ಕಲಿತ ಪದವಿಗಳನ್ನು ಬದಿಗಿಟ್ಟು ಆಯ್ಕೆ ಮಡಿಕೊಂಡದ್ದು ವ್ಯಂಗ್ಯ ಚಿತ್ರ ರಚನೆಯ ಬದುಕು. ಬನಾರಸ್ ’ಆಜ್’, ಅಲಹಾಬಾದಿನ ’ಅಮೃತ ಬಜಾರ್’ ಪತ್ರಿಕೆಗಳಿಗೆ ನಿಯಮಿತವಾಗಿ ರಚಿಸಿದ ವ್ಯಂಗ್ಯ ಚಿತ್ರಗಳು. ಆಗಿನ ಸಂಭಾವನೆ ಕೇವಲ ೧೦ ರೂ. ಸಂಭಾವನೆ ಹತ್ತು ರೂ ಪಡೆದ ಹೆಮ್ಮೆ. ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿದ್ದ ಡಾ.ಎಸ್. ರಾಧಕೃಷ್ಣನ್ ಮತ್ತು ಮದನಮೋಹನ ಮಾಳವೀಯರು ಮುಂತಾದವರಿಂದ ದೊರೆತ ಪ್ರಶಂಸೆ.
೧೯೪೫ ಪೂರ್ಣಕಾಲಿಕ ವ್ಯಂಗ್ಯ ಚಿತ್ರಕಾರರಾಗಿ ’ಕಲ್ಕಿ’ ಪತ್ರಿಕಾ ಬಳಗ ಸೇರ್ಪಡೆ. ತಮಿಳು ಕಲಿತು ರಚಿಸಿದ ವ್ಯಂಗ್ಯ ಚಿತ್ರಗಳು. ಇವರ ವ್ಯಂಗ್ಯ ಚಿತ್ರಗಳ ಪ್ರಭಾವದಿಂದ ಕಲ್ಕಿ ಪ್ರಸಾರ ೩೫ ಸಾವಿರದಿಂದ ಲಕ್ಷಕ್ಕೇರಿಕೆ. ಬೇರೆ ಬೇರೆ ಲೇಖನಿ ನಾಮದಿಂದ ’ಕುಮದಂ’. ಇಲ್ಲಸ್ಟ್ರೇಟೆಡ್ ವೀಕ್ಲಿ ಆಫ್ ಇಂಡಿಯಾಗೂ ವ್ಯಂಗ್ಯ ಚಿತ್ರ ರಚನೆ. ಆಗಿನ ಕಾಲದಲ್ಲೆ ಅಮೆರಿಕಾದ ಪತ್ರಿಕೆಯೊಂದು ಇವರ ವ್ಯಂಗ್ಯ ಚಿತ್ರವನ್ನು ೧೦೦ ಡಾಲರಿಗೆ ಖರೀದಿಸಿ ಸಲ್ಲಿಸಿದ ಗೌರವ. ತಾಯ್ನಾಡಿಗೆ ಮರಳಿ ಬಂದು ಕೈಗೊಂಡ ವಕೀಲಿ ವೃತ್ತಿ ಕೆಲಕಾಲ.
೧೯೬೦ರ ದಶಕದಲ್ಲಿ ನವಭಾರತ ಸಂಪಾದಕರಾದ ವಿ.ಎಸ್. ಕುಡ್ವ ಮತ್ತು ರಾಮಕೃಷ್ಣರಿಬ್ಬರು ಯೋಚಿಸಿ, ವ್ಯಂಗ್ಯಚಿತ್ರದ ಶೀರ್ಷಿಕೆ ’ಶಿಂಗಣ್ಣ’ನ ಉದಯ. ೧೪ ವರ್ಷ ಕಾಲ. ಕರಾವಳಿಯ ಜನರಿಗೆ ಶಿಂಗಣ್ಣ ಒದಗಿಸಿದ ಪಕ್ಷಾತೀತ, ಮದ್ಯ, ಬೀಡಿ, ಸಿಗರೇಟು ವರ್ಜಿಸಿದ ಶಿಂಗಣ್ಣನ ಕಾರುಬಾರು. ೧೯೬೯ ರಲ್ಲಿ ಪ್ರಾರಂಭವಾದ ಉದಯವಾಣಿ, ಟಿ.ಎಸ್.ಆರ್. ಒತ್ತಾಯದ ಮೇರೆಗೆ ಪ್ರಜಾವಾಣಿ, ಸುಧಾ, ಮಯೂರಗಳಲ್ಲೂ ಶಿಂಗಣ್ಣನ ಪ್ರವೇಶ. ಭಾಷೆಯ ನಿರ್ಬಂಧವಿಲ್ಲದೆ ಇವರ ಹಲವಾರು ವ್ಯಂಗ್ಯ ಚಿತ್ರಗಳು ಕೇರಳದ ಮಾತೃಭೂಮಿ, ಮಲಯಾಳಂನ ಮನೋರಮಾ ಪತ್ರಿಕೆಯಲ್ಲೂ ಪ್ರಕಟಿತ.
೧೯೯೨ ರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಸಾರ್ವಜನಿಕ ಸನ್ಮಾನ. ೧೯೬೯ ರಲ್ಲಿ ಪತ್ರಿಕಾ ಅಕಾಡಮಿ ಪ್ರಶಸ್ತಿ ಮುಂತಾದ ಗೌರವಗಳು. ಶಿಂಗಣ್ಣನ ವ್ಯಂಗ್ಯ ಚಿತ್ರ ಸಂಕಲನ, ವ್ಯಂಗ್ಯ ಬದುಕು (ಕನ್ನೆಪ್ಪಾಡಿ ಜೀವನಗಾಥೆ) ಪ್ರಕಟಿತ ಕೃತಿಗಳು.
ಲೇಖಕರು: ವೈ.ಎನ್. ಗುಂಡೂರಾವ್, ಕಣಜ[/sociallocker]
ಶ್ರೇಯಾಂಕ
ಕನ್ನಡ ಭೂಮಿಯನ್ನು ಚಿನ್ನದ ಭೂಮಿಯನ್ನಾಗಿ ಮಾಡಿದ ಧೀಮಂತ ವ್ಯಕ್ತಿಗಳಿಗೆ ನಮ್ಮ ನಮನಗಳು.