SM Pandit

ಎಂ.ಎಸ್. ಪಂಡಿತ್

ಎಂ.ಎಸ್. ಪಂಡಿತ್ (೨೫-೩-೧೯೧೬ – ೩೦-೩-೧೯೯೩): ರೊಮ್ಯಾಂಟಿಕ್ ಕಲೆಯ ರಸಋಷಿ ಎನಿಸಿದ್ದ ಎಂ.ಎಸ್. ಪಂಡಿತ್‌ರವರು ಹುಟ್ಟಿದ್ದು ಗುಲಬರ್ಗಾದಲ್ಲಿ. ತಂದೆ ಮೋನಪ್ಪ, ತಾಯಿ ಕಲ್ಲಮ್ಮ. ವೃತ್ತಿಯಲ್ಲಿ ಕಂಚುಗಾರ ಕುಟುಂಬದವರು. ಪ್ರಾರಂಭಿಕ ಶಿಕ್ಷಣ ಪಡೆದದ್ದು ಬೀದರಿನ ಭಾಸ್ಕರರಾವ್. ನಂತರ ಗುಲಬರ್ಗಾದ ಪ್ರಸಿದ್ಧ ಕಲಾವಿದರಾದ ಶಂಕರರಾವ್ ಆಳಂದಕರ್‌ರವರಲ್ಲಿ. ೧೯೩೬ರಲ್ಲಿ ಮದರಾಸಿನ ಕಲಾಶಾಲೆಯಿಂದ ಪಡೆದ ಡಿಪ್ಲೊಮ, ಮುಂಬಯಿಯ ಜೆ.ಜೆ. ಕಲಾಶಾಲೆಯಲ್ಲಿ ಗ್ಲಾಡ್‌ಸ್ಟನ್, ಭೋಂಸ್ಲೆ, ಚೂಡೇಕರ್, ದುರಂಧರ್ ಮುಂತಾದವರಿಂದ ಉಚ್ಛ ಶಿಕ್ಷಣ.

ಮುಂಬಯಿಯಲ್ಲಿ ಪೋಸ್ಟರ್ ಬರೆದುಕೊಂಡು ಆರಂಭಿಸಿದ ಬದುಕು. ಜಲವರ್ಣ ಬಳಸಿ ಪೋಸ್ಟರ್ ಕಲೆಯಲ್ಲಿ ಸಾಧಿಸಿದ ಅದ್ವಿತೀಯ ಸಾಧನೆ. ಹಾಲಿವುಡ್‌ನ ಖ್ಯಾತ ಮೆಟ್ರೋ ಸಂಸ್ಥೆಗೆ ಚಿತ್ರ ರಚಿಸಿಕೊಟ್ಟ ಮೊದಲ ಭಾರತೀಯರೆಂಬ ಹೆಗ್ಗಳಿಕೆ.

೧೯೭೬ರಲ್ಲಿ ಲಂಡನ್‌ನಲ್ಲಿ ಪ್ರಥಮ ಪ್ರದರ್ಶನ. ಭಾರತೀಯರು ಪಂಡಿತರನ್ನು ಗುರುತಿಸಿದ್ದು ನಂತರವೇ. ಪೌರಾಣಿಕ ದೇವ ದೇವತೆಗಳ, ಇತಿಹಾಸ ಸನ್ನಿವೇಶಗಳಿಗೆ ರಮ್ಯತೆ (Romantic) ಜೀವಾಳವಾಗಿರಿಸಿ ಭಾವುಕತೆ ರಂಜಕತೆಯನ್ನು ಧಾರಾಳವಾಗಿ ಬಳಸಿ ಚಿತ್ರಿಸಿದ ಖ್ಯಾತಿ. ನಳದಮಯಂತಿ, ಶಕುಂತಲೆಯ ಪತ್ರಲೇಖನ, ವಿಶ್ವಾಮಿತ್ರ-ಮೇನಕೆ, ರಾಧಾಕೃಷ್ಣ ಸಲ್ಲಾಪ ಮುಂತಾದ ಚಿತ್ರಗಳು ಸಾರ್ವಜನಿಕರನ್ನು ಸಂಮ್ಮೋಹಗೊಳಿಸಿದುವು. ಕರ್ಣಾರ್ಜುನ ಕಾಳಗದ ದೃಶ್ಯದಲ್ಲಿ ಜೀವಂತಿಕೆಯನ್ನು ತುಂಬಿ ಕಣ್ಣೆದುರಿಗೆ ಮಹಾಭಾರತ ಯುದ್ಧವನ್ನು ತೆರೆದಿಟ್ಟ ಕಲಾವಿದ.

ನಟನಟಿಯರ ಚಿತ್ರಗಳನ್ನು ಅತ್ಯಂತ ನೈಜತೆಯಿಂದ ಚಿತ್ರಿಸುತ್ತಿದ್ದುದರಿಂದ ಹಲವಾರು ಸಿನಿಮಾ ಕಲಾವಿದರು ಆಶ್ರಯಿಸಿದ್ದು ಪಂಡಿತರನ್ನು. ಪುಣೆಯ ಪ್ರಭಾತ್, ಮುಂಬಯಿಯ ಆರ್.ಕೆ. ಸ್ಟುಡಿಯೊ (ರಾಜ್‌ಕಪೂರ್) ಪ್ರಮುಖರು. ಚಲನಚಿತ್ರ ಮಾಸ ಪತ್ರಿಕೆಗಳಿಗೆ ಪಂಡಿತರದ್ದೇ ವಿನ್ಯಾಸ. ಮುಂಬಯಿಯ ಫಿಲ್ಮ್ ಇಂಡಿಯಾ ಮಾಸ ಪತ್ರಿಕೆಗೆ ಬರೆದ ಚಿತ್ರ ಪಡೆದ ಅಂತಾರಾಷ್ಟ್ರೀಯ ಖ್ಯಾತಿ. ಇದೇ ಚಿತ್ರಕ್ಕೆ ೧೯೪೬ರಲ್ಲಿ ಟೊರೆಂಟೋ ಪ್ರದರ್ಶನದಲ್ಲಿ ಬಹುಮಾನ. ಲಂಡನ್ನಿನ ರಾಯಲ್ ಸೊಸೈಟಿ ಫೆಲೋಷಿಪ್. ಕರ್ನಾಟಕ ರಾಜ್ಯ ಲಲಿತಕಲಾ ಅಕಾಡಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಗುಲಬರ್ಗಾ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್.
ಗಾಂಧೀಜಿಯವರ ಭಾವಚಿತ್ರ ನ್ಯೂ ಕೌನ್ಸಿಲ್ ಹಾಲ್, ಇಂದಿರಾಗಾಂಧಿ, ಮಾರ್ಗರೆಟ್ ಥ್ಯಾಚರ್ ಚಿತ್ರಗಳು ಕಾಮನ್‌ವೆಲ್ತ್ ಸಂಸ್ಥೆ ಆವರಣ, ರೋಮನ್ ಆರ್ಟ್ ಗ್ಯಾಲರಿ, ಇಂಡೋ ಬ್ರಿಟಿಷ್ ಅಸೋಸಿಯೇಷನ್ ಹಾಲ್ ಮುಂತಾದೆಡೆ ಸಂಗ್ರಹೀತ.
ಲೇಖಕರು: ವೈ.ಎನ್. ಗುಂಡೂರಾವ್‌
ಕಣಜ

ಶ್ರೇಯಾಂಕ

ಕನ್ನಡ ಭೂಮಿಯನ್ನು ಚಿನ್ನದ ಭೂಮಿಯನ್ನಾಗಿ ಮಾಡಿದ ಧೀಮಂತ ವ್ಯಕ್ತಿಗಳಿಗೆ ನಮ್ಮ ನಮನಗಳು.

User Rating: 4.9 ( 1 votes)

ಇವುಗಳೂ ನಿಮಗಿಷ್ಟವಾಗಬಹುದು

A V Prakasha

ಎ.ವಿ. ಪ್ರಕಾಶ್‌

ಎ.ವಿ. ಪ್ರಕಾಶ್‌ (೧೫.೧೦.೧೯೪೫): ಪ್ರಖ್ಯಾತ ಕೊಳಲುವಾದಕರಾದ ಎ.ವಿ. ಪ್ರಕಾಶ್‌ರವರು ಹುಟ್ಟಿದ್ದು ಬೆಂಗಳೂರು. ತಂದೆ ಪ್ರಖ್ಯಾತ ಪಿಟೀಲು ವಿದ್ವಾಂಸರಾದ ಎ.ಕೆ. ವೆಂಕಟನಾರಾಯಣ, …

Leave a Reply

Your email address will not be published. Required fields are marked *