ಉಪಯುಕ್ತವಾದ ಭಾರತೀಯ ಆಕಳುಗಳು ಹಾಗೂ ಅಪಾಯಕಾರಿಯಾದ ವಿದೇಶಿ ಆಕಳುಗಳು!

೧. ಭಾರತೀಯ ಆಕಳಿನ ವೈಶಿಷ್ಟ ಗಳು

 • ಭಾರತೀಯ ತಳಿಯ ಆಕಳುಗಳು ಸ್ಥಳೀಯ ವಾತಾವರಣದೊಂದಿಗೆ ಹೊಂದಿಕೊಂಡಿವೆ. ಅವುಗಳು ಬಿಸಿಲು ಸಹಿಸಲು ಸಕ್ಷಮವಾಗಿವೆ.
 • ಅವುಗಳಿಗೆ ಸ್ವಲ್ಪ ನೀರು ಸಾಕಾಗುತ್ತದೆ.
 • ಅವುಗಳು ದೂರ ಪ್ರಯಾಣ ಮಾಡಬಲ್ಲವು.
 • ಭಾರತದಲ್ಲಿನ ಹಸುಗಳು ಭಾರತದ ಆಯಾ ಭಾಗದಲ್ಲಿ ನೈಸರ್ಗಿಕ ಹುಲ್ಲನ್ನು ಸೇವಿಸಿ ಬದುಕಬಲ್ಲವು.
 • ಅವುಗಳಲ್ಲಿ ಅನೇಕ ಸೋಂಕು ರೋಗಗಳಿಗೆ ಪ್ರತಿಬಂಧಿಸುವ ಕ್ಷಮತೆಯು ಅಧಿಕವಾಗಿರುತ್ತದೆ.
 • ಈ ಹಸುಗಳನ್ನು ಯೋಗ್ಯ ರೀತಿ ಯಲ್ಲಿ ಪಾಲನೆ-ಪೋಷಣೆ ಮಾಡಿ ಅವುಗಳಿಗೆ ಪೌಷ್ಠಿಕ ಆಹಾರವೂ ದೊರೆತರೆ, ಅವುಗಳು ಹೆಚ್ಚು ಪ್ರಮಾಣದಲ್ಲಿ ಹಾಲನ್ನು ಉತ್ಪಾದಿಸಬಲ್ಲವು.

೨. ವಿದೇಶಿ ಹಸುಗಳ ತಳಿಗಿಂತ ಅಧಿಕವಾಗಿ ಹಾಲನ್ನು ಕೊಡುವ ಭಾರತೀಯ ತಳಿಯ ಹಸುಗಳು!

 • ಅ. ಬ್ರೆಜಿಲ್‌ನಲ್ಲಿ ಆಯೋಜಿಸ ಲಾದ ಕ್ಷೀರೋತ್ಪನ್ನಗಳ ಸ್ಪರ್ಧೆಯಲ್ಲಿ ಭಾರತೀಯ ತಳಿಯ ‘ಗಿರ’ ಎಂಬ ಹಸುವು ಎರಡನೇ ಸ್ಥಾನ ಪಡೆದರೆ ಆಂಧ್ರ ಪ್ರದೇಶದ ‘ಒಂಗೋಲ’ ತಳಿಯ ಆಕಳು ಮೂರನೇ ಸ್ಥಾನ ಪಡೆಯುವುದು: ಬ್ರೆಜಿಲ್‌ನಲ್ಲಿ ಕ್ಷೀರೋತ್ಪನ್ನದ ಸ್ಫರ್ಧೆ ನಡೆಯಿತು. ಆಗ ಭಾರತೀಯ ತಳಿಯ ‘ಗಿರ’ ಆಕಳು ಒಂದು ದಿನದಲ್ಲಿ ೪೮ಲೀಟರ್ ಹಾಲು ನೀಡಿತ್ತು. ಮೂರು ದಿನ ನಡೆದ ಈ ಸ್ಪರ್ಧೆಯಲ್ಲಿ ಭಾರತೀಯ ತಳಿಯ ‘ಗಿರ’ ಆಕಳಿಗೆ ಎರಡನೇಯ ಸ್ಥಾನವು ದೊರೆ ಯಿತು. ಈ ಸ್ಪರ್ಧೆಯಲ್ಲಿ ಆಂಧ್ರಪ್ರದೇಶದ ‘ಒಂಗೋಲ’ ತಳಿಯ ಹಸುವಿಗೆ (ಈ ಹಸುವಿಗೆ ಬ್ರೆಜಿಲ್‌ನಲ್ಲಿ ‘ನೇರೋಲ’ ಎಂದು ಹೇಳುತ್ತಾರೆ) ತೃತೀಯ ಸ್ಥಾನ ಸಿಕ್ಕಿದೆ. ಅದೂ ಕೂಡಾ ಒಂದು ದಿನದಲ್ಲಿ ೪೫ಲೀಟರ ಹಾಲನ್ನು ಕೊಟ್ಟಿತ್ತು.
 • ಭಾರತೀಯ ತಳಿಯ ಮೂರು ಮಹತ್ವದ ಹಸುಗಳು ‘ಗಿರ, ಕಾಂಕರೇಜ, ಒಂಗೋಲ’ ಇವುಗಳು ಜರ್ಸಿ ಹಸುಗಳಿ ಗಿಂತ ಅಧಿಕವಾಗಿ ಹಾಲನ್ನು ಕೊಡುತ್ತವೆ.

[sociallocker]೩. ಭಾರತೀಯ ತಳಿಯ ಮಹತ್ವ ಬ್ರೆಜಿಲ್‌ಗೆ ತಿಳಿಯುತ್ತದೆ, ಆದರೆ ಅದು ಭಾರತೀಯರಿಗೆ ತಿಳಿಯದಿರುವುದು ಲಜ್ಜಾಸ್ಪದ!

 • ಭಾರತೀಯ ಹಸುಗಳು ವಿದೇಶಿ ಹಸುಗಳಗಿಂತ ಅಧಿಕವಾದ ಹಾಲನ್ನು ಕೊಡುತ್ತಿರುವಾಗಲೂ ಭಾರತವು ವಿದೇಶಿ ಹಸುಗಳನ್ನು ಆಮದು ಮಾಡಿಕೊಳ್ಳುವುದು: ಭಾರತೀಯ ತಳಿಯ ಒಂದು ಹಸುವಂತು ವಿದೇಶಿ ತಳಿಯ ‘ಹ್ಯಾಸ್ಟೋನ ಫ್ರಾಇಜಿಯನ’ ಎಂಬ ಹೆಸರಿನ ಹಸುವಿಗಿಂತ ಅಧಿಕ ಪ್ರಮಾಣದಲ್ಲಿ ಹಾಲನ್ನು ಕೊಡುತ್ತದೆ. ಹೀಗಿರುವಾಗ ಭಾರತದಲ್ಲಿ ಹಾಲಿನ ಉತ್ಪಾದನೆಯನ್ನು ಹೆಚ್ಚಿಸಲು ‘ಹಾಲೇಸ್ಟೋನ ಫ್ರಾಇಜಿಯನ’ ಹೆಸರಿನ ಈ ವಿದೇಶಿ ಹಸುವನ್ನು ಆಮದು ಮಾಡಲಾಗುತ್ತದೆ.
 • ಎಲ್ಲಿ ಭಾರತೀಯ ತಳಿಯ ಹಸುಗಳನ್ನು ದೊಡ್ಡ ಪ್ರಮಾಣದಲ್ಲಿ ಆಮದು ಮಾಡುವ ಬ್ರೆಜಿಲ್ ಮತ್ತು ಎಲ್ಲಿ ಭಾರತೀಯ ತಳಿಯ ಹಸುಗಳು ಅಧಿಕ ಪ್ರಮಾಣದಲ್ಲಿ ಹಾಲು ಕೊಡು ತ್ತಿರುವಾಗಲೂ ವಿದೇಶಿ ಹಸುಗಳನ್ನು ಆಮದು ಮಾಡುವ ನತದೃಷ್ಟ ಭಾರತೀಯ ರಾಜಕಾರಣಿಗಳು ! : ‘ನಮ್ಮ ದೇಶದಲ್ಲಿ ಹಸುಗಳ ಅವಸ್ಥೆಯು ತೀರ ದಯನೀಯ ವಾಗಿದೆ. ಅವುಗಳು ಹಾಲನ್ನು ಅಲ್ಪ ಪ್ರಮಾಣ ದಲ್ಲಿ ಕೊಡುತ್ತವೆ, ಎಂಬ ಕಾರಣವನ್ನು ಮುಂದಿಟ್ಟುಕೊಂಡು ನಾವು ನಮ್ಮ ದೇಶಿ ಹಸುಗಳನ್ನು ಬೀದಿಗಳಲ್ಲಿ ತಿರುಗಾಡಲು ಮುಕ್ತವಾಗಿ ಬಿಟ್ಟಿರುತ್ತೇವೆ. ಆದರಿಂದ ಅವುಗಳ ಆರ್ಥಿಕ ಮೌಲ್ಯವೂ ಕಡಿಮೆ ಯಾಗಿದೆ; ಆದರೆ ಇವತ್ತು ಬ್ರೆಜಿಲ್ ದೇಶವೂ ಭಾರತೀಯ ತಳಿಯ ಹಸುಗಳನ್ನು ದೊಡ್ಡ ಪ್ರಮಾಣದಲ್ಲಿ ಆಮದು ಮಾಡುತ್ತಿದೆ ಮತ್ತು ಭಾರತ ಮಾತ್ರ ಮನೆಗೆ ತಕ್ಕಷ್ಟು ಹೈನುಗಾರಿಕೆಯನ್ನು ಅಭಿವೃದ್ಧಿ ಪಡಿಸಲು ಅಮೇರಿಕಾ ಹಾಗೂ ಯುರೋಪಿನ ಹಸುಗಳನ್ನು ಆಮದು ಮಾಡುತ್ತಿದೆ.
 • ಗುಜರಾತ ಸರಕಾರಕ್ಕೆ ‘ಗಿರ’ ಈ ಭಾರತೀಯ ತಳಿಯ ಹಸುವನ್ನು ಬ್ರೆಜಿಲ್‌ನಿಂದ ಆಮದು ಮಾಡಬೇಕಾಗುವ ಪ್ರಮೇಯ ಬಂದೆರಗುವುದು!: ಗುಜರಾತಿನ ಮುಖ್ಯಮಂತ್ರಿ ನರೇಂದ್ರ ಮೋದಿಯವರು ಸಹ ‘ಗಿರ’ ತಳಿಯ ಹಸುವಿಗೆ ಮಾನ್ಯತೆಯನ್ನು ಕೊಟ್ಟಿದ್ದಾರೆ. ಅವರ ರಾಜ್ಯವೂ ಉಚ್ಚ ತಳಿಯ ಶುದ್ಧ ‘ಗಿರ’ ಹಸುಗಳನ್ನು ಬ್ರೆಜಿಲ್ನಿಂದ ಆಮದು ಮಾಡಿಕೊಳ್ಳಲು ನಿರ್ಧರಿಸಿದೆ.

೪. ಭಾರತೀಯ ತಳಿಯ ಹಸುವಿನ ಹಾಲು ಉಪಕಾರಿ ಹಾಗೂ ಪಾಶ್ಚಿಮಾತ್ಯ ಹಸುಗಳ ಹಾಲು ಅಪಾಯಕಾರಿ!

 • ಭಾರತೀಯ ಹಸುವಿನ ಹಾಲಿನಲ್ಲಿ ಅರ್ಬುದರೋಗ ಗುಣಪಡಿಸುವ ನೈಸರ್ಗಿಕ ಘಟಕವಾದ ‘ಒಮೇಗಾ-೬ ಫ್ಯಾಟಿ ಆಸಿಡ್’ ನೈಸರ್ಗಿಕವಾಗಿದೆ. ಅದನ್ನು ದುರ್ಲಕ್ಷಿಸಿ ಆಸಿಡ್‌ಗಾಗಿ ಪ್ರತ್ಯೇಕ ಉದ್ಯಮವನ್ನು ಸ್ಥಾಪಿಸುವುದು: ನಮ್ಮ ಹಸುವಿನ ಹಾಲಿನಲ್ಲಿ ಅರ್ಬುದದಂತಹ ರೋಗಕ್ಕೆ ಉಪಯುಕ್ತವಾದ ಹಾಗೂ ಮಹತ್ವಪೂರ್ಣವಾದ ಘಟಕವು ‘ಒಮೇಗಾ-೬ ಫ್ಯಾಟಿ ಆಸಿಡ್’ ಇರುತ್ತದೆ. ವಿಪರ್ಯಾಸವೆಂದರೆ ಈ ರೋಗಕ್ಕೆ ಔಷಧಿ ಯೆಂದು ‘ಒಮೇಗಾ- ೬’ರ ನಿರ್ಮಿತಿಗಾಗಿ ಒಂದು ದೊಡ್ಡ ಉದ್ಯಮವೇ ವಿಕಸಿತ ವಾಗಿದೆ. ಅದನ್ನು ಕ್ಯಾಪ್ಸೂಲ್ ಸ್ವರೂಪದಲ್ಲಿ ಮಾರಾಟ ಮಾಡಲಾಗುತ್ತದೆ; ಆದರೆ ನಮ್ಮ ಭಾರತೀಯ ಹಸುಗಳ ಹಾಲಿನಲ್ಲಿ ನೈಸರ್ಗಿಕ ವಾಗಿ ಉಪಲಬ್ಧವಿರುವ ಈ ಘಟಕವನ್ನು ನಾವು ದುರ್ಲಕ್ಷಿಸುತ್ತಿದ್ದೇವೆ. ಆಮದು ಮಾಡಿಕೊಂಡ ಹಸುಗಳಲ್ಲಿ ‘ಒಮೇಗಾ-೬’ ಇದರ ಅಸ್ತಿತ್ವವು ಎಳ್ಳಷ್ಟೂ ಇಲ್ಲ.
 • ನ್ಯೂಝಿಲ್ಯಾಂಡ್‌ನ ವಿಜ್ಞಾನಿಗಳ ಸಂಶೋಧನೆಯಂತೆ ‘ಪಾಶ್ಚಿಮಾತ್ಯ ಹಸು ಗಳ ಹಾಲಿನಲ್ಲಿ ‘ಬೀಟಾ ಕೇಸೊ ಮರ್ಫಿನ’ ಹೆಸರಿನ ರಾಸಾಯನಿಕ ದ್ರವ್ಯವಿರುತ್ತದೆ. ಈ ದ್ರವ್ಯದಿಂದಾಗಿ ಬುದ್ಧಿಭ್ರಮಣೆ (ಅಲ್ಝೈ ಮರ್) ಮತ್ತು ಪಾರ್ಕಿನ್ಸ್‌ನಂತಹ ಗಂಭೀರ ವಾದ ರೋಗಗಳಾಗುತ್ತವೆ.

೫. ಭಾರತೀಯ ಹಸುವಿನ ಸೆಗಣಿಯು ‘ಪಂಚಗವ್ಯ’ವನ್ನು ತಯಾರಿಸಲು ಅನುಕೂಲವಾಗಿದ್ದು ರಾಸಾಯನಿಕ ಔಷಧಿಗಳಿಗೆ ಉತ್ತಮ ಪರ್ಯಾಯವಿರುವುದು ಭಾರತೀಯ ತಳಿಯ ಹಸುವಿನ ಸೆಗಣಿಯು ಪಾಶ್ಚಿಮಾತ್ಯ ದೇಶಗಳಿಂದ ಆಮದು ಮಾಡಿಕೊಂಡ ಹಸುಗಳ ತುಲನೆ ಯಲ್ಲಿ ಶ್ರೇಷ್ಠವಾಗಿರುತ್ತದೆ. ಭಾರತೀಯ ಹಸುಗಳ ಸೆಗಣಿಯು ಅರ್ಧಗಟ್ಟಿ ಇರುತ್ತದೆ, ಆದರೆ ಆಮದು ಮಾಡಿಕೊಂಡ ಹಸುಗಳ ಸೆಗಣಿಯು ಅರ್ಧತೆಳ್ಳಗೆ ಇರುತ್ತದೆ. ಆದರೆ ದೇಶಿ ಹಸುಗಳ ಸೆಗಣಿಯು ‘ಪಂಚಗವ್ಯ’ ವನ್ನು ಮಾಡಲು ಅನುಕೂಲವಾಗಿದ್ದು ರಾಸಾಯನಿಕ ಔಷಧಿಗಳಿಗೆ ಉತ್ತಮವಾದ ಪರ್ಯಾಯವಾಗಿದೆ.

೬. ಭಾರತೀಯ ಹಸುಗಳ ಮೂತ್ರವೂ ಒಂದು ಉತ್ತಮ ಔಷಧಿ ! ಗೋ-ಮೂತ್ರ ಒಂದು ಉತ್ತಮ ಔಷಧಿಯಾಗಿದೆ ಎಂಬುದು ಅನೇಕ ಸಂಶೋಧನೆಗಳಿಂದ ಸಿದ್ಧವಾಗಿದೆ. ಅಮೇರಿಕದಲ್ಲಿ ಗೋಮೂತ್ರ ಮತ್ತು ಒಂದು ಪ್ರತಿಜೈವಿಕ ಔಷಧಿ ಇವುಗಳ ‘ಪೇಟೆಂಟ್’ (ಮಿಶ್ರಣದ ಸಂಶೋಧನೆಯ ಹಕ್ಕು) ಪಡೆದಿದ್ದೂ ಗೋಮೂತ್ರದಲ್ಲಿ ಕಾರ್ಯನಿರತ ವಿರುವ ಅರ್ಬುದರೋಗ ಪ್ರತಿಬಂಧಕ ಗುಣಗಳಿಂದ ಈ ‘ಪೇಟೆಂಟ್’ ತೆಗೆದು ಕೊಳ್ಳಲಾಗಿದೆ.’ (ಪಾಕ್ಷಿಕ ‘ಪಾವನ ಪರಿ ವಾರ’, ೧ ರಿಂದ ೧೫ ಎಪ್ರಿಲ್ ೨೦೧೧)[/sociallocker]

ಶ್ರೇಯಾಂಕ

ಮತ ನೀಡಿ, ಬಲಪಡಿಸಿ ಮತ್ತು ಸಾಮಾಜಿಕ ಜಾಲ ತಾಣದಲ್ಲಿ ಹಂಚಿರಿ.

User Rating: 4.73 ( 4 votes)

ಇವುಗಳೂ ನಿಮಗಿಷ್ಟವಾಗಬಹುದು

ಹುಳಿ ಮಿಶ್ರಿತ ಹಣ್ಣಿನ ಸಿಪ್ಪೆಯ ಲೆಕ್ಕಕ್ಕೆ ಸಿಗದಷ್ಟು ಆರೋಗ್ಯ ಪ್ರಯೋಜನಗಳು

ಸಾಮಾನ್ಯವಾಗಿ ಕಿತ್ತಳೆ ಹಣ್ಣುಗಳನ್ನು ಸುಲಿದ ಬಳಿಕ ತಿರುಳನ್ನು ತಿಂದು ಸಿಪ್ಪೆಯನ್ನು ಮಾತ್ರ ನಾವು ಎಸೆದುಬಿಡುತ್ತೇವೆ. ಆದರೆ ಈ ಸಿಪ್ಪೆಗಳಲ್ಲಿಯೂ ಹಲವಾರು …

One comment

 1. ನನಗೆ ಗಿರ್ ಆಕಳು ಅಂದರೆ ತುಂಬಾ ಇಷ್ಟ ಅದನ್ನು ಪ್ರೀತಿಸುತ್ತೇನೆ. ನಮ್ಮ ಮನೆಯಲ್ಲಿ ಸಾಕಬೇಕೆನ್ನುವ ಬಹಳ ಆಸೆ ಇದೆ. ಆದರೆ ನಮ್ಮ ಧಾರವಾಡ ಜಿಲ್ಲೆಯಲ್ಲಿ ಈಗಿರ್ ಆಕಳು ಸಿಗುತ್ತಿಲ್ಲ. ನಿಮ್ಮಲ್ಲಿ ಇದ್ದರೆ ಹಾಗೂ ನಿಮ್ಮ ಅಕ್ಕ ಪಕ್ಕದಲ್ಲಿ ಇದ್ದರೆ ನಮಗೆ ತಿಳಿಸಿ 9481547287

Leave a Reply

Your email address will not be published. Required fields are marked *