person working in office

ಕಚೇರಿಯಲ್ಲಿ ನಿಮ್ಮ ಏಕಾಗ್ರತೆಗೆ ಭಂಗ ತರುವ ಅಂಶಗಳಿವು!

ಎಂದಿಗೂ ಕಚೇರಿಯಲ್ಲಿ ನಿಮ್ಮ ಏಕಾಗ್ರತೆಗೆ ಭಂಗವನ್ನು ಉಂಟುಮಾಡುವ ಅಂಶಗಳಿಗೆ ಬಲಿಪಶುವಾಗಬೇಡಿ. ಏಕೆಂದರೆ ಇವುಗಳು ನಿಮ್ಮನ್ನು ನೀವು ಮಾಡುವ ಕೆಲಸದಿಂದ ವಿಮುಖರನ್ನಾಗಿಸುತ್ತದೆ. ಅದಕ್ಕಾಗಿ ಕಚೇರಿಯಲ್ಲಿ ನಿಮ್ಮ ಏಕಾಗ್ರತೆಗೆ ಭಂಗ ತರುವ ಅಂಶಗಳಿಂದ ಪಾರಾಗಲು ಮತ್ತು ಏಕಾಗ್ರತೆಯನ್ನು ಬೆಳೆಸಿಕೊಳ್ಳಲು ಕೆಲವೊಂದು ಸಲಹೆಗಳನ್ನು ಮತ್ತು ಮಾರ್ಗೋಪಾಯಗಳನ್ನು ಹುಡುಕಿ.

ಕಚೇರಿಯಲ್ಲಿ ನೀವು ಏಕಾಗ್ರತೆಯನ್ನು ಕಾಪಾಡಿಕೊಳ್ಳಬೇಕೆಂದರೆ ನಿಮಗೆ ಸಂಪೂರ್ಣ ಗಮನವಹಿಸುವ ಅವಶ್ಯಕತೆಯಿರುತ್ತದೆ. ಆಗಲೇ ಆ ಸ್ಥಳವನ್ನು ನೀವು ಅತ್ಯುತ್ತಮವಾಗಿ ಕೆಲಸ ಮಾಡುವ ಸ್ಥಳವನ್ನಾಗಿ ಪರಿವರ್ತಿಸಲು ಸಾಧ್ಯ.

ಒಳ್ಳೆಯ ಕೆಲಸ ಮಾಡುವ ವಾತಾವರಣವು, ಒಳ್ಳೆಯ ಮಾನಸಿಕ ಮತ್ತು ದೈಹಿಕ ಸಾಮರ್ಥ್ಯವನ್ನು ಹೊರತರಲು ಅನುಕೂಲ ಮಾಡಿಕೊಡುತ್ತದೆ. ಬದಲಾಗುತ್ತಿರುವ ಜೀವನ ಶೈಲಿಯು ನಾವು ನಮ್ಮನ್ನು ಸಂಪೂರ್ಣವಾಗಿ ಕೆಲಸದಲ್ಲಿ ತೊಡಗಿಸಿಕೊಳ್ಳಲು ಅವಕಾಶ ಮಾಡಿಕೊಡುವುದಿಲ್ಲ. ನಾವು ಕೆಲಸ ಮಾಡುವಾಗ ನಮ್ಮ ಗಮನವನ್ನು ಬೇರೆಡೆಗೆ ಸೆಳೆಯಲು, ನಮ್ಮ ಏಕಾಗ್ರತೆಯನ್ನು ಕೊಲ್ಲಲು ಹಲವಾರು ಅಂಶಗಳು ಹಾದಿಯಲ್ಲಿ ಎದುರಾಗುತ್ತವೆ. ನಮ್ಮ ವೇಗದ ಜೀವನ ಮತ್ತು ವೇಗದ ಯೋಚನಾ ಲಹರಿಯು ಸಹ ನಮ್ಮ ಉತ್ಪಾದನೆಯ ಮೇಲೆ ನಕಾರಾತ್ಮಕ ಪ್ರಭಾವವನ್ನು ಬೀರುತ್ತದೆ.

[sociallocker]ತಂತ್ರಜ್ಞಾನವು ಮುಂದುವರಿದಿದೆ: ಈ ಸ್ಪರ್ಧಾತ್ಮಕ ಯುಗದಲ್ಲಿ ನೀವು ಗಂಟೆಗಟ್ಟಲೆ ಒಂದೇ ಕೆಲಸಕ್ಕೆ ಅಂಟಿ ಕೊಂಡಿರುವುದು ಅಸಾಧ್ಯ. ನಿಮ್ಮ ಉತ್ಪಾದನೆಯು ಹೆಚ್ಚಾಗಬೇಕಾದಲ್ಲಿ, ಅಡ್ಡಿ ಅಡಚಣೆಗಳನ್ನು ದೂರವಿಡಬೇಕಾದ ಅಗತ್ಯವಿದೆ. ನಿಮ್ಮ ಕಚೇರಿಯ ಕಾರ್ಯವನ್ನು ಹಾಳು ಮಾಡಲು ಹಲವಾರು ಅಂಶಗಳು ನಿಮಗೆ ಎದುರಾಗುತ್ತವೆ. ಇವುಗಳಲ್ಲಿ ತಾಂತ್ರಿಕ, ದೈಹಿಕ, ಮನೋವೈಜ್ಞಾನಿಕ, ಸಾಮಾಜಿಕ ಮತ್ತು ಮಾನಸಿಕ ಅಡಚಣೆಗಳು ನಮಗೆ ಎದುರಾಗುತ್ತವೆ. ಬನ್ನಿ ನಮ್ಮ ಏಕಾಗ್ರತೆಗೆ ಭಂಗ ತರುವ ಕೆಲವು ಅಂಶಗಳನ್ನು ಮತ್ತು ಅವುಗಳನ್ನು ಬಗೆಹರಿಸಿಕೊಳ್ಳುವ ಬಗೆಯನ್ನು ತಿಳಿದುಕೊಳ್ಳೋಣ. ನಿಮ್ಮ ದೇಹದಲ್ಲಿರುವ ಮಚ್ಚೆಯು ಏನನ್ನು ಪ್ರತಿಪಾದಿಸುತ್ತದೆ?

ಏಕಕಾಲದಲ್ಲಿ ಹಲವು ಕೆಲಸ ಮಾಡುವುದು: ತಂತ್ರಜ್ಞಾನ ಬೆಳೆದಂತೆಲ್ಲ, ಒಂದೇ ಸಮಯದಲ್ಲಿ ಹಲವಾರು ಕೆಲಸಗಳನ್ನು ಮಾಡುವುದು ಒಂದು ಅಭ್ಯಾಸವಾಗಿ ಹೋಗಿದೆ. ಇದು ಕಚೇರಿಯಲ್ಲಿ ನಮ್ಮ ಏಕಾಗ್ರತೆಗೆ ಭಂಗವನ್ನು ತರುತ್ತದೆ. ಇಂಟರ್‌ನೆಟ್ ಸರ್ಫಿಂಗ್ ನಿಮಗೆ ಕಚೇರಿ ಕೆಲಸದಲ್ಲಿ ಸಹಾಯ ಮಾಡಬಹುದು. ಆದರೆ ಫೇಸ್‍ಬುಕ್, ವಾಟ್ಸ್ಅಪ್ಪ್ ಮತ್ತು ಇತರ ಇಂಟರ್‌ನೆಟ್ ಅಪ್ಲಿಕೇಷನ್‍ಗಳು ನಿಮ್ಮ ಕಚೇರಿ ಕೆಲಸಕ್ಕೆ ಭಂಗ ತರುತ್ತವೆ.

ತಂತ್ರಜ್ಞಾನ: ಸೆಲ್ ಫೋನ್ ಮತ್ತು ಇಮೇಲ್‍ಗಳು ನಮ್ಮ ದೈನಂದಿನ ಜೀವನದ ಒಂದು ಅಂಗಭಾಗವಾಗಿ ಹೋಗಿಬಿಟ್ಟಿವೆ. ನಾವು ಕೆಲಸ ಮಾಡುವಾಗ ಫೋನ್ ಸ್ವಿಚ್ ಆಫ್ ಮಾಡಲು ಮತ್ತು ಇಮೇಲ್‍ಗಳನ್ನು ಓದದೆ ಇರುವುದು ಅಸಾಧ್ಯವಾಗಿದೆ. ಕೆಲಸ ಮಾಡುವಾಗ ಮೊಬೈಲ್‍ ಕರೆಗಳಿಗೆ ಆನ್ಸರಿಂಗ್ ಮಷಿನ್ ಅಳವಡಿಸಲು ಪ್ರಯತ್ನಿಸಿ ಮತ್ತು ಇಮೇಲ್‍ಗಳನ್ನು ವಿರಾಮದ ಅವಧಿಯಲ್ಲಿ ಪರಿಶೀಲಿಸಿ.

ಬೇಸರ: ಕೆಲಸ ಮಾಡಲು ಇರುವ ಬೇಸರವು ಸಹ ಕಚೇರಿಯಲ್ಲಿ ಏಕಾಗ್ರತೆಯನ್ನು ಭಂಗ ತರುವ ಅಂಶಗಳಲ್ಲಿ ಒಂದಾಗಿದೆ. ಅದಕ್ಕಾಗಿ ನೀವು ಇಷ್ಟಪಡುವ ಕೆಲಸಗಳನ್ನು ಮಾತ್ರ ಮಾಡಿ. ನಿಮ್ಮ ಕಚೇರಿಯಲ್ಲಿ ಕೆಲವೊಂದು ವಿಚಾರಗಳು ನಿಮಗೆ ಬೇಸರ ತರಿಸುತ್ತಿದ್ದಲ್ಲಿ, ಆ ಕೆಲಸಗಳನ್ನು ಮಾಡಲು ಪ್ರತ್ಯೇಕ ಸಮಯವನ್ನು ನಿಗದಿ ಮಾಡಿಕೊಳ್ಳಿ. ಇಲ್ಲವಾದಲ್ಲಿ, ನಿಮ್ಮ ಕೆಲಸಗಳಿಂದ ನಿಗದಿತ ಅವಧಿಗೊಮ್ಮೆ ಮಧ್ಯಂತರ ವಿರಾಮವನ್ನು ತೆಗೆದುಕೊಳ್ಳಿ. ಈ ಅವಧಿಯಲ್ಲಿ ನಿಮ್ಮ ಬೇಸರವನ್ನು ನೀಗಿಸುವ ಕೆಲವೊಂದು ಸ್ವ-ಬಹುಮಾನಗಳನ್ನು ನಿಮಗೆ ನೀಡಿಕೊಳ್ಳಿ. ಅದು ಚಹಾ, ನಡಿಗೆ ಯಾವುದಾದರು ಆಗಿರಬಹುದು.

ಹಸಿವು ಮತ್ತು ನಿದ್ದೆ: ಚೆನ್ನಾಗಿ ತಿನ್ನಿ ಮತ್ತು ಚೆನ್ನಾಗಿ ನಿದ್ದೆ ಮಾಡಿ. ಈ ಎರಡು ಅಂಶಗಳು ನಮ್ಮ ಕೆಲಸದಲ್ಲಿ ನಾವು ಏಕಾಗ್ರತೆಯನ್ನು ತಾಳಲು ಪ್ರಭಾವ ಬೀರುವ ಅಂಶಗಳಾಗಿವೆ. ಚೆನ್ನಾಗಿ ನೀರನ್ನು ಸೇವಿಸುವುದರಿಂದ ಕಚೇರಿಯಲ್ಲಿ ಚೆನ್ನಾಗಿ ಕಾರ್ಯನಿರ್ವಹಿಸಲು ಅನುಕೂಲವಾಗುತ್ತದೆ. ತೂಕಡಿಸುವ ಪ್ರಕ್ರಿಯೆಯು ನಿಮ್ಮಲ್ಲಿ ಖಿನ್ನತೆಯನ್ನು ಮತ್ತು ಒತ್ತಡವನ್ನು ತರಬಹುದು. ಇದು ನಿಮ್ಮಲ್ಲಿ ಕೆಲವೊಂದು ಆರೋಗ್ಯದ ಸಮಸ್ಯೆಗಳನ್ನುಂಟು ಮಾಡಬಹುದು. ಆದ್ದರಿಂದ ಚೆನ್ನಾಗಿ ನಿದ್ದೆ ಮಾಡಿ ಮತ್ತು ಒಳ್ಳೆಯ ಪೌಷ್ಟಿಕಾಂಶಭರಿತ ಆಹಾರವನ್ನು ಸೇವಿಸಿ.

ಕೆಲಸದ ಸ್ಥಳದಲ್ಲಿ ಅಡಚಣೆಗಳು: ಏಕಾಗ್ರತೆಯನ್ನು ಪಡೆಯಲು ನಿಮಗೆ ಮನಃಶಾಂತಿಯ ಅವಶ್ಯಕತೆಯಿರುತ್ತದೆ. ಒಂದು ವೇಳೆ ನೀವು ಕೆಲಸ ಮಾಡುವ ಸ್ಥಳವು ರಸ್ತೆಗಳಿಗೆ ಹತ್ತಿರವಿದ್ದಲ್ಲಿ, ಬಾಗಿಲು ಮತ್ತು ಕಿಟಕಿಗಳನ್ನು ಮುಚ್ಚಿ, ಅಡಚಣೆಗಳಿಂದ ದೂರವಿರಿ. ಕಚೇರಿಯ ಸಮೀಪದ ಆಚರಣೆಗಳು ಸಹ ಕಚೇರಿಯಲ್ಲಿ ಏಕಾಗ್ರತೆಯನ್ನು ಕಸಿದುಕೊಳ್ಳುತ್ತವೆ. ನಿಮ್ಮ ಸಹೋದ್ಯೋಗಿಗಳಿಗೆ ನಿಮಗೆ ಅಡಚಣೆಯಾಗುವುದು ಇಷ್ಟವಿಲ್ಲ ಎಂಬುದು ತಿಳಿದಿರಲಿ. ಭಾರತೀಯರನ್ನು ಇತರರಿಗಿಂತ ಪ್ರತ್ಯೇಕವಾಗಿಸುವ ಹವ್ಯಾಸಗಳಿವು

ಸಹೋದ್ಯೋಗಿಗಳ ಜೊತೆಗೆ ಸಮಸ್ಯೆ: ಒಬ್ಬ ಉದ್ಯೋಗಿಯು ತನ್ನ ಕೆಲಸದ ಸ್ಥಳದಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಾನೆ. ಒಂದು ವೇಳೆ ನಿಮಗೆ ಯಾವುದೇ ಸಮಸ್ಯೆಗಳು ಇದ್ದಲ್ಲಿ, ನೀವು ಕೆಲಸದ ವಿಚಾರವಾಗಿ ಏಕಾಗ್ರತೆಯನ್ನು ವಹಿಸಲು ಕಷ್ಟವಾಗುತ್ತದೆ. ಈ ಸಮಸ್ಯೆಗಳನ್ನು ಹೋಗಲಾಡಿಸಿಕೊಳ್ಳಿ ಮತ್ತು ನಿಮ್ಮ ಕೆಲಸದತ್ತ ಗಮನ ಹರಿಸಿ. ನಿಮ್ಮ ಕೆಲಸದಲ್ಲಿ ಆನಂದವನ್ನು ಪಡೆಯಿರಿ, ಮತ್ತು ನಿಮ್ಮ ಕೆಲಸದಲ್ಲಿ ಆನಂದವನ್ನು ಪಡೆಯಲು ಇರುವ ಮಾರ್ಗಗಳನ್ನು ಹುಡುಕಿ. ಏಕಾಗ್ರತೆಯನ್ನು ಕೊಲ್ಲುವ ಅಂಶಗಳು ನಿಮ್ಮ ವೃತ್ತಿಯನ್ನು ಸಹ ಕೊಲ್ಲಬಹುದು. ನಿಮ್ಮ ಮನಸ್ಸನ್ನು ಏಕೀಕೃತಗೊಳಿಸಲು ವಿಭಿನ್ನ ದಾರಿಗಳನ್ನು ಹುಡುಕಿ ಮತ್ತು ನಿಮ್ಮ ಏಕಾಗ್ರತೆಯನ್ನು ಸುಧಾರಿಸಿಕೊಳ್ಳಲು ಪ್ರಯತ್ನಿಸಿ.
Read more at: http://kannada.boldsky.com/insync/pulse/2014/top-6-concentration-killers-at-office-008679.html | image: theglobeandmail.com[/sociallocker]

ಶ್ರೇಯಾಂಕ

ಮತ ನೀಡಿ ಬಲಪಡಿಸಿ ಮತ್ತು ಸಾಮಾಜಿಕ ಜಾಲ ತಾಣದಲ್ಲಿ ಹಂಚಿರಿ.

User Rating: 4.85 ( 1 votes)

ಇವುಗಳೂ ನಿಮಗಿಷ್ಟವಾಗಬಹುದು

ತಾಮ್ರದ ಕೊಡ ಹಾಗೂ ಪ್ಲಾಸ್ಟಿಕ್ ಕೊಡಗಳಲ್ಲಿಯ ವ್ಯತ್ಯಾಸ

ತಾಮ್ರದ ಕೊಡ ಹಾಗೂ ಪ್ಲಾಸ್ಟಿಕ್ ಕೊಡಗಳಲ್ಲಿಯ ವ್ಯತ್ಯಾಸವೇನು…???? ತಾಮ್ರದ ಕೊಡ ಬಾವಿಯಲ್ಲಿ ಇಳಿದಾಗ ಬಾಗಿ ತನ್ನೊಳಗೆ ಪೂರ್ಣ ನೀರು ತುಂಬಿಕೊಂಡು …

Leave a Reply

Your email address will not be published. Required fields are marked *