ಕನ್ನಡ ಬಾವುಟ: ಕನ್ನಡ/ ಕರ್ನಾಟಕದ ಧ್ವಜ ದ್ವಿವರ್ಣ ಧ್ವಜ. ಈ ಧ್ವಜವನ್ನು ಎರಡು ಸಮತಲ ಭಾಗಗಳಾಗಿ ಮಾಡಲಾಗಿದೆ. ಬಾವುಟದ ಮೇಲಿನ ಭಾಗವು ಹಳದಿ ಮತ್ತು ಕೆಳಗಿನ ಭಾಗವು ಕೆಂಪು ಬಣ್ಣದ್ದಾಗಿದೆ. ಹಳದಿ ಬಣ್ಣವು ಶಾಂತಿಯನ್ನು ಮತ್ತು ಕೆಂಪು ಬಣ್ಣವು ಧೈರ್ಯವನ್ನು ಸೂಚಿಸುತ್ತದೆ. ಈ ಧ್ವಜ ಕರ್ನಾಟಕದ ಅಧಿಕೃತ ಅಥವಾ ಅನಧಿಕೃತ ಧ್ವಜ ಅಲ್ಲ.
ಪರಿಚಯ
- ಧ್ವಜದ ಹಳದಿ ಬಣ್ಣವು ಅರಿಶಿಣ ಮತ್ತು ಕೆಂಪು ಬಣ್ಣವು ಕುಂಕುಮದ ಸಂಕೇತವಾಗಿದೆ. ಇವೆರಡು ವಸ್ತುಗಳು ಭಾರತದ ಸಂಸ್ಕೃತಿಯಲ್ಲಿ ಅನಾದಿ ಕಾಲದಿಂದ ವಿವಿಧ ಕಾರಣಗಳಿಗೆ ಬಳಸುತ್ತಾರೆ. ಕೆಂಪು ಬಣ್ಣ ಅಭಿವೃದ್ಧಿಯ ಸಂಕೇತ, ಅರಿಸಿಣ ಬಣ್ಣ ಆರೋಗ್ಯಕರ ಸಮಾಜದ ಸಂಕೇತವಾಗಿದೆ. ಇವೆರಡು ಮಂಗಳವನ್ನು ಮತ್ತು ಯೋಗಕ್ಷೇಮವನ್ನು ಸೂಚಿಸುತ್ತದೆ.
- ಕನ್ನಡ ಧ್ವಜ ಯಾವುದೇ ಅಧಿಕೃತ ಸ್ಥಾನಮಾನ ಹೊಂದಿಲ್ಲ. ಈ ಧ್ವಜವನ್ನು ೧೯೬೫ರಲ್ಲಿ ಶ್ರೀ ಎಂ.ರಾಮಮೂರ್ತಿಯವರು ಪ್ರಾರಂಭಿಸಿದ ರಾಜಕೀಯ ಪಕ್ಷ ಕನ್ನಡ ಪಕ್ಷಕ್ಕೆ ಬಾವುಟವಾಗಿ ಹುಟ್ಟು ಹಾಕಲಾಯಿತ್ತು. ಈ ಪಕ್ಷ ಹೆಚ್ಚು ಕಾಲ ಉಳಿಯಲಿಲ್ಲ.
- ಆದರೆ ಧ್ವಜವನ್ನು ಕರ್ನಾಟಕದ ಎಲ್ಲಡೆ ಸ್ಥಿರವಾಗಿ ಕರ್ನಾಟಕ ಮತ್ತು ಕನ್ನಡ ಪ್ರತಿನಿಧಿಸಲು ಬಳಸಲಾಗುತ್ತಿದೆ. ಈ ಧ್ವಜವನ್ನು ನವೆಂಬರ್ ಒಂದರಂದು, ಕನ್ನಡ/ಕರ್ನಾಟಕ ರಾಜೋತ್ಸವದ ಸಂದರ್ಭದಲ್ಲಿ ಕರ್ನಾಟಕದ ಪ್ರತಿ ಸಾರ್ವಜನಿಕ ಸಂಸ್ಥೆಗಳು ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿ ಹಾರಿಸಿ, ಕರ್ನಾಟಕದ ನಾಡ ಗೀತೆಯಾದ ಜಯ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ ಹಾಡನ್ನು ಹಾಡಲಾಗುತ್ತದೆ.
- ಕನ್ನಡ ಧ್ವಜವನ್ನು ಕರ್ನಾಟಕದ ಎಲ್ಲಾ ಕರ್ನಾಟಕ ಸರ್ಕಾರದ ಕಟ್ಟಡಗಳ ಮೇಲೆ, ಭಾರತದ ಧ್ವಜದ ಜೊತೆ, ಭಾರತದ ಧ್ವಜಕ್ಕಿಂತ ಸ್ವಲ್ಪ ಕೆಳ ಭಾಗದಲ್ಲಿ ಹಾರಡುತ್ತಿರುವುದನ್ನು ನೋಡಬಹುದು.
https://kn.wikipedia.org/wiki/%E0%B2%95%E0%B2%A8%E0%B3%8D%E0%B2%A8%E0%B2%A1_%E0%B2%AC%E0%B2%BE%E0%B2%B5%E0%B3%81%E0%B2%9F
ಶ್ರೇಯಾಂಕ
ಮತ ನೀಡಿ, ಬಲಪಡಿಸಿ ಮತ್ತು ಸಾಮಾಜಿಕ ಜಾಲ ತಾಣದಲ್ಲಿ ಹಂಚಿರಿ.