Wednesday , 22 May 2024

ಕವಿರಾಜ ಮಾರ್ಗದ ದುಷ್ಕರ-ಕಾಮ್ಯಬಂಧಗಳು

ಕವಿರಾಜ ಮಾರ್ಗದ ದುಷ್ಕರ-ಕಾಮ್ಯಬಂಧಗಳು

ಶ್ಲೋಕ || ಗೋ[1]ಮೂತ್ರಿಕಂ ಸಯಮಕಂ ಪ್ರೇಮದಿಂ ಗೋಪಿತ-ಕ್ರಿಯಂ |

ಶ್ರೀಮದರ್ಧ-ಭ್ರಮಂ ಚಕ್ರ-ನಾಮಂ ಮುರಜ-ಬಂಧಕಂ ||೧೧೨||

೧೧೦. ‘ಭೂರಮಣಿಯ ಸಸ್ಯಸಂಪದದ ಸುಂದರಗುಣಾತಿಶಯಸಮೇತಳಾಗಿ ಅಧಿಕಶೋಭೆಯನ್ನು ತಳೆದಳು’ ಎಂಬುದು ದಕ್ಷಿಣಮಾರ್ಗ. ‘ಸಮುದ್ರವೆಂಬ ಒಡ್ಯಾಣದಿಂದ ಬಳಸಲ್ಪಟ್ಟ ನಡುವುಳ್ಳ ಭೂದೇವಿ ಅಧಿಕಶೋಭೆಯಿಂದ ಸೊಬಗುವಡೆಯಿತು’. ಎಂಬುದು ಉತ್ತರಾಪಥ. ಇಲ್ಲಿ ಮೊದಲ ಉದಾಹರಣೆಯಲ್ಲಿ ಭೂದೇವಿಯನ್ನು ಕುರಿತ ಕ್ರಿಯಾಪದ ಸ್ರೀಲಿಂಗದಲ್ಲಿದ್ದರೆ ಎರಡನೆಯ ಉದಾಹರಣೆಯಲ್ಲಿ ನಪುಂಸಕಲಿಂಗದಲ್ಲಿದೆ. ಇದೇ ಭೇದ. ಎರಡೂ ಸರಿಯೆ.

೧೧೧. ನಿರ್ಣಯವಾಗಿ ಹೀಗೆ ಮಾರ್ಗದ್ವಯದಲ್ಲಿಯೂ ಯೋಗ್ಯಪ್ರಯೋಗ ಯಾವುದೆಂಬುದರ ಬಗೆಗೆ ಒಂದಿಷ್ಟನ್ನು ದಿಗ್ದರ್ಶನಕ್ಕಾಗಿ ಹೇಳಿರುವೆನು. ಗುಣಾತಿಶಯವುಳ್ಳ ಕವಿಗಳು ಇದನ್ನು ಕಡೆಗಣಿಸದೆ ತಮಗೆ ಹೇಗೆ ಸರಿ ಕಾಣುವುದೋ ಹಾಗೆ ಕಾವ್ಯದಲ್ಲಿ ಪ್ರಯೋಗ ಮಾಡಬಹುದು.

೧೧೨. ‘ಗೋಮೂತ್ರಿಕ’, ‘ಯಮಕ’, ಗೋಪಿತಕ್ರಿಯ(=‘ಕ್ರಿಯಾಗುಪ್ತ’), ‘ಅರ್ಧಭ್ರಮ’, ‘ಚಕ್ರಬಂಧ’, ‘ಮುರಜಬಂಧ’-

ಇವು ದುಷ್ಕರ-ಕಾವ್ಯಂಗಳ್ ಸವಿಶೇಷ[2]ವಿವರ್ತಿಗಳ್ |

ಸುವಿಚಾತಿತಮೀ ತೋರ್ಪೆ[3]ನಿವಱಾ ಲಕ್ಷ್ಯಭೇದಮಂ ||೧೧೩||

[4]ಪದ-ಪಾದ-ಸಮಸ್ತಾರ್ಧ-ಗತ-ಭೇದ-ಚತುಷ್ಟಯಂ |

ವಿದಿತಾಳಂಕ್ರಿಯಾಧಾರಂ ಮೊದಲ್ ಪೇ[5]ೞದುದುಷ್ಕರಂ ||೧೧೪||

ಮುನ್ನಂ ತನ್ನಂ ತಾನೆ ತಾನೇ ಕೆನ್ನಂ ಕೆನ್ನಂ ನಿರಂತರಂ |

ಭಿನ್ನಂ ಬಂದಿಪ್ಪನಂತಿನ್ನುಂ ತನ್ನಿಂ ತನಗಮೇವಳೋ ||೧೧೫||

೧೧೩. ಇವು ವಿಶಿಷ್ಟವಾದ ಹೆಸರುಳ್ಳ “ದುಷ್ಕರ” ಕಾವ್ಯಗಳು. *ಎಂದರೆ ಕವಿಯ ಬುದ್ಧಿಚಮತ್ಕಾರಕ್ಕೆ ಸವಾಲಿನಂತಿರುವ ರಚನೆಗಳು*. ಪರಿಶೀಲಿಸಿ ಇವುಗಳಿಗೆ ಬೇರೆ ಬೇರೆ ಲಕ್ಷ್ಯಗಳನ್ನು ತೋರಿಸುವೆನು-

೧೧೪ ರಿಂದ ೧೫೨. *ಇದರಲ್ಲಿ ಮೊದಲ ಮೂವತ್ತು ಶ್ಲೋಕಗಳು ದುಷ್ಕರ ಕಾವ್ಯಬಂಧಗಳನ್ನೂ ಯಮಕಾಲಂಕಾರಭೇದಗಳನ್ನೂ ಕುರಿತವು; ಮುಂದಿನ ಹತ್ತು “ಪ್ರಹೇಳಿಕೆ” ಅಥವಾ ಗೂಢ ಒಗಟೆಗಳ ಪ್ರಕಾರಗನ್ನು ಕುರಿತವು. ದಂಡಿಯ ಗ್ರಂಥದಲ್ಲಿ ಇವುಗಳ ಚರ್ಚೆ ವಿಸ್ತಾರವಾಗಿ ಬರುವಂತೆ ಭಾರವಿ-ಮಾಘಾದಿಗಳ ಮಹಾಕಾವ್ಯಗಳಲ್ಲಿಯ ಇಡಿಯ ಸರ್ಗಗಳೇ ಇಂತಹ ಉಕ್ತಿಚಮತ್ಕಾರಗಳಿಗೆ ಮೀಸಲಾದವನ್ನು ನೋಡುತ್ತೇವೆ. ಆ ಪಂಡಿತಾಭಿರುಚಿ ಬಹಳಕಾಲ ಬಾಳಲಿಲ್ಲ. ಈ ಗ್ರಂಥಕಾರನೂ ಅವುಗಳ ಯತಾವತ್ತಾದ ಪರಿಚಯವನ್ನು ಕನ್ನಡದಲ್ಲಿ ಮಾಡಿಕೊಡಲು ಹೊರಟಿರುವುದು ಅಂದಿನ ಪಂಡಿತಾಭಿರುಚಿಯ ದ್ಯೋತಕವಾಗಿದೆ. ಆದರೆ ಹಸ್ತಪ್ರತಿಗಳ ಲಿಪಿಕಾರರ ಅಜ್ಞತೆಯಿಂದಾಗಿ ಮೊದಲೇ ಕೂಟಪ್ರಶ್ನೆಗಳಾಗಿರುವ ದುಷ್ಕರ ಚಿತ್ರ ಬಂಧಾದಿ ಲಕ್ಷ್ಯಗಳು ಈಗ ಬಿಡಿಸಲಾರದ ಕಗ್ಗಂಟಿನಂತಾಗಿವೆ. ಪಾಠಗಳನ್ನು ಪರಿಷ್ಕರಿಸುವುದಕ್ಕೂ ಸಂಪಾದಕರಿಗೆ ಇಲ್ಲಿ ವ್ಯಾಕರಣ, ಛಂದಸ್ಸು ಮುಂತಾದ ಗಟ್ಟಿ ಆಧಾರಗಳಿಲ್ಲ. ಇವನ್ನು ಅರ್ಥಯಿಸಬೇಕಾದರೆ ಸಂಸ್ಕೃತದಲ್ಲಿಯೂ “ಏಕಾಕ್ಷರಕೋಶ”ಗಳ ಸಹಾಯವನ್ನು ಪಡೆಯುವ ಪರಿಪಾಠವುಂಟು. ಒಂದೊಂದು ಅಕ್ಷರದಲ್ಲೂ ಸ್ವರ ವ್ಯಂಜನಗಳನ್ನೇ ಬೇರೆಬೇರೆಯಾಗಿ ವಿಭಾಗಮಾಡಿ ಒಂದು ತೀತಿಯ ಅರ್ಥ ಹೊರಡಿಸಿ ಸಮಾಧಾನಪಟ್ಟುಕೊಳ್ಳುವ ಆ ಪ್ರಾಚೀನ ಪಾಂಡಿತ್ಯ ಪ್ರಸ್ತುತ ಸಂಪಾದಕನ ಪ್ರಜ್ಞಾಮಿತಿಯನ್ನು ಮೀರಿರುವುದರಿಂದಲೂ, ಕಥಂಚಿತ್ ಬರೆದ ವ್ಯಾಖ್ಯಾನ ಸಹ ಇಂದಿನ ಓದುಗರಿಗೆ ವಿರಸವಾದೀತೆಂಬ ಅಂಜಿಕೆಯಿರುವುದರಿಂದರೂ, ಈ ದುಷ್ಕರ ಶ್ಲೋಕಗಳಿಗೆಲ್ಲ ಹೊಸ ಅನುವಾದ ಬರೆಯುವ ದುಸ್ಸಾಹಸವನ್ನು ಇಲ್ಲಿ ಕೈಬಿಡಲಾಗಿದೆ.*

ಶ್ಲೋಕ || *ಪೀನಂ ಕಾಡುಮದಕ್ಕೇಂ ಕೆಳಮಾನಳಿನಂ ಮದಾ |

ತಾನಿಂತಳಿಜನಂಕನಾ…ನದೆಸನೆದೇನನಾ || (?) ||೧೧೬||

ನಾದಭೇದನನಾದಾನಾ ನಾದಾ[6]ನಾಮದನೋದನಾ |

ನಾದನೋದಮನಾದಾ[7]ನಾ ನಾ[8]ದಾನಾನದ ಭೇದನಾ ||(?) ||೧೧೭||

ಅರ್ಧ-ಗತಪ್ರತ್ಯಾಗತ

ನಾನಮಾನಮಸೇನಾಸೇಸೇನಾಸೇ ಮ[9]ನಮಾನನಾ |

ದೀನಮಾನಮನಾನಾದೀದೀನಾನಾಮನಮಾನದೀ ||೧೧೮||

ಗತ-ಪ್ರತ್ಯಾಗತೋಪಾತ್ತ-ಚಿತುಷ್ಟಯ-ವಿಕಲ್ಪಮೀ |

ಪ್ರತೀತಿ ತೋರ್ಪೆನಾ ಗೂಢ-ಚತುರ್ಥಂಗಳ ಲಕ್ಷ್ಯಮಂ ||೧೧೯||

ಗೂಢ-ಚತುರ್ಥ

ಘನ-ಸ್ತನಿತಮುಂ ಕೇಕಿ-ಸ್ವನಮುಂ ನೀರ ಧಾರೆಯುಂ |

ಮನಂ ಬೆರ್ಚಿರ್ಕುಮಿಂತೆತ್ತಂ ಘ[10]ನಮಿಂತು ಘನಸ್ತನಿ ||೧೨೦||

ಏಕಾಕ್ಷರ

ನಿಂನಿಂ ನಿಂನನೆನೇ ನಿನ್ನಾ ನಂನಾ ನಾನನನಂ ನನಂ |

ನಿಂನೆನಂ ನಂನನಾನಾನಾ ನಿಂನಿನೇನನನೂನನಂ ||೧೨೧||

ದ್ವಕ್ಷರ

ಮಾನಿನೀ ಮುನ್ನಮಾಂ ನೀನೆ ನೀನಾನಿಂನನುಮಾನಮೇಂ |

ಮಾನಮಾನಾನೆ ಮುಂನಂನೈ ಮಾನಮಾನನಮುಂನಿನಾ ||೧೨೨||

ಅತಾಲವ್ಯ

ಶ್ಲೋಕ || ಕಿಡಿಪಂ ಬಾರಗೇ ಮೆಯ್ಯಂ ಕಿಡಿಪಂ ಕಿಡಿಪಂತೆ ಮುಂ |

ಕಿಡಿಪಂ ಪೋಕುಮೇ ತಾಮುಂ ಕಿಡಿಸಲ್ ಸುಡಿಸೋಲಮೇ ||೧೨೩||

ಮಾರುತೀ ಪರಮೋದಾರ-ದಾರನೊಳ್ ಕೂಡು ನಲ್ಲನೊಳ್ |

ಸಾರ ಕಾದಂಬಿನೀ-ನಾಥನಾರೂಢ-ಗುಣ-ಧಾಮನೊಳ್ ||೧೨೪||

ನಿರೋಷ್ಠ್ಯ

ನರನಾಯಕನಂ ನಿಂದಾನಿರದೀಗಳೆ ಕಾಂತನಂ |

ನೆರೆದೇನದಱಂದಿಲ್ಲಾ ನೆರೆದಿರ್ದಾಗೆನಾಗೆನೇ ||೧೨೫||

ಸರ್ವತೋಭದ್ರ

ದೀನಾದಿನಾ ನಾದಿನಾದೀ ನಾನಿಂನಾನೇ ನೆನಾನಿನಾ |

ದೀನಾದಾನಿ ನಿದಾನಾದೀ ನಾನೇನಿಂನ ನನಿಂನೆನಾ |

ನಿರುತ್ತರ

ಪೆಱನಾವಂ ಧರಾಚಕ್ರಕ್ಕೆಱೆಯಂ ಕೆಳೆಯಪ್ಪವಂ |

ನೆಱೆಯಾರೆಣೆಯೆಂಬನ್ನಂ ಕುಱತಬ್ಧಿಗೆ ಬನ್ನಮಂ ||೧೨೭||

ಗೋಮೂತ್ರಿಕೆ

ಜಲದಾಗಮದಿಂ ಚಿತ್ತ-ಸ್ಖಲಿತಂ ಕೇಕಿ-ನರ್ತನಂ |

ಜಲದಾಗಮದಿಂ ಚಿತ್ತ-ಸ್ಖಲಿತಂ ಕೇಳನಲ್ಲನಂ ||೧೨೮||

ಯಮಕ-ಭೇದಗಳು

ಯಮಕಂ ಪಾ-ಪಾದಾರ್ತ-ಸಮಶ್ಲೋಕಾದಿ-ಗೊಚರಂ |

ಪ್ರಮಿತಾದ್ಯಂತ-ದೂಷ್ಯೋ(-ಮಧೋ?)ಪಕ್ರಮಾನೇಕ-ಪ್ರಕಲ್ಪಿತಂ ||೧೨೯||

ತಾರಾ ಜಾನಕಿಯಂ ಪೋಗಿ ತಾರಾ-ತರಳ-ನೇತ್ರೆಯಂ |

ತಾರಾಧಿಪತಿ-ತೇಜಸ್ವಿ ತಾರಾದಿ-ವಿಜಯೋದಯಾ ||೧೩೦||

ಕೞಪಂ ತಂದು ನಿಂಕಮಿಂ(?) ಕೞಪಂ ಕಳಿವಂ ಚಲ

ಕ್ಕೞಪಂ ಕಂಜನೇತ್ರ…ಕೞಪಂ ಬೞಕಾಸನಂ ||೧೩೧||

ದಾರು-ದಾರುಣನಂ ದಾನ-ವಾರಿ-ವಾರಿತ-ಲೋಕನಂ |

ಬಾರ ಬಾ ರಣಮಂ ನೋಡಾ ಸಾರಸಾರಾಂಬುದಾಭಮಂ ||೧೩೨||

ಸಾರ-ಸಾರಸನಾದಾಮ-ಸಾರಸಾರಾ ನಿತಂಬೆಯಂ |

ತಾರಾ-ತಾರಾ-ತರಂಗಾಬಾ- ಕಾರತಾ-ರಮಣೀಯೆಯಂ ||೧೩೩||

ಅಜೇಯಂ ಪೋಲ್ಕುಮಾ ಮತ್ತಗಜಂ ವಾರಿಜ-ನಾಭನಂ |

ತ್ರಿಜಗನ್ನಾದನಂ ಮತ್ತಂ ನಿಜ-ನೀಳ-ಘನಾಭನಂ ||೧೩೪||

ಲೋಕ-ವೈದಿಕ-ಸಾಮೈಕ-ಲೋಕನಾಕಾರಕಾರಕಾ |

ನಾಕಿ ನೂತಪದವ್ಯಕ್ತಿ ಶ್ರೀಕಾಂತಾ ಮಮ ಕಾಮದಾ ||೧೩೫||

ವಾರಿವಾರಿಯೊಳಾದಾನಂ ವಾರಿವಾರಿವಿತರ್ಕಮಂ |

ವಾರಿವಾರಿಜವೋದಾನಂ ವಾರಿವಾರಿಜನಾಭನೊಳ್ ||೧೩೬||

ವರವಾರನಾರಿಯೊಳ್ ನೆರೆದೆವಾನೆಲ್ಲಿ ನೆರೆದೆ

ಪರವಾರನಾರಿಯೊಳ್ ನೆರೆದೆನಾನೆಲ್ಲಿ ನೀಂ

ಪರದರಂತರಿಪುದುವರಿಂತರಿಯನೆಲ್ಲಂ

ಪುರಿದು ಮಾಱದೆ ಕಾಣದಂತಿರಿಸಂಗಡಿಯೊಳ್ ||೧೩೭||

ತಿಳಿಗೊಳನಂ ಪೂಗೊಳನನದಂ ನೆಗೞೆ

ಮುಳಿದುಕೊಳ್ವ ಬಳಸೆ ನಾನದಂ ನೆ- |

ಗಳೆ ತಾನೆಡೆಮನಂಗಜನೆದಪ್ಪಲಾ

ಗಳೆ ನಂಬವನದೊಪ್ಪುವಂ ವನೇಚರಮದಾ ||೧೩೮||

ಅರ್ಧಭ್ರಮಣ

ನರದಾರಪರಾನೋನೇ ನರದಾರೇನರಾರಮಾ |

ಅರಿದಯ್ತಂದವದಾರಿಕ್ಕುಂ ಪರಿದಾನ ಪರಾದಿಯೆ ||೧೩೯||

ಮುರಜಬಂಧ

ವರದಾರಪರಾದನ್ಯಂ ಪರಿದಾನಪರಾದಮಂ |

ನೆರದೇವದಿ ರಾಜ್ಯನಂ ಪರಿಗೋನರರಾದಮಂ ||೧೪೦||

ಕ್ರಿಯಾಗೋಪಕ

ಅರಸಿಯ ದಿವ್ಯಸೇವಾದರದಿರದೀಗಡೆ ನಿ- |

ನ್ನರಸಿಯನೆಯ್ದುವಿನಂ ಪರಿಜನಮಂ ಕಳಿಪಿಂ ||೧೪೧||

ಚಕ್ರಬಂಧ

ಸ್ರಗ್ಧರಂವೃತ್ತಂ || ಸಂತಂ ಬಾೞ್ವುದು ಮೀಱದಾ ನರಪನೊಳ್ ಸೌಜನ್ಯ- ಲಕ್ಷ್ಮೀ-ಮದಾಂ

ಧಂ ತನ್ನಿಶ್ಚಯ ಮೆಚ್ಚಿನೀಂ ಪರಗುಣೌದಾರ್ಯಾಭಿಮಾನಂಗಳಿಂ |

ಪಿಂತಂ ನೋಡದೆ ಪಾ[11]ೞಗೆಟ್ಟೞಪಿನಿಂ ಬಾೞ್ವಂತೆ ಬಾೞ್ದಯ್ಯನಾ

ಸಂತಂ ತಾಂ ಪ[12]ಸತಂದನೞ್ತ ಪೆಱಗುಂ ದಾನಂಗಳಂ ಭೂಪನಾ ||೧೪೨||

‘ಪ್ರಹೇಳೀಕೆ’ ಇತ್ಯಾದಿ

ಗೀತಿಕೆ || ಅನುಗತಂ ಪೂರ್ವಕವಿಗಳ್

ನೆನೆದಿನ್ನುಂ ಪೆೞ್ದೆಂ ದುಷ್ಕರೋಕ್ತಿಯ- |

ನ್ನನುಗತ-ಕ್ರಮದೆ ಬಗೆದು ಹೇಳಿಕೆಯೊಳ್

ಜನಿತ-ವಿಭೇದಮುಮುಂ ಪೇೞ್ವೆಂ ಕಿಱದಂ ||೧೪೩||

ಗೀತಿಕೆ || ಭಾವೆಯುಂ ನುಸುಳುಮಸ್ಪಷ್ಟಾಕ್ಷರಮು-

ಮಾ ವರ್ಣ-ವ್ಯತ್ಯಯಮುಂ ಬಿಂದುಚ್ಯುತಿಯುಂ |

ಭಾವಿಸಿದೊರ್ನುಡಿಯುಂ ವರ್ಣಚ್ಯುತಮುಂ

ಕೇವಲಮವರ ಭೇದಮಂ ಸುಸಮಸ್ತಕಮಂ ||೧೪೪||

ಭಾವೆ

ಗೀತಿಕೆ || ಸವಿಹಿತಮಪ್ಪ ಕರ್ಣಪೂರೋತ್ಪಳಮಂ

ಧವಳ-ವಿ[13]ಲೋಚನೆಯ ಗು[14]ಣ-ಸುಂದರಮಂ |

ಕಿವಿವಂ ನೀಳ್ದ ನಯನ-ಯುಗದೊಳೊ-

ಪ್ಪುವವಳಾನವಯವದೇಕೆ ಕಳೆಯವೇೞ್ದೆಂ ಪ್ರಿಯೆಯಂ ||೧೪೫||

ನುಸುಳು

ಗೀತಿಕೆ || ತಿರಿವುದದೊಂದು ಚಕ್ರದೊಳೆ ನಿಂದು ದಿವಾ |

ಕರನೆ ಮತ್ತಱದು ಕಳೆವೊಡಂತದನಾವೆಡೆಯಿಂ- |

ದ[15]ರಮೆಯಾಗಿ ನೆಲಸಿ ಕೆಲಕಾಲದಿಂ

ಪೊರೆದಿರದೞದಬೞಕ ತಾ ನೆಲದೊಳ್ ||೧೪೬||

ಅಸ್ಪಷ್ಟಾಕ್ಷರ

ಗೀತಿಕೆ || ನೆಟ್ಟನೆ ತಾಂ ಸವಿಯೊಳೊಂದಿರೆ ಭೋಜನಮಾ-

ನಟ್ಟು ಬಡ್ಡಿಸು ನಾಮಱಯದೆನಸುಂ ಸವಿಯಂ |

ಪುಟ್ಟಿದಾಱುಮಱಯದದರ ಪೆಸರೊ-

ಳಟ್ಟುದಂ ಪೇೞೆ ಕೇ[16]ಳ್ದೆನೆಂದಱಯೆಂ ||೧೪೭||

ವರ್ಣವ್ಯತ್ಯಯ

ಗೀತಿಕೆ || ಅವನಾಮಕತ್ವಕ್ಷುಚಯಂ

ಕ್ರವನೊಚರಾಮಯದಷ್ಟಾಪಾಯದೆಗಳೊಳ್ |

ಸ[17]ವಿಸೆವಮಲಹೈವಸುಮುಕ್ತಿಮಹಾ

ದೇವ ನಿ[18]ನ್ನನ್ನನಪ್ಪೊನಸಹಾಯಗುಣಂ ||೧೪೮||

ಬಿಂದುಚ್ಯುತಕ

ಗೀತಿಕೆ || ಸೊಗಯಿಸುಗುಮಿಂದ್ರ-ನೀಲ-ಮಣಿ-ಸನ್ನಿಭದೊಳ್

ಮಿಗೆ ಜಳನಿಧಿಯೊಳಗುದಿತದಿಂದಿರದವೊಲ್ |

ನೆಗೆದತಿ-ಧವಳ-ಮೂರ್ತಿಗೆ ಘನ-ವಳಯ-ಸದಗ್ಧ-

ಗಗನದೊಳುೞದುೞದು ವಿಶಾಲಿತಾಶಾ-ವಳಯಂ ||೧೪೯||

ಒರ್ನುಡಿ

ಗೀತಿಕೆ || ಆವುದು ಬಾಗಿದುದುಮಧಿಕಂ ಬಸನಂ |

ಕೇವಳಮಾಗೆ ನೆಗೆವ್ಯದುಚಿತಾವಯವಂ |

ದೀವದಿಂ ನಿಂದು ಸಿತಗನಂ ನುಡಿವುದು

ಭಾವಿಸಿ ಬ[19]ಗೆಗೊಳ್ವದಾ ಕೊರ್ನದಿಯಂ ||೧೫೦||

ವರ್ಣಚ್ಯುತಕ

ಗೀತಿಕೆ || ತಳಮಳಗುತ್ತಂ ಜನಿತ-ನಿಜ-ಭೀತಿ-ಮನಂ-

ಗೊಳೆ ಕಳವಳಿಸಿ ಚ[20]ಲಿತನಿಲವಣ್ಮದೆ ಮೊ- |

ಕ್ಕಳಮೊಳಗೆ ಸುೞದರರಸಂ ಮನದೊಳ್

ಮುಳಿದಸಿಯನೆ ನೋಡಿ ಪರಿವಾರದವರ್ ||೧೫೧||

ಸಮಂತಿ(?)

ಗೀತಿಕೆ || ವಿಗಳಿತರಾಗನಾವೊಂ ನಿಂನಾವುದಱ

ಸೊಗಯಿಸುಗುಂ ಕಟಿಕತ್ವಮಂ ಸಮರ್ಥಬಲಂ |

ಬಗೆದೆನಗೊಯ್ಯನೆಸಗೆ[21]ಯಿದುವೊದಾ

ಲಗಲಲಾಟಿಸುಗುಮದೆ ಪೇೞ್ದೆಂ ಬನದೊಳ್ ||೧೫೨||

[1] ಪಾಠ ಅಧ್ಯಾಹೃತ, ಮಾತೃಕೆಗಳಲ್ಲಿ ತಪ್ಪಾಗಿದೆ-‘ಮುನಿಯ ಮತಂ’ ‘ಬ’ ಇತ್ಯಾದಿ.

[2] ವರ್ತಿಗಳ್ ‘ಸೀ; ಶ್ಲೋಕಾಕ್ಷರ ಒಂದು ಇಲ್ಲಿ ಕಡಿಮೆಯಾಗುತ್ತದೆ.

[3] ವಿವಱ ‘ಪಾ’, ಮಿವರೆ ‘ಬ’.

[4] ಪಾದಪಾದಸಮಸ್ತಾರ್ಧಂ ತದಭೇದಚತುಷ್ಟಯಂ ‘ಪಾ’.

[5] ಪೇೞ್ವುದು ‘ಪಾ, ಬ’.

* ಇದು ‘ಪಾ’ ಪಾಠ; ‘ಭಿಂನಂ ಕುಡುದಿದಕ್ಕೆಂ ಕೆಳಾದಾನಮಾನಳಿನಂ | ನಿಂನು ದಾತಾನಿಂತಳಿ ಜನಂಕನಾನದೆಸನೆ ದೇನನಾ || ಇದು ‘ಕ’ ಪಾಠ. ಎರಡೂ ಬಹು ಅಶುದ್ಧ; ಪರಿಷ್ಕರಿಸಲು ಬಾರವು.

[6] ದೀನಾಮ ‘ಪಾ’.

[7] ದೀನಾ ‘ಪಾ’.

[8] ನಾನಾದಾನಾ ‘ಪಾ’.

[9] ಮನನಾದಿನಾ ‘ಮ’.

[10] ಮನಮಿಂತು ಘನಸ್ವನಂ ‘ಪಾ’. ಇಲ್ಲಿ ಮತ್ತು ಮುಂದಿನ ಶ್ಲೋಕಗಳಲ್ಲಿ ‘ಮ’ ಪಾಠವನ್ನನು ಸರಿಸಿದೆ. ‘ಪಾ’, ‘ಕ’ಗಳಲ್ಲಿ ಅನೇಕ ಛಂದೋಭಂಗಯುಕ್ತ ಅಪಪಾಠಗಳಿವೆ.ಇವು ಅರ್ಥಶೂನ್ಯವಾದ್ದರಿಂದ ಇಲ್ಲಿ ವಿವರವಾಗಿ ಉಲ್ಲೇಖಿಸಿಲ್ಲ.

ಮೇಲೆ ಹೇಳಿದಂತೆ ಈ ದುಷ್ಕರ ಹಾಗೂ ಯಮಕೋದಾಹರನೆಗಳೆಲ್ಲ ಮಾತೃಕೆಗಳಲ್ಲಿ ಅಶುದ್ಧಭೂಯಿಷ್ಠವಾಗಿ ಇವುಗಳ ಅರ್ಥ ಕ್ಲಿಷ್ಟವಾಗುವುದರಿಂದ ಇವುಗಳ ಅಪಪಾಠಭೇದಗಳನ್ನು ಸೂಕ್ಷ್ಮವಾಗಿ ಕೊಡಲಾಗಿಲ್ಲ.

[11] ಪಾೞಗೆಟ್ಟುೞಪಿನಿಂ ‘ಪಾ’.

[12] ಪಸತಂದವೞ್ತೆ ‘ಪಾ’.

[13] ವಿಲೋಕನೆಯ ‘ಪಾ’.

[14] ಗುಣಮಂ ‘ಪಾ’.

[15] ದರೆಯಮೆಯೊರಿ ‘ಮ’ ‘ಕ’.

[16] ಕೇಳ ಱಯೆಂ ‘ಮ’.

[17] ಸೆವಿ ‘ಮ’.

[18] ನಿನನಂನನಪ್ಪೊನಂ ‘ಪಾ’.

[19] ಬಗೆಗೊಳದಾರ ‘ಮ’.

[20] ಚರಿತರೀಲವಣ್ಮುದೆ ‘ಕ’.

[21] ಗೆಯ್ದುವೊದಾ ‘ಕ’.

Kanaja

ಇವುಗಳೂ ನಿಮಗಿಷ್ಟವಾಗಬಹುದು

Kumaravyasa

ಕರ್ಣಾಟ ಭಾರತ ಕಥಾಮಂಜರಿ

ಕುಮಾರವ್ಯಾಸ ವಿಶಿಷ್ಟ ಶಕ್ತಿಯ ಸ್ವತಂತ್ರ ಕವಿ. ಕರ್ನಾಟ ಭಾರತ ಕಥಾ ಮಂಜರಿ ಅಥವಾ ಕುಮಾರವ್ಯಾಸ ಭಾರತ ಈತನ ಪ್ರಮುಖ ಕೃತಿ. …

Leave a Reply

Your email address will not be published. Required fields are marked *