ಇನ್ಸ್ಟ್ರಾಗ್ರಾಮ್ ಸೇರಿದಂತೆ ಅನೇಕ ಸಾಮಾಜಿಕ ಜಾಲತಾಣಗಳನ್ನು ಎಲ್ಲರೂ ಬಳಸ್ತಾರೆ. ಅದ್ರಲ್ಲಿ ಗಂಟೆಗಟ್ಟಲೆ ಕಾಲ ಕಳೆಯುತ್ತಾರೆ. ಆದ್ರೆ ಅನೇಕರಿಗೆ ಸಾಮಾಜಿಕ ಜಾಲತಾಣ ಇನ್ಸ್ಟ್ರಾಗ್ರಾಮ್ ಮೂಲಕವೂ ಹಣ ಗಳಿಸಬಹುದು ಎಂಬುದು ಗೊತ್ತಿಲ್ಲ.
ನಿಮ್ಮ ಫಾಲೋವರ್ಸ್ ಸಂಖ್ಯೆ ಹೆಚ್ಚಿದ್ದರೆ ನೀವು ಸುಲಭವಾಗಿ ಇನ್ಸ್ಟ್ರಾಗ್ರಾಮ್ ನಲ್ಲಿ ಹಣ ಗಳಿಸಬಹುದು. ಆದ್ರೆ ಇನ್ಸ್ಟ್ರಾಗ್ರಾಮ್ ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಫಾಲೋವರ್ಸ್ ಹೊಂದೋದು ಸುಲಭದ ಮಾತಲ್ಲ. ಕೆಲವೊಂದು ಸುಲಭ ಟ್ರಿಕ್ಸ್ ನಿಂದ ನೀವೂ ಸಾವಿರಗಟ್ಟಲೆ ಫಾಲೋವರ್ಸ್ ಹೊಂದಬಹುದು.
ಇನ್ಸ್ಟ್ರಾಗ್ರಾಮ್ ಅಕೌಂಟ್ ನ ಡಿಪಿ ಚೆನ್ನಾಗಿರುವಂತೆ ನೋಡಿಕೊಳ್ಳಿ. ಸಾಮಾನ್ಯವಾಗಿ ನಿಮ್ಮನ್ನು ಫಾಲೋ ಮಾಡಬಯಸುವವರು ಮೊದಲು ಡಿಪಿ ನೋಡ್ತಾರೆ. ನಂತ್ರ ನಿಮ್ಮ ಪ್ರೊಫೈಲ್ ನೋಡ್ತಾರೆ. ಇವೆರಡೂ ಆಕರ್ಷಕವಾಗಿದ್ದರೆ ನಿಮ್ಮ ಫಾಲೋವರ್ಸ್ ಸಂಖ್ಯೆ ಕೂಡ ಹೆಚ್ಚಾಗುತ್ತದೆ.
[content_block id=3102]ಫಾಲೋವರ್ಸ್ ಸಂಖ್ಯೆ ಹೆಚ್ಚಾಗುವುದೊಂದೇ ಅಲ್ಲ ನೀವು ಸದಾ ಇನ್ಸ್ಟ್ರಾಗ್ರಾಮ್ ನಲ್ಲಿ ಸಕ್ರಿಯವಾಗಿರಬೇಕಾಗುತ್ತದೆ. ಕೆಲವರು ಫೋಟೋ ಹಾಕಿ ವಾರವಾದ್ರೂ ಅಕೌಂಟ್ ಓಪನ್ ಮಾಡುವುದಿಲ್ಲ. ಇದು ಒಳ್ಳೆಯದಲ್ಲ. ನಿಮ್ಮ ಫೋಟೋಕ್ಕೆ ಫಾಲೋವರ್ಸ್ ಕಮೆಂಟ್ ಮಾಡಿದ್ರೆ ಅದಕ್ಕೆ ನೀವು ಪ್ರತಿಕ್ರಿಯೆ ನೀಡಬೇಕು. ಜೊತೆಗೆ ಅವರ ಫೋಟೋಗಳಿಗೆ ಕಮೆಂಟ್ ಹಾಕಬೇಕು.
ಇದ್ರ ಜೊತೆಗೆ ನೀವು ಹಾಕುವ ವಿಷ್ಯದ ಜೊತೆಗೆ ಅದ್ರ ಶೀರ್ಷಿಕೆ ಕೂಡ ಆಕರ್ಷಕವಾಗಿರಬೇಕು. ನೀವು ಹೆಚ್ಚು ಫಾಲೋವರ್ಸ್ ಹೊಂದಿದ್ದು, ಇನ್ಸ್ಟ್ರಾಗ್ರಾಮ್ ನಲ್ಲಿ ಪ್ರಸಿದ್ಧಿ ಪಡೆಯುತ್ತಿದ್ದಂತೆ ಕೆಲ ಜಾಹೀರಾತುಗಳನ್ನು ನಿಮ್ಮ ಖಾತೆ ಮೂಲಕ ನೀಡಬಹುದು. ಹಾಗೆ ಕೆಲ ಬ್ರ್ಯಾಂಡ್ ಗಳ ಜೊತೆ ಒಪ್ಪಂದ ಮಾಡಿಕೊಂಡು ಅವ್ರ ವಸ್ತುಗಳನ್ನು ಧರಿಸಿ ತೆಗೆದ ಫೋಟೋಗಳನ್ನು ಇನ್ಸ್ಟ್ರಾಗ್ರಾಮ್ ಗೆ ಹಾಕಬಹುದು. ಅಲ್ಲಿನ ಪ್ರತಿಕ್ರಿಯೆ ನೋಡಿ ಕಂಪನಿಗಳು ನಿಮಗೆ ಹಣ ನೀಡುತ್ತವೆ.
ಇಷ್ಟೇ ಅಲ್ಲ ನೀವು ಉತ್ತಮ ಛಾಯಾಗ್ರಾಹಕರಾಗಿದ್ದರೆ ನಿಮ್ಮ ಫೋಟೋವನ್ನು ಇನ್ಸ್ಟ್ರಾಗ್ರಾಮ್ ಮೂಲಕ ಮಾರಾಟ ಮಾಡಬಹುದು. ಬಹಳ ದಿನಗಳಿಂದ ನೀವು ಇನ್ಸ್ಟ್ರಾಗ್ರಾಮ್ ಬಳಸುತ್ತಿದ್ದು, ಅದನ್ನು ಮಾರಾಟ ಮಾಡಲು ನಿರ್ಧರಿಸಿದ್ದರೂ ನಿಮ್ಮ ಇನ್ಸ್ಟ್ರಾಗ್ರಾಮ್ ಅಕೌಂಟ್ ಖರೀದಿ ಮಾಡುವವರಿದ್ದಾರೆ.
https://m.dailyhunt.in/news/india/kannada/kannada+dunia-epaper-kannadad/instraagraam+mulaka+maneyalle+kulitu+hana+galisi-newsid-76274926?ss=pd&s=a