪ್ರಕಾಶ್‌ರವರು ಹುಟ್ಟಿದ್ದು ಬೆಂಗಳೂರು. ತಂದೆ ಪ್ರಖ್ಯಾತ ಪಿಟೀಲು ವಿದ್ವಾಂಸರಾದ ಎ.ಕೆ. ವೆಂಕಟನಾರಾಯಣ, …

Leave a Reply

Your email address will not be published. Required fields are marked *