ಕರ್ನಾಟಕಲ್ಲಿ ಪೊಲೀಸ್ ವ್ಯವಸ್ಥೆಗೆ ಸುಮಾರು 200ಕ್ಕೂ ಹೆಚ್ಚು ವರ್ಷದ ಇತಿಹಾಸ ಇದೆ. ಬೇರೆ ಬೇರೆ ಕಾಲಮಾನದಲ್ಲಿ ಬೇರೆ ಬೇರೆ ಥರ ವ್ಯವಸ್ಥೆಗಳನ್ನ ಕಂಡು ಬೆಳೆದಿದೆ ನಮ್ಮ ಕರ್ನಾಟಕ ಪೊಲೀಸ್ ವ್ಯವಸ್ಥೆ. ಬನ್ನಿ ಚುಟುಕಾಗಿ ಎಲ್ಲಾ ತಿಳ್ಕೊಳೋರಂತೆ…
1. ಮೊದಲು ನಮ್ಮಲ್ಲಿ ಪೋಲೀಸ್ನೋರು ಅಂತ ಯಾರೂ ಇರ್ಲಿಲ್ಲ
ಆದ್ರೆ ತೋಟಿ-ತಳವಾರರು, ಅಮಲ್ದಾರರು, ಕಟ್ಟುಬಿಡಿ, ನೀರಗಂಟೆ, ಹೀಗೆ ಬೇರೆ ಬೇರೆ ಹೆಸರಿನ ಕಸುಬಿನೋರು ಇವತ್ತು ಪೊಲೀಸ್ನೋರು ಮಾಡೋ ಬೇರ್ ಬೇರೆ ಕೆಲ್ಸ ಮಾಡ್ತಿದ್ರು.
2. ಮೈಸೂರು ಸಂಸ್ಥಾನದಲ್ಲಿ ಮೊದಲ ಸಲ ಪೊಲೀಸ್ ಅನ್ನೋ ಹುದ್ದೆ ಹುಟ್ಟಿಕೊಂಡಿದ್ದು ಮುಮ್ಮಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ
ರಾಜರ ಕೆಳಗಿದ್ದ ಒಂದು ಸೈನ್ಯದ ತುಕಡಿಗೆ ಬ್ರಿಟೀಶರು ಈ ಕೆಲಸ ಹಚ್ಚಿದರು. ಮೇಲ್ವಿಚಾರಣೆಗೆ ಬ್ರಿಟೀಶರ ಒಬ್ಬ ಅಧಿಕಾರೀನ ಕೂರ್ಸಿದ್ರು. ತಾಲೂಕ್ ಲೆವೆಲ್ಲಲ್ಲಿ ಅಮಲುದಾರರೇ ಪೊಲೀಸ್ ಮುಖ್ಯಸ್ಥರಾಗಿರ್ತಿದ್ರು.
3. ಸೈನ್ಯದ ತುಕಡಿಯಿಂದ 1817ರ ಹೊತ್ತಿಗೆ ಪೊಲೀಸ್ ಜವಾಬ್ದಾರಿ ಊರ ಪಟೇಲರಿಗೆ, ಶಾನುಭೋಗರಿಗೆ ಬಂತು
ಆದ್ರೆ ಔರ್ಗೆ ಈ ಕೆಲ್ಸಕ್ಕೆ ಯಾವ್ದೇ ಸಂಬಳ, ರಜ, ಓಡಾಡಕ್ ಗಾಡಿ ಅವೆಲ್ಲಾ ಕೊಡ್ತಿರ್ಲಿಲ್ಲ! ಆದ್ರೆ ಮಹಾರಾಜ್ರು ಔರ್ಗೆ ಭಕ್ಷೀಸ್ ಅಂತ ನೆಲ, ಬೇಳೆ-ಕಾಳು, ಹೀಗೆಲ್ಲಾ ಇನಾಮು ಕೊಡ್ತಿದ್ರಂತೆ.
4. ಏಕೀಕರಣಕ್ಕಿಂತ ಮುಂಚೆ ನಮ್ಮಲ್ಲಿ 4 ಕಡೆ 4 ತರಹ ಪೊಲೀಸ್ ವ್ಯವಸ್ಥೆ ಇತ್ತು
ಕರ್ನಾಟಕ ರಾಜ್ಯ ಆಗೋಕ್ಕೆ ಮೊದ್ಲು ನಮ್ ನಾಡು 4 ಪಾಲಾಗಿತ್ತು, ಹಾಗಾಗಿ ಮೈಸೂರು, ಬಾಂಬೆ ಕರ್ನಾಟಕ, ಹೈದರಾಬಾದ್ ಕರ್ನಾಟಕ, ಮದ್ರಾಸ್ ಪ್ರೆಸಿಡೆನ್ಸಿ – ಈ ಥರ ಬೇರ್ ಬೇರೆ ಕಡೆ ಬೇರ್ ಬೇರೆ ಥರ ಪೊಲೀಸ್ ವ್ಯವಸ್ಥೆ ಇತ್ತು.
5. ಬೆಳಗಾವಿ, ಧಾರವಾಡ, ಬಿಜಾಪುರ, ಕಾರವಾರಗಳಲ್ಲಿ ಪೊಲೀಸ್ ವ್ಯವಸ್ಥೆ ಶುರುವಾಗಿದ್ದು 1827ರಲ್ಲಿ
ಬಾಂಬೆ ಪ್ರೆಸಿಡೆನ್ಸಿಯೋರ ಕೆಳಗಿತ್ತು ಆ ಜಿಲ್ಲೆಗಳು.
6. ನಿಜಾಮರ ಆಳ್ವಿಕೇಲಿದ್ದ ಹೈದರಾಬಾದ್ ಕರ್ನಾಟಕದಲ್ಲಿ ಪೊಲೀಸರನ್ನ “ಸದರ್-ಅಲಿ-ಮೊಹಮ್” ಅನ್ತಾ ಇದ್ರಂತೆ
ಈ ಪ್ರದೇಶ ಭಾರತಕ್ಕೆ ಸೇರಿದ ಮೇಲೆ ಈ ವ್ಯವಸ್ಥೆ ನಿಲ್ತು.
7. 1853ರಲ್ಲಿ ಬ್ರಿಟೀಷರು ಪೊಲೀಸ್ ಕಾಯ್ದೆ ಅಂತ ತಂದ್ರು. ಆಗ ಲಾರ್ಡ್ ಕಬ್ಬನ್ ಪೋಲೀಸ್ ಕಮಿಶನರ್ ಆದರು
ಕಬ್ಬನ್ ಪಾರ್ಕಿಗೆ ಇವರ ಹೆಸ್ರೇ ಇಟ್ಟಿರೋದು.

8. ಪೊಲೀಸ್ ಕೆಲ್ಸಕ್ಕೆ ಸೇರೋರಿಗೆ ತರಬೇತಿ ಅಂತ ಶುರುವಾಗಿದ್ದು 1892ರಲ್ಲಿ
ಪರೀಕ್ಷೆ ನಡೆಸಿ ಪೊಲೀಸ್ ಕೆಲಸಕ್ಕೆ ಆಯ್ಕೆ ಮಾಡ್ಕೊಳ್ಳೋ ಪದ್ದತಿ ಬಂದಿದ್ದೇ ಆವಾಗ. ಅದಕ್ ಮುಂಚೆ ಪೊಲೀಸರಿಗೆ ಈಗಿನ್ ಥರ ಯಾವ್ದೇ ಟ್ರೈನಿಂಗ್ ಇರ್ತಿರ್ಲಿಲ್ವಂತೆ.
9. ಮೊದಲ ದರ್ಜೆ ಆಫಿಸರ್ ಸಂಬಳ 30-50 ರುಪಾಯಿ ಇತ್ತು ಅಷ್ಟೆ!
ಜೊತೆಗೆ ಉಳ್ಕೊಳಕ್ಕೆ, ಮನೆ ಖರ್ಚಿಗೆ 10 ರುಪಾಯ್ ಕೊಡ್ತಿದ್ರಂತೆ. ಜಮೆದಾರ, ದಫೇದಾರ, ಕಾನ್ಸ್ಟೇಬಲ್ಲುಗಳಿಗೆ 10 ರುಪಾಯ್ ಸಂಬಳ ಬರ್ತಿತ್ತಂತೆ.
10. ಬೆಂಗಳೂರಲ್ಲಿ ಮೊದಮೊದಲ ಟ್ರಾಫಿಕ್ ಪೊಲೀಸ್ ಸ್ಟೇಶನ್ನುಗಳು ಅಂದ್ರೆ ಉಪ್ಪಾರ್ ಪೇಟೆ, ಹಲಸೂರ್ ಗೇಟ್ ಮತ್ತೆ ಕಲಾಸಿಪಾಳ್ಯ ಸ್ಟೇಶನ್ನುಗಳು
11. ರಾಜ್ಯ ಪೊಲೀಸರಿಗೆಲ್ಲಾ ಒಂದೇ ಥರದ ಯೂನಿಫಾರಂ ಬಂದಿದ್ದು 1956ರಲ್ಲಿ
1956ರಲ್ಲಿ ಕರ್ನಾಟಕ ರಾಜ್ಯ ರಚನೆ ಆಯ್ತು; ಆಗ ಮೈಸೂರು ಅನ್ನೋ ಹೆಸರಿತ್ತು. ಮೊದ್ಲೇ ಹೇಳ್ದಂಗೆ 4 ಬೇರೆ ಬೇರೆ ಥರ ಇದ್ದ ಪೊಲೀಸ್ ವ್ಯವಸ್ಥೆ ಒಂದು ಸೂರಿನಡಿ ಬಂದು, ಮೈಸೂರು ರಾಜ್ಯ ಪೊಲೀಸರಿಗೆಲ್ಲಾ ಒಂದೇ ಥರದ ಯೂನಿಫಾರಂ ಬಂದಿದ್ದೇ ಆವಾಗ.
12. ಕರ್ನಾಟಕದ ಎಲ್ಲಾ ಕಡೇಲೂ ಒಂದೇ ಥರದ ಕಾನೂನು-ಸುವ್ಯವಸ್ಥೆಯ ಸೇವೆ ಕೊಡ್ಬೇಕು ಅಂತ 1963ರಲ್ಲಿ ಕರ್ನಾಟಕ ಪೊಲೀಸ್ ಕಾಯ್ದೆ ಅಂತ ಜಾರಿಗೆ ತಂದ್ರು
1965ರಲ್ಲಿ ಅದು ಚಾಲ್ತಿಗೆ ಬಂತು.
13. ಇವಾಗಿರೋ ಪೊಲೀಸ್ ವ್ಯವಸ್ಥೆಯ ರೂವಾರಿ ದೇವರಾಜ್ ಅರಸು
1972ರಲ್ಲಿ ಔರ್ ಮುಖ್ಯಮಂತ್ರಿ ಆಗಿದ್ದಾಗ ಹೋಮ್ ಮಿನಿಸ್ಟ್ರೂ ಔರೇ ಆಗಿದ್ರು. ಪೊಲೀಸ್ ವ್ಯವಸ್ಥೇನ ಚನ್ನಾಗಿ ರೂಪಿಸಿದ್ರು.
14. ಈಗ ಕರ್ನಾಟಕದಲ್ಲಿ ಒಟ್ಟು 80,000+ ಮಂದಿ ಪೊಲೀಸರಿದ್ದಾರೆ; 800+ ಪೊಲೀಸ್ ಸ್ಟೇಶನ್ನುಗಳಿವೆ
http://antekante.com/828
ಶ್ರೇಯಾಂಕ
ಮತ ನೀಡಿ, ಬಲಪಡಿಸಿ ಮತ್ತು ಸಾಮಾಜಿಕ ಜಾಲ ತಾಣದಲ್ಲಿ ಹಂಚಿರಿ.